ETV Bharat / city

ಲಾಕ್ ಡೌನ್ ಸಂದರ್ಭದಲ್ಲಿ ಹೆಚ್ಚಾಯ್ತು ಪೋರ್ನ್ ವೀಕ್ಷಣೆ.. ಮಕ್ಕಳ ಕೈಗೆ ಮೊಬೈಲ್ ಕೊಟ್ರೆ ನಿಮ್ಗೇ ಕಂಟಕ! - ಆಶ್ಲೀಲ ವಿಡಿಯೋ ವೀಕ್ಷಣೆ ಶಿಕ್ಷೆ

ಲಾಕ್ ಡೌನ್ ವೇಳೆ ಹೆಚ್ಚಾಗಿ ಮಕ್ಕಳೇ ಆಶ್ಲೀಲ ವಿಡಿಯೋ ನೋಡಿದ್ದಾರೆ. ಕಳೆದ ತಿಂಗಳಲ್ಲಿ ಪೋರ್ನ್ ವಿಡಿಯೋ ವೀಕ್ಷಣೆ ಮಾಡಿದ್ದವರನ್ನು ಸಿಐಡಿ ಪತ್ತೆ ಹಚ್ಚಿದ್ದು, ರಾಜ್ಯಾದ್ಯಂತ ಸುಮಾರು 200 ಜನರನ್ನು ವಿಚಾರಣೆ ಮಾಡಲು ಮುಂದಾಗಿದೆ. ಬೆಂಗಳೂರಿನಲ್ಲಿಯೇ 60ಕ್ಕೂ ಹೆಚ್ಚು ಜನರನ್ನು ವಿಚಾರಣೆ ನಡೆಸಿದ್ದಾರೆ. ಯಾವ ಮೊಬೈಲ್ ನಂಬರ್ ನಿಂದ ವಿಡಿಯೋ ನೋಡಿದ್ದಾರೊ ಆ ಮೊಬೈಲ್ ಮಾಲೀಕ ಬಂಧನವಾಗುವ ಸಾಧ್ಯತೆಯಿದೆ.

increased-porn-viewing-during-lockdown
ಪೋರ್ನ್ ವೀಕ್ಷಣೆ
author img

By

Published : Jul 1, 2021, 7:33 PM IST

ಬೆಂಗಳೂರು: ಕೊರೊನಾ ಬಿಕ್ಕಟ್ಟಿನಿಂದ ಲಾಕ್ ಡೌನ್ ತೆರವುಗೊಳಿಸಿದರೂ‌‌ ಕಳೆದ ಎರಡು ವರ್ಷಗಳಿಂದ ಶಾಲೆಗಳು ಭೌತಿಕವಾಗಿ ಆರಂಭವಾಗಿಲ್ಲ. ‌ಆನ್​ಲೈನ್ ಕ್ಲಾಸ್ ನೆಪದಲ್ಲಿ ಮಕ್ಕಳ‌ ಕೈಗೆ ಪೋಷಕರು ಸ್ಮಾರ್ಟ್ ಫೋನ್ ನೀಡಿದ್ದಾರೆ. ಇದರಿಂದ ಲಾಕ್ ಡೌನ್ ವೇಳೆ‌ ಇಂಟರ್​ನೆಟ್​ನಲ್ಲಿ ಆಶ್ಲೀಲ ವಿಡಿಯೋ ನೋಡುವವರ‌ ಸಂಖ್ಯೆ ಅಧಿಕವಾಗಿದ್ದು, ಇದನ್ನು ನಿಯಂತ್ರಿಸಲು ಸಿಐಡಿ ಸೈಬರ್ ಅಪರಾಧ ವಿಭಾಗದ ಅಧಿಕಾರಿಗಳು ಹದ್ದಿನ ಕಣ್ಣಿಟ್ಟಿದ್ದಾರೆ.

