ETV Bharat / city

20 ದಿನಗಳ ಬಳಿಕ ಕಲಾಸಿಪಾಳ್ಯ ಪೊಲೀಸ್ ಠಾಣೆ ಕಾರ್ಯಾರಂಭ

author img

By

Published : Jul 9, 2020, 2:54 PM IST

ಅತಿ ಹೆಚ್ಚು ಕೊರೊನಾ ಪ್ರಕರಣಗಳು ದಾಖಲಾದ ಕಲಾಸಿಪಾಳ್ಯ ಪೊಲೀಸ್​ ಠಾಣೆಯು 20 ದಿನಗಳ ಬಳಿಕ ಪುನರಾರಂಭವಾಗಿವೆ. ನಗರ ಪೊಲೀಸ್​ ಆಯುಕ್ತ ಭಾಸ್ಕರ್​ ರಾವ್​ ಅವರು ಠಾಣೆಗೆ ಭೇಟಿ ನೀಡಿ ಸಿಬ್ಬಂದಿಗೆ ಆತ್ಮಸ್ಥೈರ್ಯ ತುಂಬಿದರು.

Kalasipalya police station
ಕಲಾಸಿಪಾಳ್ಯ ಪೊಲೀಸ್​ ಠಾಣೆ

ಬೆಂಗಳೂರು: 20 ದಿನಗಳ ಬಳಿಕ ಕಲಾಸಿಪಾಳ್ಯ ಪೊಲೀಸ್​ ಠಾಣೆ ಇಂದಿನಿಂದ ಆರಂಭವಾಗಿದ್ದು, ಠಾಣೆಗೆ ನಗರ ಪೊಲೀಸ್​ ಆಯುಕ್ತ ಭಾಸ್ಕರ್​ ರಾವ್​ ಭೇಟಿ ನೀಡಿ ಸಿಬ್ಬಂದಿಗೆ ಧೈರ್ಯ ತುಂಬಿದರು. ಹೆಚ್ಚುವರಿ ಆಯುಕ್ತ ಸೌಮೇಂದ್ರ ಮುಖರ್ಜಿ, ಪಶ್ಚಿಮ ವಿಭಾಗ ಡಿಸಿಪಿ‌ ರಮೇಶ್ ಬಾನೋತ್ ಈ ವೇಳೆ ಉಪಸ್ಥಿತರಿದ್ದರು.

ಮಾಸ್ಕ್​​ ಧರಿಸದ ಮತ್ತು ಮುಖಕ್ಕೆ ಫೇಸ್​ಶೀಲ್ಡ್​​ ಹಾಕದ ಸಿಬ್ಬಂದಿಯನ್ನು ತರಾಟೆ ತೆಗೆದುಕೊಂಡರು. ಈ ಠಾಣೆಯಲ್ಲಿ ಅತಿ ಹೆಚ್ಚು ಕೊರೊನಾ ಪ್ರಕರಣಗಳು (26) ದಾಖಲಾಗಿದ್ದವು. ಅದರಲ್ಲಿ ಇಂದು 7 ಮಂದಿ ಡಿಸ್ಚಾರ್ಜ್ ಆಗಿದ್ದಾರೆ. ಸೋಂಕು ಕಾಣಿಸಿಕೊಂಡ ಬಳಿಕ 20 ದಿನಗಳ ಕಾಲ ಸೀಲ್​​ಡೌನ್​​ ಮಾಡಲಾಗಿತ್ತು. ಸದ್ಯ ಇಂದಿನಿಂದ ಠಾಣೆ ಜನರ ಸೇವೆಗೆ ಮರಳಿದೆ.

ಸಿಬ್ಬಂದಿಗೆ ಧೈರ್ಯ ತುಂಬಿದ ನಗರ ಪೊಲೀಸ್​ ಆಯುಕ್ತ ಭಾಸ್ಕರ್​ ರಾವ್

ಸಿಬ್ಬಂದಿ ಜೊತೆ ಆಯುಕ್ತ ಭಾಸ್ಕರ್ ರಾವ್ ಮಾತನಾಡಿ, ಬಹಳ ಎಚ್ಚರಿಕೆಯಿಂದ ಕರ್ತವ್ಯ ನಿರ್ವಹಿಸಬೇಕು. ಹಾಗೆಯೇ ಠಾಣೆಯನ್ನು ಪ್ರತಿದಿನ ಸ್ವಚ್ಛಗೊಳಿಸಬೇಕು. ಎಲ್ಲರೂ ಮಾಸ್ಕ್, ಫೇಸ್​​ಶೀಲ್ಡ್, ಗ್ಲೌಸ್ ಹಾಕಬೇಕು. ಅನಗತ್ಯವಾಗಿ ಓಡಾಡುವುದು, ವಸ್ತುಗಳನ್ನು ಮುಟ್ಟುವುದು ಮಾಡಬೇಡಿ. ಮಾಸ್ಕ್ ಧರಿಸದ ಜನರಿಗೆ ಕಠಿಣ‌ಕ್ರಮ ಕೈಗೊಳ್ಳಿ. ನಿಮ್ಮೊಂದಿಗೆ ಸರ್ಕಾರ ಮತ್ತು ನಾವಿದ್ದೇವೆ ಎಂದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.