ETV Bharat / city

2023ರ ಸಾರ್ವತ್ರಿಕ ಚುನಾವಣೆಗೆ ಜೆಡಿಎಸ್​ ರಣತಂತ್ರ: ಇದೇ ತಿಂಗಳಿಂದ ದಳಪತಿಗಳ ರಾಜ್ಯ ಪ್ರವಾಸ - h.d. kumaraswamy

ದೀಪಾವಳಿ ಹಬ್ಬದ ಬಳಿಕ ರಾಜ್ಯ ಪ್ರವಾಸ ನಡೆಸಲು ಜೆಡಿಎಸ್‍ ವರಿಷ್ಠರಾದ ಎಚ್.ಡಿ.ದೇವೇಗೌಡರು ನಿರ್ಧರಿಸಿದ್ದಾರೆ. ಪಕ್ಷ ಸಂಘಟನೆಗೆ ಹೆಚ್ಚು ಒತ್ತು ನೀಡಲು ತೀರ್ಮಾನಿಸಿರುವ ಅವರು, ಉತ್ತರ ಕರ್ನಾಟಕದಿಂದಲೇ ಪ್ರವಾಸ ಕೈಗೊಳ್ಳಲಿದ್ದಾರೆ. ಈ ಭಾಗದ ಆರೇಳು ಜಿಲ್ಲೆಗಳಲ್ಲಿ ಪ್ರವಾಸ ಮಾಡಿ ಪಕ್ಷ ಸಂಘಟನೆ ಮತ್ತು ಕಾರ್ಯಕರ್ತರನ್ನು ಹುರಿದುಂಬಿಸಲಿದ್ದಾರೆ.

jds planing 2023 general election
2023ರ ಸಾರ್ವತ್ರಿಕ ಚುನಾವಣೆಗೆ ಜೆಡಿಎಸ್​ ರಣತಂತ್ರ: ಇದೇ ತಿಂಗಳಿಂದಲೇ ದಳಪತಿಗಳ ರಾಜ್ಯ ಪ್ರವಾಸ
author img

By

Published : Nov 3, 2021, 8:23 PM IST

ಬೆಂಗಳೂರು: ಸಿಂದಗಿ ಮತ್ತು ಹಾನಗಲ್ ಕ್ಷೇತ್ರಗಳ ಉಪಚುನಾವಣೆಯಲ್ಲಿ ಸೋತರೂ ಧೃತಿಗೆಡದ ಜೆಡಿಎಸ್‍ ನಾಯಕರು 2023 ರ ಸಾರ್ವತ್ರಿಕ ಚುನಾವಣೆಗೆ ಸಜ್ಜಾಗಲು ತಯಾರಿ ನಡೆಸುತ್ತಿದ್ದಾರೆ.

ಇದೇ ತಿಂಗಳಲ್ಲಿ 'ಜನತಾ ಸಂಗಮ 'ಎಂಬ ಕಾರ್ಯಕ್ರಮ ನಡೆಸಲು ಜೆಡಿಎಸ್‍ ಉದ್ದೇಶಿಸಿದೆ. ಬಿಡದಿ ಬಳಿಯ ತೋಟದಲ್ಲಿ ಈಗಾಗಲೇ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ನೇತೃತ್ವದಲ್ಲಿ ಮೊದಲ ಹಂತದಲ್ಲಿ ಜನತಾ ಪರ್ವ 1.0 ಕಾರ್ಯಕ್ರಮ ನಡೆಸಿದ್ದು, ಎರಡನೆ ಹಂತದಲ್ಲಿ ಜನತಾ ಸಂಗಮ ನಡೆಸಲು ತಯಾರಿ ಮಾಡಿಕೊಳ್ಳಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.

