ETV Bharat / city

ರಾಜ್ಯದಲ್ಲಿಂದು 2,228 ಕೊರೊನಾ ಪ್ರಕರಣ ಪತ್ತೆ: ಸೋಂಕಿತರ ಸಂಖ್ಯೆ 31,105ಕ್ಕೆ ಏರಿಕೆ!

author img

By

Published : Jul 9, 2020, 9:48 PM IST

ಕೊರೊನಾ ಕರಿ ನೆರಳು ಕರ್ನಾಟಕವನ್ನು ಆವರಿಸುತ್ತಿದ್ದು, ಇಂದು ಕೂಡಾ 2,228 ಸೋಂಕಿತರು ಪತ್ತೆಯಾಗಿದ್ದಾರೆ. 17 ಜನರು ಕೋವಿಡ್​ ಮಹಾಮಾರಿಗೆ ಬಲಿಯಾಗಿದ್ದಾರೆ.

karnataka-state-covid-cases-details
ಕರ್ನಾಟಕ ಕೊರೊನಾ ವರದಿ

ಬೆಂಗಳೂರು: ರಾಜ್ಯದಲ್ಲಿ ಇಂದೂ ಕೂಡಾ ಎರಡು ಸಾವಿರದ ಗಡಿ ಮೀರಿ ಕೊರೊನಾ ಪಾಸಿಟಿವ್ ಪ್ರಕರಣಗಳು ದೃಢಪಟ್ಟಿವೆ.

ಇಂದು ಒಂದೇ ದಿನ 2,228 ಕೊರೊನಾ ಸೋಂಕಿತ ಪ್ರಕರಣಗಳು ದಾಖಲಾಗಿದ್ದು, ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 31,105ಕ್ಕೆ ಏರಿಕೆಯಾಗಿದೆ. ಅಲ್ಲದೆ ಇಂದು 17 ಮಂದಿಯನ್ನು ಕೋವಿಡ್ ಬಲಿ ತೆಗೆದುಕೊಂಡಿದ್ದು, ಈವರೆಗೆ ರಾಜ್ಯದಲ್ಲಿ 486 ಮಂದಿ ಮೃತಪಟ್ಟಿದ್ದಾರೆ.

ಇಂದು 957 ಮಂದಿ ಗುಣಮುಖರಾಗಿದ್ದು, ಈವರೆಗೆ 12,833 ಮಂದಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. 17,782 ಸಕ್ರಿಯ ಪ್ರಕರಣಗಳಿವೆ. ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿರುವವರ ಸಂಖ್ಯೆ 457ಕ್ಕೆ ಏರಿಕೆಯಾಗಿದೆ.

ಜಿಲ್ಲಾವಾರು ಕೊರೊನಾ ವರದಿ

ಬೆಂಗಳೂರಿನಲ್ಲಿಯೇ 1,373 ಕೋವಿಡ್ ಪಾಸಿಟಿವ್ ಪ್ರಕರಣಗಳು ವರದಿಯಾಗಿವೆ. ದಕ್ಷಿಣ ಕನ್ನಡದಲ್ಲಿ 167, ಕಲಬುರುಗಿ 85, ಧಾರವಾಡ 75, ಮೈಸೂರು 52, ಬಳ್ಳಾರಿ 41, ದಾವಣಗೆರೆ 40, ಶಿವಮೊಗ್ಗ 37, ಬಾಗಲಕೋಟೆ 36, ಕೋಲಾರ 34, ಚಿಕ್ಕಬಳ್ಳಾಪುರ 32, ತುಮಕೂರು 27, ಮಂಡ್ಯ 24, ಉತ್ತರ ಕನ್ನಡ 23, ಉಡುಪಿ 22, ಹಾಸನ 21, ಬೆಂಗಳೂರು ಗ್ರಾಮಾಂತರದಲ್ಲಿ 16, ಹಾವೇರಿ 18 ಪ್ರಕರಣಗಳು ಇಂದು ಒಂದೇ ಪತ್ತೆಯಾಗಿವೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.