ETV Bharat / city

ಬೆಂಗಳೂರು ಮಾರ್ಗ ಬದಲಿಸಿ ಶಿವಮೊಗ್ಗಕ್ಕೆ ತೆರಳಿದ ಈಶ್ವರಪ್ಪ..!

author img

By

Published : Apr 13, 2022, 11:04 AM IST

Updated : Apr 13, 2022, 11:59 AM IST

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭೇಟಿಗಾಗಿ ಮೈಸೂರಿನಿಂದ ಬೆಂಗಳೂರು ಕಡೆ ತರಾತುರಿಯಲ್ಲಿ ಹೊರಟಿದ್ದ ಸಚಿವ ಈಶ್ವರಪ್ಪ, ನಂತರ ಮಾರ್ಗ ಬದಲಿಸಿ ಶ್ರೀರಂಗಪಟ್ಟಣ, ಹಿರಿಸಾವೆ ಮೂಲಕ ಶಿವಮೊಗ್ಗ ಕಡೆ ತೆರಳಿದ್ದಾರೆ ಎಂದು ತಿಳಿದುಬಂದಿದೆ.

ishwarappa-who-was-on-his-way-from-mysore-to-bangalore-has-moved-to-shivamogga
ಬೆಂಗಳೂರು ಮಾರ್ಗ ಬದಲಿಸಿ ಶಿವಮೊಗ್ಗಕ್ಕೆ ತೆರಳಿದ ಈಶ್ವರಪ್ಪ..!

ಬೆಂಗಳೂರು: ಮೈಸೂರಿನಿಂದ ಬೆಂಗಳೂರು ಕಡೆ ಹೊರಟಿದ್ದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್. ಈಶ್ವರಪ್ಪ ದಿಢೀರ್ ತಮ್ಮ ನಿರ್ಧಾರ ಬದಲಿಸಿ ತವರು ಜಿಲ್ಲೆ ಶಿವಮೊಗ್ಗದತ್ತ ಪ್ರಯಾಣಿಸುತ್ತಿದ್ದಾರೆ ಎಂದು ಕೆಎಸ್ ಈಶ್ವರಪ್ಪ ಅವರ ಆಪ್ತವಲಯಗಳು ತಿಳಿಸಿವೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭೇಟಿಗಾಗಿ ಮೈಸೂರಿನಿಂದ ಬೆಂಗಳೂರು ಕಡೆ ತರಾತುರಿಯಲ್ಲಿ ಹೊರಟಿದ್ದ ಸಚಿವ ಈಶ್ವರಪ್ಪ, ನಂತರ ಮಾರ್ಗ ಬದಲಿಸಿ ಶ್ರೀರಂಗಪಟ್ಟಣ, ಹಿರಿಸಾವೆ ಮೂಲಕ ಶಿವಮೊಗ್ಗ ಕಡೆ ತೆರಳಿದ್ದಾರೆ ಎಂದು ತಿಳಿದುಬಂದಿದೆ.

ಇಂದು ಸ್ವ ಕ್ಷೇತ್ರವಾದ ಶಿವಮೊಗ್ಗದಲ್ಲಿ ಮಾಧ್ಯಮಗೋಷ್ಟಿ ನಡೆಸಿ, ತಮ್ಮ ವಿರುದ್ಧದ ಆರೋಪದ ಕುರಿತು ಸಮಗ್ರವಾದ ಮಾಹಿತಿ ನೀಡಲಿದ್ದಾರೆ ಎಂದು ತಿಳಿದುಬಂದಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿಯಾಗಬೇಕಿದ್ದ ಸಚಿವ ಈಶ್ವರಪ್ಪ ಅಂತಿಮ ಕ್ಷಣದಲ್ಲಿ ತಮ್ಮ ನಿಲುವು ಬದಲಿಸಿದ್ದು ಕುತೂಹಲಕ್ಕೆ ಕಾರಣವಾಗಿದೆ. ಸಿಎಂ ಭೇಟಿ ಮಾಡಿ ರಾಜೀನಾಮೆ ಕುರಿತ ನಿರ್ಧಾರ ಪ್ರಕಟಿಸುವ ಸಾಧ್ಯತೆ ಇದೆ ಎನ್ನಲಾಗಿತ್ತು. ಆದರೆ ಈಗ ಈಶ್ವರಪ್ಪ ಅವರು ಸಿಎಂ ಭೇಟಿಗೆ ಆಗಮಿಸದೇ ಇರುವುದು ಕುತೂಹಲ ಮೂಡಿಸಿದೆ. ಸದ್ಯ ಕಾಂಗ್ರೆಸ್ ಈಶ್ವರಪ್ಪ ರಾಜೀನಾಮೆಗೆ ಆಗ್ರಹಿಸಿ ಪ್ರತಿಭಟನೆ ನಡೆಸಿದೆಯಲ್ಲದೆ, ರಾಜ್ಯಪಾಲರಿಗೆ ಮನವಿಯನ್ನೂ ಸಲ್ಲಿಸಿದೆ.

