ETV Bharat / city

ಬೆಂಗಳೂರಿನಲ್ಲಿ ದೇಶದ ಮೊದಲ ವಾಟರ್‌ ಫಾಲ್‌ ರೆಸ್ಟೋರೆಂಟ್‌; ವಿಶೇಷಗಳೇನು?

ಹರಿಯುತ್ತಿರುವ ನೀರಿನ ಮಧ್ಯೆ ಕುಳಿತು ಭೋಜನ ಸವಿಯುವ ಅವಕಾಶವನ್ನು ನೀಡುವ ನೂತನ ಹಾಗೂ ದೇಶದಲ್ಲೇ ಮೊದಲ ಸ್ಟ್ರೀಂ ರೆಸ್ಟೊರೆಂಟ್‌ ಸ್ಟೋನಿ ಬ್ರೂಕ್‌ ಇಂದಿನಿಂದ (ಅಕ್ಟೋಬರ್‌ 4) ಗ್ರಾಹಕರಿಗಾಗಿ ಪ್ರಾರಂಭವಾಗಿದೆ.

ದೇಶದ ಮೊದಲ ವಾಟರ್‌ ಫಾಲ್‌ ರೆಸ್ಟೋರೆಂಟ್‌
author img

By

Published : Oct 4, 2019, 8:23 PM IST

ಬೆಂಗಳೂರು: ಬೆಂಗಳೂರಿನಲ್ಲಿ ರೆಸ್ಟೋರೆಂಟ್​​ಗಳಿಗೇನು ಕಡಿಮೆ‌ ಇಲ್ಲ. ಹೊಸ ಮತ್ತು ವಿನೂತನ ಶೈಲಿಯ ರೆಸ್ಟೋರೆಂಟ್​​ಗಳು ನಾಯಿಕೊಡೆಗಳಂತೆ ತಲೆ ಎತ್ತುತ್ತಿವೆ. ಆದ್ರೆ ಇದೀಗ ಹೆಚ್ಚು ಸೌಂಡ್​ ಮಾಡ್ತಿರೋದು ಈ ವಾಟರ್ ಫಾಲ್ಸ್ ರೆಸ್ಟೋರೆಂಟ್.

ಹರಿಯುತ್ತಿರುವ ನೀರಿನ ಮಧ್ಯೆ ಕುಳಿತು ಭೋಜನ ಸವಿಯುವ ಅವಕಾಶವನ್ನು ನೀಡುವ ನೂತನ ಹಾಗೂ ದೇಶದಲ್ಲೇ ಮೊದಲ ಸ್ಟ್ರೀಂ ರೆಸ್ಟೊರೆಂಟ್‌-ಸ್ಟೋನಿ ಬ್ರೂಕ್‌ ಇಂದಿನಿಂದ ಗ್ರಾಹಕರಿಗಾಗಿ ಪ್ರಾರಂಭವಾಗಿದೆ.

ವಾಟರ್‌ ಫಾಲ್‌ ರೆಸ್ಟೋರೆಂಟ್‌

ಕಣ್ಣು ತಂಪೆನಿಸುವ, ಕಿವಿಗೆ ಇಂಪೆನಿಸುವ ಝುಳು ಝುಳು ನೀರಿನ ಶಬ್ದ ಕೇಳುತ್ತಾ ಹರಿಯುತ್ತಿರುವ ನೀರಿನಲ್ಲಿ ಪಾದಗಳನ್ನು ಆಡಿಸುತ್ತಾ ಭೋಜನ ಸವಿಯುವ ಅವಕಾಶ ಬಹಳಷ್ಟು ಜನರಿಗೆ ಸುಲಭವಾಗಿ ಸಿಗುವುದಿಲ್ಲ. ಬೆಂಗಳೂರಿನಲ್ಲಿ ಆ ರೆಸ್ಟೋರೆಂಟ್ ಒಳಗೆ ಒಕ್ಕರೆ ಅಂತಹ ಸುಂದರ ಅನುಭೂತಿಯನ್ನ ಪಡೆಯುವ ಅಪರೂಪದ ಅವಕಾಶವನ್ನು ವಿರೌಡ್ ವೆಂಚರ್ಸ್​​ನ ಮಾಲೀಕ ವಿನಯ್‌ ಕಲ್ಪಿಸಿಕೊಟ್ಟಿದ್ದಾರೆ.

