ETV Bharat / city

ಉಪಚುನಾವಣೆಯ 15 ಕ್ಷೇತ್ರಗಳಲ್ಲೂ ಜೆಡಿಎಸ್‌ ಏಕಾಂಗಿ ಸ್ಪರ್ಧೆ: ಹೆಚ್​ ಡಿ ದೇವೇಗೌಡ - ಮೈತ್ರಿಯಿಲ್ಲದೆ ಜೆಡಿಎಸ್ ಏಕಾಂಗಿಯಾಗಿ ಸ್ಪರ್ಧಿಸಲಿದೆ

ನಮ್ಮ ಪಕ್ಷದಲ್ಲಿ ಪ್ರತಿಯೊಬ್ಬರೂ ಕಾಂಗ್ರೆಸ್ ಜತೆ ಮೈತ್ರಿ ಬೇಡ ಅಂದಿದ್ದಾರೆ. ಮೈತ್ರಿಯಿಂದಾದ ಅನುಭವಗಳನ್ನು ಮುಖಂಡರು ನನ್ನ ಜೊತೆ ಹಂಚಿಕೊಂಡಿದ್ದಾರೆ. ಉಪ ಚುನಾವಣೆ ನಡೆಯಲಿರುವ 15 ಕ್ಷೇತ್ರಗಳಲ್ಲೂ ಜೆಡಿಎಸ್, ಮೈತ್ರಿಯಿಲ್ಲದೆ ಏಕಾಂಗಿಯಾಗಿ ಸ್ಪರ್ಧಿಸಲಿದೆ ಎಂದು ಪಕ್ಷದ ವರಿಷ್ಠರಾದ ಹೆಚ್​ ಡಿ ದೇವೇಗೌಡರು ತಿಳಿಸಿದ್ದಾರೆ.

ಹೆಚ್​ ಡಿ ದೇವೇಗೌಡ
author img

By

Published : Sep 21, 2019, 6:27 PM IST

ಬೆಂಗಳೂರು: ಉಪ ಚುನಾವಣೆ ನಡೆಯಲಿರುವ 15 ಕ್ಷೇತ್ರಗಳಲ್ಲೂ ಜೆಡಿಎಸ್ ಏಕಾಂಗಿಯಾಗಿ ಸ್ಪರ್ಧಿಸಲಿದೆ ಎಂದು ಮಾಜಿ ಪ್ರಧಾನಿ ಹೆಚ್​ ಡಿ ದೇವೇಗೌಡರು ಸ್ಪಷ್ಟಪಡಿಸಿದರು.

ಕಾಂಗ್ರೆಸ್ ಹಾಗೂ ಜೆಡಿಎಸ್​ನಿಂದ ಅನರ್ಹಗೊಂಡ ಶಾಸಕರ 15 ಕ್ಷೇತ್ರಗಳಿಗೆ ಚುನಾವಣಾ ಆಯೋಗ ಉಪ ಚುನಾವಣೆ ದಿನಾಂಕ ಘೋಷಿಸಿದ ಮಾಡಿದ ಹಿನ್ನೆಲೆ ಜೆಪಿ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಉಪಚುನಾವಣೆಯಲ್ಲಿ ಎಲ್ಲಾ ಕ್ಷೇತ್ರಗಳಲ್ಲಿಯೂ ಜೆಡಿಎಸ್ ಸ್ಪರ್ಧೆ ಮಾಡಲಿದೆ, ಕಾಂಗ್ರೆಸ್ ಜೊತೆ ಮೈತ್ರಿ ಮುಂದುವರಿಸುವುದಿಲ್ಲ. ಅಲ್ಲದೆ ನಮ್ಮ ಪಕ್ಷದಲ್ಲಿ ಪ್ರತಿಯೊಬ್ಬರೂ ಕಾಂಗ್ರೆಸ್ ಜತೆ ಮೈತ್ರಿ ಬೇಡ ಅಂದಿದ್ದಾರೆ. ಮೈತ್ರಿಯಿಂದಾದ ಅನುಭವಗಳನ್ನು ಮುಖಂಡರು ನನ್ನ ಜೊತೆ ಹಂಚಿಕೊಂಡಿದ್ದಾರೆ. ಸೋಲು-ಗೆಲುವು ಬೇರೆ ವಿಷಯ, ಅದರೆ ನಮಗೆ ಯಾರ ಸಹವಾಸವೂ ಬೇಡ. ಮೈತ್ರಿಯಿಲ್ಲದೇ ಜೆಡಿಎಸ್ ಏಕಾಂಗಿಯಾಗಿ ಸ್ಪರ್ಧೆ ನಡೆಸುತ್ತದೆ ಎಂದರು.

