ETV Bharat / city

ರಾಜ್ಯಕ್ಕೆ 1,610 ಕೋಟಿ ಪ್ಯಾಕೇಜ್; ರೈತರು, ನೇಕಾರರು, ಆಟೋ ಚಾಲಕರಿಗೆ ಗಿಫ್ಟ್​: ಸಿಎಂ ಘೋಷಣೆ

author img

By

Published : May 6, 2020, 12:05 PM IST

ನೇಕಾರರಿಗೆ ನೆರವಾಗಲು 109 ಕೋಟಿ ವೆಚ್ಚದಲ್ಲಿ ಸಾಲಮನ್ನ ಘೋಷಣೆ ಮಾಡಿದ್ದೇವೆ. 'ನೇಕಾರ ಸಮ್ಮಾನ್​ ಯೋಜನೆ' ಎಂಬ ಹೊಸ ಯೋಜನೆ ಘೋಷಣೆ ಮಾಡಿದ್ದೇವೆ. 54,000 ಕೈಮಗ್ಗ ನೇಕಾರರಿಗೆ ಪ್ರತಿವರ್ಷ 2 ಸಾವಿರ ರೂ. ನಂತೆ ಖಾತೆಗೆ ಹಣ ಜಮಾ ಮಾಡುತ್ತೇವೆ ಎಂದು ಸಿಎಂ ಘೋಷಿಸಿದ್ದಾರೆ.

Karnataka CM B S Yedyurappa press meet
ಸಿಎಂ ಬಿಎಸ್​ವೈ

ಬೆಂಗಳೂರು: ಲಾಕ್‌ಡೌನ್‌ನಿಂದ ಸಂಕಷ್ಟಕ್ಕೆ ಸಿಲುಕಿದ ಜನರ ನೆರವಿಗಾಗಿ 1,610 ಕೋಟಿ ರೂ.ಗಳ ವಿಶೇಷ ಪ್ಯಾಕೇಜ್ ​ಅನ್ನು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಘೋಷಣೆ ಮಾಡಿದ್ದಾರೆ.

ವಿಧಾನಸೌಧದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಲಾಕ್​ಡೌನ್​ನಿಂದ ಎಲ್ಲಾ ವರ್ಗದ ಜನ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದಾರೆ. ಮೂರು ದಿನದಿಂದ ಲಾಕ್​ಡೌನ್ ಸಡಿಲಗೊಳಿಸಿದ್ದೇವೆ, ಯಾರು ಕೂಡ ಈ ರಿಯಾಯಿತಿ ದುರುಪಯೋಗಪಡಿಸಿಕೊಳ್ಳದೆ, ಆರ್ಥಿಕ ಸ್ಥಿತಿ ‌ಸುಧಾರಣೆಗೆ ಸಹಕಾರ ನೀಡಬೇಕು. ನಾವು ಒಂದು ಲಕ್ಷಕ್ಕೂ ಹೆಚ್ಚಿನ ಕಾರ್ಮಿಕರನ್ನು ಬಸ್ಸು ರೈಲುಗಳಲ್ಲಿ‌ ಕಳಿಸುವ ಪ್ರಯತ್ನ ಮಾಡಿದ್ದೇವೆ. ನಾಳೆಗೆ ಬಸ್ ಮೂಲಕ‌ ಕಳಿಸುವುದು ಮುಕ್ತಾಯವಾಗಲಿದೆ ಎಂದರು.

