ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಮತ್ತೆ ಸಾವಿರ ಗಡಿ ದಾಟಿದೆ. ಬೆಂಗಳೂರೊಂದರಲ್ಲೇ 923 ಮಂದಿ ಸೋಂಕಿತರು ಕಾಣಿಸಿಕೊಳ್ಳುವ ಮೂಲಕ ಇಂದು ರಾಜ್ಯದಲ್ಲಿ 1187 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಈ ಮೂಲಕ ಸೋಂಕಿತರ ಸಂಖ್ಯೆ 30,09,557 ಕ್ಕೆ ಏರಿಕೆ ಆಗಿದೆ. 275 ಮಂದಿ ಸೋಂಕಿನಿಂದ ಚೇತರಿಸಿಕೊಂಡು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಇಲ್ಲಿಯವರೆಗೂ 29,60,890 ಡಿಸ್ಚಾರ್ಜ್ ಆಗಿದ್ದಾರೆ.
ಇದಲ್ಲದೇ ಇಂದು 6 ಮಂದಿಯನ್ನು ಸೋಂಕು ಬಲಿ ತೆಗೆದುಕೊಂಡಿದೆ. ಹೀಗಾಗಿ 38,346 ಕ್ಕೆ ಸಾವಿನ ಸಂಖ್ಯೆ ಏರಿಕೆ ಕಂಡಿದೆ. ಸದ್ಯ 10,292 ಸಕ್ರಿಯ ಪ್ರಕರಣಗಳಿವೆ. ಈ ಮೂಲಕ ಸೋಂಕಿತರ ಪ್ರಮಾಣ ಶೇ.1.08 ರಷ್ಟು ಇದ್ದು, ಸಾವಿನ ಪ್ರಮಾಣ ಶೇ.0.50 ರಷ್ಟು ಇದೆ. ಇಂದು ಒಂದೇ ದಿನ 1,08,911 ಜನರಿಗೆ ಕೋವಿಡ್ ಪರೀಕ್ಷೆ ನಡೆಸಲಾಗಿದೆ.
ಬೆಂಗಳೂರಿನಲ್ಲೇ ಸೋಂಕು ಹೆಚ್ಚು..
ರಾಜಧಾನಿ ಬೆಂಗಳೂರಿನಲ್ಲಿಂದು 923 ಮಂದಿಗೆ ಸೋಂಕು ದೃಢಪಟ್ಟಿದ್ದು, ಸೋಂಕಿತರ ಸಂಖ್ಯೆ 12,65,351 ಕ್ಕೆ ಏರಿದೆ. 125 ಜನರು ಡಿಸ್ಚಾರ್ಜ್ ಆಗಿದ್ದು, 12,40,274 ಗುಣಮುಖರಾಗಿದ್ದಾರೆ. ಮೂವರು ಸೋಂಕಿತರು ಸಾವನ್ನಪ್ಪಿದ್ದು, ಸಾವಿನ ಸಂಖ್ಯೆ 16,405 ಇದ್ದರೆ, ಸಕ್ರಿಯ ಪ್ರಕರಣಗಳ ಸಂಖ್ಯೆ 8671 ಆಗಿದೆ.
ಅಲ್ಪಾ- 155
ಬೀಟಾ- 08
ಡೆಲ್ಟಾ- 2569
ಡೆಲ್ಟಾ ಸಬ್ ಲೈನೇಜ್- 949
ಕಪ್ಪಾ- 160
ಈಟಾ- 01
ಒಮಿಕ್ರಾನ್- 66
ಇದನ್ನೂ ಓದಿ: ಒಡಿಶಾದಲ್ಲಿ ಒಮಿಕ್ರಾನ್ ಸ್ಫೋಟ; ಒಂದೇ ದಿನ 23 ಮಂದಿಗೆ ಸೋಂಕು!