ಈ ನಡುವೆ ಈಶ್ವರಪ್ಪ ಪರ ಬಿಜೆಪಿ ನಾಯಕರು ಮಾತನಾಡುತ್ತಿದ್ದು, ಡಿವೈಎಸ್ ಪಿ ಗಣಪತಿ ಆತ್ಮಹತ್ಯೆ ಪ್ರಕರಣಕ್ಕೂ ಸಂತೋಷ್ ಪ್ರಕರಣಕ್ಕೆ ಹೋಲಿಕೆ ಸಲ್ಲದು ಎಂದು ಸಚಿವರ ಬೆಂಬಲಕ್ಕೆ ನಿಲ್ಲುತ್ತಿದ್ದಾರೆ. ಈಗಾಗಲೇ ಸಚಿವ ಈಶ್ವರಪ್ಪ ವಿರುದ್ಧ ಎಫ್ಐಆರ್ ದಾಖಲಾಗಿದ್ದು, ಮುಂದೆ ಈಶ್ವರಪ್ಪ ಯಾವ ನಿರ್ಧಾರ ಕೈಗೊಳ್ಳಲಿದ್ದಾರೆ ಎನ್ನುವುದನ್ನು ಕಾದು ನೋಡಬೇಕಿದೆ.

ನಿನ್ನೆ ರಾತ್ರಿ ಮೈಸೂರಿನ ಲಲಿತ್ ಮಹಲ್ ಹೋಟೆಲ್ ನಲ್ಲಿ ತಂಗಿದ್ದ ಸಚಿವ ಈಶ್ವರಪ್ಪ ಇಂದು ಬೆಳಗ್ಗೆ ಸಿಎಂ ಭೇಟಿ ಮಾಡಲು ಬೆಂಗಳೂರಿಗೆ ಹೊರಟಿದ್ದರು. ಈ ನಡುವೆ ಹೈಕಮಾಂಡ್ ಹಾಗೂ ಸಿಎಂ ಜೊತೆ ದೂರವಾಣಿಯಲ್ಲಿ ಮಾತನಾಡಿದ್ದು, ಅವರ ಆದೇಶದ ಮೇರೆಗೆ ಎರಡನೇ ದಿನದ ಕೋರ್ ಕಮಿಟಿ ಸಭೆಯಲ್ಲಿ ಭಾಗವಹಿಸದೇ ಬೆಂಗಳೂರಿಗೆ ಹೊರಟಿದ್ದರೆನ್ನಲಾಗಿತ್ತು. ಬಳಿಕ ಬೆಂಗಳೂರು ತೆರಳದೇ ಮಾರ್ಗ ಬದಲಿಸಿ ಶಿವಮೊಗ್ಗಕ್ಕೆ ತೆರಳಿರುವುದಾಗಿ ತಿಳಿದುಬಂದಿದೆ. ಗುತ್ತಿಗೆದಾರ ಸಂತೋಷ್ ಆತ್ಮಹತ್ಯೆ ಕೇಸ್​ನಲ್ಲಿ ತಮ್ಮ ವಿರುದ್ಧ ಕೇಳಿಬಂದಿರುವ ಆರೋಪಕ್ಕೆ ಸಂಬಂಧಿಸಿದಂತೆ ಸಚಿವ ಕೆ ಎಸ್ ಈಶ್ವರಪ್ಪ ಇಂದು ಮಧ್ಯಾಹ್ನ 1 ಗಂಟೆಗೆ ಶಿವಮೊಗ್ಗದಲ್ಲಿ ಮಾಧ್ಯಮಗೋಷ್ಟಿ ನಡೆಸಲಿದ್ದಾರೆ ಎಂದು ತಿಳಿದುಬಂದಿದೆ.

ಓದಿ : ಗುತ್ತಿಗೆದಾರ ಆತ್ಮಹತ್ಯೆ ಪ್ರಕರಣ.. ರಾಜೀನಾಮೆ ನೀಡುವಂತೆ ಈಶ್ವರಪ್ಪಗೆ ಹೈಕಮಾಂಡ್ ಸೂಚನೆ..?

Last Updated : Apr 13, 2022, 11:59 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.