ಎಲ್ಲಾ ರೀತಿಯ ನಿರ್ಮಾಣ ಕಾಮಗಾರಿ ಆರಂಭಗೊಂಡಿವೆ. ಹೆಚ್ಚಿನ ಅನುಕೂಲ ಮಾಡಿಕೊಡಲು ಬಿಲ್ಡರ್​ಗಳು ಸಿದ್ಧರಿದ್ದಾರೆ. ಕೈಗಾರಿಕೆ ಪ್ರಾರಂಭಿಸಬೇಕು. ನಿರುದ್ಯೋಗಿ ಕಾರ್ಮಿಕರಿಗೆ ಉದ್ಯೋಗ ಸಿಗಬೇಕು ಎನ್ನುವುದು ನಮ್ಮ ಉದ್ದೇಶ. ಹೀಗಾಗಿ ಹಣಕಾಸು‌ ಇಲಾಖೆ ತಜ್ಞರ ಜೊತೆ ಸಮಾಲೋಚನೆ ನಡೆಸಿ ಹಣಕಾಸು ಸ್ಥಿತಿಗತಿ ಸರಿ ಇಲ್ಲದೇ ಇದ್ದರೂ ಸಂಕಷ್ಟಕ್ಕೆ ಸಿಲುಕಿದ‌ ಜನರ ನೆರವಿಗೆ ನಿರ್ಧಾರಿಸಿದೆ.ಲಾಕ್ ಡೌನ್ ಸಂಕಷ್ಟಕ್ಕೆ 1610 ಕೋಟಿ ಪ್ಯಾಕೇಜ್ ಘೋಷಣೆ ಮಾಡಲಾಗುತ್ತಿದೆ ಎಂದರು.

ಹೂ, ಹಣ್ಣು ಹಾಗೂ ತರಕಾರಿ ಬೆಳೆಗಾರರಿಗೆ ಪರಿಹಾರ...

ದೇವಸ್ಥಾನ ಮುಚ್ಚಿದ್ದು, ಮದುವೆಯಂತಹ ಶುಭ ಕಾರ್ಯ ನಡೆಯುತ್ತಿಲ್ಲ. ಹಾಗಾಗಿ ಹೂವಿಗೆ ಬೇಡಿಕೆ ಇಲ್ಲದೇ ಹೂವಿನ ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ. 11,687 ಹೆಕ್ಟೇರ್ ವಿಸ್ತೀರ್ಣದಲ್ಲಿ ಬೆಳೆದ ಹೂ ಮಾರಾಟವಾಗದೆ ರೈತರಿಗೆ ನಷ್ಟವಾಗಿದೆ. ಹೀಗಾಗಿ ಎಲ್ಲಾ ರೀತಿಯ ಹೂವು ಬೆಳೆಗಾರರಿಗೆ ನೆರವಾಗಲು ಸರ್ಕಾರ ನಿರ್ಧರಿಸಿದ್ದು, ಪ್ರತಿ ಹೆಕ್ಟೇರ್​ಗೆ 25 ಸಾವಿರ ರೂ. ಪರಿಹಾರ ಕೊಡಲು ತೀರ್ಮಾನಿಸಲಾಗಿದೆ. ಗರಿಷ್ಠ 1 ಹೆಕ್ಟೇರ್​ಗೆ ಸೀಮಿತವಾಗಿ ಪರಿಹಾರ ನೀಡಿ ಸಂಕಷ್ಟದಲ್ಲಿರುವ ರೈತರಿಗೆ ನೆರವು ನೀಡಲಿದ್ದೇವೆ ಎಂದರು.

ಈ ವರ್ಷ ತರಕಾರಿ, ಹಣ್ಣು ಬೆಳೆ ಉತ್ತಮವಾಗಿ ಬಂದಿದೆ. ಆದರೆ ಕೊರೊನಾ ಲಾಕ್ ಡೌನ್​ನಿಂದ ಉತ್ತಮ ಬೆಲೆ ಸಿಗದೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ಇವರಿಗೂ ಸೂಕ್ತ ಪರಿಹಾರ ನೀಡಲು ಮತ್ತೊಂದು ಪ್ಯಾಕೇಜ್ ಶೀಘ್ರದಲ್ಲೇ ಘೋಷಣೆ ಮಾಡಲಾಗುತ್ತದೆ ಎಂದರು.