ಜೆಪಿ ಭವನದಲ್ಲಿ ಮಾಜಿ ಪ್ರಧಾನಿ ಹೆಚ್​ ಡಿ ದೇವೇಗೌಡ ಸುದ್ದಿಗೋಷ್ಠಿ

ಈಗಾಗಲೇ ಇಡೀ 30 ಜಿಲ್ಲೆಗಳ ಪಕ್ಷದ ಕಾರ್ಯಕರ್ತರ ಅಭಿಪ್ರಾಯ ಪಡೆಯಲಾಗಿದೆ. ಸದ್ಯದಲ್ಲೇ ಅಭ್ಯರ್ಥಿಗಳ ಆಯ್ಕೆ ಮಾಡುತ್ತೇವೆ‌. ಅಭ್ಯರ್ಥಿಗಳ ಘೋಷಣೆಗೆ ಇನ್ನೂ ಸಮಯ ಇದೆ. ಉಪ ಚುನಾವಣೆ ಸ್ಪರ್ಧೆ ಬಗ್ಗೆ ತೀರ್ಮಾನಿಸಲು ನಾಳೆ ಪಕ್ಷದ ಹಿರಿಯ ಮುಖಂಡರ ಜೊತೆ ಸಭೆ ನಡೆಸಿ, ಅಂತಿಮವಾಗಿ ಈ ಕುರಿತು ಘೋಷಣೆ ಮಾಡುತ್ತೇವೆ ಎಂದು ದೊಡ್ಡಗೌಡರು ತಿಳಿಸಿದರು.

ಇದೇ ವೇಳೆ ಬಿಜೆಪಿ ಸರ್ಕಾರ ಇನ್ನು ಮೂರು ತಿಂಗಳು ಮಾತ್ರ ಇರಲಿದೆ ಎಂಬ ಕೋಡಿ ಮಠದ ಶ್ರೀಗಳ ಭವಿಷ್ಯ ನುಡಿ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ದೇವಗೌಡರು, ಕೋಡಿ ಶ್ರೀಗಳು ಸದ್ಗುರುಗಳು, ಅವರ ಬಗ್ಗೆ ನಾನು ಮಾತಾಡಲ್ಲ, ಅನ್ಯಥಾ ಭಾವಿಸಬೇಡಿ.
ಎಂದರು.

Intro:ಮಾಜಿ ಪ್ರಧಾನಿ ದೇವೆಗೌಡರ ಸುದ್ದಿಗೋಷ್ಠಿ..!!!

