ETV Bharat / city

Karnataka Covid: ಇಂದು 301 ಹೊಸ ಕೇಸ್ ಪತ್ತೆ.. 7 ಸೋಂಕಿತರು ಕೋವಿಡ್​ಗೆ ಬಲಿ - ಕರ್ನಾಟಕದಲ್ಲಿ ಒಮಿಕ್ರಾನ್

ಕರ್ನಾಟಕದಲ್ಲಿ ಇಂದು 301 ಜನರಿಗೆ ಕೋವಿಡ್ ಸೋಂಕು ದೃಢಪಟ್ಟಿದ್ದು, 7 ಸೋಂಕಿತರು ಮೃತಪಟ್ಟಿದ್ದಾರೆ.

Karnataka Covid,ಕರ್ನಾಟಕದ ಇಂದಿನ ಕೊರೊನಾ ವರದಿ
Karnataka Covid
author img

By

Published : Dec 6, 2021, 7:34 PM IST

ಬೆಂಗಳೂರು: ರಾಜ್ಯದಲ್ಲಿಂದು 88,387 ಮಂದಿಗೆ ಕೋವಿಡ್ ಪರೀಕ್ಷೆ ನಡೆಸಲಾಗಿದ್ದು, ಇದರಲ್ಲಿ 301 ಮಂದಿಗೆ ಸೋಂಕು ದೃಢಪಟ್ಟಿದೆ. ಈ ಮೂಲಕ ಸೋಂಕಿತರ ಸಂಖ್ಯೆ 29,98,400ಕ್ಕೆ ಏರಿಕೆ ಆಗಿದೆ.

ಇಂದು 359 ಜನ ಡಿಸ್ಚಾರ್ಜ್ ಆಗಿದ್ದು, ಈವರೆಗೆ ಒಟ್ಟು 29,53,067 ಮಂದಿ ಗುಣಮುಖರಾಗಿದ್ದಾರೆ. 7 ಸೋಂಕಿತರು ಮೃತಪಟ್ಟಿದ್ದು, ಸಾವಿನ ಸಂಖ್ಯೆ 38,237 ಕ್ಕೆ ಏರಿಕೆ ಆಗಿದೆ. ಸದ್ಯ ಸಕ್ರಿಯ ಪ್ರಕರಣಗಳು 7,067 ರಷ್ಟಿವೆ. ಈ ಮೂಲಕ ಸೋಂಕಿತರ ಪ್ರಮಾಣ ಶೇ.0.34 ರಷ್ಟಿದ್ದರೆ ಸಾವಿನ ಪ್ರಮಾಣ ಶೇ.2.32 ರಷ್ಟಿದೆ.

ವಿಮಾನ ನಿಲ್ದಾಣದಲ್ಲಿ 2,032 ಪ್ರಯಾಣಿಕರು ಕೋವಿಡ್ ತಪಾಸಣೆಗೆ ಒಳಪಟ್ಟಿದ್ದಾರೆ. ಹೈರಿಸ್ಕ್ ದೇಶಗಳಿಂದ 536 ಪ್ರಯಾಣಿಕರು ಆಗಮಿಸಿದ್ದಾರೆ. 9 ಜಿಲ್ಲೆಯಲ್ಲಿಂದು ಯಾವುದೇ ಹೊಸ ಸೋಂಕಿನ ಪ್ರಮಾಣ ವರದಿಯಾಗಿಲ್ಲ. ಬೆಂಗಳೂರು ನಗರ, ದಕ್ಷಿಣ ಕನ್ನಡ, ಕೊಡಗು, ತುಮಕೂರುನಲ್ಲಿಷ್ಟೇ ಸಾವಿನ ವರದಿಯಾಗಿದ್ದು, ಉಳಿ ಜಿಲ್ಲೆಯಲ್ಲಿ ಯಾವುದೇ ವರದಿಯಾಗಿಲ್ಲ.

ಇನ್ನು ರಾಜಧಾನಿ ಬೆಂಗಳೂರಲ್ಲಿ 162 ಮಂದಿಗೆ ಸೋಂಕು ದೃಢಪಟ್ಟಿದ್ದು, 12,57,660 ಸೋಂಕಿತರ ಸಂಖ್ಯೆ ಏರಿಕೆ ಆಗಿದೆ. 116 ಜನರು ಗುಣಮುಖರಾಗಿದ್ದು, 12,36,132 ಡಿಸ್ಚಾರ್ಜ್ ಆಗಿದ್ದಾರೆ. ಮೂವರು ಮೃತಪಟ್ಟಿದ್ದು, ಸಾವಿನ ಸಂಖ್ಯೆ 16,348 ಇದೆ. ಇನ್ನು ಸಕ್ರಿಯ 5179 ಪ್ರಕರಣಗಳು ಇವೆ.

ರೂಪಾಂತರಿ ಅಪ್​ಡೇಟ್:
ಅಲ್ಫಾ - 155
ಬೇಟಾ - 08
ಡೆಲ್ಟಾ - 2095
ಡೆಲ್ಟಾ ಸಬ್ ಲೈನ್ಏಜ್ - 558
ಕಪ್ಪಾ - 160
ಈಟಾ - 01
ಒಮಿಕ್ರಾನ್ - 02

(ಇದನ್ನೂ ಓದಿ: ಒಮಿಕ್ರಾನ್ ಬೆನ್ನಲ್ಲೇ 13 ಜಿಲ್ಲೆಗಳಲ್ಲಿ ಕೋವಿಡ್ ಪಾಸಿಟಿವಿಟಿ ದರ ಹೆಚ್ಚಳ: ಮೂರನೇ ಅಲೆ ಮುನ್ಸೂಚನೆಯಾ!?)

ETV Bharat Logo

Copyright © 2024 Ushodaya Enterprises Pvt. Ltd., All Rights Reserved.