ETV Bharat / city

ಯಾರದೋ ಮಾತಿಗೆ ಹೆದರಿ ಫಲಾಯನ ಮಾಡುವವನು ನಾನಲ್ಲ: ಹೆಚ್​ಡಿಕೆ - kannada news, etv bharat

ಸಿದ್ದರಾಮಯ್ಯ ಅವಧಿಯಲ್ಲಿ ಘೋಷಿತವಾಗಿದ್ದ ಸಾಲದ ಮೊತ್ತ 3 ಸಾವಿರ ಕೋಟಿ ರೂ. ಸೇರಿದಂತೆ, ನಾನು ಘೋಷಿಸಿದ್ದ ಸಾಲಮನ್ನಾ ಕೂಡ ಹಂತ ಹಂತವಾಗಿ ಜಾರಿಗೆ ತರುತ್ತಿದ್ದೇನೆ. ಇದರಿಂದ ನನ್ನ ಮಾತು ಉಳಿಸಿಕೊಳ್ಳುತ್ತಿದ್ದು, ಸಮರ್ಥವಾಗಿ ಸರ್ಕಾರ ಮುನ್ನಡೆಸಿಕೊಂಡು ಸಾಗಿದ್ದೇನೆ. ಎಡವುವ ಪ್ರಶ್ನೆಯೇ ಇಲ್ಲ ಎಂದರು.

ಸಿಎಂ ಕುಮಾರಸ್ವಾಮಿ
author img

By

Published : Mar 6, 2019, 6:54 PM IST

ಬೆಂಗಳೂರು: ನಾನು ಕೊಟ್ಟ ಮಾತಿನಂತೆ ನಡೆದುಕೊಳ್ಳುತ್ತಿದ್ದೇನೆ. ಯಾರದ್ದೋ ಮಾತಿಗೆ ಹೆದರಿ ಫಲಾಯನ ಮಾಡುವವನು ನಾನಲ್ಲ ಎಂದು ಸಿಎಂ ಎಚ್ ಡಿ ಕುಮಾರಸ್ವಾಮಿ ಭರವಸೆ ನೀಡಿದ್ದಾರೆ.

ವಿಧಾನಸೌಧದಲ್ಲಿ ಹಮ್ಮಿಕೊಂಡಿದ್ದ ಕೃಷಿ ಪಂಡಿತ ಹಾಗೂ ಕೃಷಿ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ಅವರು, ರೈತರ ಸಾಲಮನ್ನಾ ಹೆಸರಿನಲ್ಲಿ ವಿವಿಧ ಇಲಾಖೆಗೆ ಬಿಡುಗಡೆ ಆಗಬೇಕಿದ್ದ ಹಣಕ್ಕೆ ತಡೆ ಹಿಡಿದಿಲ್ಲ. ಎಲ್ಲಾ ಇಲಾಖೆಗೆ ಸಮರ್ಪಕವಾಗಿ ಬಿಡುಗಡೆ ಆಗುತ್ತಿದೆ. ನಾವು ಉತ್ತಮ ಯೋಜನೆ ಹಮ್ಮಿಕೊಂಡಿದ್ದು, ಮುಂದಿನ ಸಾರಿಯ ಬಜೆಟ್​ಗೆ‌ ಕೂಡ ಈಗಲೇ ಹಣ ಮೀಸಲಿಟ್ಟಿದ್ದೇನೆ. ಸಿದ್ದರಾಮಯ್ಯ ಸರ್ಕಾರದಅವಧಿಯಲ್ಲಿ ಘೋಷಿತವಾಗಿದ್ದ ಸಾಲದ ಮೊತ್ತ 3 ಸಾವಿರ ಕೋಟಿ ರೂ. ಸೇರಿದಂತೆ, ನಾನು ಘೋಷಿಸಿದ್ದ ಸಾಲಮನ್ನಾ ಕೂಡ ಹಂತ ಹಂತವಾಗಿ ಜಾರಿಗೆ ತರುತ್ತಿದ್ದೇನೆ. ಇದರಿಂದ ನನ್ನ ಮಾತು ಉಳಿಸಿಕೊಳ್ಳುತ್ತಿದ್ದು, ಸಮರ್ಥವಾಗಿ ಸರ್ಕಾರ ಮುನ್ನಡೆಸಿಕೊಂಡು ಸಾಗಿದ್ದೇನೆ. ಎಡವುವ ಪ್ರಶ್ನೆಯೇ ಇಲ್ಲ ಎಂದರು.

