ETV Bharat / city

ಪಕ್ಷ ತೊರೆಯುವ ಶಾಸಕರು, ಮುಖಂಡರ ನಡೆಗೆ JDS ದಳಪತಿಗಳ ಪ್ರತಿತಂತ್ರವೇನು? - Bangalore

ಪಕ್ಷ ತೊರೆಯಲು ಕೆಲವು ಶಾಸಕರು ಹಾಗೂ ಮುಖಂಡರು ಸನ್ನದ್ಧರಾಗಿರುವ ಬಗ್ಗೆ ಮಾಹಿತಿ ಪಡೆದುಕೊಂಡಿರುವ ಮಾಜಿ ಮುಖ್ಯಮಂತ್ರಿ ಹೆಚ್. ಡಿ.ಕುಮಾರಸ್ವಾಮಿ ಅವರು, ಪ್ರತಿತಂತ್ರ ರೂಪಿಸುತ್ತಿದ್ದಾರೆ. ಪಕ್ಷ ಬಿಡುವ ಶಾಸಕರ ಕ್ಷೇತ್ರಗಳಿಗೆ ಪರ್ಯಾಯ ನಾಯಕರನ್ನು ಪರಿಚಯಿಸುವ ಅಭಿಯಾನವನ್ನು ಸದ್ಯದಲ್ಲೇ ದಳಪತಿಗಳು ಆರಂಭಿಸಲಿದ್ದಾರೆ ಎಂದು ತಿಳಿದು ಬಂದಿದೆ.

ದೇವೇಗೌಡ ಮತ್ತು ಕುಮಾರಸ್ವಾಮಿ
ದೇವೇಗೌಡ ಮತ್ತು ಕುಮಾರಸ್ವಾಮಿ
author img

By

Published : Oct 23, 2021, 7:39 PM IST

ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆ ಇನ್ನೂ ಒಂದೂವರೆ ವರ್ಷ ಬಾಕಿ ಇರುವಾಗಲೇ ಪಕ್ಷ ಬಿಡಲು ತಯಾರಿ ನಡೆಸುತ್ತಿರುವ ಶಾಸಕರು ಹಾಗೂ ಮುಖಂಡರಿಗೆ 'ಪ್ರತ್ಯಾಸ್ತ್ರ' ಉಪಯೋಗಿಸಲು ಜೆಡಿಎಸ್ ಸಿದ್ದತೆ ಮಾಡಿಕೊಳ್ಳುತ್ತಿದೆ.

ಪಕ್ಷ ತೊರೆಯಲು ಕೆಲವು ಶಾಸಕರು ಹಾಗೂ ಮುಖಂಡರು ಸನ್ನದ್ಧರಾಗಿರುವ ಬಗ್ಗೆ ಮಾಹಿತಿ ಪಡೆದುಕೊಂಡಿರುವ ಮಾಜಿ ಮುಖ್ಯಮಂತ್ರಿ ಹೆಚ್. ಡಿ.ಕುಮಾರಸ್ವಾಮಿ ಅವರು, ಪ್ರತಿತಂತ್ರ ರೂಪಿಸುತ್ತಿದ್ದಾರೆ. ಪಕ್ಷ ಬಿಡುವ ಶಾಸಕರ ಕ್ಷೇತ್ರಗಳಿಗೆ ಪರ್ಯಾಯ ನಾಯಕರನ್ನು ಪರಿಚಯಿಸುವ ಅಭಿಯಾನವನ್ನು ಸದ್ಯದಲ್ಲೇ ದಳಪತಿಗಳು ಆರಂಭಿಸಲಿದ್ದಾರೆ ಎಂದು ತಿಳಿದು ಬಂದಿದೆ.

ಪರ್ಯಾಯ ನಾಯಕರ ಪರಿಚಯ:

ಇತ್ತೀಚೆಗೆ ಬಿಡದಿಯಲ್ಲಿರುವ ಹೆಚ್​​ಡಿಕೆ ತೋಟದ ಮನೆಯಲ್ಲಿ ನಡೆದ ಪಕ್ಷದ 'ಜನತಾ ಪರ್ವ' ಕಾರ್ಯಾಗಾರದಲ್ಲಿ ಕುಮಾರಸ್ವಾಮಿ ಈ ವಿಚಾರವನ್ನು ಹೇಳಿಕೊಂಡಿದ್ದರು. ಹಾಗಾಗಿ ಈ ಬಗ್ಗೆ ತಾಲೀಮು ನಡೆದಿದೆ ಎನ್ನಲಾಗಿದೆ.

