ETV Bharat / city

ಸಂಪುಟ ಸಂಕಟ ಶಮನ ಮಾಡದ ಕೇಂದ್ರದ ವರಿಷ್ಠರು: ಅಸಮಾಧಾನಗೊಂಡರಾ ಬಿಎಸ್​​ವೈ ?

ಸಚಿವ ಸಂಪುಟ ವಿಸ್ತರಣೆಯ ನಂತರ ಶುರುವಾಗಿರುವ ಖಾತೆ ಕ್ಯಾತೆಯನ್ನು ಪರಿಹರಿಸುವುದು, ಅನರ್ಹಗೊಂಡಿರುವ ಶಾಸಕರಿಗೆ ಭರವಸೆ ತುಂಬುವ ಕೆಲಸ ಮಾಡುವುದು, ನೆರೆಪರಿಹಾರಕ್ಕೆ ಸೂಕ್ತ ಪರಿಹಾರ ನೀಡುವುದು ಸೇರಿದಂತೆ ಯಾವ ವಿಷಯದಲ್ಲೂ ಬಿಜೆಪಿ ಹೈಕಮಾಂಡ್ ನಿರೀಕ್ಷಿತ ಸಹಕಾರ ನೀಡುತ್ತಿಲ್ಲ ಎಂಬುದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಅಸಮಾಧಾನಕ್ಕೆ ಕಾರಣ ಎಂದು ಹೇಳಲಾಗುತ್ತಿದೆ.

ಬಿಎಸ್​​ವೈ
author img

By

Published : Aug 23, 2019, 9:23 PM IST

ಬೆಂಗಳೂರು: ರಾಜ್ಯ ಸಚಿವ ಸಂಪುಟ ವಿಸ್ತರಣೆಯ ನಂತರ ಶುರುವಾಗಿರುವ ತಲೆನೋವನ್ನು ಶಮನ ಮಾಡಲು ಪಕ್ಷದ ವರಿಷ್ಠರು ತಮಗೆ ನಿರೀಕ್ಷಿತ ಮದ್ದು ನೀಡುತ್ತಿಲ್ಲ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅಸಮಾಧಾನಗೊಂಡಿದ್ದಾರೆ ಎನ್ನಲಾಗುತ್ತಿದೆ.

ಸಚಿವ ಸಂಪುಟ ವಿಸ್ತರಣೆಯ ನಂತರ ಶುರುವಾಗಿರುವ ಖಾತೆ ಕ್ಯಾತೆಯನ್ನು ಪರಿಹರಿಸುವುದು, ಅನರ್ಹಗೊಂಡಿರುವ ಶಾಸಕರಿಗೆ ಭರವಸೆ ತುಂಬುವ ಕೆಲಸ ಮಾಡುವುದು, ನೆರೆಪರಿಹಾರಕ್ಕೆ ಸೂಕ್ತ ಪರಿಹಾರ ನೀಡುವುದು ಸೇರಿದಂತೆ ಯಾವ ವಿಷಯದಲ್ಲೂ ಬಿಜೆಪಿ ಹೈಕಮಾಂಡ್ ನಿರೀಕ್ಷಿತ ಸಹಕಾರ ನೀಡುತ್ತಿಲ್ಲ ಎಂಬುದು ಯಡಿಯೂರಪ್ಪನವರ ಅಸಮಾಧಾನಕ್ಕೆ ಕಾರಣವಾಗಿದೆ ಎಂದು ಹೇಳಲಾಗ್ತಿದೆ.

ಸಚಿವ ಸಂಪುಟ ವಿಸ್ತರಣೆಯೇನೋ ಹೈಕಮಾಂಡ್ ಬಯಕೆಯಂತೆ ನಡೆದಿದೆ. ಆದರೆ ಖಾತೆ ಹಂಚಿಕೆ ವಿಷಯದಲ್ಲಿ ಶುರುವಾಗಿರುವ ತಲೆನೋವಿಗೆ ತಕ್ಕ ಮದ್ದು ನೀಡಲು ಹೈಕಮಾಂಡ್ ಸಿದ್ಧವಾಗಿಲ್ಲ. ಇದರ ಪರಿಣಾಮವಾಗಿ ಸಂಪುಟಕ್ಕೆ ಸೇರ್ಪಡೆಯಾಗಿರುವ ಕೆಲ ನಾಯಕರು ತಮಗೆ ಲೋಕೋಪಯೋಗಿ ಖಾತೆಯೇ ಬೇಕು, ಇಂಧನ ಖಾತೆಯೇ ಬೇಕು, ಕಂದಾಯ ಖಾತೆಯೇ ಬೇಕು ಎಂದು ಪಟ್ಟು ಹಿಡಿದಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ.

