ETV Bharat / city

ಬಯಲುಸೀಮೆ ಜನರ ಬದುಕು ಬೆಳಗಿಸುತ್ತಾ ಕಾವೇರಿ - ಪೆನ್ನಾರ್ ನದಿ ಜೋಡಣೆ?! - ದೇಶದ ನದಿ ಜೋಡಣೆ ಯೋಜನೆ

ಐದು ನದಿಗಳ ಜೋಡಣೆ ವಿಚಾರ ಪ್ರಸಕ್ತ ಬಜೆಟ್​​ನಲ್ಲಿಯೂ ಪ್ರಸ್ತಾಪವಾಗಿದೆ. ಇದರಲ್ಲಿ ಕಾವೇರಿ-ಪೆನ್ನಾರ್ ನದಿ ಜೋಡಣೆ ವಿಚಾರ ಭಾರಿ ಸದ್ದು ಮಾಡುತ್ತಿದ್ದು, ಬರಪೀಡಿದ ಜಿಲ್ಲೆಯ ನಿವಾಸಿಗಳ ಕಣ್ಣಲ್ಲಿ ಆಶಾಕಿರಣ ಮೂಡಿಸಿದೆ.

is river joint project in India will effects on people life
ಬಯಲುಸೀಮೆ ಜನರ ಬದುಕು ಬೆಳಗಿಸುತ್ತಾ ನದಿ ಜೋಡಣೆ ಯೋಜನೆ
author img

By

Published : Feb 3, 2022, 7:43 AM IST

ಬೆಂಗಳೂರು: ದೇಶದಲ್ಲಿ ಬ್ರಿಟಿಷರ ಆಡಳಿತ ಇದ್ದ ಸಂದರ್ಭ ಅಂದರೆ 1858ರಲ್ಲೇ ನದಿಗಳ ಜೋಡಣೆಯ ಪ್ರಸ್ತಾಪವಿತ್ತು. ಇದಾದ ಬಳಿಕ ಸಾಕಷ್ಟು ಬಾರಿ ಪ್ರಸ್ತಾಪವಾಗಿದ್ದ ಈ ವಿಚಾರ ಇದೀಗ ಪ್ರಸಕ್ತ ಬಜೆಟ್​ನಲ್ಲೂ ಮತ್ತೊಮ್ಮೆ ಪ್ರಸ್ತಾಪವಾಗಿ ಬರಪೀಡಿದ ಜಿಲ್ಲೆಯ ನಿವಾಸಿಗಳ ಕಣ್ಣಲ್ಲಿ ಆಶಾಕಿರಣ ಮೂಡಿಸಿದೆ.

ಅಂದು ಬ್ರಿಟಿಷ್​​ ಅಧಿಕಾರಿ ಸರ್ ಆರ್ಥರ್ ಕಾಟನ್ ಅವರು ನದಿ ಜೋಡಣೆಯ ವಿಚಾರವನ್ನು ಪ್ರಸ್ತಾಪಿಸಿದ್ದರು. ಕಡಿಮೆ ನೀರು ಇರುವ ನದಿಗಳಿಗೆ ಹೆಚ್ಚು ನೀರು ಇರುವ ನದಿಗಳಿಂದ ಕಾಲುವೆ ಮೂಲಕ ನೀರು ಹರಿಸುವ ಚಿಂತನೆ ಅಂದೇ ಮೂಡಿತ್ತು. ಆದರೆ, ಕಾಲಕಾಲಕ್ಕೆ ಇದರ ಪ್ರಸ್ತಾಪ ಆದಾಗೆಲ್ಲಾ ಖರ್ಚು ವೆಚ್ಚ ಹೆಚ್ಚು ಎಂಬ ಕಾರಣಕ್ಕೆ ಮುಂದೂಡುತ್ತಾ ಬರಲಾಗಿದೆ.

ಯೋಜನೆ ವೆಚ್ಚ ಅಧಿಕ ಹಾಗೂ ಉಷ್ಣ ಪ್ರದೇಶವನ್ನೇ ಹೊಂದಿರುವ ಪ್ರದೇಶದಲ್ಲಿ ಕಾಲುವೆ ಮೂಲಕ ನೀರು ತರುವಾಗ ಆವಿಯಾಗುವ ಪ್ರಮಾಣ ಹೆಚ್ಚು ಎಂಬುದು ಇಲ್ಲಿ ಗಮನಿಸಬೇಕಾದ ಸಂಗತಿ. ಇದೀಗ ಐದು ನದಿಗಳ ಜೋಡಣೆ ವಿಚಾರ ಪ್ರಸಕ್ತ ಬಜೆಟ್​​ನಲ್ಲಿಯೂ ಪ್ರಸ್ತಾಪವಾಗಿದೆ.

