ETV Bharat / city

ಬಿಜೆಪಿ ಸಾಧನಾ ಸಮಾವೇಶ ರದ್ದು, ರಾಜ್ಯದಲ್ಲಿ ಭಯೋತ್ಪಾದಕ ನಿಗ್ರಹ ದಳ ರಚನೆಗೆ ಸರ್ಕಾರ ನಿರ್ಧಾರ - ಆ್ಯಂಟಿ ಟೆರರಿಸ್ಟ್ ಸ್ಕ್ವಾಡ್ ರಚನೆ

ಪ್ರವೀಣ್ ನೆಟ್ಟಾರು ಅವರ ತಾಯಿ ಮತ್ತು ಪತ್ನಿಯ ಆಕ್ರಂದನ ನೋಡಿ ಜನೋತ್ಸವ ಕಾರ್ಯಕ್ರಮ ರದ್ದು ಮಾಡುವ ನಿರ್ಧಾರಕ್ಕೆ ಬಂದೆ ಎಂದಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ರಾಜ್ಯದಲ್ಲಿ ಭಯೋತ್ಪಾದಕ ನಿಗ್ರಹ ದಳ(ಎಟಿಎಸ್) ಸ್ಥಾಪಿಸಲಾಗುವುದು ಎಂದು ತಿಳಿಸಿದರು.

sadhana samavesha
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸುದ್ದಿಗೋಷ್ಠಿ
author img

By

Published : Jul 28, 2022, 7:19 AM IST

ಬೆಂಗಳೂರು: ದಕ್ಷಿಣ ಕನ್ನಡ ಜಿಲ್ಲೆ ಸುಳ್ಯ ತಾಲೂಕಿನ ಬೆಳ್ಳಾರೆಯ ಬಿಜೆಪಿ ಯುವ ಮೋರ್ಚಾ ಮುಖಂಡ ಪ್ರವೀಣ್ ನೆಟ್ಟಾರು​ ಹತ್ಯೆಯಾಗಿರುವ ಈ ಸಂದರ್ಭದಲ್ಲಿ ಸಾಧನಾ ಸಮಾವೇಶ ಮಾಡಲು ನನ್ನ ಮನಸಾಕ್ಷಿ ಒಪ್ಪಲಿಲ್ಲ. ಹಾಗಾಗಿ, 'ಜನೋತ್ಸವ ಕಾರ್ಯಕ್ರಮ'ವನ್ನು ರದ್ದು ಮಾಡಿದ್ದೇನೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ಆರ್.ಟಿ.ನಗರ ನಿವಾಸದಲ್ಲಿ ಸರಿರಾತ್ರಿ 12.25ಕ್ಕೆ ತುರ್ತು ಸುದ್ದಿಗೋಷ್ಠಿ ನಡೆಸಿ ಅವರು ಮಾತನಾಡಿದರು.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸುದ್ದಿಗೋಷ್ಠಿ

ಒಂದೆಡೆ ನಮ್ಮ ಯುವ ಕಾರ್ಯಕರ್ತನ ಕೊಲೆಯಾಗಿದೆ. ಇದೇ ವೇಳೆ ನಮ್ಮ ಸರ್ಕಾರಕ್ಕೆ ಒಂದು ವರ್ಷವಾಗುತ್ತಿದೆ. ಯಡಿಯೂರಪ್ಪನವರು ತಂದಿರುವ ಸರ್ಕಾರಕ್ಕೆ ಮೂರು ವರ್ಷ ತುಂಬುತ್ತಿದೆ. ಹಲವು ಅಭಿವೃದ್ಧಿಪರ ಕಾರ್ಯಕ್ರಮಗಳನ್ನು ರಾಜ್ಯದ ಜನರಿಗೆ ಕೊಡಬೇಕೆನ್ನುವ ಹಂಬಲ ನಮ್ಮದು. ಇದೇ ಕಾರಣಕ್ಕೆ ಉತ್ಸವಕ್ಕಿಂತ ಜನೋತ್ಸವ ಮಾಡಲು ಉದ್ದೇಶಿಸಿದ್ದೆವು. ಜನಪರವಾಗಿ ನಾವೇನು ಕೆಲಸ ಮಾಡಿದ್ದೇವೆ ಎನ್ನುವುದನ್ನು ಜನರಿಗೆ ತಿಳಿಸಬೇಕಿತ್ತು. ಸಂಭ್ರಮಿಸಲು ಅಲ್ಲ ಎಂದು ಸಿಎಂ ಸ್ಪಷ್ಟನೆ ನೀಡಿದರು.

ಹತ್ಯೆಯಾದ ಆ ಹುಡುಗನ ತಾಯಿಯ ಆಕ್ರಂದನ, ಪತ್ನಿಯ ಆಕ್ರಂದನ ಹಾಗೂ ಹರ್ಷನ ತಾಯಿಯ ನೋವನ್ನ ನೋಡಿ ಈ ಸಂದರ್ಭದಲ್ಲಿ ನಾವು ಯಾವುದೇ ರೀತಿಯ ಕಾರ್ಯಕ್ರಮ ಮಾಡುವುದು ಸೂಕ್ತವಲ್ಲ ಎನ್ನುವ ನಿರ್ಧಾರಕ್ಕೆ ಬಂದಿದ್ದೇವೆ. ಹೀಗಾಗಿ, ದೊಡ್ಡಬಳ್ಳಾಪುರದ ಕಾರ್ಯಕ್ರಮವನ್ನು ನಾನು ರದ್ದು ಮಾಡಿದ್ದೇನೆ, ನಮ್ಮ ಪಕ್ಷವೂ ಕಾರ್ಯಕ್ರಮ ರದ್ದು ಮಾಡಿದೆ ಮತ್ತು ವಿಧಾನಸೌಧದಲ್ಲಿ ನಡೆಯುವ ಸರ್ಕಾರಿ ಕಾರ್ಯಕ್ರಮವನ್ನು ಕೂಡ ರದ್ದು ಮಾಡಿದ್ದೇವೆ.