ಇದೇ ಕಾಲಕ್ಕೆ ಸಚಿವ ಸಂಪುಟದಲ್ಲಿ ನಂಬರ್ ಟೂ ಅನ್ನಿಸಿಕೊಂಡ ಗೃಹ ಖಾತೆಯನ್ನು ಪಡೆಯಲು ಪ್ರಬಲ ಸಚಿವರಾರೂ ಒಪ್ಪುತ್ತಿಲ್ಲ. ಯಾವ ಕಾರಣಕ್ಕೂ ತಮಗೆ ಆ ಖಾತೆ ಬೇಡವೆಂದು ನಿರಾಕರಿಸುತ್ತಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.

ಈ ಮಧ್ಯೆ ಅನರ್ಹ ಶಾಸಕರ ವಿಷಯದಲ್ಲಿ ಬಿಜೆಪಿ ಹೈಕಮಾಂಡ್ ಸಹಾನುಭೂತಿಯಿಂದ ವರ್ತಿಸುತ್ತಲೇ ಇಲ್ಲ. ಇಂದು ಸ್ಪೀಕರ್ ಆದೇಶಕ್ಕೆ ಸುಪ್ರೀಂ ಕೋರ್ಟ್ ತಡೆ ನೀಡುತ್ತದೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದ ಹೈಕಮಾಂಡ್ ವರಿಷ್ಠರು, ಇದು ಸಾಧ್ಯವಾದ ಕೂಡಲೇ ಆಗಸ್ಟ್ 26 ರಂದು ಸಚಿವ ಸಂಪುಟವನ್ನು ಮತ್ತೊಮ್ಮೆ ವಿಸ್ತರಣೆ ಮಾಡಬಹುದೆಂದು ಹೇಳಿದ್ದರು. ಆದರೆ ಅದರ ಈ ಭರವಸೆ ಸೋಮವಾರಕ್ಕೆ ಮುಂದೂಡಲ್ಪಟ್ಟಿದೆ.

ಸರ್ಕಾರ ರಚಿಸುವಾಗ ನಮಗೆ ಇನ್ನಿಲ್ಲದಷ್ಟು ಭರವಸೆ ನೀಡಿದ್ದೀರಿ. ಆದರೆ ಈಗ ಇದ್ದಕ್ಕಿದ್ದಂತೆ ನಮ್ಮ ಕೈ ಬಿಟ್ಟಿದ್ದೀರಿ ಎಂಬ ಭಾವನೆ ನಮಗೆ ಬರುತ್ತಿದೆ. ನಿಮ್ಮನ್ನು ನಂಬಿ ರಾಜಕೀಯ ಭವಿಷ್ಯವನ್ನೇ ಪಣಕ್ಕಿಟ್ಟು ನಾವು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದೆವು. ಆದರೆ ನೀವು ಮಾತ್ರ ಮೊದಲ ಕಂತಿನ ಸಂಪುಟ ವಿಸ್ತರಣೆ ಮಾಡಿಕೊಂಡು ಖಾತೆ ಹಂಚಿಕೆಯ ಭರಾಟೆಯಲ್ಲಿ ಸಮಯ ಕಳೆಯುತ್ತಿದ್ದೀರಿ ಎಂದು ಅನರ್ಹ ಶಾಸಕರು ಯಡಿಯೂರಪ್ಪ ಅವರ ಬಳಿ ಕಳವಳ ತೋಡಿಕೊಂಡಿದ್ದಾರೆ ಹಾಗೂ ಪ್ರಮುಖ ಖಾತೆಗಳನ್ನು ನಿಮ್ಮ ಪಕ್ಷದ ಸಚಿವರೇ ಹಂಚಿಕೊಳ್ಳುವುದಾದರೆ ನಾವು ಸಂಪುಟಕ್ಕೆ ಬಂದ ನಂತರ ಸಕ್ಕರೆ, ಬೆಲ್ಲ, ಜೋನಿ ಬೆಲ್ಲದಂತಹ ಖಾತೆಗಳನ್ನು ಪಡೆದು ಸುಮ್ಮನಿರಬೇಕೇ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ ಎಂದು ಹೇಳಲಾಗ್ತಿದೆ.