waterfall-restaurant
ವಾಟರ್‌ ಫಾಲ್‌ ರೆಸ್ಟೋರೆಂಟ್‌

ಸ್ಟ್ರೀಂ ರೆಸ್ಟೋರೆಂಟ್​ನ ವಿಶೇಷತೆಗಳೇನು ಗೊತ್ತಾ?:

ಬರೋಬ್ಬರಿ 10 ಸಾವಿ ಲೀಟರ್‌‌ ಪುನರ್ಬಳಕೆ ನೀರನ್ನು ಬಳಸಿ ಈ ರೆಸ್ಟೋರೆಂಟ್​​ನಲ್ಲಿ ನೀರು ಹರಿಯುವ ಪ್ರದೇಶವನ್ನು ನಿರ್ಮಿಸಲಾಗಿದೆ. ಹೋಟೆಲ್‌ ಸುತ್ತಲೂ ಹಚ್ಚ ಹಸಿರಿನಿಂದ ಕಂಗೊಳಿಸುತ್ತಿರುತ್ತದೆ. ಒಂದು ಬಾರಿಗೆ 250 ಮಂದಿ ಹರಿಯುವ ನೀರಿನಲ್ಲಿ ಕುಳಿತು ಭೋಜನ ಸವಿಯುವ ವ್ಯವಸ್ಥೆ ಇಲ್ಲಿದೆ.

waterfall-restaurant
ವಾಟರ್‌ ಫಾಲ್‌ ರೆಸ್ಟೋರೆಂಟ್‌

ಫಿಲಿಫೈನ್ಸ್‌ ದೇಶದ ವಾಟರ್‌ ಫಾಲ್‌ ರೆಸ್ಟೋರೆಂಟ್​​ನಿಂದ ಪ್ರಭಾವಿತಗೊಂಡು ರಾಜಧಾನಿಯ ಜನರಿಗೆ ಹೊಸತಾದ ಅನುಭವ ನೀಡುವ ಉದ್ದೇಶದಿಂದ ಈ ಹರಿಯುವ ನೀರಿನ ರೆಸ್ಟೋರೆಂಟನ್ನು ಪ್ರಾರಂಭಿಸಿದ್ದಾರೆ.

ಈ ರೆಸ್ಟೋರೆಂಟ್​​ನ ಮತ್ತೊಂದು ವಿಶೇಷ ಅಂದರೆ ಫಿಶ್ ಪೆಡಿಕ್ಯೂರ್‌. ಗ್ರಾಹಕರು ತಮ್ಮ ಪಾದರಕ್ಷೆಗಳನ್ನು ಬಿಟ್ಟು ಮೊದಲು ಫಿಶ್ ಪೆಡಿಕ್ಯೂರ್​ನಲ್ಲಿ ಕಾಲಿಟ್ಟು ಕಾಲ ಕಳೆಯಬಹುದು. ಕೇವಲ ಹರಿಯುವ ನೀರು ಅಷ್ಟೇ ಅಲ್ಲದೇ 5 ರೀತಿಯ ಸೀಟಿಂಗ್‌ ಏರಿಯಾವನ್ನು ಸ್ಟೋನೀ ಬ್ರೂಕ್​ನಲ್ಲಿ ನಿರ್ಮಿಸಲಾಗಿದೆ. ಸ್ಟ್ರೀಂ ವಾಟ್‌, ಅಂಡರ್​ಗ್ರೌಂಡ್‌, ಅರ್ಥ, ರೂಫ್‌ ಟಾಪ್‌ ಹಾಗೂ ಕಾರುಗಳಲ್ಲಿ ಸೀಟಿಂಗ್‌ ವ್ಯವಸ್ಥೆ ಮಾಡಲಾಗಿದೆ. ಬಳಸಿದ ಕಾರು ಹಾಗೂ ಇನ್ನಿತರೆ ವಾಹನಗಳಲ್ಲಿ ಡೈನಿಂಗ್‌ ಏರಿಯಾವನ್ನು ರಚಿಸಲಾಗಿದೆ. ಹಾಗೂ ಪರಿಸರ ಸ್ನೇಹಿ ಬಿದರಿನ ಮಗ್ಗುಗಳು ಪೇಪರ್ ಸ್ಟ್ರಾಗಳು ಇರುವುದು ವಿಶೇಷ.

