ETV Bharat / city

ಆಶಾ ಕಾರ್ಯಕರ್ತರಿಗೆ ದಸರಾ ಗಿಫ್ಟ್​... ಸಚಿವ ಸಂಪುಟ ಸಭೆಯ ಹೈಲೈಟ್ಸ್ - ಬೆಂಗಳೂರು ಸುದ್ದಿಗಳು

ಆಶಾ ಕಾರ್ಯಕರ್ತರ ಗೌರವಧನ ಹೆಚ್ಚಿಸುವುದು ಸೇರಿದಂತೆ ಪ್ರಮುಖ ಯೋಜನೆಗಳಿಗೆ ಅನುದಾನ ಬಿಡುಗಡೆ ಮಾಡುವ ಕುರಿತು ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ.

ಕಾನೂನು ಸಚಿವ ಮಾಧು ಸ್ವಾಮಿ ಸುದ್ದಿಗೋಷ್ಠಿ
author img

By

Published : Oct 4, 2019, 4:06 AM IST

ಬೆಂಗಳೂರು: ಆಶಾ ಕಾರ್ಯಕರ್ತೆಯರಿಗೆ ನೀಡಲಾಗುತ್ತಿರುವ ಮಾಸಿಕ ನಿಶ್ಚಿತ ಗೌರವ ಧನವನ್ನು ನವೆಂಬರ್​​ನಿಂದ ತಲಾ 500 ರೂ. ಹೆಚ್ಚಿಸಲು ತೀರ್ಮಾನಿಸಲಾಗಿದೆ.

ಸಚಿವ ಸಂಪುಟ ಸಭೆ ಬಳಿಕ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಕಾನೂನು ಸಚಿವ ಮಾಧು ಸ್ವಾಮಿ, ಆಶಾ ಕಾರ್ಯಕರ್ತರ ಗೌರವಧನವನ್ನು 500 ರೂ. ಹೆಚ್ಚಿಸಲಾಗಿದೆ. ಪರಿಣಾಮ ಅವರ ಗೌರವಧನ 6000 ರೂ. ರಿಂದ 6,500 ರೂ. ಗೆ ಏರಿಕೆ ಆಗಿದೆ. ರಾಜ್ಯದಲ್ಲಿ 41,425 ಆಶಾ ಕಾರ್ಯಕರ್ತೆಯರಿದ್ದು, ವಾರ್ಷಿಕ 25 ಕೋಟಿ ರೂ. ಹೊರೆ ಬೀಳಲಿದೆ ಎಂದರು.

ಮಹಾತ್ಮ ಗಾಂಧೀಜಿಯ 150ನೇ ಜಯಂತಿ ಪ್ರಯುಕ್ತ 20 ಶಿಕ್ಷಾರ್ಹ ಕೈದಿಗಳನ್ನು ಬಿಡುಗಡೆಗೊಳಿಸಲು ನಿರ್ಧಾರ ಕೈಗೊಳ್ಳಲಾಗಿದೆ. ಮೈಸೂರು ಕೇಂದ್ರ ಕಾರಾಗೃಹದ 1, ಬೆಂಗಳೂರಿನ 3, ಕಲಬುರಗಿ 1, ಶಿವಮೊಗ್ಗ 6, ಬಳ್ಳಾರಿಯ 3 ಕೈದಿಗಳನ್ನು ಬಿಡುಗಡೆ ಗೊಳಿಸಲು ರಾಜ್ಯಪಾಲರಿಗೆ ಶಿಫಾರಸು ಮಾಡಲು ತೀರ್ಮಾನಿಸಲಾಗಿದೆ ಎಂದು ವಿವರಿಸಿದರು.

