ಬೆಂಗಳೂರು: ನಗರದಲ್ಲಿ ಬಿಲ್ಡರ್ಸ್ಗಳು ರಾಜಕಾಲುವೆಯನ್ನು ಒತ್ತುವರಿ ಮಾಡಿಕೊಂಡರೂ ಕ್ರಮ ಕೈಗೊಳ್ಳದ ಬಿಬಿಎಂಪಿ ವಿರುದ್ಧ ಕರ್ನಾಟಕ ರಕ್ಷಣಾ ವೇದಿಕೆ ಯುವಸೇನೆ ಪ್ರತಿಭಟನೆ ನಡೆಸಿತು.
ಪಾಲಿಕೆ ಅಧಿಕಾರಿಗಳು ಖಾಸಗಿ ವ್ಯಕ್ತಿಗಳೊಂದಿಗೆ ಕೈಜೋಡಿಸಿ ರಾಜಕಾಲುವೆ ಒತ್ತುವರಿಗೆ ಸಹಾಯ ಮಾಡುತ್ತಿದ್ದಾರೆ. ಮಹದೇವಪುರ ವಲಯದ ವಾರ್ಡ್ 81ರಲ್ಲಿರುವ ರಾಜಕಾಲುವೆ ಜಾಗದಲ್ಲಿ ಕಟ್ಟಡ ನಿರ್ಮಿಸಲು ಅನುಮೋದನೆ ಕೊಟ್ಟಿದ್ದಾರೆ. ಇದಕ್ಕೆ ಟೌನ್ ಪ್ಲಾನಿಂಗ್ ಅಧ್ಯಕ್ಷರು, ಸದಸ್ಯರು ಪಾಲಿಕೆ ಆಯುಕ್ತರೂ ಶಾಮೀಲಾಗಿದ್ದಾರೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ಮಂತ್ರಿ ಡೆವಲಪರ್ಸ್ ನಗರೇಶ್ವರ ನಾಗೇನಹಳ್ಳಿಯಲ್ಲಿ ಮಂತ್ರಿ ವೆಬ್ ಸಿಟಿ ಎಂಬ ಗಗನಚುಂಬಿ ಕಟ್ಟಡ ಕಟ್ಟಿದ್ದಾರೆ. ಇಲ್ಲಿ ರಾಜಕಾಲುವೆಯಿದ್ದರೂ, ಕಟ್ಟಡ ನಿರ್ಮಾಣಕ್ಕೆ ಪಾಲಿಕೆ ಅನುಮತಿ ನೀಡಿರುವುದು ಎಷ್ಟು ಸರಿ. ರಾಜಕಾರಣಿಗಳಿಗೆ, ಬಿಲ್ಡರ್ಸ್ಗಳಿಗೆ ಪಾಲಿಕೆ ಅಧಿಕಾರಿಗಳು ಬಕೆಟ್ ಹಿಡಿಯುವ ಕೆಲಸ ಮಾಡುತ್ತಿದ್ದಾರೆ ಎಂದು ದೂರಿದರು.