waterfall-restaurant
ವಾಟರ್‌ ಫಾಲ್‌ ರೆಸ್ಟೋರೆಂಟ್‌

ಸ್ಟೋನಿ ಬ್ರೂಕ್​​ನಲ್ಲಿ ಚೈನೀಸ್‌, ಥಾಯಿ, ಜಪಾನೀಸ್‌, ಇಂಡೋನೇಷಿಯನ್‌ ಹಾಗೂ ಇಟಲಿಯ ಪ್ರಮುಖ ಖಾದ್ಯಗಳು ದೊರೆಯಲಿವೆ. ಇದರ ಜೊತೆಗೆ ಭಾರತದ ಎಲ್ಲಾ ತರಹೇವಾರಿ ಖಾದ್ಯಗಳನ್ನು ಇಲ್ಲಿ ಸವಿಯಬಹುದಾಗಿದೆ. ಇಲ್ಲಿ ಕಾಪರ್‌-ವುಡ್‌ ಫೈರ್‌ ಪಿಜ್ಜಾ ಸಿಗಲಿದೆ. ತಾಮ್ರದ ಕೋಟಿಂಗ್‌ನ ದೊಡ್ಡ ಒವನ್ ನಿರ್ಮಿಸಲಾಗಿದ್ದು, ಈ ಓವನ್​​ ಅನ್ನು ವುಡ್‌ ಫೈರ್​​ನಿಂದ ಬಿಸಿಗೊಳಿಸಲಾಗುತ್ತದೆ. ಸಕತ್‌ ಬ್ಯುಸಿಯಾಗಿರುವ ಬೆಂಗಳೂರಿಗರು ಒಂದಿಷ್ಟು ಇಲ್ಲಿಗೆ ಭೇಟಿಕೊಟ್ಟು ವಿಶೇಷ ಅನುಭವ ಪಡೆಯಬಹುದು.

Intro:ದೇಶದ ಮೊದಲ ವಾಟರ್‌ ಫಾಲ್‌ ರೆಸ್ಟೋರೆಂಟ್‌ ಈಗ ಉದ್ಯಾನನಗರೀ ಯಲ್ಲಿ...

ಬೆಂಗಳೂರು: ಉದ್ಯಾನನಗರೀ ಬೆಂಗಳೂರಿನಲ್ಲಿ ರೆಸ್ಟೋರೆಂಟ್ ಗಳಿಗೇನು ಕಡಿಮೆ‌ ಇಲ್ಲ.. ವಿಭಿನ್ನತೆ ಗೆ ಹೆಸರುವಾಸಿಯಾಗಿರುವ ಇಲ್ಲಿ ಹೊಸತಾಗಿ ಯಾವುದಾರು ರೆಸ್ಟೋರೆಂಟ್ ಗಳು ಪರಿಚಯ ವಾಗುತ್ತಲೆ ಇರುತ್ತೆ..‌ ಸದ್ಯ ಹೆಚ್ಚು ಸೌಂಡ್ ಮಾಡುತ್ತಿರೋದು ವಾಟರ್ ಫಾಲ್ಸ್ ರೆಸ್ಟೋರೆಂಟ್...

ಕಣ್ಣು ತಂಪೆನಿಸುವ ಕಿವಿಗೆ ಇಂಪೆನಿಸುವ ಝುಳು ಝುಳು ನೀರಿನ ಶಬ್ದ ಕೇಳುತ್ತಾ.. ಹರಿಯುತ್ತಿರುವ ಹಿತವಾದ ನೀರಿನಲ್ಲಿ ಪಾದಗಳನ್ನು ಆಡಿಸುತ್ತಾ,  ರುಚಿಯಾದ - ಸವಿಯಾದ ಪದಾರ್ಥಗಳನ್ನು ಸೇವಿಸುವ ಅವಕಾಶ ಬಹಳಷ್ಟು ಜನರಿಗೆ ಸುಲಭವಾಗಿ ಲಭ್ಯವಾಗುವುದಿಲ್ಲ.. ಆದರೆ ಬೆಂಗಳೂರಿನಲ್ಲಿ ಆ ರೆಸ್ಟೋರೆಂಟ್ ಒಳಗೆ ಒಕ್ಕರೆ ಅಂತಹ ಸುಂದರ ಅನುಭೂತಿಯನ್ನ ಪಡೆಯುವ ಅವಕಾಶವನ್ನು ವಿರೌಡ್ ವೆಂಚರ್ಸ್‌ ನ ಮಾಲೀಕರಾದ ವಿನಯ್‌ ಕಲ್ಪಿಸಿಕೊಟ್ಟಿದ್ದಾರೆ.