ಅಗಸರು, ಕ್ಷೌರಿಕರಿಗೆ ಸರ್ಕಾರದಿಂದ ಪರಿಹಾರ:

ಪಟ್ಟಣ ಹಾಗೂ ಗ್ರಾಮದಲ್ಲಿ ಅಗಸರು, ಕ್ಷೌರಿಕರು ತಮ್ಮ ಕಸುಬು ನಡೆಸಲಾಗದೆ ದೈನಂದಿನ ಆದಾಯ ಕಳೆದುಕೊಂಡಿದ್ದಾರೆ. 60 ಸಾವಿರ ಅಗಸರು ಹಾಗೂ 2,30,000 ಜನ ಕ್ಷೌರಿಕರಿದ್ದು‌, ಇವರಿಗೆಲ್ಲಾ ಒಂದು ಬಾರಿ 5 ಸಾವಿರ ರೂ. ಪರಿಹಾರ ನೀಡಲು ತೀರ್ಮಾನಿಸಲಾಗಿದೆ ಎಂದರು.

ಆಟೋರಿಕ್ಷ ಹಾಗೂ ಟ್ಯಾಕ್ಸಿ ಚಾಲಕರಿಗೂ ನೆರವು:

ರಾಜ್ಯದಲ್ಲಿ ಆಟೋರಿಕ್ಷ, ಟ್ಯಾಕ್ಸಿ ಚಾಲಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಅಂದಾಜು 7,75,000 ಚಾಲಕರಿದ್ದಾರೆ. ಅವರೆಲ್ಲರಿಗೂ 5 ಸಾವಿರ ಹಣವನ್ನು ಒಂದು ಬಾರಿ ಪರಿಹಾರವಾಗಿ ನೀಡಲು ತೀರ್ಮಾನಿಸಲಾಗಿದೆ ಎಂದರು.

ಉದ್ದಿಮೆದಾರರಿಗೆ ವಿದ್ಯುತ್​ ಬಿಲ್​ನಲ್ಲಿ ಡಿಸ್ಕೌಂಟ್​:

ಸಣ್ಣ, ಅತಿ ಸಣ್ಣ ಹಾಗ ಮಧ್ಯಮ ಉದ್ದಿಮೆದಾರು ನಷ್ಟಕ್ಕೀಡಾಗಿದ್ದಾರೆ. ಉದ್ದಿಮೆ ಚೇತರಿಕೆಗೆ ಸಮಯ ಬೇಕಿದೆ. ಹಾಗಾಗಿ ಇವರ ವಿದ್ಯುತ್ ಬಿಲ್​ನಲ್ಲಿ ಮಿನಿಮನ್ ಚಾರ್ಜ್ ಎರಡು ತಿಂಗಳ ಅವಧಿಗೆ ಪೂರ್ತಿ ಮನ್ನಾ ಮಾಡಲಾಗುತ್ತದೆ. ನಿಗದಿತ ಸಮಯದಲ್ಲಿ ಬಿಲ್ ಪಾವತಿ ಮಾಡುವವರಿಗೆ, ಶೇ 1 ರ ರಿಯಾಯತಿ, ವಿಳಂಬ ಪಾವತಿಗೆ ಬಡ್ಡಿಯಲ್ಲಿ ಶೆ. 50-75 ಕಡಿತ, ಮುಂಗಡ ಪಾವತಿ ಮಾಡುವವರಿಗೆ ಶೇ.6 ಪ್ರೋತ್ಸಾಹ ಧನ ನೀಡಲಾಗುತ್ತದೆ. ಬೃಹತ್ ಕೈಗಾರಿಕೆಗೆ ಯಾವುದೇ ಬಡ್ಡಿ, ದಂಡ ಇಲ್ಲದೆ ವಿದ್ಯುತ್ ಬಿಲ್ ಪಾವತಿ ಎರಡು ತಿಂಗಳು ಮುಂದೂಡಲಾಗಿದೆ ಎಂದರು.

