ETV Bharat / city

ಕಾಂಗ್ರೆಸ್ ಪಕ್ಷದ ಇತಿಹಾಸವೇ ದೇಶದ ಇತಿಹಾಸ: ಡಿಕೆಶಿ

author img

By

Published : Nov 14, 2020, 5:34 PM IST

ಕಾಂಗ್ರೆಸ್ ನಾಯಕರ ಇತಿಹಾಸ ದೇಶದ ಅಭಿವೃದ್ಧಿಯ ಇತಿಹಾಸ. ಕಾಂಗ್ರೆಸ್ ನಾಯಕರ ತ್ಯಾಗ ಬಲಿದಾನವೇ ಭಾರತದ ಸ್ವಾತಂತ್ರ್ಯದ ಇತಿಹಾಸ. ಬಿಜೆಪಿ ನಾಯಕರು ಇತಿಹಾಸ ಬದಲಿಸುತ್ತೇವೆ ಎಂದರೆ ಅದು ದೇಶಕ್ಕಾಗುವ ನಷ್ಟ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್​​​ ಹೇಳಿದರು.

jawaharlal-nehru-birthday-celebrated-by-kpcc
ಡಿಕೆ ಶಿವಕುಮಾರ್

ಬೆಂಗಳೂರು: ಬಿಜೆಪಿ ನಾಯಕರು ಇತಿಹಾಸ ಬದಲಿಸುತ್ತೇವೆ ಎಂದರೆ ಅದು ದೇಶಕ್ಕಾಗುವ ನಷ್ಟ. ಕಾಂಗ್ರೆಸ್ ಪಕ್ಷದ ಇತಿಹಾಸವೇ ದೇಶದ ಇತಿಹಾಸ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದರು.

ನಗರದ ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಮಾಜಿ ಪ್ರಧಾನಿ ಪಂಡಿತ್ ಜವಾಹರಲಾಲ್ ನೆಹರೂ ಜನ್ಮದಿನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ನಾಯಕರ ಇತಿಹಾಸ ದೇಶದ ಅಭಿವೃದ್ಧಿಯ ಇತಿಹಾಸ. ಕಾಂಗ್ರೆಸ್ ನಾಯಕರ ತ್ಯಾಗ ಬಲಿದಾನವೇ ಭಾರತದ ಸ್ವಾತಂತ್ರ್ಯದ ಇತಿಹಾಸ. ಪಂಡಿತ್ ಜವಾಹರಲಾಲ್ ನೆಹರೂ ಅವರ ತತ್ವ ಸಿದ್ಧಾಂತಗಳು, ದೂರದೃಷ್ಟಿಯೇ ಸ್ವತಂತ್ರ ಭಾರತದ ಪ್ರಗತಿ ಇತಿಹಾಸದ ಭದ್ರ ಬುನಾದಿ. ಇದನ್ನು ಉಳಿಸಿಕೊಂಡು ಹೋಗಬೇಕಿರುವುದು ನಮ್ಮ ಜವಾಬ್ದಾರಿ ಎಂದು ಹೇಳಿದರು.

ಮಾಜಿ ಪ್ರಧಾನಿ ಪಂಡಿತ್ ಜವಾಹರಲಾಲ್ ನೆಹರೂ ಜನ್ಮದಿನ ಕಾರ್ಯಕ್ರಮ

ನೆಹರೂ ಅವರಿಗೆ ಪ್ರಧಾನಮಂತ್ರಿ ಹುದ್ದೆ ಏಕಾಏಕಿ ಸಿಗಲಿಲ್ಲ. ಅವರ ಹೋರಾಟ, ಸ್ಥಳೀಯ ಸಂಸ್ಥೆಗಳಲ್ಲಿ ನಿರ್ವಹಿಸಿದ ಕಾರ್ಯ, ಸ್ಥಳೀಯ ಮಟ್ಟದಿಂದ ಮಾಡಿದ ಕೆಲಸ ಅವರನ್ನು ನಾಯಕರನ್ನಾಗಿ ಬೆಳೆಸಿತು. ರಾಜಗೋಪಾಲಾಚಾರಿ, ಸುಭಾಷ್ ಚಂದ್ರ ಬೋಸ್ ಅವರು ಕೂಡ ಸ್ಥಳೀಯ ಆಡಳಿತ ವ್ಯವಸ್ಥೆಯಲ್ಲಿ ಕೆಲಸ ಮಾಡಿದ್ದಾರೆ.

