ETV Bharat / city

COVID : 299 ಮಂದಿಗೆ ಸೋಂಕು, ಏರ್​ಪೋರ್ಟ್​ನಲ್ಲಿ ಕೋವಿಡ್ ಟೆಸ್ಟ್​ಗೆ ದರ ನಿಗದಿ - ಕರ್ನಾಟಕದಲ್ಲಿ ಇಂದು ಹೊಸ ಕೋವಿಡ್ ಕೇಸ್​ ಪತ್ತೆ

ರಾಜಧಾನಿ ಬೆಂಗಳೂರಲ್ಲಿಂದು 215 ಮಂದಿಗೆ ಸೋಂಕು ದೃಢಪಟ್ಟಿದೆ. ಸೋಂಕಿತರ ಸಂಖ್ಯೆ 12,57,875ಕ್ಕೆ ಏರಿದೆ. 97 ಜನರು ಡಿಸ್ಚಾರ್ಜ್ ಆಗಿದ್ದಾರೆ. ಈವರೆಗೆ 12,36,229 ಜನ ಗುಣಮುಖರಾಗಿದ್ದಾರೆ. ಮೂವರು ಸಾವನ್ನಪ್ಪಿದ್ದು, ಸಾವಿನ ಸಂಖ್ಯೆ 16,351ಕ್ಕೆ ಏರಿದೆ. ಸದ್ಯ ಸಕ್ರಿಯ ಪ್ರಕರಣಗಳು 5294 ರಷ್ಟಿವೆ..

Karnataka COVID,ಕರ್ನಾಟಕ ಕೋವಿಡ್ ಪ್ರಕರಣಗಳು,
Karnataka COVID
author img

By

Published : Dec 7, 2021, 7:42 PM IST

ಬೆಂಗಳೂರು : ರಾಜ್ಯದಲ್ಲಿಂದು 81,194 ಜನರಿಗೆ ಕೋವಿಡ್ ಪರೀಕ್ಷೆ ನಡೆಸಲಾಗಿದೆ. ಇದರಲ್ಲಿ 299 ಮಂದಿಗೆ ಸೋಂಕು ದೃಢಪಟ್ಟಿದೆ‌. ಈ ಮೂಲಕ ಸೋಂಕಿತರ ಸಂಖ್ಯೆ 29,98,699ಕ್ಕೆ ಏರಿಕೆ ಆಗಿದೆ‌.

ಇನ್ನು 260 ಮಂದಿ ಗುಣಮುಖರಾಗಿದ್ದಾರೆ. ಈವರೆಗೆ 29,53,327 ಜನ ಡಿಸ್ಚಾರ್ಜ್ ಆಗಿದ್ದಾರೆ. ಇಂದು ಆರು ಮಂದಿ ಮೃತಪಟ್ಟಿದ್ದಾರೆ. ಒಟ್ಟು ಸಾವಿನ ಸಂಖ್ಯೆ 38,243ಕ್ಕೆ ಏರಿದೆ. ಸದ್ಯ ಸಕ್ರಿಯ ಪ್ರಕರಣಗಳು 7100ಕ್ಕೆ ಏರಿಕೆ ಕಂಡಿವೆ. ಈ ಮೂಲಕ ಸೋಂಕಿತರ ಪ್ರಮಾಣ ಶೇ‌ 0.36ರಷ್ಟಿದೆ. ಸಾವಿನ ಪ್ರಮಾಣ ಶೇ.2.00 ರಷ್ಟಿದೆ.

ರಾಜಧಾನಿ ಬೆಂಗಳೂರಲ್ಲಿಂದು 215 ಮಂದಿಗೆ ಸೋಂಕು ದೃಢಪಟ್ಟಿದೆ. ಸೋಂಕಿತರ ಸಂಖ್ಯೆ 12,57,875ಕ್ಕೆ ಏರಿದೆ. 97 ಜನರು ಡಿಸ್ಚಾರ್ಜ್ ಆಗಿದ್ದಾರೆ. ಈವರೆಗೆ 12,36,229 ಜನ ಗುಣಮುಖರಾಗಿದ್ದಾರೆ. ಮೂವರು ಸಾವನ್ನಪ್ಪಿದ್ದು, ಸಾವಿನ ಸಂಖ್ಯೆ 16,351ಕ್ಕೆ ಏರಿದೆ. ಸದ್ಯ ಸಕ್ರಿಯ ಪ್ರಕರಣಗಳು 5294 ರಷ್ಟಿವೆ.