ಪರ್ಯಾಯ ಅಭ್ಯರ್ಥಿಗಳನ್ನು ಹುಡುಕಿರುವ ದಳಪತಿಗಳು, ಅವರನ್ನು ಹಂತ - ಹಂತವಾಗಿ ರ‍್ಯಾಲಿ ಮೂಲಕ ಪರಿಚಯಿಸುವ ಉದ್ದೇಶ ಹೊಂದಿದ್ದಾರೆ. ಇದರ ಬೆನ್ನಲ್ಲೇ ತುಮಕೂರಿನ ಗುಬ್ಬಿ ಕ್ಷೇತ್ರವನ್ನು ಗುರಿಯಾಗಿಸಿಕೊಂಡಿರುವ ಹೆಚ್​​ಡಿಕೆ, ಶಾಸಕ ಎಸ್ .ಆರ್. ಶ್ರೀನಿವಾಸ್ ಬದಲಿಗೆ ಮತ್ತೊಬ್ಬ ನಾಯಕನನ್ನು ತರಲು ಸಿದ್ಧತೆ ನಡೆಸುತ್ತಿದ್ದಾರೆ.

ಕುಟುಂಬ ರಾಜಕಾರಣದ ವಿರುದ್ಧ ದನಿ ಎತ್ತಿದ್ದ ಶ್ರೀನಿವಾಸ್ ಕಾಂಗ್ರೆಸ್ ಸೇರುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ. ಹಾಗಾಗಿ, ಅಕ್ಟೋಬರ್ 25 ರಂದು ಜೆಡಿಎಸ್ ಟಿಕೆಟ್ ಆಕಾಂಕ್ಷಿ ಹಾಗೂ ಮಾಜಿ ತುಮಕೂರು ಜಿಲ್ಲಾ ಪಂಚಾಯತ್ ಸದಸ್ಯೆ ಗಾಯತ್ರಿ ದೇವಿ ಹಾಗೂ ಅವರ ಪತಿ ನಾಗರಾಜ್ ಏರ್ಪಡಿಸಿರುವ ರ‍್ಯಾಲಿಯಲ್ಲಿ ಕುಮಾರಸ್ವಾಮಿ ಅವರು ಭಾಗವಹಿಸುವ ನಿರೀಕ್ಷೆಯಿದೆ.

ಶಾಸಕ ಶ್ರೀನಿವಾಸ್ ಹೊರತುಪಡಿಸಿ ಎಲ್ಲ ಜಿಲ್ಲಾ ಮಟ್ಟದ ನಾಯಕರು ಮತ್ತು ಪಕ್ಷದ ಪದಾಧಿಕಾರಿಗಳನ್ನು ಆಹ್ವಾನಿಸಲಾಗಿದೆ, ನಾಗರಾಜ್ 2023 ರ ವಿಧಾನಸಭೆ ಚುನಾವಣೆಗೆ ಜೆಡಿಎಸ್‍ ಅಭ್ಯರ್ಥಿಯಾಗಿ ಹೊರಹೊಮ್ಮುವ ಸಾಧ್ಯತೆ ಇದೆ.

ಅಳೆದು ತೂಗಿ ಪರ್ಯಾಯ ನಾಯಕರ ಆಯ್ಕೆ

ಅದೇ ರೀತಿ, ಹಳೆ ಮೈಸೂರು ಹಾಗೂ ಕೋಲಾರ ಸೇರಿದಂತೆ ಕೆಲವು ಕ್ಷೇತ್ರಗಳಲ್ಲಿಯೂ ಜೆಡಿಎಸ್ ಶಾಸಕರು ರಾಜೀನಾಮೆ ನೀಡಲು ಸಿದ್ಧರಾಗಿದ್ದಾರೆ. ಇನ್ನು ಹಲವು ಶಾಸಕರು ಪಕ್ಷವನ್ನು ತೊರೆಯಲು ಬಯಸುತ್ತಿದ್ದಾರೆ. ಅವರು ಕಾಂಗ್ರೆಸ್ ಸೇರಿದರೆ ಜೆಡಿಎಸ್ ತೊರೆದವರನ್ನು ಸೋಲಿಸಲು ಪರ್ಯಾಯ ನಾಯಕರ ಬಗ್ಗೆ ಕುಮಾರಸ್ವಾಮಿ ಅವರಿಗೆ ಭಯವೂ ಇದೆ‌. ಅಳೆದು ತೂಗಿ ಪರ್ಯಾಯ ನಾಯಕರನ್ನು ಆಯ್ಕೆ ಮಾಡಲು ದಳಪತಿಗಳು ತೀರ್ಮಾನಿಸಿದ್ದಾರೆ ಎನ್ನಲಾಗಿದೆ.

