ETV Bharat / city

ಧರಣಿ ನಡುವೆ ಸಭಾಪತಿ ಸ್ಥಾನಕ್ಕೆ ಚುನಾವಣೆ ನೋವು ತಂದಿದೆ: ಮರಿತಿಬ್ಬೇಗೌಡ - ಧರಣಿ ನಡುವೆ ಸಭಾಪತಿ ಸ್ಥಾನಕ್ಕೆ ಚುನಾವಣೆ ನೋವು ತಂದಿದೆ

ಜೆಡಿಎಸ್ ಮೈತ್ರಿ ಸರ್ಕಾರದ ವೇಳೆ ಹೊರಟ್ಟಿ ಅವರನ್ನು ಸಚಿವರನ್ನಾಗಿ ಮಾಡಬೇಕಿತ್ತು. ಹೆಚ್​ಡಿಕೆ ಬಳಿ ನಾವೆಲ್ಲಾ ಮನವಿ ಮಾಡಿದರೂ ಆಗಲಿಲ್ಲ. ಆ ಸರ್ಕಾರ ಪತನಕ್ಕೂ ಮೊದಲು ಸಭಾಪತಿ ಮಾಡುವ ಅವಕಾಶ ಮೈತ್ರಿ ಸರ್ಕಾರಕ್ಕೆ ಇತ್ತು. ಆದರೆ, ಆಗಲೂ ಸಭಾಪತಿ ಮಾಡಲು ಸಾಧ್ಯವಾಗಲಿಲ್ಲ. ಇದು ಮನಸ್ಸಿಗೆ ನೋವುಂಟು ಮಾಡಿತ್ತು ಎಂದು ಜೆಡಿಎಸ್ ಸದಸ್ಯ ಮರಿತಿಬ್ಬೇಗೌಡ ಹೇಳಿದ್ದಾರೆ.

jds-member-maritibbegowda-statement-about-basavaraja-horatti
ಧರಣಿ ನಡುವೆ ಸಭಾಪತಿ ಸ್ಥಾನಕ್ಕೆ ಚುನಾವಣೆ ನೋವು ತಂದಿದೆ: ಮರಿತಿಬ್ಬೇಗೌಡ
author img

By

Published : Feb 9, 2021, 3:50 PM IST

ಬೆಂಗಳೂರು: ಇಂದು ನೊಂದು ಮಾತನಾಡಬೇಕಾದ ಅನಿವಾರ್ಯತೆ ಎದುರಾಗಿದೆ. ಧರಣಿ ನಡುವೆ ಸಭಾಪತಿ ಚುನಾವಣೆ ನಡೆದ ಸನ್ನಿವೇಶ ಇದೇ ಮೊದಲ ಬಾರಿ ಆಗಿದೆ. ಹೊರಟ್ಟಿ ಅವರು ಸಭಾಪತಿ ಪೀಠ ಅಲಂಕರಿಸುವ ವೇಳೆ ಇಂತಹ ಸನ್ನಿವೇಶ ನೋವು ತರಿಸಿದೆ ಎಂದು ಜೆಡಿಎಸ್ ಸದಸ್ಯ ಮರಿತಿಬ್ಬೇಗೌಡ ಬೇಸರ ವ್ಯಕ್ತಪಡಿಸಿದರು.

ನೂತನ ಸಭಾಪತಿಗೆ ಅಭಿನಂದಿಸಿ ಮಾತನಾಡಿದ ಅವರು, ಹೊರಟ್ಟಿ ಶಿಕ್ಷಕರ ಸಮಸ್ಯೆಗಳಿಗೆ ಸದಾ ಸ್ಪಂದಿಸುತ್ತಿದ್ದಾರೆ, ಜನಮನ್ನಣೆ ಗಳಿಸಿದ್ದಾರೆ. ಆದರೂ ವಿಧಾನಸಭೆಗೆ ಹೋಗುವ ಪ್ರಯತ್ನ ಮಾಡದೇ, ಸುದೀರ್ಘ 39 ವರ್ಷ ಶಿಕ್ಷಕರ‌ ಕ್ಷೇತ್ರದಿಂದಲೇ ಆಯ್ಕೆಯಾಗಿ ಕೆಲಸ ಮಾಡಿದ್ದಾರೆ. ಸಚಿವರಾಗಿ ಪ್ರಮುಖ ಖಾತೆಗಳನ್ನು ಯಶಸ್ವಿಯಾಗಿ ನಿರ್ವಹಿಸಿದ್ದಾರೆ. ಹೆಚ್​ಡಿಕೆ, ಬಿಎಸ್​​ವೈ ಮೈತ್ರಿ ಸರ್ಕಾರದಲ್ಲಿ‌ ಸಚಿವರಾಗಿ ಒಳ್ಳೆಯ ಕೆಲಸ ಮಾಡಿದ್ದಾರೆ. ಗೋವಿಂದೇಗೌಡರ ನಂತರ ಶಿಕ್ಷಣ ಕ್ಷೇತ್ರದ ಸುಧಾಕರಣೆಗೆ ಪ್ರಯತ್ನ ಮಾಡಿದ್ದಾರೆ ಎಂದರು.