ಹೌದು, ಹರಿಯುತ್ತಿರುವ ನೀರಿನ ಮಧ್ಯೆ ಕುಳಿತು ಭೋಜನ ಸವಿಯುವ ಅವಕಾಶವನ್ನು ನೀಡುವ ನೂತನ ಹಾಗೂ ದೇಶದಲ್ಲೇ ಮೊದಲ ಸ್ಟ್ರೀಂ ರೆಸ್ಟೊರೆಂಟ್‌ - ಸ್ಟೋನಿ ಬ್ರೂಕ್‌ ಇದೇ ಅಕ್ಟೋಬರ್‌ 4 ರಿಂದ ಗ್ರಾಹಕರಿಗಾಗಿ ಪ್ರಾರಂಭವಾಗಲಿದೆ...

ಸ್ಟ್ರೀಂ ರೆಸ್ಟೋರೆಂಟ್‌ ನ ವಿಶೇಷತೆಗಳೇನು ಗೊತ್ತಾ???

ಅಂದಹಾಗೇ ಬರೋಬ್ಬರಿ ಹತ್ತು ಸಾವಿರ ಲೀಟರ್‌‌ ಪುನರ್ಬಳಕೆ ನೀರನ್ನು ಬಳಸಿ ಈ ರೆಸ್ಟೋರೆಂಟ್‌ ನಲ್ಲಿ ನೀರು ಹರಿಯುವ ಪ್ರದೇಶವನ್ನು ನಿರ್ಮಿಸಲಾಗಿದೆ. ಸುತ್ತಲೂ ಹಸಿರ ಕಾನನ ಹಾಗೂ ಗಿಡ ಮರಗಳಿಂದ ಕಂಗೊಳಿಸುತ್ತಿರುವ ಈ ರೆಸ್ಟೋರೆಂಟ್‌ ನಲ್ಲಿ ಒಮ್ಮೆಲೆ 250 ಜನರು ಹರಿಯುವ ನೀರಿನಲ್ಲಿ ಕುಳಿತು ಭೋಜನ ಸವಿಯಬಹುದಾಗಿದೆ.

ಫಿಲಿಫೈನ್ಸ್‌ ದೇಶದ ವಾಟರ್‌ ಫಾಲ್‌ ರೆಸ್ಟೋರೆಂಟ್‌ ನಿಂದ ಪ್ರಭಾವಿತರಾಗಿ ವಿರೌಡ್ ವೆಂಚರ್ಸ್‌ ನ ಮಾಲೀಕ ವಿನಯ್‌, ನಮ್ಮ ಮೆಟ್ರೋ ಸಿಟಿ ಜನತೆಗೆ ಹೊಸತಾದ ಅನುಭವ ನೀಡುವ ಉದ್ದೇಶದಿಂದ ಈ ಹರಿಯುವ ನೀರಿನ ರೆಸ್ಟೋರೆಂಟನ್ನು ಪ್ರಾರಂಭಿಸಿದ್ದಾರೆ...ಈ ರೆಸ್ಟೋರೆಂಟ್‌ ನಲ್ಲಿ ಯಾವುದೇ ಅಬ್ಬರದ ಸಂಗೀತ ಇರೊದಿಲ್ಲ.. ಹರಿಯುವ ನೀರಿನ ಝುಳು ಝುಳು ನಾದವೇ ಇಲ್ಲಿಯ ಸಂಗೀತವಾಗಿರಲಿದೆ ಅಂತೆ..

ಈ ರೆಸ್ಟೋರೆಂಟ್‌ ನ ಮತ್ತೊಂದು ವಿಶೇಷ ಅಂದರೆ ಫಿಶ್ ಪೆಡಿಕ್ಯೂರ್‌. ರೆಸ್ಟೋರೆಂಟ್‌ ಗೆ ಬರುವ ಗ್ರಾಹಕರು ತಮ್ಮ ಪಾದರಕ್ಷೆಗಳನ್ನು ಬಿಟ್ಟು ಮೊದಲು ಈ ಫಿಶ್ ಪೆಡಿಕ್ಯೂರ್‌ ನಲ್ಲಿ ಕಾಲ ಕಳೆಯಬಹುದು. ನಂತರ ಅವರವರ ಅಗತ್ಯತೆಯ ತಕ್ಕಂತೆ ಸೀಟ್ ಗಳನ್ನು ನೀಡಲಾಗುತ್ತೆ...

