ಬೆಂಗಳೂರು: ಐಎಂಎ ವಂಚನೆ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿರುವ ಮನ್ಸೂರ್ ಖಾನ್ನನ್ನು ಸಿಬಿಐ ಅಧಿಕಾರಿಗಳು ಪರಪ್ಪನ ಅಗ್ರಹಾರದಿಂದ ಬಾಡಿ ವಾರೆಂಟ್ ಮೂಲಕ ಕಸ್ಟಡಿಗೆ ಪಡೆದಿದ್ದರು. ಸದ್ಯ ಇಂದು ಮನ್ಸೂರ್ ಅಲಿಖಾನ್ ಕಸ್ಟಡಿ ಅವಧಿ ಅಂತ್ಯಗೊಂಡ ಹಿನ್ನೆಲೆ, ಸಿಬಿಐ ವಿಶೇಷ ನ್ಯಾಯಾಲಯದ ಮುಂದೆ ಹಾಜರು ಪಡಿಸಲಿದ್ದಾರೆ.
ಕಳೆದ ಮೂರು ದಿನದಿಂದ ಹೆಬ್ಬಾಳದ ಬಳಿ ಇರುವ ಸಿಬಿಐ ಕಚೇರಿಯಲ್ಲಿ ಇಟ್ಟು ವಿಚಾರಣೆಗೆ ಒಳಪಡಿಸಲಾಗಿತ್ತು. ವಿಚಾರಣೆ ವೇಳೆ ಮಾಜಿ ಮಿನಿಸ್ಟರ್ ರೋಷನ್ ಬೇಗ್ ಐಎಂಎ ಪ್ರಕರಣದಲ್ಲಿನ ಪಾತ್ರದ ಬಗ್ಗೆ ಮಾಹಿತಿ ಪಡೆದಿದ್ದರು. ಮನ್ಸೂರ್ ಖಾನ್ ಈ ಹಿಂದೆ ವಿಡಿಯೋ ಮೂಲಕ ಹೇಳಿದ ಆಡಿಯೋ ಕುರಿತು ಮತ್ತೆ ಸಿಬಿಐ ಎದುರು ಸಾಕ್ಷ್ಯಗಳ ಸಮೇತ ನೀಡಿದ್ದ. ಹೀಗಾಗಿ ಮನ್ಸೂರ್ ಹೇಳಿಕೆಯ ಮೂಲಕ ಖೆಡ್ಡಾಕ್ಕೆ ಕೆಡವಿದ್ದಾರೆ.
ಸದ್ಯ ಮನ್ಸೂರ್ ಖಾನ್ ಕಸ್ಟಡಿ ಅಂತ್ಯಗೊಂಡಿರುವ ಹಿನ್ನೆಲೆ ಒಂದು ವಿಚಾರಣೆ ಅಗತ್ಯವಿದ್ದಲ್ಲಿ ಮತ್ತೆ ವಶಕ್ಕೆ ಪಡೆಯುವ ಸಾಧ್ಯತೆ ಇದೆ. ಆದರೆ, ಸದ್ಯ ಬಹುತೇಕ ಮಾಹಿತಿ ಕಲೆಹಾಕಿರುವ ಕಾರಣ ಮತ್ತೆ ನ್ಯಾಯಾಂಗ ಬಂಧನಕ್ಕೆ ಕಳುಹಿಸುವ ಲಕ್ಷಣಗಳು ಕೂಡ ಇದೆ. ಮತ್ತೊಂದೆಡೆ ರೋಷನ್ ಬೇಗ್ ಮನೆಯಲ್ಲಿ ದಾಳಿ ಮುಂದುವರೆದಿದ್ದು, ಇನ್ನೊವಾ ಕಾರಿನಲ್ಲಿ ಓರ್ವ ಸಿಬಿಐ ಅಧಿಕಾರಿ ಪತ್ನಿ ಹಾಗೂ ಮನೆ ಕೆಲಸದವನನ್ನು ವಿಚಾರಣೆಗೆ ಬೇರೆ ಕಡೆ ಅಧಿಕಾರಿಗಳು ಕರೆದೊಯ್ದಿದ್ದಾರೆ.