ನೇಕಾರರಿಗೆ ಭರ್ಜರಿ ಗಿಫ್ಟ್​:

ನೇಕಾರರಿಗೆ ಲಾಕ್​ಡೌನ್​ನಿಂದ ನಷ್ಟವಾಗಿದೆ. ನೇಕಾರರು, ರೈತರು ನಮ್ಮ ಎರಡು ಕಣ್ಣು ಇದ್ದಂತೆ. ಇವರಿಗಾಗಿ ಈಗಾಗಲೇ 109 ಕೋಟಿ ರೂ. ಸಾಲಮನ್ನಾ ಯೋಜನೆ ಘೋಷಿಸಲಾಗಿದೆ. 29 ಕೋಟಿ ಹಿಂದಿನ ವರ್ಷ ಬಿಡುಗಡೆ ಮಾಡಲಾಗಿತ್ತು. ಉಳಿದ 80 ಕೋಟಿ‌ ರೂ. ಈ ಕೂಡಲೇ ಬಿಡುಗಡೆ ಮಾಡಲಾಗುತ್ತದೆ. ಅವರಿಗೆ ಹೊಸ ಸಾಲ ಕೊಡಲಾಗುತ್ತದೆ. ಜನವರಿಯಿಂದ ಮಾರ್ಚ್ ಅವಧಿಯೊಳಗಿನ ಒಂದು ಲಕ್ಷ ರೂ.ವರೆಗಿನ ಸಾಲವನ್ನು ಮನ್ನ ಮಾಡಿದ್ದು, ಈಗಾಗಲೇ ಪಾವತಿ ಮಾಡಿದವರಿಗೆ ಮೊತ್ತ ಮರುಪಾವತಿ ಮಾಡಲಾಗುತ್ತದೆ ಎಂದರು.

ನೇಕಾರ್ ಸಮ್ಮಾನ್ ಯೋಜನೆ ಘೋಷಣೆ ಮಾಡಿದ ಸಿಎಂ:

ನೇಕಾರ್ ಸಮ್ಮಾನ್ ಯೋಜನೆ ಎನ್ನುವ ಹೊಸ ಯೋಜನೆ ಘೋಷಣೆ ಮಾಡುತ್ತಿದ್ದೇವೆ. ಇದರ ಅಡಿಯಲ್ಲಿ 54,000 ಕೈಮಗ್ಗ ನೇಕಾರರಿಗೆ ಪ್ರತಿವರ್ಷ 2 ಸಾವಿರ ರೂ ಅನ್ನು ಅವರ ಬ್ಯಾಂಕ್ ಖಾತೆಗೆ ನೇರವಾಗಿ ಜಮೆ ಮಾಡುವ ತೀರ್ಮಾನಿಸಲಾಗಿದೆ ಎಂದರು.

ರಾಜ್ಯದಲ್ಲಿ 15 ಲಕ್ಷ ನೋಂದಾಯಿತ ಕಟ್ಟಡ ಕಾರ್ಮಿಕರಿದ್ದು,11 ಲಕ್ಷ ಕಟ್ಟಡ ಕಾರ್ಮಿಕರಿಗೆ ಎರಡು ಸಾವಿರ ರೂ.ಗಳನ್ನು ಅವರ ಬ್ಯಾಂಕ್ ಖಾತೆಗೆ ನೇರವಾಗಿ ವರ್ಗಾವಣೆ ಮಾಡಲಾಗಿದೆ. ಉಳಿದ ನಾಲ್ಕು‌ ಲಕ್ಷ ಕಾರ್ಮಿಕರಿಗೂ ಹಣ ವರ್ಗಾವಣೆ ಮಾಡಲಾಗುತ್ತದೆ. ಮುಂದುವರೆದು ಕಾರ್ಮಿಕರ ವಲಸೆ ತಪ್ಪಿಸಲು ಈಗಿರುವ ಎರಡು ಸಾವಿರದ ಜೊತೆಗೆ ಮೂರು ಸಾವಿರ ರೂ. ನೀಡಲು ನಿರ್ಧಾರಿಸಿದ್ದು, ಐದು ಸಾವಿರ ಕೊಡುವ ಐತಿಹಾಸಿಕ ತೀರ್ಮಾನ ತೆಗೆದುಕೊಂಡಿದೆ.1610 ಕೋಟಿ ವೆಚ್ಚದಲ್ಲಿ ಈ ಎಲ್ಲಾ ಸೌಲಭ್ಯ ನೀಡಲಾಗುತ್ತದೆ ಎಂದರು.