ರೂಪಾಂತರಿ ಅಪ್​ಡೇಟ್ಸ್ :
ಅಲ್ಪಾ - 155
ಬೇಟಾ -08
ಡೆಲ್ಟಾ - 2095
ಡೆಲ್ಟಾ ಸಬ್ ಲೈನ್ ಏಜ್ - 558
ಕಪ್ಪಾ - 160
ಈಟಾ - 01
ಒಮಿಕ್ರಾನ್ - 02

ವಿಮಾನ ನಿಲ್ದಾಣಗಳಲ್ಲಿ ಐಸಿಎಂಆರ್ ಪ್ರಮಾಣಿತ ವಿವಿಧ ಕೋವಿಡ್ ಪರೀಕ್ಷೆಗಳ ಲಭ್ಯತೆ : ದರ ನಿಗದಿ ಮಾಡಿದ ಸರ್ಕಾರ
ಕೋವಿಡ್-19 ಹೊಸ ರೂಪಾಂತರಿ ತಳಿ ಒಮಿಕ್ರಾನ್ ಪ್ರಕರಣಗಳು ವರದಿಯಾದ ಹಿನ್ನೆಲೆಯಲ್ಲಿ ಅಂತಾರಾಷ್ಟ್ರೀಯ ಪ್ರಯಾಣಿಕರಿಗೆ ಕಟ್ಟುನಿಟ್ಟಿನ ತಪಾಸಣೆ ಹಾಗೂ ಪರೀಕ್ಷೆ ಕಡ್ಡಾಯಗೊಳಿಸಲಾಗಿದೆ.

ವಿವಿಧ ಕೋವಿಡ್ ಪರೀಕ್ಷೆಗಳ ಲಭ್ಯತೆಯಿಂದ ಪ್ರಯಾಣಿಕರನ್ನು ಶೀಘ್ರವಾಗಿ ಪರೀಕ್ಷೆಗೆ ಒಳಪಡಿಸುವುದರ ಜೊತೆಗೆ, ವಿಮಾನ ನಿಲ್ದಾಣಗಳ ಆವರಣದಲ್ಲಿ ಕೋವಿಡ್ ಮುಂಜಾಗ್ರತಾ ಕ್ರಮಗಳ ಪಾಲನೆಯನ್ನೂ ಸಹ ಖಚಿತ ಪಡಿಸಿಕೊಳ್ಳಬಹುದಾಗಿದೆ. ಈ ಹಿನ್ನೆಲೆಯಲ್ಲಿ ರಾಜ್ಯದ ವಿಮಾನ ನಿಲ್ದಾಣಗಳಲ್ಲಿನ ಕೋವಿಡ್ ಟೆಸ್ಟ್ ಲ್ಯಾಬ್​ನಲ್ಲಿ ಐಸಿಎಂಆರ್ ಪ್ರಮಾಣಿತ ಕೋವಿಡ್ ಪರೀಕ್ಷೆಗಳು ಲಭ್ಯವಿದ್ದು,ದರ ನಿಗದಿ ಮಾಡಲಾಗಿದೆ.

ಯಾವ್ಯಾವ ಪರೀಕ್ಷೆಗೆ ಎಷ್ಟು ದರ?
ಆರ್​ಟಿಪಿಸಿಆರ್ - 500 ರೂ.
(EXPRESS TESTS)
Abbott ID - 3000 ರೂ.
Thermo-fisher Accula - 1500 ರೂ.
Tata MD 3 Gene Fast /Tata - 1200 ರೂ.
MDXF - 2750 ರೂ.
Cepheid gene expert - 2750 ರೂ.

(ಇದನ್ನೂ ಓದಿ: 104 ದಿನ ವೆಂಟಿಲೇಟರ್‌ನಲ್ಲಿದ್ದು 158 ದಿನಗಳ ಚಿಕಿತ್ಸೆ ಬಳಿಕ ಕೋವಿಡ್‌ನಿಂದ ಮಹಿಳೆ ಗುಣಮುಖ)

ETV Bharat Logo

Copyright © 2025 Ushodaya Enterprises Pvt. Ltd., All Rights Reserved.