ETV Bharat / city

ಲಿಂಗಾಯತರಿಗೆ ಮತ್ತೆ ಸಿಂಹಪಾಲು.. ನೂತನ ಸಚಿವ ಸಂಪುಟದಲ್ಲಿ ಹೀಗಿದೆ ಜಾತಿವಾರು ಲೆಕ್ಕಾಚಾರ

ಲಿಂಗಾಯತ ಸಮುದಾಯ ಸಚಿವ ಸಂಪುಟದಲ್ಲಿ ಸಿಂಹ ಪಾಲು ಹೊಂದಿದ್ದು, ಒಕ್ಕಲಿಗ ಮತ್ತು ಹಿಂದುಳಿದ ವರ್ಗಗಳ ಸಮುದಾಯಗಳು ತಲಾ ಏಳು ಮಂದಿ ಸಚಿವರನ್ನು ಹೊಂದಲಿವೆ.

Karanataka State  caste Cabinet
ನೂತನ ಸಚಿವ ಸಂಪುಟದಲ್ಲಿ ಹೀಗಿರಲಿದೆ ಜಾತಿ ಲೆಕ್ಕಾಚಾರ..
author img

By

Published : Aug 4, 2021, 12:20 PM IST

ಬೆಂಗಳೂರು: ರಾಜ್ಯ ಸಚಿವ ಸಂಪುಟದ ಕಸರತ್ತು ಮುಕ್ತಾಯದ ಹಂತ ತಲುಪಿದ್ದು, ಸುಮಾರು 29 ಮಂದಿಗೆ ಪ್ರಮಾಣವಚನ ಸ್ವೀಕಾರಕ್ಕೆ ಸಿಎಂ ಬಸವರಾಜ ಬೊಮ್ಮಾಯಿ ನೇರ ಆಹ್ವಾನ ನೀಡಿದ್ದಾರೆ. ಸಚಿವ ಸ್ಥಾನ ದೃಢಪಡಿಸಿಕೊಂಡವರ ನಿವಾಸದಲ್ಲಿ ಸಂಭ್ರಮ ಮನೆ ಮಾಡಿದ್ದು, ಅವರೆಲ್ಲಾ ರಾಜ್ಯ ರಾಜಧಾನಿಯತ್ತ ದೌಡಾಯಿಸಿದ್ದಾರೆ.

ಮಾಜಿ ಸಿಎಂ ಬಿಎಸ್​ವೈ ಸಚಿವ ಸಂಪುಟದಲ್ಲಿ ಲಿಂಗಾಯತರಿಗೆ ಹೆಚ್ಚಿನ ಸಚಿವ ಸ್ಥಾನಗಳು ನೀಡಿದಂತೆ ಸಿಎಂ ಬೊಮ್ಮಾಯಿ ಸಂಪುಟದಲ್ಲೂ ಸಿಂಹಪಾಲು ದೊರೆತಿದೆ.

ಇನ್ನೂ ಹಲವು ಮಂದಿ ಸಚಿವಾಕಾಂಕ್ಷಿಗಳಿಗೆ ನಿರಾಸೆಯಾಗಿದ್ದು, ಅವರೆಲ್ಲಾ ಮಾಜಿ ಸಿಎಂ ಬಿಎಸ್​ವೈ ಅವರ ನಿವಾಸಕ್ಕೆ ಎಡತಾಕುತ್ತಿದ್ದಾರೆ. ಜಾತಿ ಆಧಾರದ ಮೇಲೆ ಯಾವ ಯಾವ ಸಮುದಾಯಕ್ಕೆ ಎಷ್ಟು ಸಚಿವ ಸ್ಥಾನಗಳು ದೊರೆತಿವೆ ಎಂಬ ಮಾಹಿತಿ ಇಲ್ಲಿದೆ. ಇದರ ಜೊತೆಗೆ ಓರ್ವ ಮಹಿಳೆಗೆ ಸಚಿವ ಸ್ಥಾನ ಒಲಿದು ಬಂದಿದೆ.

  • 7 ಮಂದಿ ಒಬಿಸಿ
  • 7 ಮಂದಿ ಒಕ್ಕಲಿಗ
  • 8 ಮಂದಿ ಲಿಂಗಾಯತ
  • 3 ಎಸ್​​ಸಿ, ಎಸ್​ಟಿ
  • 1 ರೆಡ್ಡಿ ಸಮುದಾಯ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.