ಕಾಂಗ್ರೆಸ್, ಜೆಡಿಎಸ್ ಮೈತ್ರಿ ಸರ್ಕಾರದ ವೇಳೆ ಹೊರಟ್ಟಿ ಅವರನ್ನು ಸಚಿವರನ್ನಾಗಿ ಮಾಡಬೇಕಿತ್ತು. ಹೆಚ್​ಡಿಕೆ ಬಳಿ ನಾವೆಲ್ಲ ಮನವಿ ಮಾಡಿದರೂ ಆಗಲಿಲ್ಲ. ಆ ಸರ್ಕಾರ ಪತನಕ್ಕೂ ಮೊದಲು ಸಭಾಪತಿ ಮಾಡುವ ಅವಕಾಶ ಮೈತ್ರಿ ಸರ್ಕಾರಕ್ಕೆ ಇತ್ತು. ಆದರೆ, ಆಗಲೂ ಸಭಾಪತಿ ಮಾಡಲು ಸಾಧ್ಯವಾಗಲಿಲ್ಲ. ಇದು ಮನಸ್ಸಿಗೆ ನೋವುಂಟು ಮಾಡಿತ್ತು. ನನಗೂ ಆಸೆ ಇದೆ, ನಾಲ್ಕು ಬಾರಿ ಗೆದ್ದು ಬಂದಿದ್ದೇನೆ. ಆದರೂ ನಮ್ಮಲ್ಲಿ ಹೊರಟ್ಟಿ ಅವರಿಗೆ ಮೊದಲು ಸಿಗಲಿ ಎನ್ನುವ ಅಪೇಕ್ಷೆ ಇತ್ತೇ ಹೊರತು, ನಮಗೆ ಮೊದಲು ಬೇಕು ಎನ್ನುವ ಚಿಂತನೆ ಯಾರಲ್ಲೂ ಇರಲಿಲ್ಲ. ಮೊದಲು ಹೊರಟ್ಟಿ ಅವರಿಗೆ ಅವಕಾಶ ಕೊಡಲು ವರಿಷ್ಠರಿಗೆ ನಾವು ಕೇಳಿಕೊಂಡಿದ್ದು ನಿಜ. ನಂತರ ನಮ್ಮ ಪಕ್ಷದ ವರಿಷ್ಠರು, ಬಿಜೆಪಿ ವರಿಷ್ಠರು ಒಪ್ಪಿಗೆ ಸೂಚಿಸಿ ಸಭಾಧ್ಯಕ್ಷ ಸ್ಥಾನಕ್ಕೆ ಆಯ್ಕೆ ಮಾಡಿದ್ದಾರೆ. ಇದು ನಮಗೆ ಸಂತಸ ತಂದಿದೆ ಎಂದರು.

ನಿನ್ನೆ ಕಾಯ್ದೆ ಪಾಸ್ ಮಾಡುವ ವೇಳೆ ಪ್ರತಿಪಕ್ಷ ಸದಸ್ಯರ ಮಾತಿಗೆ ಹೆಚ್ಚು ಒತ್ತು ಕೊಡಬೇಕಿತ್ತು. ಯಶಸ್ವಿ ಆಡಳಿತ ನೀಡಲು ಪ್ರತಿಪಕ್ಷದ ಚರ್ಚೆ ಆಲಿಸಬೇಕು. ನಿನ್ನೆ ಪ್ರತಿಪಕ್ಷ ಸದಸ್ಯರು ಗೋ ಹತ್ಯೆ ನಿಷೇಧ ವಿಧೇಯಕ ಮತಕ್ಕೆ ಹಾಕಲು ಮನವಿ ಮಾಡಿದರು. ಕಾಂಗ್ರೆಸ್ ಸದಸ್ಯರು ಬಾವಿಗೆ ಇಳಿದು ಧರಣಿ ನಡೆಸಿದರೂ, ನಮಗೆ ಪೀಠದಿಂದ ನ್ಯಾಯ ಸಿಗಲಿಲ್ಲ. ಇದನ್ನು ನಾವು ಬಿಚ್ಚು ಮನಸ್ಸಿನಿಂದ ಮಾತನಾಡಬೇಕಾಗಲಿದೆ. ನಿನ್ನೆ ನಡೆದ ಘಟನೆ ವಿಚಾರದಲ್ಲಿ ನಮ್ಮ ಪಕ್ಷದ ನಿಲುವು ಬಿಜೆಪಿಗೆ ವಿರುದ್ಧವಿದೆ ಎಂದರು.

