ETV Bharat / city

ಸರ್ಕಾರಕ್ಕೆ ಬದ್ಧತೆ ಇದ್ದರೆ ಗಣಿಗಾರಿಕೆ ಸ್ಫೋಟದ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಿ: ನಾರಾಯಣಸ್ವಾಮಿ

15 ದಿನ ಹಿಂದೆ ದಾಳಿ ನಡೆದಿದೆ. ಈಗ ಮತ್ತೆ ಅಕ್ರಮ ಗಣಿಗಾರಿಕೆ ಆರಂಭವಾಗಿದೆ. ಇದರ ಅರ್ಥ ಏನು? ಸ್ಥಳೀಯ ವ್ಯಕ್ತಿಯೊಬ್ಬ ಸಚಿವ ಸುಧಾಕರ್ ವಿರುದ್ಧ ಆರೋಪ ಮಾಡಿದ್ದಾನೆ. ಇದು ನಿಜ. ಅಕ್ರಮ ಗಣಿಗಾರಿಕೆ ನಡೆಸುವವರು ಇವರಿಗೆ ಹಫ್ತಾ ಕೊಡಬೇಕಿದೆ ಎಂದು ವಿಧಾನ ಪರಿಷತ್ ಕಾಂಗ್ರೆಸ್ ಸಚೇತಕ ನಾರಾಯಣಸ್ವಾಮಿ ಆರೋಪಿಸಿದರು.

ವಿಧಾನ ಪರಿಷತ್
ವಿಧಾನ ಪರಿಷತ್
author img

By

Published : Mar 16, 2021, 7:35 PM IST

ಬೆಂಗಳೂರು: ರಾಜ್ಯಕ್ಕೆ ಅನ್ಯ ರಾಜ್ಯಗಳಿಂದ ಸ್ಫೋಟಕ ವಸ್ತು ಅನಾಯಾಸವಾಗಿ ಬರುತ್ತಿದೆ. ಸರ್ಕಾರದ ವಿವಿಧ ಇಲಾಖೆಗಳ ವೈಫಲ್ಯ ಇದು ಎನ್ನಬಹುದಲ್ಲವೇ ಎಂದು ವಿಧಾನ ಪರಿಷತ್ ಕಾಂಗ್ರೆಸ್ ಸಚೇತಕ ನಾರಾಯಣಸ್ವಾಮಿ ಅಭಿಪ್ರಾಯಪಟ್ಟಿದ್ದಾರೆ.

ನಿಯಮ 68ರ ಅಡಿ ಚಿಕ್ಕಬಳ್ಳಾಪುರ ಭಾಗದ ಅಕ್ರಮ ಗಣಿಗಾರಿಕೆ ಕುರಿತ ಚರ್ಚೆಯಲ್ಲಿ ಮಾತನಾಡಿ, ಕೇವಲ ಒಂದೂವರೆ ತಿಂಗಳ ಅವಧಿಯಲ್ಲಿ ಶಿವಮೊಗ್ಗ, ಚಿಕ್ಕಬಳ್ಳಾಪುರದಲ್ಲಿ ಗಣಿಗಾರಿಕೆಗೆ ಜಿಲೆಟಿನ್ ಕಡ್ಡಿ ಸಾಗಿಸುತ್ತಿದ್ದ ವಾಹನ ಸ್ಫೋಟಗೊಂಡು 10ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ. ಇವರ ಸಾವಿಗೆ ಕಾರಣರಾದವರ ವಿರುದ್ಧ ಕ್ರಮ ಆಗಬೇಕು. ಕುಟುಂಬ ನಿರ್ವಹಣೆ ಇವರದ್ದಾಗಿತ್ತು. 15 ದಿನ ಹಿಂದೆ ದಾಳಿ ನಡೆದಿದೆ. ಈಗ ಮತ್ತೆ ಅಕ್ರಮ ಗಣಿಗಾರಿಕೆ ಆರಂಭವಾಗಿದೆ. ಇದರ ಅರ್ಥ ಏನು? ಸ್ಥಳೀಯ ವ್ಯಕ್ತಿಯೊಬ್ಬ ಸಚಿವ ಸುಧಾಕರ್ ವಿರುದ್ಧ ಆರೋಪ ಮಾಡಿದ್ದಾನೆ. ಇದು ನಿಜ. ಅಕ್ರಮ ಗಣಿಗಾರಿಕೆ ನಡೆಸುವವರು ಇವರಿಗೆ ಹಫ್ತಾ ಕೊಡಬೇಕಿದೆ.