ರಾಜ್ಯದಲ್ಲಿ ಆನೆಗಳ ಹಾವಳಿ ಕಡಿಮೆ ಮಾಡುವ ಉದ್ದೇಶದಿಂದ ಅರಣ್ಯ ಪ್ರದೇಶದಲ್ಲಿ 118 ಕಿ.ಮೀ. ರೈಲ್ವೆ ಹಳಿ ಬ್ಯಾರಿಕೇಡ್ ನಿರ್ಮಾಣಕ್ಕೆ ಒಟ್ಟು 100 ಕೋಟಿ ರೂ. ನೀಡಲು ತೀರ್ಮಾನ. ಮೂರು ವರ್ಷದಲ್ಲಿ 628 ಕೋಟಿ ವೆಚ್ಚದಲ್ಲಿ 517.5 ಕಿ.ಮೀ. ರೈಲ್ವೆ ಹಳಿ ಬ್ಯಾರಿಕೇಡ್ ನಿರ್ಮಾಣದ ಗುರಿ ಇದ್ದು, ಈ ಪೈಕಿ 118 ಕಿ.ಮೀ. ರೈಲ್ವೇ ಹಳಿ ಬ್ಯಾರಿಕೇಡ್ ನಿರ್ಮಿಸಲು ತೀರ್ಮಾನಿಸಲಾಗಿದೆ ಎಂದು ತಿಳಿಸಿದರು.

ಈ ಪೈಕಿ ನಾಗರಹೊಳೆ ಹುಲಿ ಯೋಜನೆ ಪ್ರದೇಶ 24 ಕಿ.ಮೀ, ಬಂಡೀಪುರ 17, ಮಡಿಕೇರಿ 19, ವಿರಾಜಪೇಟೆ 3, ಮಲಮದೇಶ್ವರ ಕೊಳ್ಳೆಗಾಲ 13, ಕಾವೇರಿ ವನ್ಯಜೀವಿ ಕೊಳ್ಳಗಾಲ 15, ರಾಮನಗರ 6, ಹಾಸನ 6, ಬನ್ನೇರುಘಟ್ಟ ಉದ್ಯಾನದಲ್ಲಿ 15 ಕಿ.ಮೀ ಬ್ಯಾರಿಕೇಡ್ ನಿರ್ಮಿಸಲು ನಿರ್ಧರಿಸಲಾಗಿದೆ ಎಂದು ಮಾಹಿತಿ ನೀಡಿದರು.

ಕಾನೂನು ಸಚಿವ ಮಾಧು ಸ್ವಾಮಿ ಸುದ್ದಿಗೋಷ್ಠಿ

ಸಂಪುಟದ ತೀರ್ಮಾನಗಳೇನು:

- ಕೈಗಾರಿಕಾ ನೀತಿಯಡಿ ಮೆಗಾ, ಸೂಪರ್ ಮೆಗಾ ಯೋಜನೆಗಳಿಗೆ ಮತ್ತು ಕರ್ನಾಟಕ ಏರೋಸ್ಪೇಸ್ ನೀತಿ, ಕರ್ನಾಟಕ ಎಲೆಕ್ಟ್ರಿಕ್ ವೆಹಿಕಲ್ ಅಂಡ್‌ ಎನರ್ಜಿ ಸ್ಟೋರೇಜ್ ಪಾಲಿಸಿ ಮತ್ತು ನೂತನ ಜವಳಿ ನೀತಿಯಡಿ ಮೆಗಾ ಯೋಜನೆಗಳಿಗೆ ವಿಶೇಷ ರಿಯಾಯಿತಿ ಹಾಗೂ ಉತ್ತೇಜನ ನೀಡಲು ಸಂಪುಟ ಉಪಸಮಿತಿ ರಚನೆಗೆ ತೀರ್ಮಾನ

