ಬೆಂಗಳೂರು: ಕೊರೊನಾ ವೈರಸ್ ಭೀತಿ ಹಿನ್ನೆಲೆಯಲ್ಲಿ ಮಸೀದಿ, ಮಂದಿರ, ಚರ್ಚ್ಗಳಲ್ಲಿ ಪೂಜೆ-ಪುನಸ್ಕಾರ, ಪ್ರಾರ್ಥನೆಗೆ ಬ್ರೇಕ್ ಹಾಕಲಾಗಿದೆ. ಇಂದು ಜನತಾ ಕರ್ಫ್ಯೂಗೆ ಕರೆ ಕೊಟ್ಟಿರುವ ನಿಟ್ಟಿನಲ್ಲಿ ಇಂದಿನಿಂದ ಆನ್ಲೈನ್ ಮೂಲಕ ಲೈವ್ ಮಾಸ್ (ಪ್ರಾರ್ಥನೆ)ಗಳನ್ನ ನಡೆಸಲಾಗುತ್ತಿದೆ.
- " class="align-text-top noRightClick twitterSection" data="">
ಮನೆಯಲ್ಲೇ ಕುಳಿತು ಪ್ರಾರ್ಥನೆಯಲ್ಲಿ ಭಾಗಿಯಾಗಲು ಅನುಕೂಲವಾಗುವ ಕಾರಣ ವಿಶ್ವೆದೆಲ್ಲೆಡೆ ಚರ್ಚ್ಗಳಲ್ಲಿ ಭಾನುವಾರದ ಪ್ರಾರ್ಥನೆಗೆ ಆನ್ಲೈನ್ ವ್ಯವಸ್ಥೆ ಮಾಡಲಾಗಿದೆ. ಬೆಂಗಳೂರಿನ ಚರ್ಚ್ಗಳೂ ಕೂಡ ಇದೇ ಮಾರ್ಗ ಅನುಸರಿಸಿವೆ. ಭಾನುವಾರ ಚರ್ಚ್ನಲ್ಲಿ ಇದ್ದಂತೆಯೇ ಎಲ್ಲಾ ಭಾಷೆಯ ಪ್ರಾರ್ಥನೆಗಳು ಕಂಪ್ಲೀಟ್ ಆನ್ಲೈನ್ ಆಗಿದೆ.
ಪ್ರತಿ ಮಾಸ್ ಕೊನೆಯಲ್ಲೂ ಇಂದು ಸಂಜೆ 5 ಗಂಟೆಗೆ ಎಲ್ಲಾ ಚರ್ಚ್ಗಳು ಬೆಲ್ ಬಾರಿಸಲು ಸೂಚನೆ ನೀಡಲಾಗಿದೆ. ಎಲ್ಲಾ ವೈದ್ಯರು ಮತ್ತು ಅಗತ್ಯ ಸೇವೆಗಳನ್ನು ಒದಗಿಸುತ್ತಿರುವವರಿಗೆ ಧನ್ಯವಾದ ಮತ್ತು ಜನರು ಮನೆಯೊಳಗಿದ್ದು ಆರೋಗ್ಯ ಕಾಪಾಡುವುದಕ್ಕೆ ಈ ವಿಶೇಷ ಕಾರ್ಯಕ್ರಮ ಆಯೋಜಿಸಲಾಗಿದೆ.