ಈ ವಿಷಯದಲ್ಲಿ ಬಿಜೆಪಿ ಹೈಕಮಾಂಡ್ ನಿಶ್ಚಿತವಾಗಿ ಏನನ್ನೂ ಹೇಳುತ್ತಿಲ್ಲ. ಪಕ್ಷದ ರಾಷ್ಟ್ರೀಯ ಅಧ್ಯಕ್ಷರನ್ನು ನೋಡಲು ಬಂದರೆ ಮೊದಲು ಜೆ.ಪಿ.ನಡ್ಡಾ ಅವರನ್ನು ನೋಡಿ ಎಂದರು. ಪಣಜಿಯಿಂದ ನಾನು ಬರುವುದು ತಡವಾಗುತ್ತದೆ ಎಂದರು. ನಂತರ ಮಾತುಕತೆಯ ಸಂದರ್ಭದಲ್ಲಿ ಅವರಿಂದ ಬಂದ ಪ್ರತಿಕ್ರಿಯೆ ವೈಯಕ್ತಿಕವಾಗಿ ನನಗೇ ಸಮಾಧಾನ ತಂದಿಲ್ಲ ಎಂದು ಯಡಿಯೂರಪ್ಪ ತಮ್ಮ ಆಪ್ತರ ಬಳಿ ಹೇಳಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

ಈ ಮಧ್ಯೆ ಉತ್ತರ ಕರ್ನಾಟಕ ಭಾಗದಲ್ಲಿ ಪ್ರಚಂಡ ಜಲಪ್ರಳಯವಾಗಿ ಅಂದಾಜು 50 ಸಾವಿರ ಕೋಟಿ ರೂ.ಗಳಷ್ಟು ನಷ್ಟವಾಗಿದೆ. ಆದರೆ ಪರಿಹಾರದ ರೂಪದಲ್ಲಿ ಕೇಂದ್ರ ಸರ್ಕಾರ ಏನನ್ನೂ ನೀಡಿಲ್ಲ. ಕೊಟ್ಟಿರುವ 1029 ಕೋಟಿ ರೂ. ಹಣ ಕೂಡಾ ಹಿಂದಿದ್ದ ಸಮ್ಮಿಶ್ರ ಸರ್ಕಾರದ ಕೋರಿಕೆಯ ಫಲ ಮಾತ್ರ. ರಾಜ್ಯದಲ್ಲಿ ಸಂಭವಿಸಿರುವ ಬರಗಾಲದ ಪರಿಹಾರಕ್ಕಾಗಿ ಅಂದಿನ ಸರ್ಕಾರ ಸಲ್ಲಿಸಿದ್ದ ಕೋರಿಕೆಯನ್ನು ಪರಿಗಣಿಸಿದ್ದ ಕೇಂದ್ರ ಸರ್ಕಾರ ಈಗ ಹಣ ಬಿಡುಗಡೆ ಮಾಡಿದ್ದರೂ ಅದು ಬರ ಪರಿಹಾರ ಕಾಮಗಾರಿ ಬಾಬ್ತಿಗೇ ಸಂದಾಯವಾಗಬೇಕು. ಹೀಗಿರುವಾಗ ನೆರೆ ಸಂತ್ರಸ್ತರ ಪರಿಹಾರ ಕಾಮಗಾರಿಗೆ ಎಲ್ಲಿಂದ ಹಣ ತರಬೇಕು? ಎಲ್ಲಕ್ಕಿಂತ ಮುಖ್ಯವಾಗಿ ಆ ಭಾಗದ ಜನ ಅಪಾರ ಬೆಂಬಲ ನೀಡಿ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಅಭೂತಪೂರ್ವ ಗೆಲುವು ಸಿಗಲು ಕಾರಣರಾದರು. ಆದರೆ ರಾಜ್ಯದಲ್ಲೀಗ ಬಿಜೆಪಿ ಸರ್ಕಾರವಿದ್ದರೂ ನೆರೆ ಸಂತ್ರಸ್ತರಿಗಾಗಿ ನಾವೇನೂ ಮಾಡಲು ಸಾಧ್ಯವಾಗುತ್ತಿಲ್ಲ. ಇದರ ಪರಿಣಾಮವಾಗಿ ನಾವು ಜನರ ಮುಂದೆ ತಲೆ ತಗ್ಗಿಸುವ ಪರಿಸ್ಥಿತಿ ಬಂದಿದೆ. ಈ ಹಿನ್ನೆಲೆಯಲ್ಲಿ ಬಿಜೆಪಿ ಹೈಕಮಾಂಡ್ ತ್ವರಿತವಾಗಿ ಸಮಸ್ಯೆಗಳನ್ನು ಪರಿಹರಿಸದೆ ಹೋದರೆ ನಾವು ನೆಮ್ಮದಿಯಾಗಿ ಸರ್ಕಾರ ನಡೆಸುವುದು ಕಷ್ಟವೆಂದು ಯಡಿಯೂರಪ್ಪ ಅವರು ತಮ್ಮ ಆಪ್ತರ ಬಳಿ ಅಸಮಾಧಾನ ತೋಡಿಕೊಂಡಿದ್ದಾರೆ ಎಂದು ಬಲ್ಲ ಮೂಲಗಳು ತಿಳಿಸಿವೆ.