- ಕೆಎಸ್​​ಆರ್​ಪಿ ತರಬೇತಿಯಲ್ಲಿ ಆಕಸ್ಮಿಕ ಫೈರಿಂಗ್ ವೇಳೆ ಮೃತಪಟ್ಟ ಹೊಸಕೋಟೆ ಜಡಿಗೇಹಳ್ಳಿಯ ರೈತನ ಕುಟುಂಬಕ್ಕೆ 10 ಲಕ್ಷ ಪರಿಹಾರ ನೀಡಲು ತೀರ್ಮಾನ. ಮಾನವೀಯ ದೃಷ್ಟಿಯಿಂದ ಮಾನವ ಹಕ್ಕು ಆಯೋಗವು ಮೃತರ ಮಗನಿಗೆ ಉದ್ಯೋಗ ನೀಡಲು ಶಿಫಾರಸು ಮಾಡಿತ್ತು, ಆದರೆ ಉದ್ಯೋಗ ಕೊಡಲು ಅವಕಾಶ ಇಲ್ಲದ ಕಾರಣ ಪರಿಹಾರ ನೀಡಲು ನಿರ್ಧಾರ.

- ರಾಜ್ಯದ ರಕ್ತನಿಧಿ ಕೇಂದ್ರಗಳು ಹಾಗೂ ರಕ್ತ ಶೇಖರಣಾ ಕೇಂದ್ರಗಳಿಗೆ ಹೊಸ ಉಪಕರಣ ಖರೀದಿಗೆ ಮತ್ತು ನಾಲ್ಕು ಹೊಸ‌ ವಿಭಾಗೀಯ ರಕ್ತ ಶೇಖರಣಾ ಘಟಕ ನಿರ್ಮಾಣಕ್ಕೆ ಒಟ್ಟು 12 ಕೋಟಿ ರೂ.ಗೆ ಅಸ್ತು.

- ಕಾರ್ಕಳದಲ್ಲಿ ಎಣ್ಣೆಹೊಳೆ ಏತ ನೀರಾವರಿಗಾಗಿ 108 ಕೋಟಿ ರೂ. ಬಿಡುಗಡೆಗೆ ಅಸ್ತು.

- ಹಾವೇರಿಯ ಹಾನಗಲ್ ತಾಲೂಕಿನಲ್ಲಿ 77 ಕೆರೆಗಳಿಗೆ ವರದಾ ನದಿಯಿಂದ ನೀರು ಎತ್ತಿ ತುಂಬಿಸಲು 107.55 ಕೋಟಿ ರೂ. ಅನುಮೋದನೆ

- ಹಾನಗಲ್ ತಾಲೂಕಿನ 162 ಕೆರೆಗಳಿಗೆ ವರದಾ‌ ನದಿಯಿಂದ ನೀರು ತುಂಬಿಸಲು 386.25 ಕೋಟಿ ಯೋಜನೆ‌ ಮೊತ್ತಕ್ಕೆ ಅನೊಮೋದನೆ

- ಸಮಾಜ ಕಲ್ಯಾಣ ಇಲಾಖೆಯಡಿಯ 824 ವಸತಿ ಶಾಲಾ ಕಾಲೇಜಿಗಳಿಗೆ ನೋಟ್ ಬುಕ್ಸ್ ಹಾಗೂ ಸ್ಟೇಷನರಿ ಖರೀದಿಗಾಗಿ 26.26 ಕೋಟಿ ರೂ. ಅನುಮೋದ‌ನೆ.

ಎರಡು ದಿನದಲ್ಲಿ ಕೇಂದ್ರದ‌ ನೆರವು ಬರಲಿದೆ:

ಪ್ರಧಾನಿ ಮೋದಿ ವಿದೇಶ ಪ್ರವಾಸದಿಂದ ಬಂದ‌ ಮೇಲೆ ರಾಜ್ಯದ ಇಬ್ಬರು ಅಧಿಕಾರಿಗಳನ್ನು ಕರೆಸಿ ಪರಿಶೀಲನೆ ಮಾಡುತ್ತಿದ್ದಾರೆ. ಎರಡು ಮೂರು ದಿನದಲ್ಲಿ ಪರಿಹಾರ ಬರುವ ಆಶಾಭಾವನೆ ಇದೆ ಎಂದು ಇದೇ ವೇಳೆ ತಿಳಿಸಿದರು.

