ETV Bharat / city

ನಿವೃತ್ತಿ ಅಂಚಿನಲ್ಲಿ ಹಿರಿಯ ಐಪಿಎಸ್​ ಅಧಿಕಾರಿ: 'ಈಟಿವಿ ಭಾರತ'ದೊಂದಿಗೆ ವೃತ್ತಿ ಅನುಭವ ಹಂಚಿಕೊಂಡ ಟಿ‌.ಸುನೀಲ್ ಕುಮಾರ್​ - ನಿವೃತ್ತಿ ಅಂಚಿನಲ್ಲಿ ಹಿರಿಯ ಐಪಿಎಸ್​ ಅಧಿಕಾರಿ

ಮೂಲತಃ ಆಂಧ್ರ ಪ್ರದೇಶದವರಾದ ಟಿ ಸುನೀಲ್ ಕುಮಾರ್, ಪೊಲೀಸ್ ಇಲಾಖೆಯ ಮೊದಲ ಸೇವೆ ಮಾಡುವಾಗಲೇ ಬಾಬ್ರಿ ಮಸೀದಿ ಸಂಬಂಧ ಗಲಭೆ ಸೃಷ್ಟಿಯಾಗಿತ್ತು. ಸಾವು-ನೋವು, ಗೋಲಿಬಾರ್ ಕಂಡು ಪೊಲೀಸ್ ಇಲಾಖೆ ಕಷ್ಟ ಇದೆ ಅನ್ನೋ ಭಾವನೆ ಬಂದಿತ್ತು ಎನ್ನುವ ಮೂಲಕ ತಮ್ಮ ಸೇವಾ ಅನುಭವವನ್ನ ಹಂಚಿಕೊಂಡರು.

ips-officer-sunil-kumar-talk-about-police-job-experience
ಈಟಿವಿ ಭಾರತದೊಂದಿಗೆ ಹಿರಿಯ ಐಪಿಎಸ್ ಅಧಿಕಾರಿ ಟಿ‌.ಸುನೀಲ್ ಕುಮಾರ್​ ಚಿಟ್​ಚಾಟ್​..
author img

By

Published : Oct 16, 2020, 7:32 PM IST

ಬೆಂಗಳೂರು: ಪೊಲೀಸ್ ಇಲಾಖೆಯಲ್ಲಿ ತಮ್ಮದೇ ಛಾಪು ಮೂಡಿಸಿರುವ ಹಿರಿಯ ಐಪಿಎಸ್​ ಅಧಿಕಾರಿ ಸದ್ಯ ಇದೇ ತಿಂಗಳಲ್ಲಿ ನಿವೃತ್ತಿ ಹೊಂದಲಿದ್ದಾರೆ. ಈ ಸಂದರ್ಭದಲ್ಲಿ ಅವರು 'ಈಟಿವಿ ಭಾರತ'ದೊಂದಿಗೆ ತಮ್ಮ ವೃತ್ತಿ ಜೀವನದಲ್ಲಿನ ಕೆಲವೊಂದು ಅನುಭವಗಳನ್ನು ಹಂಚಿಕೊಂಡಿದ್ದಾರೆ.

'ಈಟಿವಿ ಭಾರತ'ದೊಂದಿಗೆ ವೃತ್ತಿ ಅನುಭವ ಹಂಚಿಕೊಂಡ ಹಿರಿಯ ಐಪಿಎಸ್ ಅಧಿಕಾರಿ ಟಿ‌.ಸುನೀಲ್ ಕುಮಾರ್​

ಬೆಂಗಳೂರು ಸಿಟಿ ‌ಕಮಿಷನರ್ ಆಗಿದ್ದ ಟಿ.ಸುನೀಲ್ ಕುಮಾರ್‌ ಆ ಸಂದರ್ಭದಲ್ಲಿ ನಡೆದ ಕೆಲ ಘಟನಾವಳಿಗಳನ್ನ ನೆನಪು ಮಾಡಿಕೊಂಡಿದ್ದಾರೆ. ಹಿರಿಯ ನಟ ಅಂಬರೀಶ್ ಅವರ ಸಾವಿನ ವಿಚಾರ ಪ್ರಸ್ತಾಪ ಮಾಡಿ ಯಾವುದೇ ಅಹಿತಕರ ಘಟನೆಗಳು ನಡೆಯದ ಹಾಗೆ ನೋಡಿಕೊಂಡಿರುವ ಹೆಮ್ಮೆ ನಮ್ಮ ಬೆಂಗಳೂರು ಪೊಲೀಸರಿಗೆ ಇದೆ ಎಂದಿದ್ದಾರೆ.

ಮೂಲತಃ ಆಂಧ್ರ ಪ್ರದೇಶದವರಾದ ಸುನೀಲ್ ಕುಮಾರ್, ಪೊಲೀಸ್ ಇಲಾಖೆಯ ಮೊದಲ ಸೇವೆ ಮಾಡುವಾಗಲೇ ಬಾಬ್ರಿ ಮಸೀದಿ ಸಂಬಂಧ ಗಲಭೆ ಸೃಷ್ಟಿಯಾಗಿತ್ತು. ಸಾವು-ನೋವು, ಗೋಲಿಬಾರ್ ಕಂಡು ಪೊಲೀಸ್ ಇಲಾಖೆ ಕಷ್ಟ ಇದೆ ಅನ್ನೋ ಭಾವನೆ ಬಂದಿತ್ತು ಎಂಬ ಅನುಭವವನ್ನ ಹಂಚಿಕೊಂಡರು. ಅಲ್ಲದೇ ಇನ್ನಷ್ಟು ಸೇವೆ ಮಾಡುವ ಮನಸ್ಸಿದೆ. ಆದರೆ, ತನಗೆ ವಯಸ್ಸಾಯ್ತು ಮುಂದೆ ಅವಕಾಶ ಸಿಕ್ಕರೆ ಜನರ ಸೇವೆ ಮಾಡಲು ಮುಂದಾಗುತ್ತೇನೆ ಎಂದಿದ್ದಾರೆ.

ಹಾಗೆ ಪೊಲೀಸ್ ಇಲಾಖೆಯ ಬಗ್ಗೆ ಮಾತನಾಡಿ ಸಾರ್ವಜನಿಕರಿಗೆ ಪೊಲೀಸರೆಂದರೆ ಭಯ ಇದೆ, ಆ ದೃಷ್ಟಿ ಬದಲಾಗಬೇಕು. ಪೊಲೀಸರನ್ನ ಕಂಡ ತಕ್ಷಣ ಜನ ಹೆದರಿಕೊಂಡು ಓಡಿ ಹೋಗ್ತಾರೆ. ಪೊಲೀಸ್ ಠಾಣೆಗೆ ಬರಲು ಹಿಂದೇಟು ಹಾಕ್ತಾರೆ. ಈ ‌ಮನೋಭಾವನೆ ಬದಲಾಗಬೇಕು ಪ್ರತಿಯೊಬ್ಬ ಖಾಕಿ ಸಾರ್ವಜನಿಕರ ಸಮಸ್ಯೆ ಬಗೆಹರಿಸುವಾಗ ಬಹಳ ತಾಳ್ಮೆಯಿಂದ ಇರಬೇಕು ಎಂದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.