ಸಚಿವರು ಇಲಾಖೆ ಭದ್ರಪಡಿಸಿ, ನ್ಯೂನತೆ ಸರಿಪಡಿಸಿ. ಅಕ್ರಮ ನಿಯಂತ್ರಣ ಆಗಬೇಕು. ಯಾರು ಯಾವ ಗಣಿಗಾರಿಕೆಯ ಪರವಾನಗಿ ಪಡೆದಿರುತ್ತಾರೋ ಅವರು ಅದನ್ನೇ ಮಾಡಬೇಕು. ಸರ್ಕಾರ ನಿಷ್ಠುರವಾಗಿ ಕ್ರಮಕ್ಕೆ ಮುಂದಾಗಬೇಕು. ತಪ್ಪಿತಸ್ಥರಿಗೆ ಶಿಕ್ಷೆ ಆಗಬೇಕು. ಕೂಡಲೇ ಸಂಬಂಧಿಸಿದ ಜಿಲ್ಲಾ ಉಸ್ತುವಾರಿಗಳನ್ನು ಕರೆಸಿ ಸಭಾಪತಿಗಳು ಸಭೆ ಕರೆಯಬೇಕು. ಜಿಲ್ಲಾಧಿಕಾರಿ, ಪೊಲೀಸ್ ವರಿಷ್ಠಾಧಿಕಾರಿ, ಇಲಾಖೆ ಅಧಿಕಾರಿಗಳು ನೇರ ಕಾರಣ. ಅವರ ಬದಲು ಪೊಲೀಸ್ ಕಾನ್ಸ್​​ಟೇಬಲ್​​ಗಳನ್ನು ಸಸ್ಪೆಂಡ್ ಮಾಡಿದರೆ ಆಗದು. ಸಿಐಡಿಯಿಂದ ಘಟನೆ ತನಿಖೆಗೆ ನ್ಯಾಯ ಸಿಗಲ್ಲ. ಆದ್ದರಿಂದ ಸುಪ್ರೀಂ ಕೋರ್ಟ್ ಹಾಲಿ ಇಲ್ಲವೇ ನಿವೃತ್ತ ನ್ಯಾಯಾಧೀಶರ ಮೂಲಕ ಸೂಕ್ತ ತನಿಖೆ ನಡೆಸಬೇಕು ಎಂದರು.

ಮಾಜಿ ಸಭಾಪತಿ ಪ್ರತಾಪ್ ಚಂದ್ರ ಶೆಟ್ಟಿ ಮಾತನಾಡಿ, ಕಲ್ಲು ಗಣಿಗಾರಿಕೆ, ಕ್ರಷರ್, ಎಂ ಸ್ಯಾಂಡ್ ಒಂದಕ್ಕೊಂದು ಸಂಬಂಧ ಹೊಂದಿರುತ್ತವೆ. 2,493 ಕಲ್ಲು ಗಣಿಗಾರಿಕೆ ಇದೆ ಎಂದು ಹೇಳಿದ್ದೀರಿ. 400ಕ್ಕೆ ಸ್ಫೋಟಕ ಬಳಸಬಾರದು. 344 ಮಂದಿ ಸ್ಫೋಟಕ ಬಳಸಬಾರದು ಎಂದಿದೆ. ಉಳಿದವರೆಲ್ಲಾ ಅಕ್ರಮ ಗಣಿಗಾರಿಕೆ ಅಂತ ಆಯಿತು. ಇಲ್ಲಿ ಗಣಿಗಾರಿಕೆ ನಡೆಸುವವರಿಗಿಂತ ಸರ್ಕಾರ, ಸಂಬಂಧಿಸಿದ ಸಚಿವರ ವೈಫಲ್ಯ ಇದೆ ಎನ್ನುವುದು ಸಾಬೀತಾಗಿದೆ ಎಂದರು.

