ಬೆಂಗಳೂರು: ಪ್ರಥಮ ಪಿಯುಸಿ ದಾಖಲಾತಿ ದಿನಾಂಕವನ್ನು ವಿಸ್ತರಿಸಿ ಸರ್ಕಾರ ಪ್ರಕಟಣೆ ಹೊರಡಿಸಿದೆ. 2022-23ನೇ ಶೈಕ್ಷಣಿಕ ಸಾಲಿನ ಪ್ರಥಮ ಪಿಯುಸಿಗೆ ಸಂಬಂಧಿಸಿದಂತೆ ದಾಖಲಾತಿ ದಿನಾಂಕವನ್ನು ಈ ಮೊದಲು ಜುಲೈ 11 ರವರೆಗೆ ದಂಡರಹಿತವಾಗಿ ವಿಸ್ತರಿಸಲಾಗಿತ್ತು. ಆದರೆ ಸಿಬಿಎಸ್‌ಇ ಹಾಗೂ ಐಸಿಎಸ್‌ಸಿ ಬೋರ್ಡ್‌ಗಳಲ್ಲಿ 10ನೇ ತರಗತಿ ಫಲಿತಾಂಶ ಪ್ರಕಟಣೆ ತಡವಾಗುತ್ತಿದ್ದು ಹಾಗೂ ಪೋಷಕರು ಹಾಗೂ ವಿದ್ಯಾರ್ಥಿಗಳು ದಾಖಲಾತಿ ದಿನಾಂಕವನ್ನು ವಿಸ್ತರಿಸಲು ಮನವಿ ಸಲ್ಲಿಸಿ ಒತ್ತಾಯಿಸಿರುವ ಕಾರಣ ಸರ್ಕಾರ ಈ ಕ್ರಮ ತೆಗೆದುಕೊಂಡಿದೆ.
![karnataka first puc admission dates extended](https://etvbharatimages.akamaized.net/etvbharat/prod-images/15799291_417_15799291_1657589244004.png)
ಹೀಗಾಗಿ, ದಂಡ ಶುಲ್ಕರಹಿತವಾಗಿ ಪ್ರಥಮ ಪಿಯುಸಿ ದಾಖಲಾತಿ ದಿನಾಂಕವನ್ನು ಜುಲೈ 12 ರಿಂದ 30 ರವರೆಗೆ ವಿಸ್ತರಿಸಲಾಗಿದೆ. ಈ ವಿಸ್ತರಣೆ ದಿನಾಂಕ ಪ್ರಥಮ ಪಿಯುಸಿ ದಾಖಲಾತಿಗೆ ಮಾತ್ರ ಅನ್ವಯಿಸಲಿದೆ.
ಇದನ್ನೂ ಓದಿ: ಒಂಟಿ ತಾಯಿಯ ಮಗಳೆಂದು ಶಾಲೆಗೆ ಸೇರಿಸಿಕೊಳ್ಳಲು ನಿರಾಕರಿಸಿದ ಶಾಲೆ: ಮಹಿಳೆಯ ಗಂಭೀರ ಆರೋಪ