ಬೆಂಗಳೂರು: ರಾಜ್ಯದಲ್ಲಿಂದು ಕೋವಿಡ್ ಪ್ರಕರಣಗಳಲ್ಲಿ ಕಳೆದ ಎರಡು ತಿಂಗಳಲ್ಲಿಯೇ ಭಾರಿ ಇಳಿಕೆಯಾಗಿದೆ. ಇಂದು 7810 ಜನರಲ್ಲಿ ಪಾಸಿಟಿವ್ ದೃಢಪಟ್ಟಿದ್ದು, 125 ಸೋಂಕಿತರು ಬಲಿಯಾಗಿದ್ದಾರೆ. 18,648 ಜನ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಈವರೆಗೆ 25,51,365 ಮಂದಿ ಚೇತರಿಸಿಕೊಂಡಿದ್ದಾರೆ.
ರಾಜ್ಯದಲ್ಲಿ ಸದ್ಯ 1,80,835 ಸಕ್ರಿಯ ಪ್ರಕರಣಗಳಿವೆ. ಒಟ್ಟು ಸೋಂಕಿತರ ಸಂಖ್ಯೆ 27,65,134 ಕ್ಕೆ ಏರಿಕೆಯಾಗಿದ್ದು, ಈವರೆಗೆ 32,913 ಜನ ಕೋವಿಡ್ ಸೋಂಕಿಗೆ ಬಲಿಯಾಗಿದ್ದಾರೆ. ಬೆಂಗಳೂರು ನಗರದಲ್ಲಿಯೂ ಕೋವಿಡ್ ಸೋಂಕಿತರ ಸಂಖ್ಯೆ ಇಳಿಕೆಯಾಗಿದ್ದು, ಇಂದು 1348 ಜನ ಸೋಂಕಿಗೆ ಒಳಗಾಗಿದ್ದು, 23 ಜನ ಮೃತಪಟ್ಟಿದ್ದಾರೆ.
ಬಾಗಲಕೋಟೆ 62, ಬಳ್ಳಾರಿಯಲ್ಲಿ 141, ಬೆಳಗಾವಿ 266, ಬೆಂ.ಗ್ರಾಮಾಂತರ 154, ಬೀದರ್ 07, ಚಾಮರಾಜನಗರ 129, ಚಿಕ್ಕಬಳ್ಳಾಪುರ 141, ಚಿಕ್ಕಮಗಳೂರು 223, ಚಿತ್ರದುರ್ಗ 128, ದ.ಕನ್ನಡ 434, ದಾವಣಗೆರೆ 391, ಧಾರವಾಡ 148, ಗದಗ 73, ಹಾಸನ 581, ಹಾವೇರಿ 64, ಕಲಬುರಗಿ 24, ಕೊಡಗು 125, ಕೋಲಾರ 164, ಕೊಪ್ಪಳ 76, ಮಂಡ್ಯ 467, ಮೈಸೂರು 1251, ರಾಯಚೂರು 30, ರಾಮನಗರ 47, ಶಿವಮೊಗ್ಗ 393, ತುಮಕೂರು 352, ಉಡುಪಿ 223, ಉ.ಕನ್ನಡ 250, ವಿಜಯಪುರ 96, ಯಾದಗಿರಿಯಲ್ಲಿ 22 ಕೋವಿಡ್ ಪಾಸಿಟಿವ್ ಕೇಸ್ ದೃಢಪಟ್ಟಿದೆ.
(ಬಾವಲಿಗಳಲ್ಲಿ ಹೊಸ ತಳಿಯ ಕೊರೊನಾ ವೈರಸ್ ಪತ್ತೆ: ಚೀನಾ ಸಂಶೋಧಕರಿಂದ ಸ್ಫೋಟಕ ಮಾಹಿತಿ)