ಇಸ್ರೇಲ್ ಮಾದರಿ ಕೃಷಿಗೆ ಒತ್ತು‌ಕೊಡಲು 500 ಕೋಟಿ ರೂ. ಮೀಸಲಿಟ್ಟಿದ್ದೇನೆ. ಭತ್ತದ ಬೆಳೆಗೆ ಉತ್ತೇಜನ ಕೊಟ್ಟಿದ್ದೇನೆ. ನಮ್ಮನ್ನು ನಂಬಿ, ವಿಶ್ವಾಸ ಇಡಿ. ನಮ್ಮ ಕೆಲಸಕ್ಕೆ ಸ್ಪಂದನೆ ಕೊಡಿ ಎಂದು ರೈತರಿಗೆ ಮನವಿ ಮಾಡಿದರು.

ಪ್ರಧಾನಿ ವಿರುದ್ಧ ಆಕ್ರೋಶ:

ಇದುವರೆಗೂ ರೈತರ ಬಗ್ಗೆ ತಲೆ ಕೆಡಿಸಿಕೊಳ್ಳದ ಪ್ರಧಾನಿ ನರೇಂದ್ರ ಮೋದಿ ರೈತ ಕಾಳಜಿ ತೋರಿಸುತ್ತಿದ್ದಾರೆ. ರೈತರಿಗೆ 6 ಸಾವಿರ ರೂ. ನೀಡಲು ನರೇಗಾ ಯೋಜನೆಗೆ ನೀಡಬೇಕಿದ್ದ 34 ಸಾವಿರ ಕೋಟಿ ರೂ. ತಡೆ ಹಿಡಿದಿದ್ದಾರೆ. ಕೇವಲ 6 ಸಾವಿರ ಕೋಟಿ ರೂ. ನೀಡಿದ್ದಾರೆ. ಉಳಿದ ಹಣ ಎಲ್ಲಿ? ನಾವು ಹಾಲಿನ ಸಬ್ಸಿಡಿಗೆ ನೀಡಿದ ಮೊತ್ತ ಇದಕ್ಕಿಂತ ದೊಡ್ಡದು. ಇಂದು ಕೇಂದ್ರ ಸರ್ಕಾರ ರಾಜ್ಯದ ರೈತರಿಗೆ ಬಿಡುಗಡೆ ಮಾಡುವುದು ಕೇವಲ 2500 ಕೋಟಿ ರೂ. ಆಗುತ್ತದೆ. ನಾವು ಕೊಡುವ ಸಬ್ಸಿಡಿ 16 ಸಾವಿರ ಕೋಟಿ ರೂ. ಆಗುತ್ತದೆ. ನಾನು ತಲೆಯಲ್ಲೇ ಎಲ್ಲಾ ತುಂಬಿಕೊಂಡಿದ್ದೇನೆ. ಚೀಟಿ ಹಿಡಿದುಕೊಂಡು ಓದಲ್ಲಾ ಎಂದು ಈ ನಡುವೆ ಬಿಎಸ್​ವೈಗೆ ಟಾಂಗ್ ಕೊಟ್ಟರು.