ವಿವರ: 2020ರ ಫೆಬ್ರವರಿಯಲ್ಲಿ ಆಗಿನ ಜಲ ಶಕ್ತಿ ಸಚಿವಾಲಯವು ಗೋದಾವರಿ, ಕೃಷ್ಣ ಮತ್ತು ಕಾವೇರಿಯನ್ನು ಸಂಪರ್ಕಿಸುವ ಕರಡು ಡಿಪಿಆರ್ ಸಿದ್ಧಪಡಿಸಿದ್ದಾಗಿ ತಿಳಿಸಿತ್ತು. ಗೋದಾವರಿಯಿಂದ 247 ಟಿಎಂಸಿ ನೀರನ್ನು ಕೃಷ್ಣಾ, ಪೆನ್ನಾರ್ ಮತ್ತು ಕಾವೇರಿ ಜಲಾನಯನ ಪ್ರದೇಶಗಳ ದಕ್ಷಿಣ ಪ್ರದೇಶಗಳಿಗೆ ತಿರುಗಿಸಬಹುದು ಎಂಬುದು ಇದರ ವಿಚಾರವಾಗಿತ್ತು.

ಗೋದಾವರಿ ಭಾರತದ ಮೂರನೇ ಅತಿದೊಡ್ಡ ನದಿಯಾಗಿದ್ದು, ನಾಸಿಕ್​ನಲ್ಲಿ ಹುಟ್ಟುತ್ತದೆ. ಈ ನದಿಯು ಮಹಾರಾಷ್ಟ್ರ, ತೆಲಂಗಾಣ, ಆಂಧ್ರಪ್ರದೇಶ, ಛತ್ತೀಸ್​ಗಡ ಮತ್ತು ಒಡಿಶಾ ಮೂಲಕ ಹರಿಯುತ್ತದೆ. ದೇಶದ ನಾಲ್ಕನೇ ದೊಡ್ಡ ನದಿಯಾದ ಕೃಷ್ಣಾ ಮಹಾಬಲೇಶ್ವರದಲ್ಲಿ ಹುಟ್ಟುತ್ತದೆ. ಇದು ಮಹಾರಾಷ್ಟ್ರ, ಕರ್ನಾಟಕ, ತೆಲಂಗಾಣ, ಆಂಧ್ರಪ್ರದೇಶದ ಮೂಲಕ ಹರಿಯುತ್ತದೆ. ಪ್ರವಾಹಕ್ಕೆ ತುತ್ತಾಗುವ ಗೋದಾವರಿ ಮತ್ತು ವರ್ಷದ ಸಾಕಷ್ಟು ಸಮಯ ನೀರಿಲ್ಲದೇ ಸೊರಗುವ ಕೃಷ್ಣಾ ನದಿಯನ್ನು ಜೋಡಿಸುವ ಪ್ರಸ್ತಾಪ 1970ರಿಂದಲೂ ಕೇಳಿ ಬರುತ್ತಿದೆ.

ಮೂಲಭೂತವಾಗಿ, ಮಹಾನದಿ ಮತ್ತು ಗೋದಾವರಿಯಿಂದ ಹೆಚ್ಚುವರಿ ನೀರನ್ನು ಕೃಷ್ಣಾಗೆ ಇಂಚಂಪಲ್ಲಿ - ನಾಗಾರ್ಜುನ ಸಾಗರ, ಇಂಚಂಪಲ್ಲಿ - ಪುಲಿಚಿಂತಲ ಮತ್ತು ಪೋಲಾವರಂ-ವಿಜಯವಾಡ ಸೇರಿ ಮೂರು ಲಿಂಕ್​ಗಳ ಮೂಲಕ ತಿರುಗಿಸುವ ಯೋಜನೆಯಾಗಿದೆ.

