ETV Bharat / city

ಜಾಬ್ ಮೇಳದಲ್ಲಿ ಆಯ್ಕೆಯಾದ 351 ಅಭ್ಯರ್ಥಿಗಳಿಗೆ ನೇಮಕ ಪತ್ರ ನೀಡಲಾಗಿದೆ : ಸಚಿವ ಅಶ್ವತ್ಥ್ ನಾರಾಯಣ - ಜಾಬ್ ಮೇಳದಲ್ಲಿ ಆಯ್ಕೆಯಾದ 351 ಅಭ್ಯರ್ಥಿಗಳಿಗೆ ನೇಮಕ ಪತ್ರ

ಒಟ್ಟು ಮೇಳದಲ್ಲಿ 42ಕ್ಕೂ ಹೆಚ್ಚು ಕಂಪನಿಗಳು ನೇಮಕ ಪ್ರಕ್ರಿಯೆ ನಡೆಸಿದವು. ಒಟ್ಟು 2050 ಅಭ್ಯರ್ಥಿಗಳು ನೋಂದಾಯಿಸಿಕೊಂಡು, 1510 ಅಭ್ಯರ್ಥಿಗಳು ಹಾಜರಾಗಿದ್ದರು. ಈ ಪೈಕಿ 582 ಅಭ್ಯರ್ಥಿಗಳನ್ನು ಪಟ್ಟಿ ಮಾಡಿದ ನಂತರ ಅಂತಿಮವಾಗಿ 351 ಅಭ್ಯರ್ಥಿಗಳು ವಿವಿಧ ಕಂಪನಿಗಳ ಕೆಲಸಕ್ಕೆ ಆಯ್ಕೆಯಾಗಿದ್ದಾರೆ..

job-fair-in-malleshwar-bangalore
ಸಚಿವ ಅಶ್ವಥನಾರಾಯಣ
author img

By

Published : Sep 4, 2021, 10:13 PM IST

ಬೆಂಗಳೂರು : ನಗರದ ಮಲ್ಲೇಶ್ವರದಲ್ಲಿ ಶುಕ್ರವಾರ ನಡೆದ ಉದ್ಯೋಗ ಮೇಳದಲ್ಲಿ ಆಯ್ಕೆಯಾದ ಅಭ್ಯರ್ಥಿಗಳಿಗೆ ರಾಜ್ಯ ಕೌಶಲ್ಯಾಭಿವೃದ್ಧಿ ಮತ್ತು ಉದ್ಯಮಶೀಲತಾ ಖಾತೆ ಸಚಿವ ಡಾ.ಸಿ ಎನ್ ಅಶ್ವತ್ಥ್ ನಾರಾಯಣ ಶನಿವಾರ ನೇಮಕ ಪತ್ರಗಳನ್ನು ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಸಚಿವರು, ಮಲ್ಲೇಶ್ವರದ 5ನೇ ಮುಖ್ಯರಸ್ತೆಯಲ್ಲಿರುವ ವಾಲಿಬಾಲ್ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಜಾಬ್ ಮೇಳದಲ್ಲಿ 351 ಅಭ್ಯರ್ಥಿಗಳಿಗೆ ಉದ್ಯೋಗ ಸಿಕ್ಕಿದೆ. ಎಲ್ಲರಿಗೂ ಇಂದು ನೇಮಕಾತಿ ಪತ್ರಗಳನ್ನು ನೀಡಲಾಗಿದೆ ಎಂದರು.

ಒಟ್ಟು ಮೇಳದಲ್ಲಿ 42ಕ್ಕೂ ಹೆಚ್ಚು ಕಂಪನಿಗಳು ನೇಮಕ ಪ್ರಕ್ರಿಯೆ ನಡೆಸಿದವು. ಒಟ್ಟು 2050 ಅಭ್ಯರ್ಥಿಗಳು ನೋಂದಾಯಿಸಿಕೊಂಡು, 1510 ಅಭ್ಯರ್ಥಿಗಳು ಹಾಜರಾಗಿದ್ದರು. ಈ ಪೈಕಿ 582 ಅಭ್ಯರ್ಥಿಗಳನ್ನು ಪಟ್ಟಿ ಮಾಡಿದ ನಂತರ ಅಂತಿಮವಾಗಿ 351 ಅಭ್ಯರ್ಥಿಗಳು ವಿವಿಧ ಕಂಪನಿಗಳ ಕೆಲಸಕ್ಕೆ ಆಯ್ಕೆಯಾಗಿದ್ದಾರೆಂದು ಡಾ.ಅಶ್ವತ್ಥ್ ನಾರಾಯಣ ಮಾಹಿತಿ ನೀಡಿದರು.

ಇನ್ನಷ್ಟು ಜಾಬ್ ಮೇಳಗಳನ್ನು ನಡೆಸಲಾಗುವುದು. ಉದ್ಯೋಗ ಅಗತ್ಯ ಇರುವ ಅಭ್ಯರ್ಥಿಗಳು ಹಾಜರಾಗಿ ಅವಕಾಶವನ್ನು ಪಡೆಯಬಹುದು ಎಂದ ಸಚಿವರು, ರಾಜ್ಯದಲ್ಲಿ ಕೈಗಾರಿಕೆಗಳ ಬೇಡಿಕೆಗೆ ತಕ್ಕಂತೆ ಕುಶಲ ಸಂಪನ್ಮೂಲ ಒದಗಿಸುವ ಕೆಲಸವನ್ನು ಸರಕಾರ ಮಾಡುತ್ತಿದೆ. ಈ ನಿಟ್ಟಿನಲ್ಲಿ ಎಷ್ಟೇ ಉದ್ಯೋಗಾಂಕ್ಷಿಗಳು ಬಂದರೂ ಅಗತ್ಯ ತರಬೇತಿ, ಭಾಷಾ ಕೌಶಲ್ಯತೆ ಕಲಿಸಿ ಕೆಲಸ ಕೊಡಿಸಲಾಗುವುದು ಎಂದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.