ಬೆಂಗಳೂರು: ರಾಜ್ಯದಲ್ಲಿಂದು 1,20,073 ಮಂದಿಗೆ ಕೋವಿಡ್ ಪರೀಕ್ಷೆ ನಡೆಸಲಾಗಿದ್ದು, ಇದರಲ್ಲಿ 371 ಮಂದಿಗೆ ಸೋಂಕು ದೃಢಪಟ್ಟಿದೆ. ಈ ಮೂಲಕ ಸೋಂಕಿತರ ಸಂಖ್ಯೆ 29,85,598ಕ್ಕೆ ಏರಿಕೆ ಆಗಿದೆ. ಇತ್ತ 342 ಮಂದಿ ಡಿಸ್ಚಾರ್ಜ್ ಆಗಿದ್ದು, 29,38,653 ಸೋಂಕಿತರು ಗುಣಮುಖರಾಗಿದ್ದಾರೆ.
ಇಂದು 7 ಸೋಂಕಿತರು ಮೃತರಾಗಿದ್ದು, ಸಾವಿನ ಸಂಖ್ಯೆ 38,002ಕ್ಕೆ ಏರಿಕೆ ಆಗಿದೆ. ಸದ್ಯ ಸಕ್ರಿಯ ಪ್ರಕರಣಗಳು 8,914 ರಷ್ಟಿದೆ. ಈ ಮೂಲಕ ಸೋಂಕಿತರ ಪ್ರಮಾಣ ಶೇ.0.30 ರಷ್ಟಿದ್ದರೆ ಸಾವಿನ ಪ್ರಮಾಣ ಶೇ.1.88 ರಷ್ಟಿದೆ. ವಿಮಾನ ನಿಲ್ದಾಣದಲ್ಲಿ 1,385 ಪ್ರಯಾಣಿರಕನ್ನ ತಪಾಸಣೆಗೆ ಒಳಪಡಿಸಲಾಗಿದೆ. ಯುಕೆಯಿಂದ ಇಂದು 343 ಅಂತಾರಾಷ್ಟ್ರೀಯ ಪ್ರಯಾಣಿಕರು ಆಗಮಿಸಿದ್ದಾರೆ.
ಬೆಂಗಳೂರಲ್ಲಿ ಕೊರೊನಾ: ಇನ್ನು ರಾಜಧಾನಿಯಲ್ಲಿ 193 ಮಂದಿಗೆ ಸೋಂಕು ದೃಢಪಟ್ಟಿದ್ದು, ಸೋಂಕಿತರ ಸಂಖ್ಯೆ 12,50,513ಕ್ಕೆ ಏರಿಕೆ ಆಗಿದೆ. 130 ಜನರು ಗುಣಮುಖರಾಗಿದ್ದು, 2,27,518 ಸೋಂಕಿತರು ಡಿಸ್ಚಾರ್ಜ್ ಆಗಿದ್ದಾರೆ. 4 ಮಂದಿ ಮೃತಪಟ್ಟಿದ್ದು, ಸಾವಿನ ಸಂಖ್ಯೆ 16,240 ಕ್ಕೆ ಏರಿಕೆ ಆಗಿದೆ. ಸದ್ಯ ಸಕ್ರಿಯ 6754 ಪ್ರಕರಣಗಳು ಇವೆ.
ರೂಪಾಂತರಿ ಅಪಡೇಟ್:
ಅಲ್ಫಾ - 155
ಬೇಟಾ - 08
ಡೆಲ್ಟಾ - 1679
ಡೆಲ್ಟಾ ಪ್ಲಸ್ - 04
ಡೆಲ್ಟಾ ಸಬ್ ಲೈನ್ಏಜ್ - 256
ಡೆಲ್ಟಾ ಸಬ್ ಲೈನ್ಏಜ್ AY.12H -15
ಕಪ್ಪಾ - 160
ಈಟಾ - 01