ETV Bharat / city

ಕಾಂಗ್ರೆಸ್​ನಿಂದ ನಾನು ರಾಜಕೀಯ ಜೀವನ ಪ್ರಾರಂಭಿಸಿದ್ದು: ಹೆಚ್.ಡಿ.ದೇವೇಗೌಡ

author img

By

Published : Oct 11, 2020, 10:14 PM IST

ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ತಮ್ಮ ರಾಜಕೀಯ ಜೀವನದ ಇತಿಹಾಸವನ್ನು ಮೆಲುಕು ಹಾಕಿದರು.

HD Deve Gowda
ಹೆಚ್.ಡಿ.ದೇವೇಗೌಡ

ಬೆಂಗಳೂರು: ನಾನು ರಾಜಕೀಯ ಪ್ರಾರಂಭ ಮಾಡಿದ್ದು ಕಾಂಗ್ರೆಸ್​ನಿಂದಲೇ, ಆದರೆ ನಂತರ ವಿವಿಧ ಕಾರಣದಿಂದ ಕಾಂಗ್ರೆಸ್ ಬಿಟ್ಟೆ ಎಂದು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ತಮ್ಮ ರಾಜಕೀಯ ಜೀವನದ ಇತಿಹಾಸವನ್ನು ಮೆಲುಕು ಹಾಕಿದರು.

ಪಕ್ಷದ ಕಚೇರಿ ಜೆ‌.ಪಿ.ಭವನದಲ್ಲಿ ಮಾತನಾಡಿದ ಅವರು, ಸ್ವತಂತ್ರ ನಂತರ ಮೊದಲ ಸಾರ್ವತ್ರಿಕ ಚುನಾವಣೆಯಲ್ಲಿ ಕಾಂಗ್ರೆಸ್ ಪರ ಕೆಲಸ ಮಾಡಿದೆ‌. ಕಾಂಗ್ರೆಸ್ ಮೇಲೆ ನನಗೆ ಈಗಲೂ ಗೌರವ ಇದೆ. ನಾನು ಆ ಪಕ್ಷದ ಬಗ್ಗೆ ಏನೇನು ಮಾತನಾಡೋಲ್ಲ. ನಂತರ ನಾನು ಜೆ.ಪಿ. ಜೊತೆ ಸೇರಿಕೊಂಡೆ. ನನ್ನನ್ನು ಸಿಎಂ ಮಾಡೋದಕ್ಕೆ ಇಂದಿರಾ ಗಾಂಧಿಯೂ ಒಪ್ಪಿದ್ದಾರೆ ಎಂದು ಅಂದಿನ ದಿನ ನನಗೆ ಕಾಂಗ್ರೆಸ್ ತೊರೆಯದಂತೆ ಮನವಿ ಮಾಡಿದ್ರು. ಆದ್ರೆ ನಾನು ನನ್ನ ಪಕ್ಷ ಬಿಟ್ಟು ಬರೋದಿಲ್ಲ ಅಂತ ಕಾಂಗ್ರೆಸ್ ನಾಯಕರಿಗೆ ಹೇಳಿದ್ದೆ. ಅಂದಿನಿಂದ‌ ಇಂದಿನವರೆಗೂ ನಾನು ಪಕ್ಷಕ್ಕಾಗಿ ದುಡಿಯುತ್ತಿದ್ದೇನೆ ಎಂದು ಸ್ಮರಿಸಿದರು.

ಪಕ್ಷಕ್ಕೆ ನಿಷ್ಠರಾಗಿರುವವರಿಗೆ ಟಿಕೆಟ್:

ಉಪ ಚುನಾವಣೆಗೆ ಅಭ್ಯರ್ಥಿ ಆಯ್ಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಬುಧುವಾರ ನಮ್ಮ ಪಕ್ಷದ ಅಭ್ಯರ್ಥಿ ನಾಮಪತ್ರ ಸಲ್ಲಿಸಲಿದ್ದಾರೆ. ಸೋಲು ಗೆಲುವು ಆಮೇಲೆ. ಪಕ್ಷಕ್ಕೆ ನಿಷ್ಠರಾಗಿರುವವರಿಗೆ ಟಿಕೆಟ್ ನೀಡಲಾಗುವುದು. ಹೊರಗಿನವರಿಗೆ ಟಿಕೆಟ್ ಕೊಟ್ಟು ಸಾಕಾಗಿ ಹೋಗಿದೆ ಎಂದು ವಿವರಿಸಿದರು.

ಒಂದು ಜಾತಿಯಿಂದ ಯಾರೂ ಗೆಲ್ಲಲಾಗದು. ಹಲವು ಬಾರಿ ಈ ಬಗ್ಗೆ ಹೇಳಿರುವೆ. ನಾನು ಮಹಿಳೆಯರಿಗೆ ಮೀಸಲಾತಿ ವಿಚಾರವಾಗಿ ಪ್ರಸ್ತಾಪ ಮಾಡಿದ್ದೆ. ಅದು ಲೋಕಸಭೆಯಲ್ಲಿ ಪಾಸ್ ಆಗಿಲ್ಲ ಎಂದು ತಿಳಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.