ನೆಹರೂ ಅವರು ಪ್ರಧಾನಿಯಾಗಿ ಮಾಡಿದ ಮೊದಲ ಕೆಲಸ ವಿಧವೆಯರ ಶೋಷಣೆ ತಪ್ಪಿಸಿದ್ದು ಮತ್ತು ಅವರಿಗೆ ಸಮಾನ ಆಸ್ತಿ ಹಕ್ಕು ನೀಡಿದ್ದು. ರಾಷ್ಟ್ರದಲ್ಲಿ ಉದ್ಯೋಗ ಸೃಷ್ಟಿಸಲು ಸಾರ್ವಜನಿಕ ವಲಯದ ಸಂಸ್ಥೆಗಳನ್ನು ಆರಂಭಿಸಿದರು. ಅಂತಹ ಸಂಸ್ಥೆಗಳನ್ನು ಇದೀಗ ಬಿಜೆಪಿ ಸರ್ಕಾರ ಖಾಸಗಿಯವರಿಗೆ ಮಾರಲು ಮುಂದಾಗಿದೆ ಎಂದು ದೂರಿದರು.

ನಮ್ಮ ಆಸ್ತಿ ಮಾರುತ್ತಿದ್ದಾರೆ

ನಮ್ಮ ನಾಯಕರು ಎಚ್.ಎಂ.ಟಿ, ಐಟಿಐ, ಹೆಚ್ಎಎಲ್ ಸೇರಿದಂತೆ ಅನೇಕ ಸಂಸ್ಥೆಗಳನ್ನು ಸ್ಥಾಪಿಸಿದರು. ಈಗ ರೈಲ್ವೆ ವ್ಯವಸ್ಥೆಯನ್ನೂ ಖಾಸಗೀಕರಣ ಮಾಡಲು ಕೇಂದ್ರ ಸರ್ಕಾರ ಮುಂದಾಗಿದೆ. ನಮ್ಮ ನಾಯಕರು ದೇಶಕ್ಕಾಗಿ ಮಾಡಿದ ಆಸ್ತಿಯನ್ನು ಇವರು ಮಾರುತ್ತಿದ್ದಾರೆ. ಇದನ್ನೆಲ್ಲ ಅವರು ತಮ್ಮ ಆಪ್ತರಿಗೆ ಮಾರುತ್ತಿದ್ದಾರೆ ಎಂದು ದೂರಿದರು.

ನೆಹರೂ ಅವರ ತ್ಯಾಗ, ಸಿದ್ಧಾಂತ, ಆಚಾರ, ವಿಚಾರ ದೇಶದ ಅಭಿವೃದ್ಧಿಗೆ ಭದ್ರ ಬುನಾದಿ. ಭಿನ್ನಾಭಿಪ್ರಾಯ ಏನೇ ಇದ್ದರೂ ವ್ಯಕ್ತಿಗಳು, ರಾಜ್ಯ, ಧರ್ಮಗಳ ನಡುವೆ ವೈಮನಸ್ಸು ಸೃಷ್ಟಿಸಬಾರದು. ಕಿಚ್ಚು ಹಚ್ಚಬಾರದು. ನೆಹರೂ ಅವರು ಜೈಲಿನಿಂದ ತಮ್ಮ ಕುಟುಂಬಕ್ಕೆ ಪತ್ರ ಬರೆಯುವಾಗಲೂ ದೇಶವನ್ನು ಹೇಗೆ ಒಗ್ಗಟ್ಟಿನಿಂದ ಮುನ್ನಡೆಸಬೇಕು ಎಂಬುದರ ಬಗ್ಗೆ ಬರೆಯುತ್ತಿದ್ದರು.

