ETV Bharat / city

ಕೋವಿಡ್ ಕರ್ತವ್ಯ: ಸಿಬ್ಬಂದಿಗೆ ರಿಸ್ಕ್ ಭತ್ಯೆ ನೀಡಲು ಸರ್ಕಾರ ಆದೇಶ - karnataka corona update

ಕೋವಿಡ್ ಕರ್ತವ್ಯ ನಿರ್ವಹಿಸುತ್ತಿರುವ ತಜ್ಞರು, ವೈದ್ಯರು, ಸಿಬ್ಬಂದಿ ಹಾಗೂ ಸ್ಟಾಫ್ ನರ್ಸ್​​ಗಳಿಗೆ ಏ.1 ರಿಂದ ಮುಂದಿನ ಆರು ತಿಂಗಳವರೆಗೆ ಅಥವಾ ಕೋವಿಡ್ ಪರಿಸ್ಥಿತಿ ಸುಧಾರಿಸುವವರೆಗೆ ಯಾವುದು ಮೊದಲೋ ಅಲ್ಲಿಯವರೆಗೆ ರಿಸ್ಕ್ ಭತ್ಯೆ ನೀಡಲು ಆದೇಶಿಸಲಾಗಿದೆ.

ಕೋವಿಡ್ ಕರ್ತವ್ಯ
ಕೋವಿಡ್ ಕರ್ತವ್ಯ
author img

By

Published : May 27, 2021, 9:43 PM IST

ಬೆಂಗಳೂರು: ಕೋವಿಡ್ ಕರ್ತವ್ಯ ನಿರ್ವಹಿಸುತ್ತಿರುವ ತಜ್ಞರು, ವೈದ್ಯರು, ಸಿಬ್ಬಂದಿಗೆ‌, ಸ್ಟಾಫ್‌ ನರ್ಸ್​​ಗಳಿಗೆ ಆರು ತಿಂಗಳ ಅವಧಿಗೆ ರಿಸ್ಕ್ ಭತ್ಯೆ ನೀಡಲು ಸರ್ಕಾರ ನಿರ್ಧರಿಸಿದೆ.

ಅದರಂತೆ ಕೋವಿಡ್ ಕರ್ತವ್ಯ ನಿರ್ವಹಿಸುತ್ತಿರುವ ತಜ್ಞರು, ವೈದ್ಯರು, ಸಿಬ್ಬಂದಿ ಹಾಗೂ ಸ್ಟಾಫ್ ನರ್ಸ್​​ಗಳಿಗೆ ಏ.1 ರಿಂದ ಮುಂದಿನ ಆರು ತಿಂಗಳವರೆಗೆ ಅಥವಾ ಕೋವಿಡ್ ಪರಿಸ್ಥಿತಿ ಸುಧಾರಿಸುವವರೆಗೆ ಯಾವುದು ಮೊದಲೋ ಅಲ್ಲಿಯವರೆಗೆ ರಿಸ್ಕ್ ಭತ್ಯೆ ನೀಡಲು ಆದೇಶಿಸಲಾಗಿದೆ.

ಸಿಬ್ಬಂದಿಗೆ ರಿಸ್ಕ್ ಭತ್ಯೆ ನೀಡಲು ಸರ್ಕಾರ ಆದೇಶ

ಆದೇಶದಂತೆ ಮುಂದಿನ ಆರು ತಿಂಗಳವರೆಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆ ವ್ಯಾಪ್ತಿಯಡಿ ಬರುವ ಆಸ್ಪತ್ರೆಗಳಲ್ಲಿನ ಕೋವಿಡ್ ಹೆಲ್ತ್‌ ಸೆಂಟರ್, ಕೋವಿಡ್ ಅಸ್ಪತ್ರೆ ಮತ್ತು ಕೋವಿಡ್ ಕೇರ್ ಸೆಂಟರ್‌ಗಳಲ್ಲಿ ಕೋವಿಡ್-19ನ್ನು ನಿಯಂತ್ರಿಸುವ ಸಲುವಾಗಿ ಪಿಪಿಇ ಕಿಟ್ ಧರಿಸಿ ಕಾರ್ಯನಿರ್ವಹಿಸುತ್ತಿರುವ ಗ್ರೂಪ್ ಡಿ ನೌಕರರಿಗೆ 10,000 ರೂ.ಗಳ ಕೋವಿಡ್ ರಿಸ್ಕ್ ಪ್ರೋತ್ಸಾಹಧನ ನೀಡಲಾಗುತ್ತದೆ.

