ಬೆಂಗಳೂರು : ಕೋವಿಡ್ ಕೇರ್ ಸೆಂಟರ್‌ಗಳ ಸಂಖ್ಯೆ ದಿನೇದಿನೆ ಏರಿಕೆ ಮಾಡಲಾಗುತ್ತಿದೆ. ಮನೆ ಐಸೋಲೇಷನ್ ಸಾಧ್ಯ ಇಲ್ಲದವರನ್ನು ಸಿಸಿಸಿ ಸೆಂಟರ್‌ಗೆ ಶಿಫ್ಟ್ ಮಾಡಿ ಆಮ್ಲಜನಕದ ಅಗತ್ಯ ಪೂರೈಸಲಾಗುವುದು ಎಂದು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತ ಹೇಳಿದರು.
ಓದಿ: 18-44 ವಯೋಮಾನದವರಿಗೆ ಲಸಿಕೆ ಲಭ್ಯವಿಲ್ಲ.. ಗೊಂದಲಕ್ಕೆ ಆರೋಗ್ಯ ಇಲಾಖೆ ತೆರೆ.. NHM ಸ್ಪಷ್ಟ ಮಾಹಿತಿ
ಐವತ್ತು ಹಾಸಿಗೆಗಳಿಗೆ ಆಕ್ಸಿಜನ್ ಕಾನ್ಸಂಟ್ರೇಶನ್ ಮೂಲಕ ಆಮ್ಲಜನಕ ಸೌಲಭ್ಯ ಸಿಗಲಿದೆ. ಕೋವಿಡ್ ಕೇರ್ ಸೆಂಟರ್ಿಗಳಿಂದ ಆಸ್ಪತ್ರೆಗೆ ಶಿಫ್ಟ್ ಮಾಡುವ ಸಂಧರ್ಭದಲ್ಲಿ ಆಸ್ಪತ್ರೆಯಲ್ಲಿ ಬೆಡ್ ವ್ಯವಸ್ಥೆ ಸಿಗಲಿದೆ. ಬೆಡ್ ಬುಕ್ ಮಾಡುವ ಸಾಫ್ಟ್ ವೇರ್‌ನಲ್ಲಿ ಬದಲಾವಣೆ ಮಾಡಿಕೊಂಡು ಈ ವ್ಯವಸ್ಥೆ ಜಾರಿಗೆ ತರಲಾಗುತ್ತಿದೆ ಎಂದರು.
ಟೆಸ್ಟಿಂಗ್ ಪ್ರಮಾಣದಲ್ಲೂ ಹೆಚ್ಚು ಮಾಡಲಾಗುತ್ತಿದೆ. ಸ್ಲಂ, ಎನ್ಜಿಒಗಳ ಜೊತೆ ಅಪಾರ್ಟ್‌ಮೆಂಟ್ ಅಸೋಸಿಯೇಷನ್‌ಗಳ ಜೊತೆ ಸಭೆ ನಡೆಸಿ ತಾತ್ಕಾಲಿಕ ಕ್ಯಾಂಪ್‌ಗಳನ್ನು ಹಾಕಿ ಅಗತ್ಯ ಇರುವೆಡೆ ಸೋಂಕು ಪರೀಕ್ಷೆ ನಡೆಸಲಾಗುವುದು ಎಂದರು. ಕಾಂಟ್ಯಾಕ್ಟ್ ಟ್ರೇಸಿಂಗ್ ಕೂಡ ತೀವ್ರವಾಗಿ ನಡೆಸಲಾಗುತ್ತಿದೆ ಎಂದರು.
![increase-the-ccc-centers-for](https://etvbharatimages.akamaized.net/etvbharat/prod-images/ka-bng-05-shivajinagar-ccc-open-ka10033_22052021182658_2205f_1621688218_173.jpg)
ಕೋವಿಡ್ ಕೇರ್ ಸೆಂಟರ್‌ಗಳ ಹೆಚ್ಚಳ : ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಪೂರ್ವ ವಲಯದ ವ್ಯಾಪ್ತಿಯಲ್ಲಿ ಬರುವ ಆರು ವಿಧಾನಸಭಾ ಕ್ಷೇತ್ರಗಳಲ್ಲಿ ವಾಸಿಸುತ್ತಿರುವ ಬಡವರು ಹಾಗೂ ಮಧ್ಯಮವರ್ಗಗಳ ಕುಟುಂಬದವರನ್ನು ಕೋವಿಡ್ ಸೋಂಕಿನಿಂದ ರಕ್ಷಿಸಲು ಕೋವಿಡ್ ಕೇರ್ ಸೆಂಟರುಗಳನ್ನು ಹೆಚ್ಚು ಹೆಚ್ಚಾಗಿ ಸಜ್ಜುಗೊಳಿಸಲಾಗುತ್ತಿದೆ ಎಂದು ಪೂರ್ವ ವಲಯ ಕೋವಿಡ್-19 ಮೇಲ್ವಿಚಾರಣೆ ಉಸ್ತುವಾರಿ, ವಸತಿ ಸಚಿವ ವಿ.ಸೋಮಣ್ಣ ಹೇಳಿದ್ದಾರೆ.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಪೂರ್ವ ವಲಯದ ಶಿವಾಜಿನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿನ ಸೆಂಟ್‌ಜಾನ್ಸ್ ರಸ್ತೆಯ ಮಿಲಿಟರಿ ಕಾಂಪೌಂಡ್‌ನಲ್ಲಿರುವ ಕೇಂದ್ರಿಯ ವಿದ್ಯಾಲಯದಲ್ಲಿ, ಭಾರತೀಯ ಸೈನ್ಯದ ಸಹಯೋಗದೊಂದಿಗೆ ಕೊರೊನಾ ಸೋಂಕಿತರ ಚಿಕಿತ್ಸೆಗಾಗಿ ಸಜ್ಜುಗೊಳಿಸಲಾಗಿರುವ 100 ಬೆಡ್‌ಗಳ ಕೋವಿಡ್ ಕೇರ್ ಸೆಂಟರ್‌ನ ಉದ್ಘಾಟಿಸಿ ಮಾತನಾಡಿದರು.