ವಿಶೇಷವಾಗಿ ಮಕ್ಕಳ‌ ಪೋರ್ನ್ (ಆಶ್ಲೀಲ) ವಿಡಿಯೋ ವೀಕ್ಷಣೆ ಲಾಕ್ ಡೌನ್ ವೇಳೆ ಹೆಚ್ಚಾಗಿದೆ. ಕಳೆದ ಒಂದು ವರ್ಷದಲ್ಲಿ ಮಕ್ಕಳು ಹಾಗೂ‌ ಹದಿಹರೆಯದ ವಯಸ್ಸಿನವರೇ ಹೆಚ್ಚಿನ ಸಂಖ್ಯೆಯಲ್ಲಿ ಅಶ್ಲೀಲ ವಿಡಿಯೋ ನೋಡಿರುವುದನ್ನು ಸಿಐಡಿಯ ಸೈಬರ್ ಪೊಲೀಸರು ಪತ್ತೆಹಚ್ಚಿದ್ದಾರೆ.

ಲಾಕ್ ಡೌನ್ ವೇಳೆ ಹೆಚ್ಚು ಪೋರ್ನ್ ವಿಡಿಯೋ ವೀಕ್ಷಣೆ

ಲಾಕ್ ಡೌನ್ ವೇಳೆ ಹೆಚ್ಚಾಗಿ ಮಕ್ಕಳೇ ಆಶ್ಲೀಲ ವಿಡಿಯೋ ನೋಡಿದ್ದಾರೆ. ಕಳೆದ ತಿಂಗಳಲ್ಲಿ ಪೋರ್ನ್ ವಿಡಿಯೋ ವೀಕ್ಷಣೆ ಮಾಡಿದ್ದವರನ್ನು ಸಿಐಡಿ ಪತ್ತೆ ಹಚ್ಚಿದ್ದು, ರಾಜ್ಯಾದ್ಯಂತ ಸುಮಾರು 200 ಜನರನ್ನು ವಿಚಾರಣೆ ಮಾಡಲು ಮುಂದಾಗಿದೆ. ಬೆಂಗಳೂರಿನಲ್ಲಿಯೇ 60ಕ್ಕೂ ಹೆಚ್ಚು ಜನರನ್ನು ವಿಚಾರಣೆ ನಡೆಸಿದ್ದಾರೆ. ಯಾವ ಮೊಬೈಲ್ ನಂಬರ್ ನಿಂದ ವಿಡಿಯೋ ನೋಡಿದ್ದಾರೊ ಆ ಮೊಬೈಲ್ ಮಾಲೀಕ ಬಂಧನವಾಗುವ ಸಾಧ್ಯತೆಯಿದೆ.

18 ವರ್ಷದ ಒಳಗಿನ ಮಕ್ಕಳು ವಿಡಿಯೋ ನೋಡಿದ್ದರೆ ಪೋಷಕರಿಗೆ ಸಂಕಷ್ಟ ಎದುರಾಗಲಿದೆ. ಆಶ್ಲೀಲ ವಿಡಿಯೋ ನೋಡುವವರನ್ನು ನಿಯಂತ್ರಣ ಹಾಗೂ ಅವರ ಗುರುತು ಪತ್ತೆ ಮಾಡುವುದಕ್ಕೆ ಸೈಬರ್ ಅಧಿಕಾರಿಗಳ ತಾಂತ್ರಿಕ ತಂಡ ಸಿದ್ಧವಾಗಿದ್ದು, ಅಂತಹ ವಿಡಿಯೋ ನೋಡೋರನ್ನ ಈ ತಂಡ ಪತ್ತೆ ಮಾಡಲಿದೆ‌.

ಆಶ್ಲೀಲ ವಿಡಿಯೋ ವೀಕ್ಷಣೆ ಮಾಡಿದರೆ ಕಾನೂನಿನಲ್ಲಿ‌‌‌ ಏನಿದೆ ಶಿಕ್ಷೆ ?

