ETV Bharat / city

ಸಿಡಿ ತನಿಖೆ ಮುಗಿದ ಬಳಿಕ ಟೀಕೆ ಮಾಡಲಿ, ಈಗ ಟೀಕೆ ಮಾಡುವ ಅಗತ್ಯವಿಲ್ಲ: ಪ್ರವೀಣ್ ಸೂದ್ - CD case investigation

ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್​​ಐಟಿ ಅಧಿಕಾರಿಗಳು ಕಾನೂನು ಪ್ರಕಾರ ಕೆಲಸ ಮಾಡುತ್ತಿದ್ದಾರೆ. ತನಿಖೆ ಬಗ್ಗೆ ಟೀಕೆ, ಟಿಪ್ಪಣಿ ಅಗತ್ಯವಿಲ್ಲ ಎಂದು ರಾಜ್ಯ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ತಿಳಿಸಿದ್ದಾರೆ.

IGP Praveen Sood
ಪ್ರವೀಣ್ ಸೂದ್
author img

By

Published : Apr 2, 2021, 12:24 PM IST

ಬೆಂಗಳೂರು: ಸಿಡಿ ಪ್ರಕರಣದ ಕುರಿತು ಎಸ್ಐಟಿ‌ ತನಿಖೆ ಚುರುಕುಗೊಂಡಿದ್ದು, ತಂಡದಲ್ಲಿ ಜವಾಬ್ದಾರಿಯುತ ಅಧಿಕಾರಿಗಳಿದ್ದಾರೆ. ತನಿಖೆ ಮುಗಿದ ಬಳಿಕ ಟೀಕೆ ಮಾಡಲಿ, ಈ ಸಂದರ್ಭದಲ್ಲಿ ಟೀಕೆ ಮಾಡುವ ಅಗತ್ಯವಿಲ್ಲ ಎಂದು ಡಿಜಿ, ಐ.ಜಿ.ಪಿ ಪ್ರವೀಣ್ ಸೂದ್ ಹೇಳಿದರು.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಪ್ರವೀಣ್ ಸೂದ್

ಕೆ.ಎಸ್.ಆರ್.ಪಿ ಮೈದಾನದಲ್ಲಿ ನಡೆದ ಧ್ವಜ ದಿನಾಚರಣೆ ಕಾರ್ಯಕ್ರಮದ ನಂತರ ಸಿಡಿ ತನಿಖೆ ಕುರಿತಾದ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ರಾಜ್ಯ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್, ಎಸ್.ಐ.ಟಿ ಅಧಿಕಾರಿಗಳು ಕಾನೂನು ಪ್ರಕಾರ ಕೆಲಸ ಮಾಡುತ್ತಿದ್ದಾರೆ ಎಂದು ಸ್ಪಷ್ಟಪಡಿಸಿದರು.

ಐಪಿಸಿ, ಸಿ.ಆರ್.ಪಿ.ಸಿ ಕಾನೂನು ಚೌಕಟ್ಟಿನಲ್ಲಿ ಎಸ್ಐಟಿ ಕೆಲಸ ಮಾಡುತ್ತಿದೆ, ಎಸ್ಐಟಿ ತಂಡ ಏನು ಮಾಡ್ತಿದೆ, ಏನ್ ಮಾಡ್ಬೇಕು ಅಂತ ಹೇಳೋ ಅಗತ್ಯವಿಲ್ಲ. ನಾವು ಎಸ್ಐಟಿ ತನಿಖೆಯಲ್ಲಿ ಮಧ್ಯ ಪ್ರವೇಶ ಮಾಡುವುದಿಲ್ಲ ಎಂದು ತಿಳಿಸಿದರು.

ಎಸ್ಐಟಿ ಕಾನೂನಾತ್ಮಕವಾಗಿ, ನಿಷ್ಪಕ್ಷಪಾತ ತನಿಖೆ ಮಾಡುವ ವಿಶ್ವಾಸ ಇದೆ. ಎಸ್ಐಟಿ ತನಿಖೆ ಬಗ್ಗೆ ಟೀಕೆ, ಟಿಪ್ಪಣಿ ಅಗತ್ಯವಿಲ್ಲ. ನಿರ್ಭಯ ಕೇಸ್​ನ ನಿಯಮಗಳು ಉಲ್ಲಂಘನೆ ಆಗಿಲ್ಲ ಎಂದು ಇದೇ ವೇಳೆ ಅವರು ಸ್ಪಷ್ಟಪಡಿಸಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.