ಬೆಂಗಳೂರು: ರಾಜ್ಯದಲ್ಲಿಂದು 80,145 ಮಂದಿಗೆ ಕೋವಿಡ್ ಪರೀಕ್ಷೆ ನಡೆಸಲಾಗಿದ್ದು, ಇದರಲ್ಲಿ 214 ಮಂದಿಗೆ ಸೋಂಕು ದೃಢಪಟ್ಟಿದೆ. ಈ ಮೂಲಕ ಸೋಂಕಿತರ ಸಂಖ್ಯೆ 29,89,489ಕ್ಕೆ ಏರಿಕೆ ಆಗಿದೆ.
ಇಂದು 286 ಮಂದಿ ಡಿಸ್ಚಾರ್ಜ್ ಆಗಿದ್ದು, ಈವರೆಗೆ ಒಟ್ಟು 29,43,170 ಸೋಂಕಿತರು ಗುಣಮುಖರಾಗಿದ್ದಾರೆ. 7 ಸೋಂಕಿತರು ಮೃತರಾಗಿದ್ದು, ಸಾವಿನ ಸಂಖ್ಯೆ 38,102 ಕ್ಕೆ ಏರಿದೆ. ಸದ್ಯ ಸಕ್ರಿಯ ಪ್ರಕರಣಗಳು 8,188 ರಷ್ಟಿವೆ. ಸೋಂಕಿತರ ಪ್ರಮಾಣ ಶೇ.0.26 ರಷ್ಟಿದ್ದರೆ, ಸಾವಿನ ಪ್ರಮಾಣ ಶೇ.3.27 ರಷ್ಟಿದೆ.
-
Today's Media Bulletin 05/11/2021
— K'taka Health Dept (@DHFWKA) November 5, 2021 " class="align-text-top noRightClick twitterSection" data="
Please click on the link below to view bulletin.https://t.co/fnM92VAH9O @PMOIndia @MoHFW_INDIA @CMofKarnataka @BSBommai @mla_sudhakar @Comm_dhfwka @BBMPCOMM @mysurucitycorp @mangalurucorp @DDChandanaNews @PIBBengaluru @KarnatakaVarthe pic.twitter.com/bCG7kXaSSH
">Today's Media Bulletin 05/11/2021
— K'taka Health Dept (@DHFWKA) November 5, 2021
Please click on the link below to view bulletin.https://t.co/fnM92VAH9O @PMOIndia @MoHFW_INDIA @CMofKarnataka @BSBommai @mla_sudhakar @Comm_dhfwka @BBMPCOMM @mysurucitycorp @mangalurucorp @DDChandanaNews @PIBBengaluru @KarnatakaVarthe pic.twitter.com/bCG7kXaSSHToday's Media Bulletin 05/11/2021
— K'taka Health Dept (@DHFWKA) November 5, 2021
Please click on the link below to view bulletin.https://t.co/fnM92VAH9O @PMOIndia @MoHFW_INDIA @CMofKarnataka @BSBommai @mla_sudhakar @Comm_dhfwka @BBMPCOMM @mysurucitycorp @mangalurucorp @DDChandanaNews @PIBBengaluru @KarnatakaVarthe pic.twitter.com/bCG7kXaSSH
ಇನ್ನು ರಾಜಧಾನಿ ಬೆಂಗಳೂರಲ್ಲಿ 118 ಮಂದಿಗೆ ಇಂದು ಸೋಂಕು ದೃಢಪಟ್ಟಿದ್ದು, ಈ ಮೂಲಕ ಸೋಂಕಿತರ ಸಂಖ್ಯೆ 12,52,532ಕ್ಕೆ ಏರಿದೆ. 117 ಜನರು ಗುಣಮುಖರಾಗಿದ್ದಾರೆ. ಇಂದು ಒಬ್ಬರು ಮೃತಪಟ್ಟಿದ್ದು, ಸಾವಿನ ಸಂಖ್ಯೆ 16,293 ಕ್ಕೆ ಏರಿದೆ. ಸದ್ಯ 6381 ಸಕ್ರಿಯ ಪ್ರಕರಣಗಳು ಇವೆ.
ರೂಪಾಂತರಿ ಅಪ್‌ಡೇಟ್:
ಅಲ್ಫಾ - 155
ಬೆಟಾ - 08
ಡೆಲ್ಟಾ - 1698
ಡೆಲ್ಟಾ ಪ್ಲಸ್ - 04
ಡೆಲ್ಟಾ ಸಬ್ ಲೈನ್ಏಜ್ - 256
ಡೆಲ್ಟಾ ಸಬ್ ಲೈನ್ಏಜ್ AY.12H -15
ಕಪ್ಪಾ - 160
ಈಟಾ - 01
ಸಾವಿನ ಸಂಖ್ಯೆ ಏರಿಳಿತ ಏಕೆ?
ರಾಜ್ಯದಲ್ಲಿ ದಿನ ಕಳೆದಂತೆ ಕೋವಿಡ್ ಸೋಂಕಿತರ ಸಂಖ್ಯೆ ಇಳಿಕೆಯಾಗ್ತಿದೆ. ಆದರೆ ಸಾವಿನ ಪ್ರಮಾಣದಲ್ಲಿ ಏರಿಳಿತ ಮುಂದುವರೆದಿದೆ. ಹೀಗಾಗಿ ಸಾಂಕ್ರಾಮಿಕ ಸೋಂಕಿನ ತೀವ್ರತೆ ಹಾಗೂ ಸಾವು- ನೋವು ಕಡಿಮೆ ಆಗ್ತಿಲ್ವಾ? ಈ ಕುರಿತು ಪ್ರತಿಕ್ರಿಯಿಸಿರುವ ಆರೋಗ್ಯ ಇಲಾಖೆ ಆಯುಕ್ತ ರಂದೀಪ್, ರಾಜ್ಯದಲ್ಲಿ ಕೊರೊನಾ ಸೋಂಕಿನ ತೀವ್ರತೆ ಕಡಿಮೆ ಆಗ್ತಿದ್ದು, ಇದರೊಂದಿಗೆ ಸಾವಿನ ಪ್ರಮಾಣವೂ ಇಳಿಕೆಯಾಗಿದೆ. ಕೆಲ ಖಾಸಗಿ ಆಸ್ಪತ್ರೆಗಳು ತಡವಾಗಿ ಡೆತ್ ಕೇಸ್ ಅಪಡೇಡ್ ಮಾಡುತ್ತಿರುವುದರಿಂದ ಬುಲೆಟಿನ್ನಲ್ಲಿ ಹಳೇ ಕೇಸುಗಳು ವರದಿ ಆಗ್ತಿವೆ. ಹೀಗಾಗಿ, ಸಾವಿನ ಪ್ರಮಾಣ ಏರಿಕೆ ಆಗ್ತಿದೆ ಅಂತ ಅನ್ನಿಸಬಹುದು, ಆದರೆ ಸಾವಿನ ಸಂಖ್ಯೆಯಲ್ಲಿ ಇಳಿಕೆ ಆಗ್ತಿದೆ ಅಂತ ತಿಳಿಸಿದರು.