ಪ್ರಧಾನಿ ನಮ್ಮ ಮೇಲಿನ ಅಭಿಮಾನದಿಂದ ಆರ್ಥಿಕ ಸಚಿವರು, ಗೃಹ ಸಚಿವರನ್ನು ರಾಜ್ಯಕ್ಕೆ ಕಳುಹಿಸಿದ್ದಾರೆ‌.‌ ಆದರೆ, ಬಿಹಾರಕ್ಕೆ ಬರೇ ಟ್ವೀಟ್ ‌ಮಾಡಿದ್ದಾರೆ ಎಂದು ಸಮರ್ಥನೆ ಮಾಡಿಕೊಂಡರು.

ಎಸ್​​ಸಿಪಿ ಟಿಎಸ್​ಪಿ ಯೋಜನೆಯಡಿ ದಲಿತ ಕಾಲೋನಿಗಳ ರಸ್ತೆ, ಮನೆಗಳ ನಿರ್ಮಾಣಕ್ಕೆ 1150 ಕೋಟಿ ರೂ. ಡೈವರ್ಟ್ ಮಾಡಾಗಿದೆ. ಇನ್ನು 500 ಕೋಟಿ ರೂ. ಲೋಕೋಪಯೋಗಿ ಇಲಾಖೆಯಿಂದ ಬಿಡುಗಡೆ ಮಾಡಿದ್ದರೆ, 1000 ಕೋಟಿ ರೂ.‌ ಲೋಕೋಪಯೋಗಿ ರಸ್ತೆ ದುರಸ್ತಿ ಕಾಮಗಾರಿಗಳಿಗೆ ನೀಡಲಾಗಿದೆ ಎಂದು ಸ್ಪಷ್ಟಪಡಿಸಿದರು.

ಮನೆ ನಿರ್ಮಾಣಕ್ಕೆ ಐದು ಲಕ್ಷ ಕೊಡಲು ಎನ್​​ಡಿಆರ್​ಎಫ್ ನಿಯಮಾವಳಿಯಲ್ಲಿ ಅವಕಾಶವಿಲ್ಲ. ‌ಹಾಗಾಗಿ ವಿಶೇಷ ಪ್ಯಾಕೇಜ್ ಕೇಳಿದ್ದೇವೆ ಎಂದು ತಿಳಿಸಿದರು.

Intro:Body:KN_BNG_03_CABINET_PRESSMEET_SCRIPT_7201951

ಆಶಾ ಕಾರ್ಯಕರ್ತರ ಮಾಸಿಕ ಗೌರವಧನ 500 ರೂ. ಹೆಚ್ಚಿಸಲು ಸಂಪುಟ ತೀರ್ಮಾನ

ಬೆಂಗಳೂರು: ಆಶಾ ಕಾರ್ಯಕರ್ತೆಯರಿಗೆ ನೀಡಲಾಗುತ್ತಿರುವ ಮಾಸಿಕ ನಿಶ್ಚಿತ ಗೌರವಧನವನ್ನು ನವಂಬರ್ ನಿಂದ ತಲಾ 500 ರೂ.ಗೆ ಹೆಚ್ಚಿಸಲು ತೀರ್ಮಾನಿಸಲಾಗಿದೆ.

ಸಚಿವ ಸಂಪುಟ ಸಭೆ ಬಳಿಕ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಕಾನೂನು ಸಚಿವ ಮಾಧು ಸ್ವಾಮಿ, ಅವರ ಗೌರವಧನ 6000 ರೂ. ರಿಂದ 6,500 ರೂ. ಗೆ ಏರಿಕೆ ಮಾಡಲಾಗಿದೆ. ರಾಜ್ಯದಲ್ಲಿ 41,425 ಆಶಾ ಕಾರ್ಯಕರ್ತೆಯರಿದ್ದು, ವಾರ್ಷಿಕ 25 ಕೋಟಿ ರೂ. ಹೊರೆ ಬೀಳಲಿದೆ ಎಂದರು.

