ETV Bharat / city

ನಾಳೆಯಿಂದ ದೇಶಿ ವಿಮಾನ ಹಾರಾಟ: ನಿಷೇಧಿತ ಚಟುವಟಿಕೆ ಪಟ್ಟಿಯಿಂದ ಕೈಬಿಟ್ಟ ಸರ್ಕಾರ

ನಾಳೆಯಿಂದ ದೇಶಿಯ ಆಂತರಿಕ ವಿಮಾನಯಾನ ಸಂಚಾರ ಆರಂಭವಾಲಿದೆ. ಈ ಹಿನ್ನೆಲೆಯಲ್ಲಿ ವಿಮಾನ ಯಾನವನ್ನು ನಿಷೇಧಿತ ಚಟುವಟಿಕೆ ಪಟ್ಟಿಯಿಂದ ತೆಗೆದು ಮುಖ್ಯ ಕಾರ್ಯದರ್ಶಿ ವಿಜಯ ಭಾಸ್ಕರ್ ಆದೇಶ ಹೊರಡಿಸಿದ್ದಾರೆ.

ಸರ್ಕಾರ
ಸರ್ಕಾರ
author img

By

Published : May 24, 2020, 3:31 PM IST

ಬೆಂಗಳೂರು: ದೇಶಿಯವಾಗಿ ಆಂತರಿಕ ವಿಮಾನ ಯಾನವನ್ನು ನಿಷೇಧಿಸಲ್ಪಟ್ಟ ಚಟುವಟಿಕೆ ಪಟ್ಟಿಯಿಂದ ರಾಜ್ಯ ಸರ್ಕಾರ ಕೈಬಿಟ್ಟು ಹೊಸ ಆದೇಶ ಹೊರಡಿಸಿದೆ.

ಆದೇಶ ಪ್ರತಿ
ಆದೇಶ ಪ್ರತಿ

ಈ ಸಂಬಂಧ ಮುಖ್ಯ ಕಾರ್ಯದರ್ಶಿ ವಿಜಯ ಭಾಸ್ಕರ್ ಆದೇಶ ಹೊರಡಿಸಿದ್ದಾರೆ. ಕೇಂದ್ರ ಸರ್ಕಾರ ನಾಳೆಯಿಂದ ಆಂತರಿಕ ವಿಮಾನ ಸಂಚಾರಕ್ಕೆ ಅನುಮತಿ ನೀಡಿದೆ. ಹೀಗಾಗಿ ಮೇ 18 ಕ್ಕೆ ರಾಜ್ಯ ಸರ್ಕಾರ ಹೊರಡಿಸಿದ ನಿಷೇಧಿಸಲ್ಪಟ್ಟ ಚಟುವಟಿಕೆ ಪಟ್ಟಿಯಿಂದ ಆಂತರಿಕ ವಿಮಾನ ಯಾನ ಸಂಚಾರವನ್ನು ಕೈಬಿಡಲಾಗಿದೆ. ವಿಮಾನ ಯಾನ ಸಂಚಾರ ಹಾಗೂ ವಿಮಾನ ನಿಲ್ದಾಣ ಕಾರ್ಯಾಚರಣೆ ಕೇಂದ್ರ ಸರ್ಕಾರದ ಮಾರ್ಗಸೂಚಿ ಅನ್ವಯ ಹಾಗೂ ರಾಜ್ಯ ಆರೋಗ್ಯ ಇಲಾಖೆ ಹೊರಡಿಸುವ ಮಾರ್ಗಸೂಚಿ ಅನುಸಾರ ನಿರ್ವಹಿಸುವಂತೆ ಸೂಚನೆ ನೀಡಲಾಗಿದೆ.

ನಾಳೆಯಿಂದ ವಿಮಾನ ಯಾನ ಸಂಚಾರ ಆರಂಭವಾಗಲಿದ್ದು, ಅಧಿಕೃತ ಟಿಕೆಟ್‌ ಹೊಂದಿರುವ ‌ಪ್ರಯಾಣಿಕರು ಹಾಗೂ ವಿಮಾನ ನಿಲ್ದಾಣ ಸಿಬ್ಬಂದಿ ಕಂಪನಿ ನೀಡಿರುವ ಗುರುತಿನ ಚೀಟಿ ಆಧಾರದ‌ ಮೇಲೆ ಪ್ರತಿದಿನ ಸಂಜೆ 7 ರಿಂದ ಬೆಳಗ್ಗೆ 7 ಗಂಟೆವರೆಗಿನ ಲಾಕ್‌ಡೌನ್ ಅವಧಿ ಹಾಗೂ ಭಾನುವಾರದ ಕರ್ಫ್ಯೂ ಅವಧಿಯಲ್ಲೂ ಮಾರ್ಗಸೂಚಿ ಅನುಸಾರ ಸಂಚರಿಸಲು ಅನುಮತಿ ನೀಡುವಂತೆ ಸೂಚಿಸಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.