ETV Bharat / city

ನೋ ಪಾರ್ಕಿಂಗ್​ನಲ್ಲಿ ವಾಹನ ಪಾರ್ಕ್ ಮಾಡಿದ್ರೆ ದೂರು ದಾಖಲು: ಆರಗ ಜ್ಞಾನೇಂದ್ರ

author img

By

Published : Feb 3, 2022, 5:51 AM IST

15 ದಿನಗಳ ಕಾಲ ಖಾಸಗಿ ವಾಹನಗಳ ಟೋಯಿಂಗ್ ಸ್ಥಗಿತಗೊಂಡಿರುವ ಹಿನ್ನೆಲೆ ಗುರುವಾರದಿಂದ ನೋಪಾರ್ಕಿಂಗ್ ಸ್ಥಳದಲ್ಲಿ ವಾಹನ ಪಾರ್ಕ್ ಮಾಡಿದ್ರೆ ಪೊಲೀಸರು ದೂರು ದಾಖಲು ಮಾಡ್ತಾರೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು.

ಆರಗ ಜ್ಞಾನೇಂದ್ರ
ಆರಗ ಜ್ಞಾನೇಂದ್ರ

ಬೆಂಗಳೂರು: ಪ್ರತಿ 25 ಮೀಟರ್​ಗೆ ಒಂದು ನೋ ಪಾರ್ಕಿಂಗ್ ಬೋರ್ಡ್ ಅಳವಡಿಕೆಗೆ ತ್ವರಿತವಾಗಿ ಕ್ರಮ ಕೈಗೊಳ್ಳಲಾಗುವುದು ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದ್ದಾರೆ.

ಬೆಂಗಳೂರಿನ ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಮಾಡಿ ಸಮಾಲೋಚಿಸಿದ ಬಳಿಕ ಮಾತನಾಡಿದ ಅವರು 15 ದಿನಗಳ ಕಾಲ ಖಾಸಗಿ ವಾಹನಗಳ ಟೋಯಿಂಗ್ ಸ್ಥಗಿತಗೊಂಡಿರುವ ಹಿನ್ನೆಲೆ ಗುರುವಾರದಿಂದ ನೋಪಾರ್ಕಿಂಗ್ ಸ್ಥಳದಲ್ಲಿ ವಾಹನ ಪಾರ್ಕ್ ಮಾಡಿದ್ರೆ ಪೊಲೀಸರು ದೂರು ದಾಖಲು ಮಾಡ್ತಾರೆ. 25 ಮೀಟರ್​ಗೆ ಒಂದು ನೋ ಪಾರ್ಕಿಂಗ್ ಬೋರ್ಡ್ ಅಳವಡಿಕೆ ಮಾಡಲು ತೀರ್ಮಾನಿಸಿದ್ದೇವೆ. ಇಷ್ಟು ದಿನ 50 ಮೀಟರ್​ಗೆ ನೋ ಪಾರ್ಕಿಂಗ್ ಬೋರ್ಡ್ ಹಾಕಲಾಗಿತ್ತು. ಇದಕ್ಕೆ ಆಕ್ಷೇಪ ವ್ಯಕ್ತವಾಗಿತ್ತು. 15 ದಿನಗಳ ಒಳಗೆ ಹೊಸ ನಿಯಮ ಮಾಡುತ್ತೇವೆ ಎಂದರು.

ಅಧಿಕಾರಿಗಳ ಸಂಬಂಧಿಕರಿಗೆ ಟೆಂಡರ್ ಕೊಟ್ಟಿರುವ ವಿಚಾರ ಮಾತನಾಡಿ, ಟೆಂಡರ್ ಪರಿಶೀಲನೆ ಮಾಡಿ ಕೊಡ್ತೀವಿ. ದಂಡ ವಿಚಾರದಲ್ಲೂ ಮರು ಪರಿಶೀಲನೆ ಮಾಡ್ತೀವಿ. ಸರ್ಕಾರಿ ಕಟ್ಟಡಗಳಲ್ಲಿ ಪಾರ್ಕಿಂಗ್ ವ್ಯವಸ್ಥೆ ಇಲ್ಲದಿರುವುದನ್ನ ಪರಿಶೀಲನೆ ಮಾಡ್ತೀವಿ. ಎಲ್ಲಿ ಪಾರ್ಕಿಂಗ್​ಗೆ ಜಾಗ ಇದೆ ಅನ್ನೋದನ್ನ ಪೊಲೀಸರೇ ಗುರುತಿಸುತ್ತಾರೆ. ಸಾರ್ವಜನಿಕರ ಜತೆ ಸಭ್ಯವಾಗಿ ವರ್ತಿಸಬೇಕು ಎಂದು ಪೊಲೀಸರಿಗೂ ಹೇಳುತ್ತೇವೆ ಎಂದರು.

ಇದೇ ವೇಳೆ ಹಿಜಬ್ ಧರಿಸುವ ಪ್ರಕರಣದ ಬಗ್ಗೆ ಪ್ರತಿಕ್ರಿಯೆ ನೀಡಲು ನಿರಾಕರಿಸಿ ತೆರಳಿದರು.

ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.