ETV Bharat / city

ರಾಜ್ಯದಲ್ಲಿ ಮಳೆ ಹೆಚ್ಚಳ, ಅಗತ್ಯ ಕ್ರಮ ಕೈಗೊಳ್ಳಲು ಡಿಸಿಗಳಿಗೆ ಸೂಚನೆ: ಸಚಿವ ಅಶೋಕ್ - ಬೆಂಗಳೂರು ಸುದ್ದಿ

ರಾಜ್ಯದ ಪ್ರವಾಹ ಪರಿಸ್ಥಿತಿ ಕುರಿತಂತೆ ಈಗಾಗಲೇ ಎಲ್ಲಾ ಜಿಲ್ಲೆಗಳ ಜಿಲ್ಲಾಧಿಕಾರಿಗಳೊಂದಿಗೆ ಮಾತನಾಡಿದ್ದೇನೆ ಎಂದು ಕಂದಾಯ ಸಚಿವ ಆರ್.​ ಅಶೋಕ್​ ತಿಳಿಸಿದ್ದಾರೆ.

Minister Ashok
ಸಚಿವ ಅಶೋಕ್
author img

By

Published : Aug 6, 2020, 4:12 PM IST

ಬೆಂಗಳೂರು: ಹವಾಮಾನ ವರದಿಯಲ್ಲಿ ಸಾಧಾರಣ ಮಳೆ ಎನ್ನಲಾಗಿತ್ತು. ಕಳೆದ ರಾತ್ರಿ ಮಳೆ ಹೆಚ್ಚಿತ್ತು. ನಾನು ಡಿಸಿಗಳ ಜೊತೆ ಮಾತನಾಡಿದ್ದೇನೆ. ಅವರಿಗೆ ಎಲ್ಲಾ ಸೂಚನೆಗಳನ್ನು ನೀಡಿದ್ದೇವೆ ಎಂದು ಕಂದಾಯ ಸಚಿವ ಆರ್.ಅಶೋಕ್ ಹೇಳಿದ್ದಾರೆ.

ವಿಧಾನಸೌಧದಲ್ಲಿ ಇಂದು ಮಾತನಾಡಿದ ಅವರು, ಈಗಾಗಲೇ ಈ ವಿಚಾರವಾಗಿ ಹಣ ಬಿಡುಗಡೆ ಮಾಡಲಾಗಿದೆ ಎಂದರು.

ಸಚಿವ ಅಶೋಕ್

ಡ್ಯಾಂಗಳಿಗೆ ನೀರು ಬಂದರೆ ಬಿಡುವುದಕ್ಕೆ ಸೂಚಿಸಿದ್ದೇನೆ. ಕೋಯ್ನಾದಿಂದ ನೀರು ಬಿಡುವ ಅಗತ್ಯ ಇಲ್ಲ. ಇನ್ನು ಕೊಡಗಿಗೆ ನಮ್ಮ ಎನ್​ಡಿಆರ್​ಎಫ್ ತಂಡ ಹೋಗಿದೆ. ನಾನು ಕೂಡಾ ಕೊಡಗು ಜಿಲ್ಲೆಗೆ ಭೇಟಿ ನೀಡುತ್ತೇನೆ ಎಂದು ಹೇಳಿದರು.

ನಾವು ಎಲ್ಲಾ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದೇವೆ. ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಕೂಡ ಸಲಹೆ ಕೊಟ್ಟಿದ್ದಾರೆ. ಮಂಜುನಾಥ್ ಪ್ರಸಾದ್​ಗೂ, ಪ್ರವಾಹಕ್ಕೂ ಸಂಬಂಧವಿಲ್ಲ. ವಿಪತ್ತು ನಿರ್ವಹಣೆಗೆ ಅಂಜುಂ ಫರ್ವೇಜ್ ಇದ್ದಾರೆ. ಹೀಗಾಗಿ ಯಾವುದೇ ಸಮಸ್ಯೆಯಾಗಲ್ಲ ಎಂದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.