ಪೆನ್ನಾರ - ಕಾವೇರಿ ಜೋಡಣೆ: ಪೆನ್ನಾರ್ ನದಿ ಚಿಕ್ಕಬಳ್ಳಾಪುರದ ನಂದಿ ಬೆಟ್ಟದಿಂದ ಹುಟ್ಟಿ ಕರ್ನಾಟಕ, ತಮಿಳುನಾಡು ಮತ್ತು ಆಂಧ್ರಪ್ರದೇಶದ ಮೂಲಕ ಹರಿಯುತ್ತದೆ. ಇದು ಬಂಗಾಳ ಕೊಲ್ಲಿವರೆಗೂ 597 ಕಿಮೀ ಹರಿಯುತ್ತದೆ. ಕಾವೇರಿ - ಪೆನ್ನಾರ್ ನದಿ ಜೋಡಣೆಯಾದರೆ ರಾಜ್ಯದ ಬಯಲುಸೀಮೆ ಜಿಲ್ಲೆಗಳಿಗೆ ಯಥೇಚ್ಛವಾಗಿ ನೀರು ಲಭಿಸಲಿದೆ.

ಕೃಷ್ಣಾ, ಪೆನ್ನಾರ್​ - ಕಾವೇರಿ: ನದಿಗೆ ಇನ್ನಷ್ಟು ತಿರುವನ್ನು ಸೃಷ್ಟಿಸಲು ಕೃಷ್ಣ (ಆಲಮಟ್ಟಿ), ಪೆನ್ನಾರ್, ಕೃಷ್ಣ (ಶ್ರೀಶೈಲಂ), ಪೆನ್ನಾರ್ ಮತ್ತು ಕೃಷ್ಣ (ನಾಗಾರ್ಜುನಸಾಗರ), ಪೆನ್ನಾರ್ (ಸೋಮಶಿಲಾ) ಎಂಬ ವಿವಿಧ ಲಿಂಕ್​ಗಳನ್ನು ಪ್ರಸ್ತಾಪಿಸಲಾಗಿದೆ.

ಕೃಷ್ಣಾ (ಆಲಮಟ್ಟಿ) ಪೆನ್ನಾರ್ ಸಂಪರ್ಕವು ಕೃಷ್ಣಾ ಮತ್ತು ಪೆನ್ನಾರ್ ಜಲಾನಯನ ಪ್ರದೇಶದಲ್ಲಿನ ಮಾರ್ಗದ ಬಳಕೆಗಾಗಿ ಕೃಷ್ಣಾದಿಂದ 1980 ಎಂಎಂ ನೀರನ್ನು ತಿರುಗಿಸಲು ಯೋಜಿಸಿದೆ. ಆಲಮಟ್ಟಿ ಅಣೆಕಟ್ಟಿನ ಬಲದಂಡೆಯಿಂದ 587.175 ಕಿಮೀ ಉದ್ದದ ಸಂಪರ್ಕ ಕಾಲುವೆಯು ಕರ್ನಾಟಕದ ಬಾಗಲಕೋಟೆ, ವಿಜಯಪುರ, ಕೊಪ್ಪಳ, ಬಳ್ಳಾರಿ, ರಾಯಚೂರು ಜಿಲ್ಲೆಗಳು ಮತ್ತು ಆಂಧ್ರಪ್ರದೇಶದ ಅನಂತಪುರ ಜಿಲ್ಲೆಗಳ ಮೂಲಕ ಹಾದು ಅಂತಿಮವಾಗಿ ಪೆನ್ನಾರ್ ನದಿಯ ಉಪನದಿಯಾದ ಮಡ್ಡಿಲೇರು ನದಿಯನ್ನು ಸೇರುತ್ತದೆ.

ಪೆನ್ನಾರ್ - ಕಾವೇರಿ, ತಮಿಳುನಾಡಿನ ಗುಂಡಾರ್ ಜಲಾನಯನ ಪ್ರದೇಶದ ಕಾವೇರಿ ನದಿಯ ಕೆಳಭಾಗದಲ್ಲಿರುವ ಪ್ರದೇಶದ ಬೇಡಿಕೆಗಳನ್ನು ಪೂರೈಸಲು ಪೆನ್ನಾರ್​ ಸೋಮಸಿಲ ಗ್ರ್ಯಾಂಡ್ ಅನಿಕಟ್ ಲಿಂಕ್ ಮತ್ತು ದಕ್ಷಿಣ ಕಾವೇರಿ ವೈಗೈ ಗುಂಡಾರ್ ಲಿಂಕ್ ಕಾಲುವೆ ಮೂಲಕ ಕಾವೇರಿ ನದಿಯ ಕಡೆಗೆ ನೀರನ್ನು ತಿರುಗಿಸಲು ಪ್ರಸ್ತಾಪಿಸಲಾಗಿದೆ.

