ETV Bharat / city

ಕರ್ನಾಟಕ ಬಂದ್: ಒಕ್ಕೂಟದ ಅಧ್ಯಕ್ಷ  ನಾಗೇಶ್​ಗೆ ಪೊಲೀಸರ ಎಚ್ಚರಿಕೆ - ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಅವರ ಸೂಚನೆಯಂತೆ ಯಾವುದೇ ರೀತಿಯ ಮೆರವಣಿಗೆಗಳಿಗೆ ಅವಕಾಶವಿಲ್ಲ

ಸರೋಜಿನಿ ಮಹಿಷಿ ವರದಿ ಜಾರಿಗೆ ಒತ್ತಾಯಿಸಿ ಕರ್ನಾಟಕ ಸಂಘಟನೆಗಳ ಒಕ್ಕೂಟ ಕರ್ನಾಟಕ ಬಂದ್ ಗೆ ಕರೆ ನೀಡಿದೆ. ಈ ನಡುವೆ ನಗರ ಪೊಲೀಸರು ಪ್ರತಿಭಟನೆಗೆ ಅವಕಾಶ ನೀಡಲು ನಿರಾಕರಿಸಿದ್ದರಿಂದ ಕರ್ನಾಟಕ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ನಾಗೇಶ್ ಹಾಗೂ ಪೊಲೀಸರ ನಡುವೆ ನಗರದ ಮೈಸೂರ್ ಬ್ಯಾಂಕ್ ಬಳಿ ವಾಗ್ವಾದ ನಡೆಯಿತು.

KN_BNG_02_NAGEH_POLiCE_7204498
ಕರ್ನಾಟಕ ಬಂದ್: ಒಕ್ಕೂಟದ ಅದ್ಯಕ್ಷ ನಾಗೇಶ್ ಗೆ ಎಚ್ಚರಿಕೆ ನೀಡಿದ ಪೊಲೀಸರು
author img

By

Published : Feb 13, 2020, 10:11 AM IST

ಬೆಂಗಳೂರು: ಸರೋಜಿನ ಮಹಿಷಿ ವರದಿ ಜಾರಿಗೆ ಒತ್ತಾಯಿಸಿ ಕರ್ನಾಟಕ ಬಂದ್​​​ಗೆ ಕರೆ ನೀಡಲಾಗಿದೆ. ಪ್ರತಿಭಟನೆಗೆ ಅವಕಾಶ ನಿರಾಕರಿಸಿದ ಹಿನ್ನೆಲೆಯಲ್ಲಿ ಕರ್ನಾಟಕ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ನಾಗೇಶ್ ಹಾಗೂ ಪೊಲೀಸರ ನಡುವೆ ನಗರದ ಮೈಸೂರ್ ಬ್ಯಾಂಕ್ ಬಳಿ ವಾಗ್ವಾದ ನಡೆಯಿತು.

ಕರ್ನಾಟಕ ಬಂದ್: ಒಕ್ಕೂಟದ ಅಧ್ಯಕ್ಷ ನಾಗೇಶ್​ಗೆ ಪೊಲೀಸರ ಎಚ್ಚರಿಕೆ
ಈಗಾಗಲೇ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಅವರ ಸೂಚನೆಯಂತೆ ಯಾವುದೇ ರೀತಿಯ ಮೆರವಣಿಗೆಗಳಿಗೆ ಅವಕಾಶವಿಲ್ಲ. ಬಂದ್ ಹೆಸರಲ್ಲಿ ಯಾರೊಬ್ಬರೂ ಸಾರ್ವಜನಿಕ ಆಸ್ತಿಪಾಸ್ತಿಗಳಿಗೆ ಹಾನಿ ಮಾಡಿದರೆ ಬಂದ್ ಮಾಡುತ್ತಿರುವ ಆಯೋಜಕರ ವಿರುದ್ದ ಕ್ರಮ ಕೈಗೊಳ್ಳದಾಗಿ ಸೂಚಿಸಿದ್ರು. ಆದರೆ, ಇಂದು ಮೈಸೂರು ಬ್ಯಾಂಕ್ ಸರ್ಕಲ್ ಬಳಿ ಸಂಘಟನೆಗಳ ಕಾರ್ಯಕರ್ತರು ಮತ್ತು ಪೊಲೀಸರ ಮಧ್ಯೆ ವಾಗ್ವಾದ ನಡೆಯಿತು.
ಈ ನಡುವೆ ಶಾಂತಿಯುತ ಬಂದ್​ಗಾಗಿ ನಗರದಲ್ಲಿ ಬಿಗಿ ಭದ್ರತೆ ಕೈಗೊಳ್ಳಲಾಗಿದೆ. ಆಯಾ ವಿಭಾಗದ ಡಿಸಿಪಿ, ಇನ್​​ಸ್ಪೆಕ್ಟರ್​​​, ಸಬ್​ ಇನ್​​ಸ್ಪೆಕ್ಟರ್​, ಹೋಂ ಗಾರ್ಡ್​, ಬಿಎಂಟಿಸಿ, ಹೊಯ್ಸಳ ವಾಹನಗಳು ಗಸ್ತು ತಿರುಗುತ್ತಿವೆ. ಟೌನ್ ಹಾಲ್ ಬಳಿ ,ರೈಲ್ವೆ ನಿಲ್ದಾಣ ಬಳಿ ಯಾವುದೇ ಪ್ರತಿಭಟನೆಗೆ ಅವಕಾಶ ನೀಡಬಾರದು ಎಂದು ನಗರ ಪೊಲೀಸರು ಆಯುಕ್ತ ಭಾಸ್ಕರ್ ರಾವ್ ಅವರು‌ ಸೂಚನೆ ನೀಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.