ಅಶ್ಲೀಲ ವಿಡಿಯೋ ವೀಕ್ಷಣೆ ಮಾಡಿರುವುದು ಸಾಬೀತಾದರೆ ಮಾಹಿತಿ ತಂತ್ರಜ್ಞಾನ ಕಾಯ್ದೆಯ 67b ಅಡಿಯಲ್ಲಿ ಪ್ರಕರಣ ದಾಖಲಿಸಿ ಬಂಧಿಸಬಹುದಾಗಿದೆ.
ಮಕ್ಕಳ ಚಿತ್ರ ಮತ್ತು ವಿಡಿಯೋ‌ ಪ್ರಕರಣಕ್ಕೆ 5 ವರ್ಷ ಶಿಕ್ಷೆ 10 ಲಕ್ಷ ದಂಡ, ಎರಡನೇ ಬಾರಿ ಕೃತ್ಯ ಎಸಗಿದರೆ 7 ವರ್ಷ ಜೈಲು 10 ಲಕ್ಷ ರೂ. ದಂಡ.
ಹಿರಿಯರ ಅಶ್ಲೀಲ ವಿಡಿಯೋ ನೋಡಿದರೆ 3 ವರ್ಷ ಜೈಲು 10‌ ಲಕ್ಷ ದಂಡ ಹಾಗೂ ಎರಡನೇ ಬಾರಿಯ ಕೃತ್ಯಕ್ಕೆ 7 ವರ್ಷ ಜೈಲು 10 ಲಕ್ಷ ರೂ. ದಂಡ ಕಟ್ಟಬೇಕಿದೆ.

ಮಕ್ಕಳ ತಪ್ಪಿಗೆ ಪೋಷಕರ ಬಂಧನ

ಸೈಬರ್ ಇಂಟೆಲಿಜೆನ್ಸ್ ಹಾಗೂ ಕೇಂದ್ರ ಸರ್ಕಾರದ NCRB (ನ್ಯಾಷನಲ್ ಕ್ರೈಂ ರೆಕಾರ್ಡ್ ಬ್ಯೂರೋ) ಮೂಲಕ‌ ಮಾಹಿತಿ ಕಲೆ ಹಾಕುತ್ತಿರುವ ಸಿಐಡಿ ಮನೆಯಲ್ಲಿ ಪ್ರಬುದ್ಧ ಮಕ್ಕಳು ಯುವಕರು ಆಶ್ಲೀಲ ಚಿತ್ರವೀಕ್ಷಣೆಯಿಂದಾಗಿ ಪೋಷಕರಿಗೆ ಬಂಧನ ಭೀತಿ ಎದುರಾಗಿದೆ. ಸಿಮ್ ಪೋಷಕರ ಹೆಸರಿನಲ್ಲಿದ್ದು ಪೋಷಕರಿಗೆ ಗೊತ್ತಿಲ್ಲದೆ ಅವರ ಮೊಬೈಲ್ ನಲ್ಲಿ ಮಕ್ಕಳು ಪೋರ್ನ್ ನೋಡಿದ್ದರೆ ತಂದೆ-ತಾಯಂದಿರಿಗೆ ತಲೆದಂಡವಾಗಲಿದೆ ಎಂದು ಸೈಬರ್ ತಜ್ಞ ಪಣೀಂದರ್ ಎಚ್ಚರಿಸಿದ್ದಾರೆ.

ಪೋಷಕರ ಜವಾಬ್ದಾರಿಗಳೇನು ?

  • ಆನ್ ಲೈನ್ ಕ್ಲಾಸ್ ಸೋಗಿನಲ್ಲಿ ಮಕ್ಕಳು ಸ್ಮಾರ್ಟ್ ಫೋನ್ ಬಳಸುತ್ತಿದ್ದರೆ ಅವರ ಮೇಲೆ ನಿಗಾ ಇಡಿ
  • ಇಂಟರ್ ನೆಟ್ ನಲ್ಲಿ ಏನು ನೋಡುತ್ತಿದ್ದಾರೆ ಎಂಬುದರ ಬಗ್ಗೆ ಸಂಪೂರ್ಣ ಗಮನವಿರಲಿ
  • ಅಗತ್ಯವಿದ್ದಾಗ ಮಾತ್ರ‌ ಮಕ್ಕಳ ಕೈಗೆ ಮೊಬೈಲ್ ಕೊಡಿ
  • ವಾಟ್ಸಾಪ್ ಮೂಲಕ ಪೋರ್ನ್ ವಿಡಿಯೋ ಬಂದರೆ ಕೂಡಲೇ ಡಿಲಿಟ್ ಮಾಡಿ. ಮಕ್ಕಳು ನೋಡದಂತೆ ಎಚ್ಚರವಹಿಸಿ

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.