ಈ ಯೋಜನೆಯು ಆಂಧ್ರಪ್ರದೇಶ ರಾಜ್ಯದ ನೆಲ್ಲೂರು ಜಿಲ್ಲೆಯ ಪೆನ್ನಾರ್ ನದಿಗೆ ಅಡ್ಡಲಾಗಿರುವ ಸೋಮಸಿಲಾ ಅಣೆಕಟ್ಟಿನಿಂದ 8,565 ಎಂಎಂ ನೀರನ್ನು ತಿರುಗಿಸಲು ಯೋಜಿಸಿದೆ. ಲಿಂಕ್ ಕಾಲುವೆಯು ಆಂಧ್ರಪ್ರದೇಶದ ನೆಲ್ಲೂರು ಮತ್ತು ಚಿತ್ತೂರು ಜಿಲ್ಲೆಗಳಲ್ಲಿ 4,91,200 ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಒದಗಿಸುತ್ತದೆ.

ತಿರುವಳ್ಳೂರು, ಕಾಂಚೀಪುರಂ, ವೆಲ್ಲೂರು, ತಿರುವಣ್ಣಾಮಲೈ, ವಿಲ್ಲುಪುರಂ ಮತ್ತು ತಮಿಳುನಾಡು ಮತ್ತು ಪುದುಚೇರಿಯ ಕಡಲೂರು ಜಿಲ್ಲೆಗಳು. ನೀರಾವರಿಯ ಹೊರತಾಗಿ, ಚೆನ್ನೈ ನಗರದ ಭವಿಷ್ಯದ ದೇಶೀಯ ಮತ್ತು ಕೈಗಾರಿಕಾ ನೀರಿನ ಅವಶ್ಯಕತೆಗಳಿಗಾಗಿ ನೀರನ್ನು ಒದಗಿಸಲು ಸಹ ಪ್ರಸ್ತಾಪಿಸಲಾಗಿದೆ.

ಗೋದಾವರಿ ಟು ಕಾವೇರಿ: ಬಂಗಾಳಕೊಲ್ಲಿ ಸಮುದ್ರದ ಪಾಲಾಗುವ ಗೋದಾವರಿ ನದಿಯ ಹೆಚ್ಚುವರಿ 247 ಟಿಎಂಸಿ ನೀರನ್ನು ಕೊಳವೆ ಮಾರ್ಗದ ಮೂಲಕ ಕಾವೇರಿ ನದಿಗೆ ಜೋಡಣೆ ಮಾಡುವ ಮಹತ್ವಾಕಾಂಕ್ಷೆಯ ಯೋಜನೆ ಇದಾಗಿದ್ದು, ಸುಮಾರು 60 ಸಾವಿರ ಕೋಟಿ ರೂ. ಮೊತ್ತದ ಪ್ರಾಜೆಕ್ಟ್ ಆಗಿದೆ. ಮೊದಲು ಆಂಧ್ರದಲ್ಲಿ ಪೊಲಾವರಂ ಅಣೆಕಟ್ಟನ್ನು ನಿರ್ಮಾಣ ಮಾಡಲಾಗುತ್ತದೆ.

