ಬೆಂಗಳೂರು: ರಾಜ್ಯದಲ್ಲಿಂದು 97,782 ಜನರಿಗೆ ಕೋವಿಡ್ ಪರೀಕ್ಷೆ ನಡೆಸಲಾಗಿದ್ದು, ಇದರಲ್ಲಿ 270 ಮಂದಿಗೆ ಸೋಂಕು ದೃಢಪಟ್ಟಿದೆ. ಈ ಮೂಲಕ ಸೋಂಕಿತರ ಸಂಖ್ಯೆ 30,04,239 ಕ್ಕೆ ಏರಿಕೆ ಆಗಿದೆ.
ಇನ್ನು 246 ಮಂದಿ ಗುಣಮುಖರಾಗಿದ್ದು, ಈವರೆಗೆ 29,58,630 ಡಿಸ್ಚಾರ್ಜ್ ಆಗಿದ್ದಾರೆ. ನಾಲ್ವರು ಸೋಂಕಿತರು ಮೃತಪಟ್ಟಿದ್ದು, ಸಾವಿನ ಸಂಖ್ಯೆ 38,309ಕ್ಕೆ ಏರಿಕೆ ಕಂಡಿದೆ. ಸದ್ಯ ಸಕ್ರಿಯ ಪ್ರಕರಣಗಳು 7,271 ಕ್ಕೆ ಏರಿಕೆ ಆಗಿವೆ. ಈ ಮೂಲಕ ಸೋಂಕಿತರ ಪ್ರಮಾಣ ಶೇ.0.27 ರಷ್ಟಿದ್ದು, ಸಾವಿನ ಪ್ರಮಾಣ ಶೇ.1.48 ರಷ್ಟು ಇದೆ. ವಿಮಾನ ನಿಲ್ದಾಣದಲ್ಲಿ 1,986 ಪ್ರಯಾಣಿಕರು ತಪಾಸಣೆಗೊಳ್ಳಲ್ಪಟ್ಟಿದ್ದು, ಹೈರಿಸ್ಕ್ ದೇಶಗಳಿಂದ 830 ಪ್ರಯಾಣಿಕರು ಆಗಮಿಸಿದ್ದಾರೆ.
(ಇದನ್ನೂ ಓದಿ: ಜನವರಿ ಅಂತ್ಯದ ವೇಳೆಗೆ ಭಾರತದಲ್ಲಿ ಮತ್ತೆ ಕೋವಿಡ್ ಉಲ್ಬಣಿಸಲಿದೆ: ಕಿಮ್ಸ್ ಹೈದರಾಬಾದ್ ನಿರ್ದೇಶಕ)
ರಾಜಧಾನಿ ಬೆಂಗಳೂರಿನಲ್ಲಿಂದು 152 ಮಂದಿಗೆ ಸೋಂಕು ದೃಢಪಟ್ಟಿದ್ದು, ಸೋಂಕಿತರ ಸಂಖ್ಯೆ 12,61,308 ಕ್ಕೆ ಏರಿದೆ. 126 ಜನರು ಡಿಸ್ಚಾರ್ಜ್ ಆಗಿದ್ದು, 12,39,034 ಮಂದಿ ಗುಣಮುಖರಾಗಿದ್ದಾರೆ. ಇಬ್ಬರು ಸೋಂಕಿತರು ಮೃತಪಟ್ಟಿದ್ದು, ಸಾವಿನ ಸಂಖ್ಯೆ 16,383ಕ್ಕೆ ಹೆಚ್ಚಿದೆ.ಸದ್ಯ ಸಕ್ರಿಯ ಪ್ರಕರಣಗಳು 5,890 ರಷ್ಟಿದೆ.
ರೂಪಾಂತರಿ ಅಪಡೇಟ್ಸ್:
ಅಲ್ಪಾ - 155
ಬೇಟಾ - 08
ಡೆಲ್ಟಾ - 2569
ಡೆಲ್ಟಾ ಸಬ್ ಲೈನ್ ಏಜ್ - 949
ಕಪ್ಪಾ - 160
ಈಟಾ - 01
ಒಮಿಕ್ರಾನ್ - 31
(ಇದನ್ನೂ ಓದಿ: ಪುಷ್ಪ ಸಿನಿಮಾದಲ್ಲಿ ಅಲ್ಲು ಅರ್ಜುನ್ನನ್ನು ನಗ್ನವಾಗಿ ತೋರಿಸಬೇಕೆಂದುಕೊಂಡಿದ್ದೆ: ನಿರ್ದೇಶಕ ಸುಕುಮಾರ್)