Intro:ಬೆಂಗಳೂರು : ರಾಜ್ಯ ಸಚಿವ ಸಂಪುಟ ವಿಸ್ತರಣೆಯ ನಂತರ ಶುರುವಾಗಿರುವ ತಲೆನೋವನ್ನು ಶಮನ ಮಾಡಲು ಪಕ್ಷದ ವರಿಷ್ಠರು ತಮಗೆ ನಿರೀಕ್ಷಿತ ಮದ್ದು ನೀಡುತ್ತಿಲ್ಲ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅಸಮಾಧಾನಗೊಂಡಿದ್ದಾರೆ ಎನ್ನಲಾಗುತ್ತಿದೆ. Body:ಸಚಿವ ಸಂಪುಟ ವಿಸ್ತರಣೆಯ ನಂತರ ಶುರುವಾಗಿರುವ ಖಾತೆ ಕ್ಯಾತೆಯನ್ನು ಪರಿಹರಿಸುವುದು, ಅನರ್ಹಗೊಂಡಿರುವ ಶಾಸಕರಿಗೆ ಭರವಸೆ ತುಂಬುವ ಕೆಲಸ ಮಾಡುವುದು, ನೆರೆಪರಿಹಾರಕ್ಕೆ ಸೂಕ್ತ ಪರಿಹಾರ ನೀಡವುದು ಸೇರಿದಂತೆ ಯಾವ ವಿಷಯದಲ್ಲೂ ಬಿಜೆಪಿ ಹೈಕಮಾಂಡ್ ನಿರೀಕ್ಷಿತ ಸಹಕಾರ ನೀಡುತ್ತಿಲ್ಲ ಎಂಬುದು ಯಡಿಯೂರಪ್ಪನವರ ಅಸಮಾಧಾನಕ್ಕೆ ಕಾರಣ ಎನ್ನಲಾಗಿದೆ.
ಮಂತ್ರಿಮಂಡಲ ವಿಸ್ತರಣೆಯೇನೂ ಹೈಕಮಾಂಡ್ ಬಯಕೆಯಂತೆ ನಡೆದಿದೆ. ಆದರೆ ಖಾತೆ ಹಂಚಿಕೆ ವಿಷಯದಲ್ಲಿ ಶುರುವಾಗಿರುವ ತಲೆನೋವಿಗೆ ತಕ್ಕ ಮದ್ದು ನೀಡಲು ಹೈಕಮಾಂಡ್ ಸಿದ್ದವಾಗಿಲ್ಲ. ಪರಿಣಾಮವಾಗಿ ಸಂಪುಟಕ್ಕೆ ಸೇರ್ಪಡೆಯಾಗಿರುವ ಕೆಲ ನಾಯಕರು ತಮಗೆ ಲೋಕೋಪಯೋಗಿ ಖಾತೆಯೇ ಬೇಕು, ಇಂಧನ ಖಾತೆಯೇ ಬೇಕು, ಕಂದಾಯ ಖಾತೆಯೇ ಬೇಕು ಎಂದು ಪಟ್ಟು ಹಿಡಿದಿದ್ದಾರೆ ಎಂದು ಉನ್ನತಮೂಲಗಳು ತಿಳಿಸಿವೆ.
ಇದೇ ಕಾಲಕ್ಕೆ ಸಚಿವ ಸಂಪುಟದಲ್ಲಿ ನಂಬರ್ ಟೂ ಅನ್ನಿಸಿಕೊಂಡ ಗೃಹ ಖಾತೆಯನ್ನು ಪಡೆಯಲು ಪ್ರಬಲ ಮಂತ್ರಿಗಳ್ಯಾರೂ ಒಪ್ಪುತ್ತಿಲ್ಲ. ಯಾವ ಕಾರಣಕ್ಕೂ ತಮಗೆ ಆ ಖಾತೆ ಬೇಡ ಎಂದು ನಕಾರ ಮಾಡುತ್ತಿದ್ದಾರೆ.