ಇದು ಹಗಲು ದರೋಡೆ. ಎಲ್ಲರ ಗಮನಕ್ಕೆ ಬಂದಿರುತ್ತದೆ. ಅಗತ್ಯ ಭದ್ರತಾ ವ್ಯವಸ್ಥೆ ಮಾಡಿಕೊಂಡಿರಲ್ಲ. ಸ್ಫೋಟಕ ಬಳಸುವ ವಿಧಾನ ಎಲ್ಲಿಯವರೆಗೆ ನಿಯಂತ್ರಿಸುವ ಕಾರ್ಯ ಆಗುವುದಿಲ್ಲವೋ, ಅಲ್ಲಿಯವರೆಗೆ ಪರಿಹಾರ ಇಲ್ಲ. ಸರ್ಕಾರದ ಗಮನಕ್ಕೆ ಬಾರದೇ ಯಾವುದೇ ಕೆಲಸ ನಡೆಯಲ್ಲ. ಸರ್ಕಾರದ ಗಮನಕ್ಕೆ ಬಂದಿರುವುದರಿಂದ ಅವರೇ ಕಾರಣ. ಸಮಸ್ಯೆ ವ್ಯವಸ್ಥೆಯ ಅಧ್ಯಕ್ಷರವರೆಗೆ ಹೋಗಲ್ಲ. ಏನೇ ಗೊಂದಲ ಎದುರಾದರೂ ಶಾಸನಬದ್ಧವಾಗಿ ಕ್ರಮ ಆಗಬೇಕು. ಸಮಸ್ಯೆ ನಿಯಂತ್ರಿಸುವ ಆಶಯ ಹೊಂದಿದ್ದೀರಿ. ಯಶಸ್ಸು ಸಿಗಲಿ. ಮುಂದೆ ಇಂತಹ ಅನಾಹುತ ನಡೆದರೆ ತಾವು ನೈತಿಕ ಹೊಣೆ ಹೊರಬೇಕು ಎಂದು ಹೇಳಿದರು.