ಕೇವಲ ಭಾರತ ಅಷ್ಟೇ ಅಲ್ಲ, ಎಲ್ಲ ರಾಷ್ಟ್ರಗಳ ಜತೆಗಿನ ಹೊಂದಾಣಿಕೆ ಬಗ್ಗೆಯೂ ಆಸಕ್ತಿ ಹೊಂದಿದ್ದರು. ಆ ಮೂಲಕ ವಿಶ್ವಮಾನವ ಸಿದ್ಧಾಂತವನ್ನು ಪ್ರತಿಪಾದಿಸಿದ್ದರು. ಇಂತಹ ಇತಿಹಾಸದ ಇರುವ ಪಕ್ಷದಲ್ಲಿ ಕೆಲಸ ಮಾಡುತ್ತಿರುವುದು ನಮ್ಮ ಅದೃಷ್ಟ ಎಂದರು.

ಧೃತಿಗೆಡುವ ಅಗತ್ಯವಿಲ್ಲ

ನಾವು ದೇಶದ ಜಾತ್ಯಾತೀತ ವ್ಯವಸ್ಥೆಯ ಬುನಾದಿಯನ್ನು ಬಲಪಡಿಸಲು ಕೆಲಸ ಮಾಡಬೇಕು. ನಮ್ಮ ಇತಿಹಾಸ ಉಳಿಸಿಕೊಳ್ಳೋಣ. ಚುನಾವಣೆ ಫಲಿತಾಂಶದ ಬಗ್ಗೆ ನಮ್ಮ ಕಾರ್ಯಕರ್ತರು ಧೃತಿಗೆಡುವ ಅಗತ್ಯವಿಲ್ಲ. ನಮಗೆ ನಮ್ಮ ಇತಿಹಾಸ ಇದೆ, ಸಿದ್ಧಾಂತ ಇದೆ. ನಮ್ಮ ಯುವ ಪೀಳಿಗೆಯನ್ನು ಸಂಘಟನೆ ಮಾಡಿದರೆ, ಈ ರಾಜ್ಯ ಹಾಗೂ ದೇಶದಲ್ಲಿ ಮತ್ತೆ ಅಧಿಕಾರಕ್ಕೆ ಬರುತ್ತೇವೆ.

ನನ್ನ 30-35 ವರ್ಷಗಳ ರಾಜಕೀಯ ಇತಿಹಾಸ ನೋಡಿದಾಗ ಕಳೆದ ಉಪ ಚುನಾವಣೆಯಲ್ಲಿ ಪಕ್ಷದ ನಾಯಕರು ಹಾಗೂ ಕಾರ್ಯಕರ್ತರು ಬಹಳ ಒಗ್ಗಟ್ಟಿನಿಂದ ಕೆಲಸ ಮಾಡಿದ್ದಾರೆ. ಸೋಲಿನ ಕಾರಣ ವಿಚಾರವಾಗಿ ತನಿಖೆ ನಡೆಸುತ್ತೇವೆ. ಈ ಬಾರಿ ತೋರಿದ ಒಗ್ಗಟ್ಟನ್ನೇ ಮುಂದಿನ ದಿನಗಳಲ್ಲೂ ಮುಂದುವರೆಸಿಕೊಂಡು ಹೋಗೋಣ. ಮುಂದಿನ ದಿನಗಳಲ್ಲಿ ಗ್ರಾಮ ಪಂಚಾಯ್ತಿ ಹಾಗೂ ಜಿಲ್ಲಾ ಪಂಚಾಯ್ತಿ ಚುನಾವಣೆ ಬರಲಿದ್ದು, ಎಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡಿ ಜನರಿಗೆ ಶಕ್ತಿ ತುಂಬೋಣ ಎಂದು ಕರೆ ಕೊಟ್ಟರು.

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.