ಅದರ ಹಿನ್ನೀರನ್ನು ಕೃಷ್ಣಾ ನದಿ, ಪೆನ್ನಾರ್ (ಪಿನಾಕಿನಿ) ನದಿಗಳ ಮೂಲಕ ಕಾವೇರಿಗೆ ಕೊಳವೆ ಮಾರ್ಗದಲ್ಲಿ ಹರಿಸಲಾಗುತ್ತದೆ. ನೀರು ಆವಿಯಾಗುವುದನ್ನು ತಡೆಗಟ್ಟುವ ಉದ್ದೇಶದಿಂದ ಇಲ್ಲಿ ಕಾಲುವೆಗಳ ಬದಲಿಗೆ ವಿಶೇಷ ತಂತ್ರಜ್ಞಾನದ ಸ್ಟೀಲ್ ಕೊಳವೆಗಳ ಮೂಲಕ ನೀರನ್ನು ಹರಿಸುವ ಉದ್ದೇಶ ಹೊಂದಲಾಗಿದೆ. ಈ ನದಿ ಜೋಡಣೆಯಲ್ಲಿ ಎರಡು ಪ್ರಮುಖ ಯೋಜನೆಗಳಿವೆ. ಗೋದಾವರಿ ನದಿಯ ಹೆಚ್ಚುವರಿ ನೀರನ್ನು ಕೃಷ್ಣೆಗೆ ಹರಿಸಿ, ಅಲ್ಲಿಂದ ಮುಂದೆ ಪೆನ್ನಾರ್(ಉತ್ತರ ಪಿನಾಕಿನಿ) ನದಿಯಿಂದ ಕಾವೇರಿ ನದಿಗೆ ಹರಿಸುವ ಎರಡು ಯೋಜನೆಗಳು ನದಿ ಜೋಡಣೆಯ ಭಾಗವಾಗಿವೆ.

ಇದನ್ನೂ ಓದಿ: ಲಾಟರಿಯಲ್ಲಿ 'ಲಕ್ಕಿ'ಯಾದ ಕಂದಮ್ಮನ ಜೀವ ಉಳಿಸಲು ಬೇಕಿದೆ ಸಹೃದಯಿಗಳ ನೆರವು..

30 ನದಿಗಳ ಜೋಡಣೆಗೆ ಯೋಜನೆ: ದೇಶದಲ್ಲಿ ಒಟ್ಟು 30 ನದಿ ಜೋಡಣೆ ಯೋಜನೆಗಳನ್ನು ಕೇಂದ್ರ ಸರ್ಕಾರ ಕೈಗೊಂಡಿದೆ. ಆ ಪೈಕಿ ಗೋದಾವರಿ- ಕಾವೇರಿ, ಕೆನ್-ಬೆತ್ವಾ, ದಮನ್ ಗಂಗಾ- ಪಿಂಜಲ್, ತಾಪಿ- ನರ್ಮದಾ ಸೇರಿ 5 ಯೋಜನೆಗಳು ಮುಂಚೂಣಿಯಲ್ಲಿವೆ.

ಈ 5 ನದಿಗಳ ಜೋಡಣೆಗೆ ಕೇಂದ್ರ ಬಜೆಟ್ ನಲ್ಲಿ 44,605 ಕೋಟಿ ರೂಪಾಯಿ ಅನುದಾನ ಮೀಸಲಿಡಲಿದೆ. ಈ ಯೋಜನೆಯಿಂದ ಕಾವೇರಿ ನದಿಗೆ ಹೆಚ್ಚುವರಿಯಾಗಿ 100 ಟಿಎಂಸಿ ನೀರು ಸೇರಲಿದ್ದು, ಕರ್ನಾಟಕ ಮತ್ತು ತಮಿಳುನಾಡು ಜಲ ವಿವಾದ ತಪ್ಪಲಿದೆ. ಕೋಲಾರ, ಬಂಗಾರಪೇಟೆ ಮತ್ತು ಮಾಲೂರಿನ ಹಳ್ಳಿಗಳಿಗೆ ಮತ್ತು ಹಲವು ಪಟ್ಟಣಗಳಿಗೆ ಕುಡಿಯುವ ನೀರು ಪೂರೈಕೆಯಾಗಲಿದೆ.

ನೀರಾವರಿ ವಿಚಾರವಾಗಿ ಸಾಕಷ್ಟು ರಾಜ್ಯಗಳು ಪಕ್ಕದ ರಾಜ್ಯಗಳೊಂದಿಗೆ ವಿವಾದದಲ್ಲಿ ತೊಡಗಿದ್ದು, ಕೇಂದ್ರ ಸರ್ಕಾರದ ನದಿ ಜೋಡಣೆ ಯೋಜನೆ ಈ ವಿವಾದಗಳಿಗೆ ತೆರೆ ಎಳೆಯುವ ಭರವಸೆ ಇದೆ. ಪಾಲಾರ್ ಮತ್ತು ಪೆನ್ನಾರ್ ನದಿಯ ನೀರನ್ನು ಕರ್ನಾಟಕ ಬಳಸಿಕೊಳ್ಳಲು ಬ್ರಿಟಿಷರ ಕಾಲದ 1892ರ ಕಾಯ್ದೆ ಅಡ್ಡಿಯಾಗಿದೆ. ಈ ಕಾಯ್ದೆ ರದ್ದತಿ ಕುರಿತು ಮೂರೂ ರಾಜ್ಯಗಳು ಸರ್ಕಾರದ ಮೇಲೆ ಮೊದಲಿನಿಂದಲೂ ಒತ್ತಡ ಹೇರುತ್ತಿವೆ. ಆದರೆ ಅದಕ್ಕೆ ಮುಕ್ತಿ ಇನ್ನೂ ಸಿಕ್ಕಿಲ್ಲ.

ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

ಜೋಡಣೆ ಬಗ್ಗೆ ತಜ್ಞರು ಹೇಳೋದೇನು? : ಶಾಶ್ವತ ನೀರಾವರಿ ಹೋರಾಟ ಸಮಿತಿ ಅಧ್ಯಕ್ಷ ಆಂಜನೇಯರೆಡ್ಡಿ ಈ ವಿಚಾರವಾಗಿ ಮಾತನಾಡಿದ್ದು, 2015ರಲ್ಲಿ ರಾಜ್ಯದ ಜಲ ಸಂಪನ್ಮೂಲ ಸಚಿವರಾಗಿದ್ದ ಎಂ.ಬಿ ಪಾಟೀಲ್ ಅವರ ಗಮನಕ್ಕೆ ತರಲಾಗಿತ್ತು. ಅಲ್ಲದೇ 2019ರಲ್ಲಿ ಕೇಂದ್ರ ಸಚಿವ ಗಜೇಂದ್ರಸಿಂಗ್ ಶೇಖಾವತ್ ಅವರನ್ನು ಭೇಟಿಯಾಗಿ ಪಶ್ಚಿಮ ವಾಹಿನಿ ನದಿಗಳಿಂದ ಸಿಗಬೇಕಾದ ನೀರು, ಕೃಷ್ಣ ಪ್ರವಾಹದ ನೀರನ್ನು ಪೆನ್ನಾರ್ಗೆ ಹರಿಸುವ ಬಗ್ಗೆ ಸಚಿವರಿಗೆ ಮನವರಿಕೆ ಮಾಡಲಾಗಿತ್ತು.

ಈ ನಿಟ್ಟಿನಲ್ಲಿ ಕೇಂದ್ರ ಬಜೆಟ್​ನಲ್ಲಿ ನದಿ ಜೋಡಣೆ ವಿಷಯ ಬಂದಿರುವುದು ಸಣ್ಣ ಬೆಳಕು ಮೂಡಿದಂತೆ ಆಗಿದೆ. ಪೆನ್ನಾರ್ ಬೇಸ್​​ನಲ್ಲಿರುವ ತಾಲೂಕುಗಳ ಕೆರೆ ತುಂಬಿಸಲು ಈ ಯೋಜನೆಯಿಂದ ಅನುಕೂಲವಾಗಲಿದೆ. ತುಮಕೂರು, ಬೆಂಗಳೂರು ಗ್ರಾಮಾಂತರ ಚಿಕ್ಕಬಳ್ಳಾಪುರ, ಕೋಲಾರಗಳಿಗೆ ನೀರನ್ನು ತರಲು ಸಾಧ್ಯವಿದೆ.

ಕೃಷ್ಣ ನದಿ ನೀರನ್ನು ಬಳಸಿಕೊಳ್ಳಲು ನಮಗೆ ಹಕ್ಕಿದೆ. ಮಳೆಗಾಲದ ವೇಳೆ ಉಂಟಾಗುವ ಪ್ರವಾಹದ ನೀರನ್ನು ನಮ್ಮ ಕೆರೆಗಳಿಗೆ ಹರಿಸಿಕೊಳ್ಳಬಹುದು. ಕೃಷ್ಣ, ಗೋದಾವರಿ, ಪೆನ್ನಾರ್, ಪಾಲರ್ ನದಿಗಳು ಹೀಗೆ ಒಂದನ್ನೊಂದು ನದಿ ಜೋಡಣೆ ಮಾಡುವ ಪ್ರಯತ್ನ ನೆನೆಗುದಿಗೆ ಬಿದ್ದಿತ್ತು. ಈಗ ಆ ಪ್ರಯತ್ನಕ್ಕೆ ಚಾಲನೆ ಸಿಕ್ಕಿದೆ ಎಂದಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.