ಬೆಂಗಳೂರು: ರಾಜ್ಯದಲ್ಲಿಂದು ಕಳೆದ 24 ಗಂಟೆಯಲ್ಲಿ 98,236 ಜನರಿಗೆ ಕೊರೊನಾ ಪರೀಕ್ಷೆ ಮಾಡಲಾಗಿದ್ದು, 6297 ಮಂದಿಗೆ ಸೋಂಕು ದೃಢಪಟ್ಟಿದೆ. ಈ ಮೂಲಕ ಸೋಂಕಿನ ಪ್ರಮಾಣ ಶೇಕಡ 6.41 ರಷ್ಟು ಇದೆ.
ರಾಜ್ಯದಲ್ಲಿ ಇದೀಗ ಸೋಂಕಿತರ ಸಂಖ್ಯೆ 7,76,901 ಇದ್ದು, 1,03,945 ಸಕ್ರಿಯ ಪ್ರಕರಣಗಳು ಇವೆ.
ಇಂದು 8500 ಸೋಂಕಿತರು ಗುಣಮುಖರಾಗಿದ್ದು, ಇಲ್ಲಿವರೆಗೆ 6,62,329 ಮಂದಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಕೊರೊನಾದಿಂದ ಚಿಕಿತ್ಸೆ ಫಲಿಸದೇ 66 ಸೋಂಕಿತರು ಬಲಿಯಾಗಿದ್ದು, 10,608 ಮೃತರಾಗಿದ್ದಾರೆ. ಅನ್ಯ ಕಾರಣದಿಂದ 19 ಸೋಂಕಿತರು ಸಾವನ್ನಪ್ಪಿದ್ದಾರೆ. ಸಾವಿನ ಪ್ರಮಾಣ ಶೇ.1.04 ರಷ್ಟು ಇದೆ. 941 ಸೋಂಕಿತರು ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕಳೆದ 7 ದಿನಗಳಲ್ಲಿ 96,128 ಮಂದಿ ಹೋಂ ಐಸೋಲೇಷನ್ನಲ್ಲಿ ಇದ್ದಾರೆ. ಸೋಂಕಿತರ ಸಂಪರ್ಕದಲ್ಲಿ ಪ್ರಾಥಮಿಕವಾಗಿ 5,33,477, ದ್ವಿತೀಯ ಸಂಪರ್ಕದಲ್ಲಿ 4,94,203 ಮಂದಿ ಇದ್ದಾರೆ.