ಇಬ್ಬರು ಶಾಸಕರು ಕಾಂಗ್ರೆಸ್ ಸೇರುವ ಬಗ್ಗೆ ಸುಳಿವು

ಮೈಸೂರಿನ ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ. ದೇವೇಗೌಡ ಮತ್ತು ಕೋಲಾರ ಶಾಸಕ ಕೆ. ಶ್ರೀನಿವಾಸಗೌಡ ಅವರಂತಹ ಹಿರಿಯ ಸದಸ್ಯರ ಬಹಿರಂಗ ಬಂಡಾಯದಿಂದಾಗಿ ಪ್ರಾದೇಶಿಕ ಪಕ್ಷವು ನರಳುತ್ತಿದೆ. ಇಬ್ಬರು ಶಾಸಕರು ತಮ್ಮ ರಾಜಕೀಯ ಭವಿಷ್ಯವನ್ನು ರಕ್ಷಿಸಿಕೊಳ್ಳಲು ಮುಂದಿನ ವಿಧಾನಸಭೆ ಚುನಾವಣೆಗೆ ಮುನ್ನ ಕಾಂಗ್ರೆಸ್ ಸೇರುವ ಬಗ್ಗೆ ಸುಳಿವು ನೀಡಿದ್ದಾರೆ.

ನಿಖಿಲ್ ಕುಮಾರಸ್ವಾಮಿ ಅವರು, ಜಿ.ಟಿ.ದೇವೇಗೌಡರ ಪುತ್ರ ಹರೀಶ್ ಗೌಡ ಜೊತೆ ಸಂಪರ್ಕದಲ್ಲಿದ್ದು, ಮನವೊಲಿಸುವ ಕಾರ್ಯದಲ್ಲಿ ತೊಡಗಿದ್ದಾರೆ. ನಿನ್ನೆಯಷ್ಟೆ ನಿಖಿಲ್ ಕುಮಾರಸ್ವಾಮಿ ಅವರು ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಹರೀಶ್ ಗೌಡ ಸಹ ಜೊತೆಯಲ್ಲಿದ್ದರು.

ಇಬ್ರಾಹಿಂ ಅವರನ್ನು ಮತ್ತೆ ಪಕ್ಷಕ್ಕೆ ಆಹ್ವಾನಿಸಿದ ಹೆಚ್​​ಡಿಕೆ

ಇನ್ನು ಕಾಂಗ್ರೆಸ್​​ನಲ್ಲಿರುವ ಸಿ.ಎಂ ಇಬ್ರಾಹಿಂ ಅವರನ್ನು ಮತ್ತೆ ಪಕ್ಷಕ್ಕೆ ಹೆಚ್​​ಡಿಕೆ ಆಹ್ವಾನಿಸಿದ್ದು, ಈಗಾಗಲೇ ಹಲವು ಸುತ್ತಿನ ಮಾತುಕತೆ ನಡೆದಿದೆ. ಸೂಕ್ತ ಸಮಯದಲ್ಲಿ ಇಬ್ರಾಹಿಂ ಪಕ್ಷಕ್ಕೆ ಬರುತ್ತಾರೆ ಎಂದು ಕುಮಾರಸ್ವಾಮಿ ಅವರೇ ಹೇಳಿದ್ದಾರೆ.

ಹಾಗಾಗಿ, ಎಲ್ಲೆಲ್ಲಿ ಬಂಡಾಯ ಇದೆಯೋ, ಅಲ್ಲಿ ಪರ್ಯಾಯ ನಾಯಕರನ್ನು ಹಾಕಲು ಸಿದ್ದತೆಯಂತೂ ನಡೆದಿದ್ದು, ಸಿಂದಗಿ ಹಾಗೂ ಹಾನಗಲ್ ಉಪಚುನಾವಣೆ ಮುಗಿದ ಬಳಿಕ ಹೆಚ್​​ಡಿಕೆ ಪರ್ಯಾಯ ಅಭಿಯಾನ ಕಡೆ ಮುಖ ಮಾಡುವ ಸಾಧ್ಯತೆ ಇದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.