ಕಾಂಗ್ರೆಸ್ ಹಾಗೂ ಜೆಡಿಎಸ್ ನಿಂದ ಅನರ್ಹಗೊಂಡ ಶಾಸಕರ ೧೫ ಕ್ಷೇತ್ರಗಳಿಗೆ ಚುನಾವಣಾ ಆಯೋಗ ಬೈ ಎಲೆಕ್ಷನ್ ಡೇಟ್ ಅನೌನ್ಸ್ ಮಾಡಿದ ಹಿನ್ನೆಲೆ, ಜೆಪಿ ಭವನದಲ್ಲಿ ಮಾಜಿ ಪ್ರಧಾನಿ ದೇವೆಗೌಡ ಸುದ್ದಿಗೋಷ್ಠಿ ನಡೆಸಿದರು. ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ದೊಡ್ಡ ಗೌಡರು ಉಪ ಚುನಾವಣೆಯಲ್ಲಿ ಜೆಡಿಸ್ ೧೫ ಕ್ಷೇತ್ರಗಳಲ್ಲಿ ಏಕಾಂಗಿಯಾಗಿ ಸ್ಪರ್ಧಿಸುತ್ತೇವೆ ಎಂದು ಸ್ಪಷ್ಠವಾಗಿ ಹೇಳಿದ್ರು. ಇವತ್ತು 15 ಕ್ಷೇತ್ರಗಳಿಗೆ ಉಪಚುನಾವಣೆ ದಿನಾಂಕ ಘೋಷಣೆ ಆಗಿದೆ. ಜೆಡಿಎಸ್ ಉಪಚುನಾವಣೆಗಳಲ್ಲಿ ಎಲ್ಲ ಕಡೆಯೂ ಸ್ಪರ್ಧೆ ಮಾಡ್ತೀವಿ ಕಾಂಗ್ರೆಸ್ ಜೊತೆ ಮೈತ್ರಿ ಮುಂದುವರಿಸೊಲ್ಲ ಎಂದು ಹೇಳಿದರು.ಅಲ್ಲದೆ ಉಪ ಚುನಾವಣೆ ದಿನಾಂಕ ದಿಢೀರ್ ಅಂತ ಘೋಷಿಸಿರುವುದಕ್ಕೆ. ಪ್ರತಿಕ್ರಿಯೆ ನೀಡದ ಮಾಜಿ ಪ್ರಧಾನಿ ಮಹಾರಾಷ್ಟ್ರ ದ ಜೊತೆ ಅನೌನ್ಸ್ ಮೆಂಟ್ ಮಾಡಿದಾರೆ. ಹಾಗಾಗಿ ದಿನಾಂಕ ಪ್ರಕಟ ಬೇಗ ಆಗಿದೆ ಅನಿಸ್ತಿಲ್ಲ. ಅಲ್ಲದೆ ಉಪ ಚುನಾವಣೆ ಸ್ಪರ್ಧೆ ಬಗ್ಗೆ ತೀರ್ಮಾನಿಸಲು ನಾಳೆ ಪಕ್ಷದ ಹಿರಿಯ ಮುಖಂಡರ ಜೊತೆ ಸಭೆ ನಡೆ ಸುತ್ತುವೆ.ನಾಳೆಯ ಸಭೆ ಬಳಿಕ‌ ಅಂತಿಮ ಘೋಷಣೆ ಮಾಡುತ್ತೇವೆ.Body:.ಅಲ್ಲದೆ ನಮ್ಮ
ಪಕ್ಷದಲ್ಲಿ ಪ್ರತಿಯೊಬ್ಬರೂ ಕಾಂಗ್ರೆಸ್ ಜತೆ ಮೈತ್ರಿ ಬೇಡ ಅಂದಿದ್ದಾರೆ. ಮೈತ್ರಿಯಿಂದಾದ ಅನುಭವಗಳನ್ನು ಮುಖಂಡರು ನನ್ನ ಹಂಚಿಕೊಂಡಿದ್ದಾರೆ . ಸೋಲು ಗೆಲವು ಬೇರೆ ನಮಗೆ ಯಾರ ಸಹವಾಸವೂ ಬೇಡ.
ಮೈತ್ರಿಯಲ್ಲದೇ ಜೆಡಿಎಸ್ ಏಕಾಂಗಿ ಸ್ಪರ್ಧೆನಡೆಸುತ್ತೇವೆ ಎಂದು ದೊಡ್ಡ ಗೌಡರು ಸ್ಪಷ್ಟವಾಗಿ ತಿಳಿಸಿದ್ರು.ಈಗಾಗಲೇ
ಇಡೀ ಮೂವತ್ತು ಜಿಲ್ಲೆಗಳ ಕಾರ್ಯಕರ್ತರ ಅಭಿಪ್ರಾಯ
ಪಡೆಯಲಾಗಿದೆ.ಅಭ್ಯರ್ಥಿಗಳ ಆಯ್ಕೆ ಮಾಡುತ್ತೇವೆ‌.
ಅಭ್ಯರ್ಥಿಗಳ ಘೋಷಣೆಗೆ ಇನ್ನೂ ಸಮಯ ಇದೆ
ನಾಳೆ ಚುನಾವಣೆಯಲ್ಲಿ ಸ್ಪರ್ಧಿಸುವ ಬಗ್ಗೆ ತೀರ್ಮಾನ ಮಾಡ್ತೀವಿ ಎಂದು ಹೇಳಿದ್ರು.ಇದರ ಜೊತೆಗೆ ಬಿಜೆಪಿ
ಸರ್ಕಾರ ಇನ್ನು ಮೂರು ತಿಂಗಳು ಎಂಬ ಕೋಡಿ ಮಠದ ಶ್ರೀಗಳ ಭವಿಷ್ಯ ನುಡಿ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ದೇವಗೌಡರು ಕೋಡಿಶ್ರೀಗಳು ಸದ್ಗುರುಗಳು
ಅವರ ಬಗ್ಗೆ ನಾನು ಮಾತಾಡಲ್ಲಅನ್ಯಥಾ ಭಾವಿಸಬೇಡಿ.
ಸದ್ಗುರುಗಳ ಮೇಲೆ ಗೌರವ ಇದೆ ಎಂದು ಹೇಳಿದ ಎಚ್ ಡಿಡಿ ಉಪಚುನಾವಣೆಯಲ್ಲಿ ಕುಟುಂಬದವರ ಸ್ಪರ್ಧೆ ವಿಚಾರವಾಗಿ ಮಾತು ಮರೆಸಲು ಪ್ರಯತ್ನಿಸಿದರು ನಿಮಗೇನೂ ಕೆಲಸ ಇಲ್ಲ ಅದಕ್ಕೆ ಸುದ್ದಿ ಹಾಕ್ತೀರ ಎಂದು
ಕುಟುಂಬದವರ ಸ್ಪರ್ಧೆ ಮಾಧ್ಯಮದವರ ಮೇಲೆ ಹಾಕಿ ನುಣುಚಿಕೊಂಡರು.

ಸತೀಶ ಎಂಬಿ

( ವಿಸ್ಯುವಲ್ಸ್ ಮೊಜೊದಲ್ಲಿ ಕೊಡಲಾಗಿದೆ)Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.