ಕಾಂಗ್ರೆಸ್ ಸದಸ್ಯ ನಜೀರ್ ಅಹಮದ್ ಮಾತನಾಡಿ, ಸರ್ಕಾರದ ಬಳಿ ಎಲ್ಲಾ ವ್ಯವಸ್ಥೆ ಇದೆ. ಹೀಗಿರುವಾಗ ಪ್ರತಿಪಕ್ಷದ ಸಲಹೆ ಕೇಳುತ್ತಿದ್ದೀರಿ. ನಾಲ್ಕೈದು ಇಲಾಖೆಗಳು ಇದರ ವ್ಯಾಪ್ತಿಯಲ್ಲಿ ಬರುತ್ತವೆ. ಘಟನೆ ಯಾಕೆ ಆಯಿತು? ಹೇಗೆ ಆಯಿತು ಎಂಬ ಮಾಹಿತಿ ನಿಮ್ಮ ಬಳಿ ಇದೆ. ಬಂಧಿತ ವ್ಯಕ್ತಿಯ ಸೂಕ್ತ ತನಿಖೆ ನಡೆಸಿಲ್ಲ. ಜಿಲೆಟಿನ್ ಕಡ್ಡಿ ಮುಚ್ಚಿಡಲು ಹೋದ ಸಂದರ್ಭ ಘಟನೆ ನಡೆದಿದೆ. ಹೊಂದಾಣಿಕೆಯಿಂದ ಪರಿಹಾರ ಅಸಾಧ್ಯ. ಯಾವ್ಯಾವ ರಾಜಕೀಯ ಪಕ್ಷ ಇದರ ಹಿಂದಿದೆ, ಇವನ್ನೆಲ್ಲ ನಿಯಂತ್ರಿಸುವ ಛಲ ಇದೆಯಾ? ಪೆನಾಲ್ಟಿ ಹಾಕಿದ್ದೀರಿ, ವಸೂಲಿ ಆಗಿದೆಯಾ? ಹೊಂದಾಣಿಕೆ ಮಾಡಿಕೊಳ್ಳಲಾಗಿದೆ. ಈ ಪ್ರಕರಣದಲ್ಲಿ ಭಾಗಿಯಾದವರ ಪತ್ತೆ ಮಾಡಿ ಕ್ರಮ ಕೈಗೊಳ್ಳಿ. ಸಂಬಂಧಿಸಿದ ಸರ್ಕಾರಿ ಅಧಿಕಾರಿಯನ್ನು ಕೆಲಸದಿಂದ ಕಿತ್ತು ಹಾಕಿ ಎಂದರು.

ಕಾಂಗ್ರೆಸ್ ಸದಸ್ಯ ಬಸವರಾಜ್ ಇಟಗಿ ಮಾತನಾಡಿ, ಸಾಗಾಣಿಕೆ ಸಂದರ್ಭ ಅನಾಹುತ ಆಗಿದೆ. ಜನವಸತಿಗೆ ತೊಂದರೆ ಆಗದ ಜಾಗದಲ್ಲಿ ಜಿಲೆಟಿನ್, ಡಿಟೋನೇಟರ್​ ಇಟ್ಟು, ಅಗತ್ಯ ಇದ್ದಷ್ಟು ಮಾತ್ರ ಒಯ್ಯುವ ವ್ಯವಸ್ಥೆ ಇತ್ತು. ಆದರೆ ಅಕ್ರಮ ಗಣಿಗಾರಿಕೆ ಮಾಡುವವರು ದುರಾಸೆಗೆ ಬಿದ್ದು ಇತ್ತೀಚೆಗೆ ಅನೈಸರ್ಗಿಕ ಗಣಿಗಾರಿಕೆ ನಡೆಯುತ್ತಿದೆ. ಲಾರಿಗಳಿಂದ ಬೋರ್​ವೆಲ್​​ ಕೊರೆಯುವ ಮಾದರಿಯ ಯಂತ್ರ ಬಳಸಿ ಕಲ್ಲು ಕೊರೆದು ಅದರಲ್ಲಿ ಜಿಲೆಟಿನ್ ಕಡ್ಡಿ, ಡೀಸೆಲ್, ಅಮೋನಿಯಂ ನೈಟ್ರೇಟ್ ಹೆಚ್ಚಾಗಿ ತುಂಬಿಸಿಡಿಸುತ್ತಾರೆ. ಇದರ ಅಪಾಯ ಜಾಸ್ತಿ. ನಿಯಂತ್ರಿಸುವ ಕಾರ್ಯ ಮಾಡಬೇಕು. ಇದಾದರೆ ಮಾತ್ರ ಸಮಸ್ಯೆ ಕಡಿಮೆ ಆಗಲಿದೆ ಎಂದು ವಿವರಿಸಿದರು.

ಇದನ್ನೂ ಓದಿ.. ಹೆಚ್ಚುತ್ತಿರುವ ಕೊರೊನಾ ಪ್ರಕರಣ: ಗುಜರಾತ್​ನಲ್ಲಿ ರಾತ್ರಿ ಕರ್ಫ್ಯೂ ಸಮಯ ವಿಸ್ತರಣೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.