ಕೇವಲ ಹರಿಯುವ ನೀರು ಅಷ್ಟೇ ಅಲ್ಲದೆ ಐದು ರೀತಿಯ ಸೀಟಿಂಗ್‌ ಏರಿಯಾವನ್ನು ಸ್ಟೋನೀ ಬ್ರೂಕ್‌ ನಲ್ಲಿ ನಿರ್ಮಿಸಲಾಗಿದೆ. ಸ್ಟ್ರೀಂ ವಾಟ್‌, ಅಂಡರ್‌ ಗ್ರೌಂಡ್‌, ಅರ್ಥ,ರೂಫ್‌ ಟಾಪ್‌ ಹಾಗೂ ಕಾರುಗಳಲ್ಲಿ ಸೀಟಿಂಗ್‌ ವ್ಯವಸ್ಥೆಯನ್ನು ಮಾಡಲಾಗಿದೆ. ಅಲ್ಲದೆ, ಬಳಸಿದ ಕಾರು ಹಾಗೂ ಇನ್ನಿತರೆ ವಾಹನಗಳಲ್ಲಿ ಖಾಸಗಿಯಾದ ಡೈನಿಂಗ್‌  ಏರಿಯಾವನ್ನು ರಚಿಸಲಾಗಿದೆ. ಹಾಗೂ
ಪರಿಸರ ಸ್ನೇಹಿ ಬಿದರಿನ ಮಗ್ಗುಗಳು ಪೇಪರ್ ಸ್ಟ್ರಾಗಳು ಇರುವುದು ವಿಶೇಷ..

ಸ್ಟೋನಿ ಬ್ರೂಕ್‌ ನಲ್ಲಿ ಚೈನೀಸ್‌, ಥಾಯಿ,  ಜಪಾನೀಸ್‌, ಇಂಡೋನೇಷಿಯನ್‌ ಹಾಗೂ ಇಟಲಿಯ ಪ್ರಮುಖ ಖಾದ್ಯಗಳು ದೊರೆಯಲಿವೆ. ಇದರ ಜೊತೆಯಲ್ಲಿಯೇ ಭಾರತ ದೇಶದ ಎಲ್ಲಾ ಥರಹದ ಥರೇವಾರಿ ಖಾದ್ಯಗಳನ್ನು ಇಲ್ಲಿ ಸವಿಯಬಹುದಾಗಿದೆ. ವೈನ್‌ ಜೊತೆಯಲ್ಲಿ ಸವಿಯಬಹುದಾದ ಖಾದ್ಯಗಳ ಪಟ್ಟಿಯೇ ಇಲ್ಲಿರಲಿದೆ. ವಿಶೇಷ ಅಂದರೆ ಇಲ್ಲಿ ಕಾಪರ್‌ - ವುಡ್‌ ಫೈರ್‌ ಪಿಜ್ಜಾ ಸಿಗಲಿದೆ..‌ ತಾಮ್ರದ ಕೋಟಿಂಗ್‌ ಇರುವ ದೊಡ್ಡ ಒವನ್ ನಿರ್ಮಿಸಲಾಗಿದ್ದು, ಈ ಓವನ್‌ ನ್ನು ವುಡ್‌ ಫೈರ್‌ ನಿಂದ ಬಿಸಿಗೊಳಿಸಲಾಗುವುದು. 

ಒಟ್ಟಾರೆ,‌ಸಕತ್‌ ಬ್ಯೂಸಿಯಾಗಿರುವ ಬೆಂಗಳೂರಿಗರು ಒಂದಿಷ್ಟು ಡಿಫೆರೆಂಟ್ ಎಕ್ಸ್ ಪಿರಿಯನ್ಸ್ ಪಡೆಯಬಹುದು.. ಆದರೆ ಈ ಅವಕಾಶ ಸಿಗೋದು ಮಾತ್ರ ಅಕ್ಟೋಬರ್ 4 ರ ನಂತರ ಅಷ್ಟೇ...

KN_BNG_4_WATER_RESTAURANT_SCRIPT_7201801Body:..Conclusion:..
ETV Bharat Logo

Copyright © 2024 Ushodaya Enterprises Pvt. Ltd., All Rights Reserved.