ಈ ಮಧ್ಯೆ ಅನರ್ಹ ಶಾಸಕರ ವಿಷಯದಲ್ಲಿ ಬಿಜೆಪಿ ಹೈಕಮಾಂಡ್ ಸಹಾನುಭೂತಿಯಿಂದ ವರ್ತಿಸುತ್ತಲೇ ಇಲ್ಲ. ಇಂದು ಸ್ಪೀಕರ್ ಆದೇಶಕ್ಕೆ ಸುಪ್ರೀಂಕೋರ್ಟ್ ತಡೆ ನೀಡುತ್ತದೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದ ಹೈಕಮಾಂಡ್ ವರಿಷ್ಠರು, ಇದು ಸಾಧ್ಯವಾದ ಕೂಡಲೇ ಆಗಸ್ಟ್ 26 ರಂದು ಮಂತ್ರಿ ಮಂಡಲವನ್ನು ಮತ್ತೊಮ್ಮೆ ವಿಸ್ತರಣೆ ಮಾಡಬಹುದೆಂದು ಹೇಳಿದ್ದರು. ಆದರೆ ಅದರ ಈ ಭರವಸೆ ಸೋಮವಾರಕ್ಕೆ ಮುಂದೂಡಲ್ಪಟ್ಟಿದೆ. ಸರ್ಕಾರ ರಚಿಸುವಾಗ ನಮಗೆ ಇನ್ನಿಲ್ಲದಷ್ಟು ಭರವಸೆ ನೀಡಿದಿರಿ. ಆದರೆ ಈಗ ಇದ್ದಕ್ಕಿದ್ದಂತೆ ನಮ್ಮ ಕೈ ಬಿಟ್ಟಿರಿ ಎಂಬ ಭಾವನೆ ನಮಗೆ ಬರುತ್ತಿದೆ. ನಿಮ್ಮನ್ನು ನಂಬಿ ರಾಜಕೀಯ ಭವಿಷ್ಯವನ್ನೇ ಪಣಕ್ಕಿಟ್ಟು ನಾವು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದೆವು. ಆದರೆ ನೀವು ಮಾತ್ರ ಮೊದಲ ಕಂತಿನ ಸಂಪುಟ ವಿಸ್ತರಣೆ ಮಾಡಿಕೊಂಡು ಖಾತೆ ಹಂಚಿಕೆಯ ಭರಾಟೆಯಲ್ಲಿ ಸಮಯ ಕಳೆಯುತ್ತಿದ್ದೀರಿ ಎಂದು ಅನರ್ಹ ಶಾಸಕರು ಯಡಿಯೂರಪ್ಪ ಅವರ ಬಳಿ ಕಳವಳ ತೋಡಿಕೊಂಡಿದ್ದಾರೆ ಎನ್ನಲಾಗಿದೆ.
ಈ ಮಧ್ಯೆ ಪ್ರಮುಖ ಖಾತೆಗಳನ್ನು ನಿಮ್ಮ ಪಕ್ಷದ ಸಚಿವರೇ ಹಂಚಿಕೊಳ್ಳುವುದಾದರೆ ನಾವು ಸಂಪುಟಕ್ಕೆ ಬಂದ ನಂತರ ಸಕ್ಕರೆ, ಬೆಲ್ಲ, ಜೋನಿ ಬೆಲ್ಲದಂತಹ ಖಾತೆಗಳನ್ನು ಪಡೆದು ಸುಮ್ಮನಿರಬೇಕೇ? ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆದರೆ ಈ ವಿಷಯದಲ್ಲಿ ಬಿಜೆಪಿ ಹೈಕಮಾಂಡ್ ನಿಶ್ಚಿತವಾಗಿ ಏನನ್ನೂ ಹೇಳುತ್ತಿಲ್ಲ. ಪಕ್ಷದ ರಾಷ್ಟ್ರೀಯ ಅಧ್ಯಕ್ಷರನ್ನು ನೋಡಲು ಬಂದರೆ ಮೊದಲು ಜೆ.ಪಿ.ನಡ್ಡಾ ಅವರನ್ನು ನೋಡಿ ಎಂದರು. ಪಣಜಿಯಿಂದ ನಾನು ಬರುವುದು ತಡವಾಗುತ್ತದೆ ಎಂದರು. ನಂತರ ಮಾತುಕತೆಯ ಸಂದರ್ಭದಲ್ಲಿ ಅವರಿಂದ ಬಂದ ಪ್ರತಿಕ್ರಿಯೆ ವೈಯಕ್ತಿಕವಾಗಿ ನನಗೇ ಸಮಾಧಾನ ತಂದಿಲ್ಲ ಎಂದು ಯಡಿಯೂರಪ್ಪ ಆಪ್ತರ ಬಳಿ ಹೇಳಿಕೊಂಡಿದ್ದಾರೆ ಎಂದು ಗೊತ್ತಾಗಿದೆ.
