ಬೆಂಗಳೂರು : ನಾನು ಪರಿಷತ್ ಚುನಾವಣೆಯ ಟಿಕೆಟ್ ಆಕಾಂಕ್ಷಿಯಾಗಿರಲಿಲ್ಲ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ. ಇಬ್ರಾಹಿಂ ಸ್ಪಷ್ಟಪಡಿಸಿದರು. ವಿಧಾನಸೌಧದಲ್ಲಿ ಮಾತನಾಡಿದ ಅವರು, ನಾನು ಪಕ್ಷದ ಅಧ್ಯಕ್ಷನಾಗಿ ಉದಾತ್ತ ಮನೋಭಾವ ತೋರಿಸಬೇಕು.
ಬಡಿಸೋ ಜಾಗದಲ್ಲಿ ಇದ್ದು ನಾವೇ ಊಟ ಮಾಡೋಕೆ ಕೂತರೆ ಹೆಂಗೆ?. ಆದಷ್ಟು ಬೇಗ ಮಂಗಳಮುಖಿ ಸರ್ಕಾರ ತೆಗೆಯಬೇಕು. ಗಂಡಸೂ ಅಲ್ಲ, ಹೆಂಗಸೂ ಅಲ್ಲದ ಸರ್ಕಾರ ಇದು ಎಂದು ಕಿಡಿಕಾರಿದರು.
ಈ ಸರ್ಕಾರದ ಜೊತೆಗೆ ಹೋರಾಡೋಕೂ ಆಗಲ್ಲ, ಸುಮ್ಮನಿರಲೂ ಆಗಲ್ಲ. ಹೆಂಗಸರಾದರೆ ಹೆಂಗಸರನ್ನು ಕಳಿಸಬಹುದು. ಗಂಡಸರಾದರೆ ಗಂಡಸರನ್ನು ಕಳಿಸಬಹುದು. ಆದರೆ, ಇವರು ಎರಡೂ ಅಲ್ಲ, ಚಪ್ಪಾಳೆ ತಟ್ಟಿ ಬಿಡ್ತಾರೆ, ನಕ್ಕು ಬಿಡ್ತಾರೆ, ಏನು ಮಾಡೋಣ ಎಂದು ವ್ಯಂಗ್ಯವಾಡಿದರು.
ಇದನ್ನೂ ಓದಿ: ವಿಧಾನ ಪರಿಷತ್ ಚುನಾವಣೆಗೆ ಬಿಜೆಪಿ ಪಟ್ಟಿ ಬಿಡುಗಡೆ: ಲಕ್ಷ್ಮಣ ಸವದಿಗೆ ಮತ್ತೆ ಟಿಕೆಟ್