ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಆರ್ಭಟ ಮುಂದುವರೆದಿದೆ. 1,64,261 ಜನರಿಗೆ ಕೊರೊನಾ ಪರೀಕ್ಷೆ ನಡೆಸಿದ್ದು, ಇದರಲ್ಲಿ 8906 ಮಂದಿಗೆ ಸೋಂಕು ದೃಢಪಟ್ಟಿದೆ. ಈ ಮೂಲಕ ಸೋಂಕಿತರ ಸಂಖ್ಯೆ 30,39,958 ಏರಿಕೆ ಆಗಿದೆ.
ಇಂದು 508 ಸೋಂಕಿತರು ಗುಣಮುಖರಾಗಿದ್ದು, ಈವರೆಗೆ ಒಟ್ಟು 29,63,056 ಡಿಸ್ಚಾರ್ಜ್ ಆಗಿದ್ದಾರೆ. ಇಂದು ರಾಜ್ಯಾದ್ಯಂತ ನಾಲ್ವರು ಸೋಂಕಿತರು ಮೃತಪಟ್ಟಿದ್ದು, ಸಾವಿನ ಸಂಖ್ಯೆ 38,366ಕ್ಕೆ ಏರಿದೆ. ಇತ್ತ ಸಕ್ರಿಯ ಪ್ರಕರಣಗಳು ಏರಿಕೆಯಾಗುತ್ತಲೇ ಇದ್ದು, ಸದ್ಯ 38,507 ರಷ್ಟಿದೆ. ಇಂದಿನ ಪಾಸಿಟಿವಿಟಿ ದರ ಶೇ.5.42 ರಷ್ಟಿದ್ದರೆ, ಸಾವಿನ ಪ್ರಮಾಣ ಶೇ.0.04 ರಷ್ಟಿದೆ.
Bengaluru COVID:
ರೆಡ್ ಝೋನ್ ಆಗಿರುವ ರಾಜಧಾನಿ ಬೆಂಗಳೂರಲ್ಲಿ 7113 ಮಂದಿಗೆ ಸೋಂಕು ದೃಢಪಟ್ಟಿದ್ದು, ಸೋಂಕಿತರ ಸಂಖ್ಯೆ 12,90,299 ಕ್ಕೆ ಏರಿದೆ. 323 ಜನರು ಡಿಸ್ಚಾರ್ಜ್ ಆಗಿದ್ದು, ಒಟ್ಟು 12,41,721 ಸೋಂಕಿತರು ಗುಣಮುಖರಾಗಿದ್ದಾರೆ. ಮೂವರು ಸೋಂಕಿತರು ಮೃತಪಟ್ಟಿದ್ದು, ಸಾವಿನ ಸಂಖ್ಯೆ 16,420 ಕ್ಕೆ ಏರಿದೆ. ನಗರದಲ್ಲಿ ಸದ್ಯ 32,157 ಸಕ್ರಿಯ ಪ್ರಕರಣಗಳಿವೆ.
-
ಇಂದಿನ 08/01/2022 ಸಂಪೂರ್ಣ ಪತ್ರಿಕಾ ಪ್ರಕಟಣೆಗಾಗಿ ಇಲ್ಲಿ ನೀಡಲಾಗಿರುವ ಲಿಂಕ್ ಅನ್ನು ಕ್ಲಿಕ್ ಮಾಡಿ.https://t.co/jrFyn1MBgR @CMofKarnataka @BSBommai @mla_sudhakar @Comm_dhfwka @BBMPCOMM @mysurucitycorp @mangalurucorp @DDChandanaNews @PIBBengaluru @KarnatakaVarthe pic.twitter.com/e3QU31bdWj
— K'taka Health Dept (@DHFWKA) January 8, 2022 " class="align-text-top noRightClick twitterSection" data="
">ಇಂದಿನ 08/01/2022 ಸಂಪೂರ್ಣ ಪತ್ರಿಕಾ ಪ್ರಕಟಣೆಗಾಗಿ ಇಲ್ಲಿ ನೀಡಲಾಗಿರುವ ಲಿಂಕ್ ಅನ್ನು ಕ್ಲಿಕ್ ಮಾಡಿ.https://t.co/jrFyn1MBgR @CMofKarnataka @BSBommai @mla_sudhakar @Comm_dhfwka @BBMPCOMM @mysurucitycorp @mangalurucorp @DDChandanaNews @PIBBengaluru @KarnatakaVarthe pic.twitter.com/e3QU31bdWj
— K'taka Health Dept (@DHFWKA) January 8, 2022ಇಂದಿನ 08/01/2022 ಸಂಪೂರ್ಣ ಪತ್ರಿಕಾ ಪ್ರಕಟಣೆಗಾಗಿ ಇಲ್ಲಿ ನೀಡಲಾಗಿರುವ ಲಿಂಕ್ ಅನ್ನು ಕ್ಲಿಕ್ ಮಾಡಿ.https://t.co/jrFyn1MBgR @CMofKarnataka @BSBommai @mla_sudhakar @Comm_dhfwka @BBMPCOMM @mysurucitycorp @mangalurucorp @DDChandanaNews @PIBBengaluru @KarnatakaVarthe pic.twitter.com/e3QU31bdWj
— K'taka Health Dept (@DHFWKA) January 8, 2022
ರೂಪಾಂತರಿ ಅಪಡೇಟ್ಸ್:
ಒಮಿಕ್ರಾನ್ - 333
ಅಲ್ಪಾ - 156
ಬೀಟಾ - 08
ಡೆಲ್ಟಾ - 2937
ಡೆಲ್ಟಾ ಸಬ್ ಲೈನೇಜ್ - 1350
ಕಪ್ಪಾ - 160
ಈಟಾ - 01
ಕೋವಿಡ್ ನಿಯಂತ್ರಣಕ್ಕಾಗಿ ಸರ್ಕಾರ ಈಗಾಗಲೇ ನೈಟ್ ಹಾಗೂ ವೀಕೆಂಡ್ ಕರ್ಫ್ಯೂ ಜಾರಿಗೊಳಿಸಿದೆ.
(ಇದನ್ನೂ ಓದಿ: ಏನ್ ಗಟ್ಟಿರೀ ಈಕೆ.. ವಯಸ್ಸು 81 ಆದ್ರೂ ಕೆಲಸಕ್ಕೆಂದು 22 ಕಿ.ಮೀ ಸೈಕಲ್ ತುಳಿಯುವ ಅಜ್ಜಿ!)