undefined
ಸಿಎಂ ಕುಮಾರಸ್ವಾಮಿ

ರಾಜ್ಯ ಸರ್ಕಾರದ ಬಜೆಟ್​ನಲ್ಲಿ 46 ಸಾವಿರ ಕೋಟಿ ರೂ. ಕೃಷಿಗೆ ನೀಡಿದ್ದೇನೆ. ಇದು ಐತಿಹಾಸಿಕ ಮೊತ್ತ. 24 ಗಂಟೆ ನಿಮ್ಮ ಚಿಂತೆ ನನಗೆ. ಆದಷ್ಟು ನಮಗೆ ಸಹಕಾರ ನೀಡಿ. ನಿಮಗೆ ಅಗೌರವ ಸೂಚಿಸಿ ನೋವು ಕೊಡುವವನಲ್ಲ. ನಿಮಗೆ ಸ್ಪಂದಿಸುತ್ತೇನೆ. ಕೊಡಗಿನ ಕಾಫಿ ಬೆಳೆಗಾರರ ಸಮಸ್ಯೆಗೆ 25 ಸಾವಿರ ಕೋಟಿ ನೀಡುತ್ತಿದ್ದೇವೆ. ರೈತರ ಪರವಾಗಿ ಇದ್ದೇವೆ. ಹೆಚ್ವಿನ ಬೆಳೆ ಪರಿಹಾರ ನೀಡಲು ಶ್ರಮಿಸುತ್ತಿದ್ದೇವೆ. ಮತಕ್ಕಾಗಿ ನಾವು ಪ್ರಯತ್ನ ಮಾಡುತ್ತಿಲ್ಲ. ನಿಮ್ಮ ಮೇಲಿನ ಕಾಳಜಿಯಿಂದ ಕೆಲಸ ಮಾಡುತ್ತಿದ್ದೇನೆ ಎಂದರು.

undefined

ಬೆಳೆನಷ್ಟ ಪರಿಹಾರ...

ರಾಜ್ಯದಲ್ಲಿ ಬರ ಕಾಣಿಸಿಕೊಂಡಿದೆ‌. 33000 ಕೋಟಿ ರೂ. ಬೆಳೆ ನಷ್ಟವಾಗಿದೆ. ಈ ಬೆಳೆ ನಿಮ್ಮ ಕೈಗೆ ಬಂದಿದ್ದರೆ ನಾವು ಸಾಲ ಮನ್ನಾ ಮಾಡುವ ಪರಿಸ್ಥಿತಿಯೇ ಇರುತ್ತಿರಲಿಲ್ಲ. ಕೇಂದ್ರ ಸರ್ಕಾರ, ಪ್ರಧಾನಿ ಮೋದಿ ಯಾರೂ ಮಾಡಿಲ್ಲದ ಕೆಲಸ ತಾವು ಮಾಡಿದ್ದೇವೆ. ಭರಪೂರ ಹಣ ಬಿಡುಗಡೆ ಮಾಡಿದ್ದೇವೆ ಎಂದು ಹೇಳಿಕೊಳ್ಳುತ್ತಾರೆ. ಆದರೆ ನಾವು 2000 ಕೋಟಿ ರೂ. ಬರ ಪರಿಹಾರ ಹಣ ಕೇಳಿದ್ರೆ, ಮೂರು ತಿಂಗಳ ಹಿಂದೆ 915 ಕೋಟಿ ರೂ. ಮಂಜೂರು ಮಾಡಿ, ಅದರಲ್ಲಿ 415 ಕೋಟಿ ರೂ. ಮಾತ್ರ ಬಿಡುಗಡೆ ಮಾಡಿದ್ದಾರೆ. ಮಹಾರಾಷ್ಟ್ರಕ್ಕೆ ಮಾತ್ರ 4516 ಕೋಟಿ ರೂ. ಕೊಟ್ಟಿದ್ದಾರೆ‌. ಜತೆಗೆ ನರೇಗಾ ಯೋಜನೆಯ 940 ಕೋಟಿ ರೂ. ನಮಗೆ ಕೇಂದ್ರ ಸರ್ಕಾರದಿಂದ ಬಾಕಿ ಬರಬೇಕು. ಈ ಹಣದಿಂದಲೇ ನಾವು ಕೂಲಿ ಪಾವತಿಸಬೇಕು. ಹಾಗಾಗಿ ಕೇಂದ್ರ ಸರ್ಕಾರಕ್ಕೆ ಕಾಯದೆ ರಾಜ್ಯ ಸರ್ಕಾರವೇ 900 ಕೋಟಿ ರೂ. ಬಿಡುಗಡೆ ಮಾಡಿ, ಕೃಷಿ ಕಾರ್ಮಿಕರ ಕೂಲಿ ಹಣ ಬಿಡುಗಡೆ ಮಾಡುತ್ತಿದ್ದೇವೆ ಎಂದರು.