ಈ ಮಧ್ಯೆ ಉತ್ತರ ಕರ್ನಾಟಕ ಭಾಗದಲ್ಲಿ ಪ್ರಚಂಡ ಜಲಪ್ರಳಯವಾಗಿ ಅಂದಾಜು ಐವತ್ತು ಸಾವಿರ ಕೋಟಿ ರೂ.ಗಳಷ್ಟು ನಷ್ಟವಾಗಿದೆ. ಆದರೆ ಪರಿಹಾರದ ರೂಪದಲ್ಲಿ ಕೇಂದ್ರ ಸರ್ಕಾರ ಏನನ್ನೂ ನೀಡಿಲ್ಲ. ಕೊಟ್ಟಿರುವ 1029 ಕೋಟಿ ರೂ ಹಣ ಕೂಡಾ ಹಿಂದಿದ್ದ ಸಮ್ಮಿಶ್ರ ಸರ್ಕಾರದ ಕೋರಿಕೆಯ ಫಲ ಮಾತ್ರ. ರಾಜ್ಯದಲ್ಲಿ ಸಂಭವಿಸಿರುವ ಬರಗಾಲದ ಪರಿಹಾರಕ್ಕಾಗಿ ಅಂದಿನ ಸರ್ಕಾರ ಸಲ್ಲಿಸಿದ್ದ ಕೋರಿಕೆಯನ್ನು ಪರಿಗಣಿಸಿದ ಕೇಂದ್ರ ಸರ್ಕಾರ ಈಗ ಹಣ ಬಿಡುಗಡೆ ಮಾಡಿದ್ದರೂ ಅದು ಬರ ಪರಿಹಾರ ಕಾಮಗಾರಿ ಬಾಬ್ತಿಗೇ ಸಂದಾಯವಾಗಬೇಕು. ಹೀಗಿರುವಾಗ ನೆರೆ ಸಂತ್ರಸ್ತರ ಪರಿಹಾರ ಕಾಮಗಾರಿಗೆ ಎಲ್ಲಿಂದ ಹಣ ತರಬೇಕು? ಎಲ್ಲಕ್ಕಿಂತ ಮುಖ್ಯವಾಗಿ ಆ ಭಾಗದ ಜನ ಅಪಾರ ಬೆಂಬಲ ನೀಡಿ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಅಭೂತ ಪೂರ್ವ ಗೆಲುವು ಲಭಿಸಲು ಕಾರಣರಾದರು. ಆದರೆ ರಾಜ್ಯದಲ್ಲೀಗ ಬಿಜೆಪಿ ಸರ್ಕಾರವಿದ್ದರೂ ನೆರೆ ಸಂತ್ರಸ್ತರಿಗಾಗಿ ನಾವೇನೂ ಮಾಡಲು ಸಾಧ್ಯವಾಗುತ್ತಿಲ್ಲ. ಇದರ ಪರಿಣಾಮವಾಗಿ ನಾವು ಜನರ ಮುಂದೆ ತಲೆ ತಗ್ಗಿಸುವ ಪರಿಸ್ಥಿತಿ ಬಂದಿದೆ.
ಈ ಹಿನ್ನೆಲೆಯಲ್ಲಿ ಬಿಜೆಪಿ ಹೈಕಮಾಂಡ್ ತ್ವರಿತವಾಗಿ ಸಮಸ್ಯೆಗಳನ್ನು ಪರಿಹರಿಸದೆ ಹೋದರೆ ನಾವು ನೆಮ್ಮದಿಯಾಗಿ ಸರ್ಕಾರ ನಡೆಸುವುದು ಕಷ್ಟ ಎಂದು ಯಡಿಯೂರಪ್ಪ ಅವರು ತಮ್ಮ ಆಪ್ತರ ಬಳಿ ಅಸಮಾಧಾನ ತೋಡಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.