18 ಜಿಲ್ಲೆಗಳ ವ್ಯಾಪ್ತಿಯಲ್ಲಿ ಪ್ರತಿ ಜಿಲ್ಲೆಗೆ ತಾತ್ಕಾಲಿಕವಾಗಿ 6 ತಿಂಗಳ ಅವಧಿಗೆ ಗುತ್ತಿಗೆ ಹೊರಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಳ್ಳಲಾಗಿದ್ದ ವೈದ್ಯರು/ತಜ್ಞರಿಗೆ 10,000 ರೂ., ಶುಶ್ರೂಷಕರಿಗೆ 5,000 ರೂ., ಪ್ರಯೋಗ ಶಾಲಾ ತಂತ್ರಜ್ಞರಿಗೆ 5,000 ರೂ. ಮತ್ತು ಪಿಪಿಇ ಕಿಟ್ ಧರಿಸದೇ ಕೋವಿಡ್ ಆಸ್ಪತ್ರೆಗಳ ಹೊರಗಡೆ ಕಾರ್ಯನಿರ್ವಹಿಸುವ ಗ್ರೂಪ್-ಡಿ ನೌಕರರಿಗೆ 3,000 ರೂ.ನಂತೆ ಏಪ್ರಿಲ್ 1 ರಿಂದ ಮುಂದಿನ 6 ತಿಂಗಳ ವರೆಗೆ ಕೋವಿಡ್ ರಿಸ್ಕ್ ಪ್ರೋತ್ಸಾಹ ಧನ ನೀಡಲಾಗುವುದು.
ರಾಷ್ಟ್ರೀಯ ಆರೋಗ್ಯ ಅಭಿಯಾನದಡಿಯಲ್ಲಿ ಗುತ್ತಿಗೆ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿರುವ ತಜ್ಞರು, ಎಂಬಿಬಿಎಸ್ ವೈದ್ಯರು, ಆಯುಷ್ ವೈದ್ಯರುಗಳಿಗೆ 10,000 ರೂ., ಶುಶ್ರೂಷಕರು, ಎ.ಎನ್.ಎಂ, ಪ್ರಯೋಗಶಾಲಾ ತಂತ್ರಜ್ಞರು, ಫಾರ್ಮಾಸಿಸ್ಟ್‌ಗಳಿಗೆ 5,000 ರೂ. ಕೋವಿಡ್ ರಿಸ್ಕ್ ಪ್ರೋತ್ಸಾಹಧನವನ್ನು 6 ತಿಂಗಳ ಅವಧಿಗೆ ನೀಡಲು ನಿರ್ಧರಿಸಲಾಗಿದೆ.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ವ್ಯಾಪ್ತಿಯಡಿಯಲ್ಲಿ ಬರುವ ಆಸ್ಪತ್ರೆಗಳಲ್ಲಿನ ಕೋವಿಡ್ ಹೆಲ್ತ್ ಸೆಂಟರ್, ಕೋವಿಡ್ ಆಸ್ಪತ್ರೆ ಮತ್ತು ಕೋವಿಡ್ ಕೇರ್ ಸೆಂಟರ್​ಗಳಲ್ಲಿ ಕೋವಿಡ್-19ನ್ನು ನಿಯಂತ್ರಿಸುವ ಸಲುವಾಗಿ ಪಿಪಿಇ ಕಿಟ್ ಧರಿಸಿ ಕಾರ್ಯನಿರ್ವಹಿಸುತ್ತಿರುವ ಖಾಯಂ/ಗುತ್ತಿಗೆ/ಹೊರಗುತ್ತಿಗೆ ಶುಶ್ರೂಷಕರುಗಳಿಗೆ 5,000 ರೂ. ಕೋವಿಡ್ ರಿಸ್ಕ್ ಭತ್ಯೆ ನೀಡಲಾಗುತ್ತದೆ. ಇನ್ನು ಸ್ಟಾಪ್ ನರ್ಸ್ ಗಳಿಗೆ ಮುಂದಿನ ಆರು ತಿಂಗಳ ವರೆಗೆ 8,000 ರೂ. ಕೋವಿಡ್ ರಿಸ್ಕ್ ಭತ್ಯೆ ನೀಡಲು ಮಂಜೂರಾತಿ ನೀಡಿ ಆದೇಶಿಸಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.