ಕೆಆರ್ಪುರ: ಸಾರ್ವಜನಿಕ ಆಸ್ಪತ್ರೆಗೆ ಆರೋಗ್ಯ ಸಚಿವ ಡಾ. ಕೆ ಸುಧಾಕರ್ ಮತ್ತು ಸಚಿವ ಭೈರತಿ ಬಸವರಾಜ್, ಕೊರೊನಾ ಚಿಕಿತ್ಸೆಗೆ ಐಸಿಯು ಕೊಠಡಿ ಮತ್ತು ಆರು ವೆಂಟಿಲೇಟರ್ ಬೆಡ್ ಉದ್ಘಾಟಿಸಿದರು. ಹಾಗೂ ಆಶಾ ಕಾರ್ಯಕರ್ತರಿಗೆ, ಕೋವಿಡ್ ಕಿಟ್, ಮೆಡಿಸನ್ ಕಿಟ್ ಹಾಗೂ ಬೆಡ್ ಶೀಟ್ ಗಳನ್ನು ವಿತರಿಸಿದರು.
ಓದಿ: ಕ್ರಿಕೆಟ್ ಜಗತ್ತನ್ನು ಬೆರಗಾಗಿಸಿದ್ದ ಗಂಗೂಲಿ-ದ್ರಾವಿಡ್ರ ವಿಶ್ವದಾಖಲೆಯ ಜೊತೆಯಾಟಕ್ಕೆ 22ವರ್ಷ
ಕಳೆದ ಹತ್ತು ದಿನಗಳ ಹಿಂದೆ ಸಾರ್ವಜನಿಕ ಆಸ್ಪತ್ರೆಗೆ ಭೇಟಿ ನೀಡಿದಾಗ ಸಾಕಷ್ಟು ಸಮಸ್ಯೆಗಳು ಸಚಿವರ ಗಮನಕ್ಕೆ ಬಂದಿತ್ತು. ನಂತರ ಕಳೆದ ಮೊದಲ ಅಲೆಯಲ್ಲಿ ನೀಡಿದ್ದ ಆರು ವೆಂಟಿಲೇಟರ್ಗಳನ್ನ ಅಳವಡಿಸದೇ ನಿರ್ಲಕ್ಷ್ಯ ತೋರಿದ ಸಿಬ್ಬಂದಿಯನ್ನ ತರಾಟೆಗೆ ತೆಗೆದುಕೊಂಡರು. ಸಾರ್ವಜನಿಕ ಆಸ್ಪತ್ರೆಯಲ್ಲಿ ಉತ್ತಮ ಸೌಕರ್ಯಗಳು ಇದ್ದರೂ ಉಪಯೋಗಿಸಿಕೊಳ್ಳದಿರುವುದು ಸಚಿವರ ಗಮನಕ್ಕೆ ಬಂದಿತ್ತು.
ಸಾರ್ವಜನಿಕ ಆಸ್ಪತ್ರೆಯಲ್ಲಿ ವೆಂಟಿಲೇಟರ್ ಇಲ್ಲದ ಕಾರಣ ಸುಮಾರು 40ಕ್ಕೂ ಹೆಚ್ಚು ಸೋಂಕಿತರು ಪ್ರಾಣ ಕಳೆದು ಕೊಂಡಿದ್ದರು. ಇದರಿಂದ ಎಚ್ಚೆತ್ತುಕೊಂಡ ಅರೋಗ್ಯ ಸಚಿವರು ಇಂದು ಐಸಿಯು ಮತ್ತು ಆರು ವೆಂಟಿಲೇಟರ್ ಬೆಡ್ ಗಳನ್ನ ಉದ್ಘಾಟಿಸಿದರು.
ನಂತರ ಮಾತನಾಡಿದ ಸಚಿವ ಡಾ. ಸುಧಾಕರ್ ಇಲ್ಲಿ ಐಸಿಯು ಕೊಠಡಿ ಮತ್ತು ಆರು ವೆಂಟಿಲೇಟರ್ ಗಳನ್ನ ಉದ್ಘಾಟನೆ ಮಾಡಲಾಗಿದೆ. ಕಳೆದ ಬಾರಿ ಭೇಟಿ ನೀಡಿದ ಮೇಲೆ ಇದುವರೆಗೂ ಇಲ್ಲಿ ಯಾವುದೇ ಸಾವಾಗಿಲ್ಲ, ಇದು ಸಂತೋಷ ಕೊಡುವಂತಹ ಸುದ್ದಿಯಾಗಿದೆ ಎಂದು ತಿಳಿಸಿದರು.
ಈ ಆಸ್ಪತ್ರೆಗೆ ಕೆಆರ್ ಪುರ, ಮಹದೇವಪುರ, ಸಿವಿರಾಮನ್ ನಗರ ಸುತ್ತಮುತ್ತಲಿನ ಕ್ಷೇತ್ರದ ಜನ ಇಲ್ಲಿಗೆ ಬರುತ್ತಾರೆ. ಈ ಭಾಗದ ಸಚಿವರು ಬೈರತಿ ಬಸವರಾಜ್ ಅವರ ಕೋರಿಕೆಯಂತೆ
100 ಬೆಡ್‌ಗಳಿರುವುದನ್ನ 200 ಬೆಡ್ಗಳಿಗೆ ಹೆಚ್ಚಿಸುವುದಾಗಿ ಮತ್ತು ಆಸ್ಪತ್ರೆಗೆ ಬೇಕಾದ ಎಲ್ಲ ಸೌಲಭ್ಯಗಳನ್ನು ನೀಡುವುದಾಗಿ ಭರವಸೆ ನೀಡಿದರು. ಐಟಿಐ ಆಸ್ಪತ್ರೆಯನ್ನ ಸಂಪೂರ್ಣವಾಗಿ ರೂಪಾಂತರ ಮಾಡಿ ಮಕ್ಕಳ ಆರೈಕೆ ಆಸ್ಪತ್ರೆಯಾಗಿ ಪರಿವರ್ತನೆ ಮಾಡುವುದಾಗಿ ತಿಳಿಸಿದರು.
ನಂತರ ಬೈರತಿ ಬಸವರಾಜ್ ಮಾತನಾಡಿ, ಬೆಂಗಳೂರು ಪೂರ್ವ ತಾಲೂಕಿನಲ್ಲಿ ದೊಡ್ಡ ಆಸ್ಪತ್ರೆ ಇದಾಗಿದ್ದು, ಸುಮಾರು 100 ಬೆಡ್ ಸಾಮರ್ಥ್ಯ ಇದ್ದುದನ್ನು 200 ಬೆಡ್ ಮಾಡಲು ಸಚಿವರು ಒಪ್ಪಿಗೆ ನೀಡಿದ್ದಾರೆ. ಶಾಸಕರ ಪ್ರದೇಶಾಭಿವೃದ್ಧಿ ನಿಧಿಯಿಂದ ಕಳೆದ ಭಾರಿ 3.5 ಕೋಟಿ ರೂ. ಖರ್ಚು ಮಾಡಲಾಗಿದೆ. ಇನ್ನೂ ಸಹ ಮುಂದಿನ ದಿನಗಳಲ್ಲಿ ಶಾಸಕರ ನಿಧಿಯ ಹಣವನ್ನ ಆಸ್ಪತ್ರೆಯ ಅಭಿವೃದ್ಧಿಗೆ ಬಳಸಲಾಗುತ್ತದೆ ಎಂದರು.