ಕೃಷಿಗೆ ಒತ್ತು...

ಕೃಷಿ ಸಚಿವ ಶಿವಶಂಕರ ರೆಡ್ಡಿ ಮಾತನಾಡಿ, 2.5 ಲಕ್ಷ ಕೃಷಿಹೊಂಡ ಮಾಡಲಾಗಿದೆ. ಹನಿನಿರಾವರಿ ಯೋಜನೆ ಶೇ.90 ರಷ್ಡು ರಿಯಾಯಿತಿಯಲ್ಲಿ, ಕೃಷಿ ಯಂತ್ರೋಪಕರಣಗಳನ್ನು ಸಬ್ಸಿಡಿಯಲ್ಲಿ ನೀಡಲಾಗುತ್ತಿದೆ. ಯಂತ್ರೋಪಕರಣಗಳನ್ನು ಬಾಡಿಗೆ ರೂಪದಲ್ಲಿ ಕಡಿಮೆ ಬೆಲೆಗೆ ನೀಡಲಾಗ್ತಿದೆ. ಮಣ್ಣು ಪರೀಕ್ಷೆ ಮಾಡುವ ಕೆಲಸ ಆಗಿದೆ. ಶೇ.60 ಭಾಗದಷ್ಟು ರಾಜ್ಯದ ರೈತರು ಮಳೆ ಅವಲಂಬಿತ ಕೃಷಿಕರು. ಕಳೆದ 14 ವರ್ಷದಿಂದ ಮಳೆ ಆಗಿಲ್ಲ. ಕಳೆದ ವರ್ಷ ಕೂಡ 156 ತಾಲ್ಲೂಕು ಬರಪೀಡಿತವಾಗಿದ್ದವು. ಕೇಂದ್ರ ಸರ್ಕಾರಕ್ಕೆ 4500 ಕೋಟಿ ರೂ. ಬರ ಪರಿಹಾರಕ್ಕೆ ಮನವಿ ಮಾಡಿದ್ದೆವು. ಆದರೆ ಕೇಂದ್ರ ಕೇವಲ 900 ಕೋಟಿ ರೂ. ಮಾತ್ರ ನೀಡಿದೆ ಎಂದರು.

undefined

ಇನ್ನು ಸಮಸ್ಯೆಗಳ ನಡುವೆಯೇ ಸಾಕಷ್ಟು ಕಾಮಗಾರಿ ನಡೆಸಿದ್ದೇವೆ. ನೂರಾರು ಕೋಟಿ ರೂ. ಅನುದಾನವನ್ನು ಬಜೆಟ್​ನಲ್ಲಿ ನೀಡಲಾಗಿದೆ. ರೈತರ ಸಿರಿಧಾನ್ಯಗಳಿಗೆ ಒತ್ತು ಕೊಟ್ಟಿದ್ದೇವೆ. ರೈತಸಿರಿ ಕಾರ್ಯಕ್ರಮ ಕೂಡ ಹಮ್ಮಿಕೊಂಡಿದ್ದೇವೆ. ನೈಸರ್ಗಿಕ ಕೃಷಿ ಪದ್ಧತಿ ಅನುಷ್ಠಾನಕ್ಕೆ ತರುವ ಕಾರ್ಯ ಆಗ್ತಿದೆ. ಕೃಷಿ ಸಾಧಕರನ್ನು ಉತ್ತೇಜಿಸುವ, ಇತರರಿಗೆ ಪ್ರೇರಣೆ ನೀಡುವ ಉದ್ದೇಶದಿಂದ ಪ್ರಶಸ್ತಿ ಪ್ರದಾನ ಸಮಾರಂಭ ಹಮ್ಮಿಕೊಂಡಿದ್ದೇವೆ. ಎರಡು ವರ್ಷದಿಂದ ಪ್ರಶಸ್ತಿ ಪ್ರದಾನ ಆಗಿರಲಿಲ್ಲ. ಇಂದು ಅದಕ್ಕೆ ಅವಕಾಶ ಕೂಡಿ ಬಂದಿದೆ ಎಂದರು.

sample description
ETV Bharat Logo

Copyright © 2025 Ushodaya Enterprises Pvt. Ltd., All Rights Reserved.