ETV Bharat / city

ಸಿಬ್ಬಂದಿ -ಆಡಳಿತ ಸುಧಾರಣಾ ಇಲಾಖೆ (ಜನಸ್ಪಂದನ) ರದ್ದುಗೊಳಿಸಿ ಆದೇಶ - Personnel and Administrative Reforms Dept cancelled

ಜನಸ್ಪಂದನದ ದೂರುಗಳು ಮತ್ತು ಕುಂದುಕೊರತೆಗಳನ್ನು ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ (ಇ-ಆಡಳಿತ)ಗೆ ವರ್ಗಾಯಿಸಿ ಆದೇಶಿಸಲಾಗಿದೆ.

bengaluru
ಬೆಂಗಳೂರು
author img

By

Published : Apr 29, 2022, 8:52 AM IST

ಬೆಂಗಳೂರು: ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯನ್ನು (ಜನಸ್ಪಂದನ) ರದ್ದುಗೊಳಿಸಿ ಆದೇಶಿಸಲಾಗಿದೆ. ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ (ಜನಸ್ಪಂದನ)ದಲ್ಲಿ ನಿರ್ವಹಿಸಲಾಗುತ್ತಿದ್ದ 'ದೂರುಗಳು ಮತ್ತು ಕುಂದುಕೊರತೆಗಳನ್ನು ಹೊರತುಪಡಿಸಿ ಜನಸ್ಪಂದನದ ವಿಷಯಗಳನ್ನು ಹಾಗೂ ಕರ್ನಾಟಕ ಮಾಹಿತಿ ಹಕ್ಕು ಅಧಿನಿಯಮ-2005 ಮತ್ತು ಅದಕ್ಕೆ ಸಂಬಂಧಪಟ್ಟ ವಿಷಯ'ಗಳನ್ನು ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ (ಆಡಳಿತ ಸುಧಾರಣೆ)ಗೆ ವರ್ಗಾಯಿಸಲಾಗಿದೆ.

ಜನಸ್ಪಂದನದ ದೂರುಗಳು ಮತ್ತು ಕುಂದುಕೊರತೆಗಳನ್ನು ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ (ಇ-ಆಡಳಿತ)ಗೆ ವರ್ಗಾಯಿಸಿ ಆದೇಶಿಸಲಾಗಿದೆ. ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ (ಜನಸ್ಪಂದನ) ಯಲ್ಲಿನ 12 ವಿವಿಧ ಹುದ್ದೆಗಳನ್ನು ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ (ಇ-ಆಡಳಿತ)ಕ್ಕೆ ಸ್ಥಳಾಂತರಿಸಲಾಗಿದ್ದರೆ, ಉಳಿದ 5 ಹುದ್ದೆಗಳನ್ನು ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ (ಆಡಳಿತ ಸುಧಾರಣೆ) ಗೆ ಸ್ಥಳಾಂತರಿಸಿ ಆದೇಶಿಸಲಾಗಿದೆ.

ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ (ಜನಸ್ಪಂದನ)ಯಲ್ಲಿ ಮುಖ್ಯವಾಗಿ ಸಾರ್ವಜನಿಕ ಕುಂದುಕೊರತೆ ಮನವಿಗಳು ಮತ್ತು ಮಾಹಿತಿ ಹಕ್ಕು ಅಧಿನಿಯಮ 2005 ನ್ನು ನಿರ್ವಹಿಸಲಾಗುತ್ತಿದೆ. ಈ ಇಲಾಖೆಯಲ್ಲಿ ವರ್ಷದಲ್ಲಿ ಸುಮಾರು 450 ಕಡತಗಳು ಮಾತ್ರ ನಿರ್ವಹಿಸಲಾಗುತ್ತದೆ. ಈ ಕಚೇರಿಯು ವಿಶೇಶ್ವರಯ್ಯ ಗೋಪುರ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಸಚಿವಾಲಯದ ಬೇರೆ ಇಲಾಖೆಗಳಿಂದ ಬೇರ್ಪಟ್ಟಂತಾಗಿದೆ.

ಇಲಾಖೆಯಲ್ಲಿ ಒಬ್ಬರು ಉಪ ಕಾರ್ಯದರ್ಶಿ ಮತ್ತು ಇಬ್ಬರು ಅಧೀನ ಕಾರ್ಯದರ್ಶಿಗಳು ಇಲಾಖೆಯ ನಿತ್ಯದ ಕಾರ್ಯಚಟುವಟಿಕೆಗಳನ್ನು ನಿರ್ವಹಿಸಲು ಸಾಕಾಗಿದೆ. ಇಲಾಖೆಗೆ ಪ್ರತ್ಯೇಕವಾದ ಕಾರ್ಯದರ್ಶಿ ಹುದ್ದೆ ಬೇಕಾಗಿರುವುದಿಲ್ಲ. ಈ ಕಾರಣಗಳಿಂದ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ (ಜನಸ್ಪಂದನ) ವನ್ನು ಸಿ.ಆ.ಸು. ಇಲಾಖೆ (ಆಸು) ಅಥವಾ ಸಿ.ಆ.ಸು.ಇಲಾಖೆ (ಇ-ಆಡಳಿತ) ಯೊಂದಿಗೆ ಒಂದುಗೂಡಿಸಲು ಪ್ರಸ್ತಾಪಿಸಲಾಗಿತ್ತು.

ಇದನ್ನೂ ಓದಿ: 2011 ಸಾಲಿನಲ್ಲಿ ಆಯ್ಕೆಯಾದ 30 ಅಭ್ಯರ್ಥಿಗಳಿಗೆ ತಹಶೀಲ್ದಾರ್ ಗ್ರೇಡ್ -2 ವೃಂದದ ಗ್ರೂಪ್ ಬಿ ಹುದ್ದೆಗೆ ನೇಮಕ ಮಾಡಿ ಆದೇಶ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.