ಈವರೆಗೆ ಕೋವಿಡ್ ನಿಯಂತ್ರಣ ಮಾಡುವಲ್ಲಿ ಯಶಸ್ವಿಯಾಗಿದ್ದೇವೆ. ಇನ್ನು ಬಿಗಿ ಕ್ರಮ ಕೈಗೊಂಡು ಕೊರೊನಾ ಹರಡದಂತೆ ಮುನ್ನೆಚ್ಚರಿಕೆ ವಹಿಸಬೇಕಿದೆ ಎಂದರು.

ರಾಜ್ಯದಲ್ಲಿ ಮದ್ಯ ಮಾರಾಟ ದರದಲ್ಲಿ ಹೆಚ್ಚಳ ಇಲ್ಲ. ಬೇರೆ ರಾಜ್ಯಗಳಲ್ಲಿ ಹೆಚ್ಚಿಸಲಾಗಿದೆ. ನಮ್ಮಲ್ಲಿ ಹೆಚ್ಚಿಸುವ ಕುರಿತು ಪರಿಶೀಲನೆ ಮಾಡಲಾಗುತ್ತದೆ. ಈಗಾಗಲೇ ಬಜೆಟ್​ನಲ್ಲೇ ಶೇ. 6 ಹೆಚ್ಚಳ ಮಾಡಲಾಗಿದೆ. ಅದರ ಜೊತೆ ಮತ್ತೆ ಶೇ. 11 ರಷ್ಟು ಹೆಷ್ಚಳ ಮಾಡಿದ್ದು, ಒಟ್ಟು ಶೇ. 17 ರಷ್ಟು ಹೆಚ್ಚಳವಾಗಲಿದೆ. ಎರಡು ಮೂರು ದಿನದಲ್ಲಿ ಹೊಸ ದರದ ಲೇಬಲ್​ಗಳೊಂದಿಗೆ ಮದ್ಯ ಮಾರಾಟ ಆರಂಭವಾಗಲಿದೆ ಎಂದರು.

ಬಾರ್ ಓಪನ್​​ ಮಾಡಲು ಅಗತ್ಯ ಸಿದ್ಧತೆ ಮಾಡಿಕೊಂಡಿರಲಿಲ್ಲವೇ ಎನ್ನುವ ಪ್ರಶ್ನೆಗೆ, ಕುಡಿಯುವವರು ಇದ್ದಾಗ ಸಿದ್ಧತೆ ಏನು ಮಾಡಬೇಕು ಎಂದು ಸಿಎಂ ಹಾಸ್ಯ ಚಟಾಕಿ ಹಾರಿಸಿದರು.

ಕೊರೊನಾ ಸಮಸ್ಯೆಗೆ ಅಧಿವೇಶನ ಕರೆದು ಮಾಡಬೇಕಾದ ಕೆಲಸವನ್ನು ಇಂದು ಪ್ರಕಟ ಮಾಡಿದ್ದೇವೆ. ಹಾಗಾಗಿ ಮತ್ತೆ ಅಧಿವೇಶನ ಕರೆಯುವ ಅಗತ್ಯವಿಲ್ಲ. ಸಿದ್ದರಾಮಯ್ಯ ಹಾಗು ಡಿ.ಕೆ.ಶಿವಕುಮಾರ್ ಭೇಟಿಗೆ ಅಪೇಕ್ಷೆ ಪಟ್ಟಿದ್ದು, ಎರಡು ಮೂರು ದಿನದಲ್ಲಿ ಅವರನ್ನು‌ ಕರೆದು ಮಾತನಾಡುತ್ತೇನೆ. ಅವರ ಸಲಹೆ ಪರಿಗಣಿಸಲಿದ್ದೇವೆ. ಆಡಳಿತ, ಪ್ರತಿಪಕ್ಷ ಎನ್ನದೇ ಎಲ್ಲರೂ ಒಟ್ಟಾಗಿ ಹೋಗಲಿದ್ದೇವೆ ಎಂದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.