ಮಹಾತ್ಮ ಗಾಂಧೀಜಿಯ 150ನೇ ಜಯಂತಿ ಪ್ರಯುಕ್ತ 20 ಶಿಕ್ಷಾರ್ಹ ಖೈದಿಗಳನ್ನು ಬಿಡುಗಡೆ ಗೊಳಿಸಲು ನಿರ್ಧಾರ ಕೈಗೊಳ್ಳಲಾಗಿದೆ ಎಂದು ತಿಳಿಸಿದರು. ಈ ಪೈಕಿ ಒಬ್ಬರು ಮುನಿ ಅಕ್ಕಯ್ಯಮ್ಮ ಮಹಿಳೆ ಇದೆ. ಮೈಸೂರು ಕೇಂದ್ರ‌ ಕಾರಾಗೃಹ 1, ಬೆಂಗಳೂರು 3, ಕಲಬುರ್ಗಿ 1, ಶಿವಮೊಗ್ಗ 6, ಬಳ್ಳಾರಿ 3 ಖೈದಿಗಳು ಬಿಡುಗಡೆ ಗೊಳಿಸಲು ರಾಜ್ಯಪಾಲರಿಗೆ ಶಿಫಾರಸು ಮಾಡಲು ತೀರ್ಮಾನಿಸಲಾಗಿದೆ ಎಂದು ವಿವರಿಸಿದರು.

ರಾಜ್ಯದಲ್ಲಿ ಆನೆಗಳ ಹಾವಳಿ ಕಡಿಮೆ ಮಾಡುವ ಉದ್ದೇಶದಿಂದ ಅರಣ್ಯ ಪ್ರದೇಶದಲ್ಲಿ 118 ಕಿ.ಮೀ. ರೈಲ್ವೇ ಹಳಿ ಬ್ಯಾರಿಕೇಡ್ ನಿರ್ಮಾಣಕ್ಕೆ ಒಟ್ಟು 100 ಕೋಟಿ ರೂ. ನೀಡಲು ತೀರ್ಮಾನ. ಮೂರು ವರ್ಷದಲ್ಲಿ 628 ಕೋಟಿ ವೆಚ್ಚದಲ್ಲಿ 517.5 ಕಿ.ಮೀ. ರೈಲ್ವೇ ಹಳಿ ಬ್ಯಾರಿಕೇಡ್ ನಿರ್ಮಾಣದ ಗುರಿ ಇದ್ದು, ಈ ಪೈಕಿ 118 ಕಿ.ಮೀ. ರೈಲ್ವೇ ಹಳಿ ಬ್ಯಾರಿಕೇಡ್ ನಿರ್ಮಿಸಲು ತೀರ್ಮಾನಿಸಲಾಗಿದೆ ಎಂದು ತಿಳಿಸಿದರು.

ಈ ಪೈಕಿ ನಾಗರಹೊಳೆ ಹುಲಿ ಯೋಜನೆ ಪ್ರದೇಶ 24 ಕಿ.ಮೀ., ಬಂಡೀಪುರ 17, ಮಡಿಕೇರಿ 19, ವಿರಾಜಪೇಟೆ 3, ಮಲಮದೇಶ್ವರ ಕೊಳ್ಳೆಗಾಲ 13, ಕಾವೇರಿ ವನ್ಯಜೀವಿ ಕೊಳ್ಳಗಾಲ 15, ರಾಮನಗರ 6, ಹಾಸನ 6, ಬನ್ನೇರುಘಟ್ಟ ಉದ್ಯಾನದಲ್ಲಿ 15 ಕಿ.ಮೀ. ಬ್ಯಾರಿಕೇಡ್ ನಿರ್ಮಿಸಲು ನಿರ್ಧರಿಸಲಾಗಿದೆ ಎಂದು ವಿವರಿಸಿದರು.

