ETV Bharat / city

ರಾಜ್ಯದಲ್ಲಿ 4 ಸಾವಿರ ಗಡಿ ದಾಟಿದ ಮೃತರ ಸಂಖ್ಯೆ: 6,317 ಹೊಸ ಕೊರೊನಾ ಕೇಸ್​ ಪತ್ತೆ

ಕೊರೊನಾ ಮಹಾಮಾರಿಗೆ ರಾಜ್ಯದಲ್ಲಿ ಬಲಿಯಾಗುತ್ತಿರುವವರ ಸಂಖ್ಯೆ ನಿಯಂತ್ರಣಕ್ಕೆ ಬರುತ್ತಿಲ್ಲ. ಅದರಂತೆ ಸೋಮವಾರ 115 ಮಂದಿ ಕೋವಿಡ್​​​​ಗೆ ಬಲಿಯಾಗಿದ್ದರೆ, 6,317 ಜನರಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ.

karnataka-corona-cases-reports
ಕರ್ನಾಟಕ ಕೊರೊನಾ ವರದಿ
author img

By

Published : Aug 17, 2020, 9:50 PM IST

ಬೆಂಗಳೂರು: ರಾಜ್ಯದಲ್ಲಿ ಕೋವಿಡ್​​ಗೆ ಇಂದು 115 ಮಂದಿ ಮೃತಪಟ್ಟಿದ್ದು, ಈ ಸಾವನ್ನಪ್ಪಿದವರ ಸಂಖ್ಯೆ 4,062ಕ್ಕೆ ಏರಿಕೆ ಆಗಿದೆ.

ಇದರ ಜೊತೆಗೆ ಅನ್ಯಕಾರಣಕ್ಕೆ ಮೃತಪಟ್ಟವರ ಸಂಖ್ಯೆ 16ಕ್ಕೆ ಏರಿದೆ. 6,317 ಹೊಸ ಪಾಸಿಟಿವ್ ಪ್ರಕರಣಗಳು ದೃಢಪಟ್ಟಿದ್ದು, 2,33,283 ಮಂದಿ ಕೊರೊನಾಗೆ ತುತ್ತಾಗಿದ್ದಾರೆ. ಇವತ್ತಿನ‌ ಸೋಂಕಿತರ ಸಂಖ್ಯೆಗಿಂತ ಗುಣಮುಖರಾದವರ ಸಂಖ್ಯೆ ಹೆಚ್ಚಿದ್ದು 7071 ಡಿಸ್ಜಾರ್ಜ್ ಆಗಿದ್ದಾರೆ.

1,48,562 ಜನರು ಗುಣಮುಖರಾಗಿದ್ದಾರೆ. ಉಳಿದ 80,643 ಸಕ್ರಿಯ ಪ್ರಕರಣಗಳಿಗೆ ನಿಗದಿತ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ತೀವ್ರ ನಿಗಾ ಘಟಕದಲ್ಲಿ 695 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಕಳೆದ 14 ದಿನಗಳಲ್ಲಿ 3,10,009 ಪ್ರಥಮ ಸಂಪರ್ಕಿತರು, 2,42,667 ದ್ವಿತೀಯ ಸಂಪರ್ಕಿತರನ್ನ ಆರೋಗ್ಯ ಇಲಾಖೆ ಪತ್ತೆ ಹಚ್ಚಿದ್ದು, ಸದ್ಯ 3,32,225 ಮಂದಿ ಹೋಂ ಕ್ವಾರಂಟೈನ್ ನಲ್ಲಿ ಇದ್ದಾರೆ. ಕಳೆದ 24 ಗಂಟೆಗಳಲ್ಲಿ 37,700 ಮಂದಿಗೆ ಕೋವಿಡ್ ಪರೀಕ್ಷೆ ಮಾಡಿದ್ದು, 6,317 ಸೋಂಕು ಪ್ರಕರಣಗಳು ದೃಢಪಟ್ಟಿವೆ. ಈವರೆಗೆ 20,75,086 ಜನರು ಕೊರೊನಾ ಪರೀಕ್ಷೆಗೆ ಒಳಗಾಗಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.