ಇಂದು ಸಭಾಪತಿ ಸ್ಥಾನಕ್ಕೆ ಚುನಾವಣೆ ನಡೆಸುವ ಮೊದಲು ಕಾಂಗ್ರೆಸ್ ಮುಖಂಡರು ಪರಿ-ಪರಿಯಾಗಿ ಮನವಿ ಮಾಡಿದರು. ನಿನ್ನೆಯ ಘಟನೆ ಖಂಡಿಸಿ ಧರಣಿ ನಡೆಸಿದರು. 10 ನಿಮಿಷ ಸದನ ಮುಂದೂಡಿ ಸದಸ್ಯರನ್ನು ವಿಶ್ವಾಸಕ್ಕೆ ಪಡೆದ ನಂತರ ಚುನಾವಣೆ ಮಾಡಬಹುದಿತ್ತು. ಚುನಾವಣೆ ಮುಗಿದ ನಂತರ ನಿಮ್ಮ ಬೇಡಿಕೆ ಆಲಿಸುವ ಭರವಸೆ ನೀಡಿ ಕೇಳಿಕೊಂಡಿದ್ದರೆ, ವಿರೋಧ ಪಕ್ಷದ ಸದಸ್ಯರು ಕೇಳುತ್ತಿದ್ದರು. ಆದರೆ, ಅಂತಹ ಪ್ರಯತ್ನ ನಡೆಯಲಿಲ್ಲ ಎನ್ನುವುದು ನೋವಿನ ಸಂಗತಿ ಎಂದರು. ಈ ವೇಳೆ ಸದನದ ಬಾವಿಯಲ್ಲಿದ್ದ ಕಾಂಗ್ರೆಸ್ ಸದಸ್ಯರು ಶೇಮ್ ಶೇಮ್ ಎಂದು ಆಡಳಿತ ಪಕ್ಷದ ವಿರುದ್ಧ ಘೋಷಣೆ ಕೂಗಿದರು.

ಜೆಡಿಎಸ್​ನ ಶ್ರೀಕಂಠೇಗೌಡ ಮಾತನಾಡಿ, ನನಗಂತೂ ಹೃದಯ ತುಂಬಿದೆ. ಈ ಮೊದಲು ಹಂಗಾಮಿ ಸಭಾಪತಿ ಆಗಿದ್ದರು. ಆಗ ಪೂರ್ಣ ಪ್ರಮಾಣದ ಸಭಾಪತಿ ಆಗಬೇಕು ಎನ್ನುವ ನಿರೀಕ್ಷೆ ನಮಗಿತ್ತು. ಈಗ ಅದಕ್ಕೆ ಕಾಲ ಕೂಡಿ ಬಂತು. ಸಭಾಪತಿ ಸ್ಥಾನಕ್ಕೆ ಹೊರಟ್ಟಿ ಅವರನ್ನು ಆಯ್ಕೆ ಮಾಡಲು ಜೆಡಿಎಸ್ ವರಿಷ್ಠರು, ಬಿಜೆಪಿ ವರಿಷ್ಠರು ಸಮ್ಮತಿಸಿದರು. ಹಾಗಾಗಿ ಈಗ ಅವರು ಸಭಾಪತಿಯಾಗಿದ್ದಾರೆ. ಇದು ನಮಗೆ ಸಂತಸವಾಗಿದೆ. ಅವರು ಹಂಗಾಮಿಯಾಗಿ ಕಾರ್ಯಕಲಾಪ ನಡೆಸಿದ್ದು, ಇನ್ನು ಕಣ್ಣ ಮುಂದೆಯೇ ಇದೆ ಎಂದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.