ETV Bharat / city

ಸಾರ್ವಜನಿಕ ಉದ್ದಿಮೆಗಳ ಇಲಾಖೆ ರದ್ದು.. ಸರ್ಕಾರ ಆದೇಶ

ಆಡಳಿತ ವೆಚ್ಚ ಕಡಿತಗೊಳಿಸಲು ಸಾರ್ವಜನಿಕ ಇಲಾಖೆ ರದ್ದುಪಡಿಸಿ, ಆ ಇಲಾಖೆಯನ್ನು ಹಣಕಾಸು ಇಲಾಖೆ ಜೊತೆ ವಿಲೀನಗೊಳಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ಸಾರ್ವಜನಿಕ ಉದ್ದಿಮೆಗಳ ಇಲಾಖೆ ರದ್ದು
ಸಾರ್ವಜನಿಕ ಉದ್ದಿಮೆಗಳ ಇಲಾಖೆ ರದ್ದು
author img

By

Published : Jun 9, 2022, 8:10 AM IST

ಬೆಂಗಳೂರು: ರಾಜ್ಯದಲ್ಲಿನ ಸಾರ್ವಜನಿಕ ಇಲಾಖೆ ರದ್ದುಪಡಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಕೋವಿಡ್ ಬಳಿಕ ಆಡಳಿತ ವೆಚ್ಚ ಕಡಿತಗೊಳಿಸಬೇಕು, ಅನಗತ್ಯ ಇಲಾಖೆಗಳು, ನಿಗಮ - ಮಂಡಳಿಗಳನ್ನು ರದ್ದುಪಡಿಸಬೇಕು ಅಥವಾ ಬೇರೊಂದು ಇಲಾಖೆಯಲ್ಲಿ ವಿಲೀನಗೊಳಿಸಬೇಕು ಎನ್ನುವ ನೀತಿಯಂತೆ ಸಾರ್ವಜನಿಕ ಉದ್ದಿಮೆಗಳ ಇಲಾಖೆಯನ್ನ ರದ್ದುಪಡಿಸಲಾಗಿದೆ.

ಸಚಿವ ಸಂಪುಟದ ಉಪಸಮಿತಿ ಶಿಫಾರಸು ಮಾಡಿದಂತೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆಯ ಸಾರ್ವಜನಿಕ ಉದ್ದಿಮೆಗಳ ಇಲಾಖೆ ಕಾರ್ಯ ನಿರ್ವಹಣೆ ಅಂತ್ಯಗೊಳಿಸಿ ಆದೇಶ ಹೊರಡಿಸಿದೆ. ಹಣಕಾಸು ಇಲಾಖೆಗೆ ಸಾರ್ವಜನಿಕ ಉದ್ದಿಮೆಗಳ ಇಲಾಖೆ ನಿರ್ವಹಿಸುತ್ತಿದ್ದ ಯೋಜನೆಗಳ ಜವಾಬ್ದಾರಿಯನ್ನು ವರ್ಗಾಯಿಸಲಾಗಿದೆ.

ಸಾರ್ವಜನಿಕ ಉದ್ದಿಮೆಗಳ ಇಲಾಖೆಯು ರಾಜ್ಯ ಸರ್ಕಾರಿ ಸ್ವಾಮ್ಯದ ಸುಮಾರು 60ಕ್ಕೂ ಹೆಚ್ಚು ನಿಗಮ ಮತ್ತು ಮಂಡಳಿಗಳ ಆಡಳಿತ ಮಂಡಳಿಗೆ, ಅಧಿಕಾರಿಗಳಿಗೆ, ಸಿಬ್ಬಂದಿಗೆ ಕಾರ್ಯದಕ್ಷತೆ ಹೆಚ್ಚಿಸಲು ಅಗತ್ಯ ತರಬೇತಿ, ಹಣಕಾಸು ನಿರ್ವಹಣೆ, ಮಾನವ ಸಂಪನ್ಮೂಲ ಬಳಕೆ, ತಾಂತ್ರಿಕ ನೆರವು ಸೇರಿದಂತೆ ಅಗತ್ಯ ತರಬೇತಿಯನ್ನು ಖಾಸಗಿ ಏಜೆನ್ಸಿಗಳ ಮೂಲಕ ಒದಗಿಸುತ್ತಿತ್ತು.

ಸಾರ್ವಜನಿಕ ಉದ್ದಿಮೆಗಳ ಇಲಾಖೆ ರದ್ದು
ಸಾರ್ವಜನಿಕ ಉದ್ದಿಮೆಗಳ ಇಲಾಖೆ ರದ್ದು

ಕಳೆದ ವರ್ಷ ಈ ಕಾರ್ಯಕ್ಕಾಗಿ ಬಜೆಟ್​​ನಲ್ಲಿ ಒಂದು ಕೋಟಿ ಹತ್ತು ಲಕ್ಷ ರೂಪಾಯಿ ಮೀಸಲಿಡಲಾಗಿತ್ತು. ಸಾರ್ವಜನಿಕ ಉದ್ದಿಮೆಗಳ ಇಲಾಖೆಯು ಇಲ್ಲಿಯವರೆಗೆ 23 ಸರ್ಕಾರಿ ಒಡೆತನದ ಕಂಪನಿಗಳ 354 ಅಧಿಕಾರಿಗಳು, ಸಿಬ್ಬಂದಿಗೆ ತರಬೇತಿ ನೀಡಿ ಅವರ ದಕ್ಷತೆ ಹೆಚ್ಚಿಸಲು ನೆರವಾಗಿತ್ತು.

(ಇದನ್ನೂ ಓದಿ: ಬೆಂಗಳೂರು IISCಗೆ ಮತ್ತೊಂದು ಗರಿ.. ದಕ್ಷಿಣ ಏಷ್ಯಾದಲ್ಲಿ ವೇಗವಾಗಿ ಬೆಳೆಯುತ್ತಿರುವ ಹಿರಿಮೆ..)

ETV Bharat Logo

Copyright © 2024 Ushodaya Enterprises Pvt. Ltd., All Rights Reserved.