2023ರ ಸಾರ್ವತ್ರಿಕ ಚುನಾವಣೆಗೆ ಜೆಡಿಎಸ್​ ರಣತಂತ್ರ: ಇದೇ ತಿಂಗಳಿಂದಲೇ ದಳಪತಿಗಳ ರಾಜ್ಯ ಪ್ರವಾಸ

ಜನತಾ ಸಂಗಮ ಕಾರ್ಯಕ್ರಮ ಜೆಪಿ ಭವನದಲ್ಲಿರುವ ಪಕ್ಷದ ಕೇಂದ್ರ ಕಚೇರಿಯಲ್ಲಿ ಈ ತಿಂಗಳಿನಲ್ಲೇ ನಡೆಯಲಿದೆ. ಶಾಸಕರು, ಜಿಲ್ಲಾ ಹಾಗೂ ತಾಲ್ಲೂಕುವಾರು ಅಧ್ಯಕ್ಷರನ್ನು ಒಳಗೊಂಡಂತೆ ಪಕ್ಷದ ಮುಖಂಡರಿಗೆ ಮುಂದಿನ ಚುನಾವಣೆಗಳ ಸಿದ್ಧತೆ ಕುರಿತಂತೆ ಮಾರ್ಗದರ್ಶನ ಮಾಡಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.

ದೀಪಾವಳಿ ಬಳಿಕ ಎಚ್​ಡಿಡಿ ರಾಜ್ಯ ಪ್ರವಾಸ:

ದೀಪಾವಳಿ ಹಬ್ಬದ ಬಳಿಕ ರಾಜ್ಯ ಪ್ರವಾಸ ನಡೆಸಲು ಜೆಡಿಎಸ್‍ ವರಿಷ್ಠರಾದ ಎಚ್.ಡಿ.ದೇವೇಗೌಡರು ನಿರ್ಧರಿಸಿದ್ದಾರೆ. ಪಕ್ಷ ಸಂಘಟನೆಗೆ ಹೆಚ್ಚು ಒತ್ತು ನೀಡಲು ತೀರ್ಮಾನಿಸಿರುವ ಅವರು, ಉತ್ತರ ಕರ್ನಾಟಕದಿಂದಲೇ ಪ್ರವಾಸ ಕೈಗೊಳ್ಳಲಿದ್ದಾರೆ. ಈ ಭಾಗದ ಆರೇಳು ಜಿಲ್ಲೆಗಳಲ್ಲಿ ಪ್ರವಾಸ ಮಾಡಿ ಪಕ್ಷ ಸಂಘಟನೆ ಮತ್ತು ಕಾರ್ಯಕರ್ತರನ್ನು ಹುರಿದುಂಬಿಸಲಿದ್ದಾರೆ.

ಆಯಾ ಜಿಲ್ಲೆಗಳ ಜಿಲ್ಲಾಧ್ಯಕ್ಷರು ಪಕ್ಷ ಸಂಘಟನೆ ಮತ್ತು ಬಲವರ್ಧನೆಗೆ ಯಾವೆಲ್ಲಾ ಕಾರ್ಯಕ್ರಮ ರೂಪಿಸಿದ್ದಾರೆ. ಅದು ಯಶಸ್ಸು ಕಂಡಿದೆಯೇ? ಎಂಬುದರ ಬಗ್ಗೆ ಜಿಲ್ಲಾ ಪ್ರವಾಸದಲ್ಲಿ ಗೌಡರು ಪರಾಮರ್ಶೆ ನಡೆಸಲಿದ್ದಾರೆ.

ಎಚ್​ಡಿಕೆ ದಕ್ಷಿಣ ದಂಡಯಾತ್ರೆ:

ಇನ್ನು ದಕ್ಷಿಣ ಕರ್ನಾಟಕದಲ್ಲಿ ಎಚ್​.ಡಿ.ಕುಮಾರಸ್ವಾಮಿ ಅವರು ಪ್ರವಾಸ ನಡೆಸಲಿದ್ದು, ಪಕ್ಷ ಸಂಘಟನೆ ಜೊತೆಗೆ ಸದಸ್ಯತ್ವ ನೋಂದಣಿ ಕೆಲಸವೂ ಮಾಡಲಿದ್ದಾರೆ. ಈ ಮೂಲಕ ಜೆಡಿಎಸ್​ ಪಕ್ಷವನ್ನು ರಾಜ್ಯದಲ್ಲಿ ಬಲಗೊಳಿಸಲು ದಳಪತಿಗಳು ಪಣತೊಟ್ಟಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.