ETV Bharat / city

ಅಕ್ರಮ ಗೋಸಾಗಾಟ ಆರೋಪ.. ಪ್ರಕರಣ ದಾಖಲಿಸಿಕೊಂಡ ಶಿವಾಜಿನಗರ ಪೊಲೀಸರು - ಅಕ್ರಮ ಗೋ ಸಾಗಾಣಿಕೆ ಪ್ರಕರಣ

ಪರಿಸ್ಥಿತಿ ಹದಗೆಡುವ ಮುನ್ನವೇ ಪೊಲೀಸರು ಸ್ಥಳಕ್ಕೆ ಹೋಗಿ ತಿಳಿಗೊಳಿಸಿದ್ದರು. ಈ ಘಟನೆ ಸಂಬಂಧ ಸಂಜಯ್‌ ಕುಲಕರ್ಣಿ ಎಂಬುವರು ನೀಡಿದ ದೂರಿನ ಮೇರೆಗೆ ಶಿವಾಜಿನಗರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ..

illegal-cow-transport-case-registered
ಅಕ್ರಮ ಗೋಸಾಗಾಟ
author img

By

Published : Jul 31, 2020, 9:46 PM IST

ಬೆಂಗಳೂರು : ಅಕ್ರಮವಾಗಿ ಗೋ ಸಾಗಾಟ ಆರೋಪ ಕೇಳಿ ಬಂದ ಹಿನ್ನೆಲೆ ಗುರುವಾರ ಎನ್​ಜಿಒ ಸದಸ್ಯರು ಹಾಗೂ ಸ್ಥಳೀಯರ ನಡುವೆ ನಡೆದಿದ್ದ ಗಲಾಟೆ ಸಂಬಂಧ ಶಿವಾಜಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಕ್ರಮ ಗೋಸಾಗಾಟ ಆರೋಪ

ಶಿವಾಜಿನಗರ ಸೇರಿ ಸುತ್ತಮುತ್ತಲಿನ ಕಸಾಯಿಖಾನೆಗಳಿಗೆ ಅಕ್ರಮವಾಗಿ ಗೋವು ಸರಬರಾಜು ಮಾಡಲಾಗಿದೆ ಎಂದು ಗೋ ಗ್ಯಾಂಗ್ ಸಂಘಟನೆ ನಿನ್ನೆ ಕಸಾಯಿಖಾನೆ ಬಳಿ ಹೋಗಿ ಸ್ಥಳೀಯರನ್ನು ಪ್ರಶ್ನಿಸಿತ್ತು. ಈ ಸಂಬಂಧ ಸಂಘಟನೆಯ ಸದಸ್ಯರು ಹಾಗೂ ಸ್ಥಳೀಯರ ನಡುವಿನ ಮಾತಿನ ಚಕಮಕಿ‌ ನಡೆದಿತ್ತು. ಪರಿಸ್ಥಿತಿ ಹದಗೆಡುವ ಮುನ್ನವೇ ಪೊಲೀಸರು ಸ್ಥಳಕ್ಕೆ ಹೋಗಿ ತಿಳಿಗೊಳಿಸಿದ್ದರು. ಈ ಘಟನೆ ಸಂಬಂಧ ಸಂಜಯ್‌ ಕುಲಕರ್ಣಿ ಎಂಬುವರು ನೀಡಿದ ದೂರಿನ ಮೇರೆಗೆ ಶಿವಾಜಿನಗರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಶಾಂತಿ ಸಭೆ : ನಾಳೆ ಬಕ್ರೀದ್ ಹಿನ್ನೆಲೆ ನಗರದಲ್ಲಿ ಅಹಿತಕರ ಘಟನೆ ನಡೆಯದಂತೆ‌ ಪೊಲೀಸ್ ಆಯುಕ್ತ ಭಾಸ್ಕರ್ ಮುಂಜಾಗ್ರತಾ ಕ್ರಮವಾಗಿ‌ ಮುಸ್ಲಿಂ ಧಾರ್ಮಿಕ ಮುಖಂಡರೊಂದಿಗೆ ಶಾಂತಿ ಸಭೆ ನಡೆಸಿದ್ದಾರೆ. ಅಲ್ಲದೆ ಆಯಾ ವಿಭಾಗ ಮಟ್ಟದಲ್ಲಿ ಡಿಸಿಪಿಗಳು ಸ್ಥಳೀಯ ಧಾರ್ಮಿಕ ಮುಖಂಡರೊಂದಿಗೆ ಸಭೆ ನಡೆಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.