ಸಂಪುಟ ತೀರ್ಮಾನಗಳೇನು:

- ಕೈಗಾರಿಕಾ ನೀತಿಯಡಿ ಮೆಗಾ, ಸೂಪರ್ ಮೆಗಾ ಯೋಜನೆಗಳಿಗೆ ಮತ್ತು ಕರ್ನಾಟಕ ಏರೋಸ್ಪೇಸ್ ನೀತಿ, ಕರ್ನಾಟಕ ಎಲೆಕ್ಟ್ರಿಕ್ ವೆಹಿಕಲ್ ಅಂಡ್‌ ಎನರ್ಜಿ ಸ್ಟೋರೇಜ್ ಪಾಲಿಸಿ ಮತ್ತು ನೂತನ ಜವಳಿ ನೀತಿಯಡಿ ಮೆಗಾ ಯೋಜನೆಗಳಿಗೆ ವಿಶೇಷ ರಿಯಾಯಿತಿ ಹಾಗು ಉತ್ತೇಜನ ನೀಡಲು ಸಂಪುಟ ಉಪಸಮಿತಿ ರಚನೆಗೆ ತೀರ್ಮಾನ

- ಕೆಎಸ್ ಆರ್ ಪಿ ತರಬೇತಿಯಲ್ಲಿ ಆಕಸ್ಮಿಕ ಫೈರಿಂಗ್ ವೇಳೆ ಮೃತ ಪಟ್ಟ ಹೊಸಕೋಟೆ ಜಡಿಗೇಹಳ್ಳಿಯ ರೈತನ ಕುಟುಂಬಕ್ಕೆ ಹತ್ತು ಲಕ್ಷ ಪರಿಹಾರ ನೀಡಲು ತೀರ್ಮಾನ. ಮಾನವೀಯ ದೃಷ್ಟಿಯಿಂದ ಮಾನವ ಹಕ್ಕು ಆಯೋಗ ಮಗನಿಗೆ ಉದ್ಯೋಗ ನೀಡಲು ಶಿಫಾರಸು ಮಾಡಿತ್ತು, ಆದರೆ ಉದ್ಯೋಗ ಕೊಡಲು ಅವಕಾಶ ಇಲ್ಲದ ಕಾರಣ ಪರಿಹಾರ ನೀಡಲು ನಿರ್ಧಾರ.

- ರಾಜ್ಯದ ರಕ್ತನಿಧಿ ಕೇಂದ್ರಗಳು, ಹಾಗೂ ರಕ್ತ ಶೇಖರಣಾ ಕೇಂದ್ರಗಳಿಗೆ ಹೊಸ ಉಪಕರಣ ಖರೀದಿಗೆ ಹಾಗೂ ನಾಲ್ಕು ಹೊಸ‌ ವಿಭಾಗೀಯ ರಕ್ತ ಶೇಖರಣಾ ಘಟಕ ನಿರ್ಮಾಣಕ್ಕೆ ಒಟ್ಟು 12 ಕೋಟಿ ರೂ.ಗೆ ಅಸ್ತು.

- ಕಾರ್ಕಳದಲ್ಲಿ ಎಣ್ಣೆಹೊಳೆ ಏತ ನೀರವಾರಿಗಾಗಿ 108 ಕೋಟಿ ರೂ. ಬಿಡುಗಡೆಗೆ ಅಸ್ತು.

- ಹಾವೇರಿ ಹಾನಗಲ್ ತಾಲೂಕಿನಲ್ಲಿ 77 ಕೆರೆಗಳಿಗೆ ವರದಾ ನದಿಯಿಂದ ನೀರು ಎತ್ತಿ ತುಂಬಿಸಲು 107.55 ಕೋಟಿ ರೂ. ಅನುಮೋದನೆ

- ಹಾನಗಲ್ ತಾಲೂಕಿನ 162 ಕೆರೆಗಳಿಗೆ ವರದಾ‌ ನದಿಯಿಂದ ನೀರು ತುಂಬಿಸಲು 386.25 ಕೋಟಿ ಯೋಜನೆ‌ ಮೊತ್ತಕ್ಕೆ ಅನೊಮೋದನೆ

-ಸಮಾಜ ಕಲ್ಯಾಣ ಇಲಾಖೆಯಡಿಯ 824 ವಸತಿ ಶಾಲಾ ಕಾಲೇಜಿಗಳಿಗೆ ನೋಟ್ ಬುಕ್ಸ್ ಹಾಗೂ ಸ್ಟೇಷನರಿ ಖರೀದಿಗಾಗಿ 26.26 ಕೋಟಿ ರೂ. ಅನುಮೋದ‌ನೆ.

