ETV Bharat / city

ಕೆಎಸ್​ಆರ್​​ಪಿ ಸಿಬ್ಬಂದಿಗೆ ಧೈರ್ಯ ತುಂಬಲು ಅಖಾಡಕ್ಕಿಳಿದ ಅಲೋಕ್​ ಕುಮಾರ್​ - covid 19

ರಾಜ್ಯದ ಹಲವೆಡೆ ಓಡಾಡಿದ ಕೆಎಸ್​ಆರ್​ಪಿ ಸಿಬ್ಬಂದಿಯಲ್ಲಿ ಹೆಚ್ಚಾಗಿ ಕೊರೊನಾ ಸೋಂಕು ಕಾಣಿಸಿಕೊಳ್ಳುತ್ತಿದ್ದು, ಅವರಿಗೆ ಧೈರ್ಯ ತುಂಬಲು ಸ್ವತಃ ಎಡಿಜಿಪಿ ಅಲೋಕ್​ ಕುಮಾರ್ ಮುಂದಾಗಿದ್ದಾರೆ.

alok kuamr
ಅಲೋಕ್​ ಕುಮಾರ್​
author img

By

Published : Jun 24, 2020, 4:30 PM IST

ಬೆಂಗಳೂರು: ನಗರದ ಸೀಲ್​ಡೌನ್​, ಕಂಟೇನ್​ಮೆಂಟ್​ ಪ್ರದೇಶಗಳಲ್ಲಿ ಸುತ್ತಾಡಿದ ಹಾಗೂ ರಾಜ್ಯದ ಹಲವೆಡೆ ಓಡಾಡಿದ ಕೆಎಸ್​ಆರ್​ಪಿ ಸಿಬ್ಬಂದಿಯಲ್ಲಿ ಹೆಚ್ಚಾಗಿ ಕೊರೊನಾ ಸೋಂಕು ಕಾಣಿಸಿಕೊಳ್ಳುತ್ತಿದೆ. ಇದರಿಂದ ಪೊಲೀಸರಿಗೆ ಧೈರ್ಯ ತುಂಬಲು ಹಿರಿಯ ಐಪಿಎಸ್​ ಅಧಿಕಾರಿ, ಕೆಎಸ್​ಆರ್​ಪಿಯ ಎಡಿಜಿಪಿ ಅಲೋಕ್​ ಕುಮಾರ್ ಮುಂದಾಗಿದ್ದಾರೆ.

alok kuamr
ಅಲೋಕ್​ ಕುಮಾರ್​

ಮೈಸೂರಿನಲ್ಲಿ 15, ಬೆಂಗಳೂರಿನಲ್ಲಿ 11, ಶಿವಮೊಗ್ಗದಲ್ಲಿ 11, ಹಾಸನದಲ್ಲಿ 11 ಮಂದಿ ಕೆಎಸ್​ಆರ್​​ಪಿ ಸಿಬ್ಬಂದಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಇದರಿಂದಾಗಿ ಕೊರೊನಾ ವಾರಿಯರ್ಸ್​ಗೆ ಧೈರ್ಯ ತುಂಬಲು ಸ್ವತಃ ಅಲೋಕ್​ ಕುಮಾರ್ ಸಿಬ್ಬಂದಿ ಬಳಿ ತೆರಳಿದ್ದಾರೆ.

ಸದ್ಯಕ್ಕೆ ಕೊರೊನಾ ಸೋಂಕು ಇರುವ ಸಿಬ್ಬಂದಿಗೆ ಚಿಕಿತ್ಸೆ ನೀಡಲಾಗಿದ್ದು, ಅವರ ಸಂಬಂಧಿಗಳನ್ನು ಕ್ವಾರಂಟೈನ್ ಮಾಡಲಾಗಿದೆ. ಕೊರೊನಾ ಸೋಂಕು ದೃಢವಾದರೆ ಧೈರ್ಯವಾಗಿ ಎದುರಿಸಿ, ಮಾನಸಿಕವಾಗಿ ಕುಗ್ಗಬೇಡಿ. ಅಂತೆಯೇ ರೋಗ ಲಕ್ಷಣಗಳನ್ನು ಕಡೆಗಣಿಸಬೇಡಿ. ಬಿಡುವಿನ ಸಮಯದಲ್ಲಿ ವಾಕಿಂಗ್​, ಯೋಗ ಮಾಡಿ ಎಂದು ಸಿಬ್ಬಂದಿಗೆ ಅಲೋಕ್​ ಕುಮಾರ್ ಸಲಹೆ ನೀಡಿದ್ದಾರೆ.

ಹಾಗೆಯೇ ಕೊರೊನಾ ಸೋಂಕು ದೃಢಪಟ್ಟ ವಿಚಾರ ತಿಳಿದು ಆತ್ಮಹತ್ಯೆಗೆ ಶರಣಾದ ಕೆಎಸ್​ಆರ್​ಪಿ ಹೆಡ್​ಕಾನ್ಸ್​ಟೆಬಲ್​ ಮನೆಗೆ ತೆರಳಿದ ಅಲೋಕ್​ ಕುಮಾರ್ ಕುಟುಂಬಸ್ಥರಿಗೆ ಧೈರ್ಯ ತುಂಬಿದ್ದು, ಈ ಬಗ್ಗೆ ಫೇಸ್​ಬುಕ್​ನಲ್ಲಿ ಬರೆದುಕೊಂಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.