ಆಲ್ ಅಮೀನ್ ಆಸ್ಪತ್ರೆಯಲ್ಲಿ ಶೇ.30ರಷ್ಟು ಹಾಸಿಗೆಗಳನ್ನು ಒದಗಿಸಲು ಆಡಳಿತ ಮಂಡಳಿ ಒಪ್ಪಿದ್ದು, ಆರಂಭಿಸಲಾಗುತ್ತಿರುವ ಆರೈಕೆ ಕೇಂದ್ರಕ್ಕೆ ಬರುವ ತುರ್ತು ರೋಗಿಗಳನ್ನು ಅಲ್ಲಿಗೆ ದಾಖಲಿಸಲು ವೈದ್ಯರಿಗೆ ಸೂಚನೆ ನೀಡಲಾಗಿದೆ.
ಕೋವಿಡ್ ವ್ಯಾಪಿಸಿರುವ ಈ ಸಮಯದಲ್ಲಿ ಭಾರತೀಯ ಸೈನ್ಯದವರು ಸೇವಾ ಮನೋಭಾವದಿಂದ ಕೋವಿಡ್ ಕೇರ್ ಸೆಂಟರ್ ಆರಂಭಿಸಲು ಒತ್ತಾಸೆಯಾಗಿ ನಿಂತಿದ್ದಾರೆ. ಈ ಕೇಂದ್ರಕ್ಕೆ ಅಗತ್ಯವಿರುವ ಹೆಚ್ಚುವರಿ ಸೌಲಭ್ಯವನ್ನು ಬೃಹತ್ ಬೆಂಗಳೂರು ಮಹಾನಗರಪಾಲಿಕೆ ಒದಗಿಸಲಿದೆ ಎಂದೂ ಸಚಿವ ಸೋಮಣ್ಣ ಹೇಳಿದ್ದಾರೆ.
ಈ ಆಸ್ಪತ್ರೆಯ 100 ಹಾಸಿಗೆಗಳಲ್ಲಿ 45 ಹಾಸಿಗೆಗಳಿಗೆ ಆಮ್ಲಜನಕ ಪೂರೈಕೆ ಇರುತ್ತದೆ. ಆಸ್ಪತ್ರೆ ನುರಿತ ವೈದ್ಯರು, ಶುಶ್ರೂಷಕರು ಹಾಗೂ ಸಿಬ್ಬಂದಿ ಮಾತ್ರವಲ್ಲದೆ, ಆ್ಯಂಬುಲೆನ್ಸ್ ಸೌಕರ್ಯವನ್ನು ಹೊಂದಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಲೋಕಸಭಾ ಸದಸ್ಯ ಪಿ.ಸಿ.ಮೋಹನ್, ಶಾಸಕ ರಿಜ್ವಾನ್ ಅರ್ಷದ್, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಮುಖ್ಯ ಆಯುಕ್ತ ಗೌರವ್ ಗುಪ್ತ, ಪೂರ್ವ ವಲಯದ ನೋಡಲ್ ಅಧಿಕಾರಿಗಳಾಗಿರುವ ವಸತಿ ಇಲಾಖೆಯ ಕಾರ್ಯದರ್ಶಿ ಮನೋಜ್ ಕುಮಾರ್ ಮೀನಾ, ಭಾರತೀಯ ಸೈನ್ಯದ ಮೇಜರ್ ಜನರಲ್ ಜೆ.ವಿ.ಪ್ರಸಾದ್, ಬ್ರಿಗೇಡಿಯರ್ ಟಿ.ಪಿ.ಎಸ್. ವಾರ್ಧ್ವ, ಪಾಲಿಕೆಯ ಜಂಟಿ ಆಯುಕ್ತೆ ಶ್ರೀಮತಿ ಪಲ್ಲವಿ ಹಾಗೂ ಇನ್ನಿತರ ಅಧಿಕಾರಿಗಳು ಪಾಲ್ಗೊಂಡಿದ್ದರು.