ಎರಡು ದಿನಗಳಲ್ಲಿ ಕೇಂದ್ರದ‌ ನೆರವು ಬರಲಿದೆ:

ಪ್ರಧಾನಿ ಮೋದಿ ವಿದೇಶ ಪ್ರವಾಸದಿಂದ ಬಂದ‌ ಮೇಲೆ ರಾಜ್ಯದ ಇಬ್ಬರು ಅಧಿಕಾರಿಗಳನ್ನು ಕರೆಸಿ ಪರಿಶೀಲನೆ ಮಾಡುತ್ತಿದ್ದಾರೆ. ಎರಡು ಮೂರು ದಿನದಲ್ಲಿ ಪರಿಹಾರ ಬರುವ ಆಶಾಭಾವನೆ ಇದೆ ಎಂದು ಇದೇ ವೇಳೆ ತಿಳಿಸಿದರು.

ಪ್ರಧಾನಿ ನಮ್ಮ‌ ಮೇಲಿನ ಅಭಿಮಾನದಿಂದ ಆರ್ಥಿಕ ಸಚಿವರು, ಗೃಹ ಸಚಿವರನ್ನು ರಾಜ್ಯಕ್ಕೆ ಕುಹಿಸಿದ್ದಾರೆ‌.‌ ಆದರೆ, ಬಿಹಾರಕ್ಕೆ ಬರೇ ಟ್ವೀಟ್ ‌ಮಾಡಿದ್ದಾರೆ ಎಂದು ಸಮರ್ಥನೆ ಮಾಡಿಕೊಂಡರು.

ಎಸ್ ಸಿಪಿ ಟಿಎಸ್ ಪಿ ಯೋಜನೆಯಡಿ ದಲಿತ ಕಾಲೋನಿಗಳ ರಸ್ತೆ, ಮನೆಗಳ ನಿರ್ಮಾಣಕ್ಕೆ 1150 ಕೋಟಿ ರೂ. ಡೈವರ್ಟ್ ಮಾಡಾಗಿದೆ. ಇನ್ನು 500 ಕೋಟಿ ರೂ. ಲೋಕೋಪಯೋಗಿ ಇಲಾಖೆಯಿಂದ ಬಿಡುಗಡೆ ಮಾಡಿದ್ದರೆ, 1000 ಕೋಟಿ ರೂ.‌ ಲೋಕೋಪಯೋಗಿ ರಸ್ತೆ ದುರಸ್ತಿ ಕಾಮಗಾರಿಗಳಿಗೆ ನೀಡಲಾಗಿದೆ ಎಂದು ಸ್ಪಷ್ಟಪಡಿಸಿದರು.

ಎನ್ ಡಿ ಆರ್ ಎಪ್ ನಿಯಮಾವಳಿಯಡಿಯಲ್ಲಿ ಕೆಲವು ಪರಿಹಾರ ನೀಡಲು ಸಾಧ್ಯವಿಲ್ಲ‌. ಹಾಗಾಗಿ ನಾವು ವಿಶೇಷ ಪ್ಯಾಕೇಜ್ ಕೇಳಿದ್ದೇವೆ. ಮನೆ ನಿರ್ಮಾಣಕ್ಕೆ ಐದು ಲಕ್ಷ ಕೊಡಲು ಎನ್ ಡಿ ಆರ್ ಎಫ್ ನಿಯಮಾವಳಿಯಲ್ಲಿ ಅವಕಾಶವಿಲ್ಲ‌.‌ಹಾಗಾಗಿ ವಿಶೇಷ ಪ್ಯಾಕೇಜ್ ಕೇಳಿದ್ದೇವೆ ಎಂದು ತಿಳಿಸಿದರು.Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.