ಇಂದು ಬೆಳಗ್ಗೆ 10.30ಕ್ಕೆ ಸುದ್ದಿಗೋಷ್ಠಿ: ಆದರೆ, ಬಡ ಜನರಿಗೆ, ಎಸ್ ಸಿ, ಎಸ್ ಟಿ, ಮಹಿಳೆಯರು ಯುವಕರ ಕಾರ್ಯಕ್ರಮಗಳು, ಅಭಿವೃದ್ಧಿ, ನಿರಂತರವಾಗಿ ನಡೆಯಬೇಕು ಎನ್ನುವ ಒಂದೇ ಒಂದು ಕಾರಣಕ್ಕಾಗಿ ಅವುಗಳಿಗೆ ಸಂಬಂಧಪಟ್ಟ ಯೋಜನೆಗಳ ಘೋಷಣೆಯನ್ನು ಮಾತ್ರ ನಾನು ಬೆಳಗ್ಗೆ 10.30ಕ್ಕೆ ಸುದ್ದಿಗೋಷ್ಠಿ ಮೂಲಕ ಪ್ರಕಟಿಸುತ್ತೇನೆ. ಅದರ ಹೊರತು ಯಾವುದೇ ರೀತಿಯ ಸಂಭ್ರಮಾಚರಣೆ ಇರುವುದಿಲ್ಲ, ಕಾರ್ಯಕ್ರಮವೂ ಇರುವುದಿಲ್ಲ ಎಂದರು.

ದೇಶದ್ರೋಹದ ಕೆಲಸ ಮಾಡುವವರನ್ನು ಸದೆಬಡಿಯುತ್ತೇವೆ: ಇದೊಂದು ಬಹಳ ದೊಡ್ಡ ಜಾಲ. ದೇಶದ್ರೋಹದ ಕೆಲಸ ಮಾಡಿ, ಶಾಂತಿ ಕದಡಿ, ಹಿಂಸೆ ಮಾಡಿ, ಜನಸಾಮಾನ್ಯರ ನಡುವೆ ದ್ವೇಷ ಬಿತ್ತಿ, ಕೋಮು ಗಲಭೆ ಮಾಡಿ, ದೊಡ್ಡ ದಂಗೆಯನ್ನು ಎಬ್ಬಿಸಿ ದೇಶದಲ್ಲಿ ಅಶಾಂತಿ ಮೂಡಿಸಲು ಯತ್ನಿಸಲಾಗುತ್ತಿದೆ. ಈ ರೀತಿ ಕರ್ನಾಟಕದಲ್ಲಿ ಮಾತ್ರವಲ್ಲ, ನೆರೆಯ ಕೇರಳ, ರಾಜಸ್ಥಾನ, ಮಧ್ಯಪ್ರದೇಶ, ಉತ್ತರ ಪ್ರದೇಶದಲ್ಲಿಯೂ ಆಗಿದೆ. ನಾವಿದನ್ನು ಸದೆಬಡಿಯುವ ಸಂಕಲ್ಪ ತೊಟ್ಟಿದ್ದೇವೆ ಎಂದರು.

ಆ್ಯಂಟಿ ಟೆರರಿಸ್ಟ್ ಸ್ಕ್ವಾಡ್ ರಚನೆ: ಅಮಾಯಕರನ್ನು ಕೊಲ್ಲುವ ಯಾವುದೇ ಸಂಘಟನೆಯನ್ನು ಸಂಪೂರ್ಣವಾಗಿ ನಾಶ ಮಾಡಲು, ವಿಶೇಷ ತರಬೇತಿ ಪಡೆದ ಆ್ಯಂಟಿ ಟೆರರಿಸ್ಟ್ ಕಮಾಂಡೋ ಸ್ಕ್ವಾಡ್ ಸ್ಥಾಪಿಸಲು ತೀರ್ಮಾನ ಮಾಡಿದ್ದೇವೆ ಎಂದು ಸಿಎಂ ತಿಳಿಸಿದರು.

ಸಂಘಟನೆ ನಿಷೇಧಕ್ಕೆ ಮಾಹಿತಿ ಸಂಗ್ರಹ: ಛತ್ತೀಸ್​ಗಢ ಸರ್ಕಾರ ಪಿಎಫ್​ಐ ಸಂಘಟನೆಯನ್ನು ನಿಷೇಧ ಮಾಡಿತ್ತು. ಕೇವಲ ಒಂದು ತಿಂಗಳಲ್ಲಿ ಆ ಆದೇಶಕ್ಕೆ ಹೈಕೋರ್ಟ್ ತಡೆ ನೀಡಿತು. ಹಾಗಾಗಿ, ನಾವು ಆತುರದ ನಿರ್ಧಾರ ಕೈಗೊಳ್ಳುತ್ತಿಲ್ಲ. ಎಲ್ಲ ರಾಜ್ಯಗಳ ಅಭಿಪ್ರಾಯ ಪಡೆದು ಸೂಕ್ತ ದಾಖಲಾತಿಗಳ ಆಧಾರದಲ್ಲಿ ಕ್ರಮ ಕೈಗೊಳ್ಳಬೇಕಿದೆ ಎಂದು ಹೇಳಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.