ಬೆಂಗಳೂರು: ಪ್ರೀತಿಸಿ ಮದುವೆಯಾಗಿದ್ದ ಹೆಂಡತಿ ತನಗೆ ವಂಚಿಸಿ ಮತ್ತೊಬ್ಬನ ಜೊತೆ ಓಡಿ ಹೋದ ಹಿನ್ನೆಲೆ ಪತ್ನಿಯ ಪ್ರಿಯಕರನನ್ನು ಹತ್ಯೆಗೈದು ವ್ಯಕ್ತಿ ಪೊಲೀಸರಿಗೆ ಶರಣಾದ ಘಟನೆ ನಗರದಲ್ಲಿ ನಡೆದಿದೆ.
ಶಿವಕುಮಾರ್ ಮೃತ ಕೊಲೆಗೀಡಾದ ವ್ಯಕ್ತಿ, ಭರತ್ ಕುಮಾರ್ ಕೊಲೆ ಆರೋಪಿ. ಮೂಲತಃ ನೆಲಮಂಗಲದ ಲೋಹಿತ್ ನಗರದ ನಿವಾಸಿ ಭರತ್ಕುಮಾರ್ ಕಾರ್ಪೆಂಟರ್ ಆಗಿ ಕೆಲಸ ಮಾಡಿಕೊಂಡಿದ್ದ. ಸುಮಾರು 8 ವರ್ಷಗಳ ಹಿಂದೆ ಚಿಕ್ಕಮಗಳೂರಿನ ತರಿಕೆರೆ ಮೂಲದ ವಿನಿತಾ ಎಂಬಾಕೆಯನ್ನ ಪ್ರೀತಿಸಿ ಮದುವೆಯಾಗಿದ್ದ. ಇಬ್ಬರು ಮುದ್ದಾದ ಹೆಣ್ಣು ಮಕ್ಕಳು ಕೂಡ ಜನಿಸಿದ್ದರು. ಎಲ್ಲಾ ಸುಸೂತ್ರವಾಗಿ ಸಂಸಾರ ನಡೆಯುತ್ತಿರುವ ಹೊತ್ತಿನಲ್ಲೇ ಎರಡು ವರ್ಷದ ಹಿಂದೆ ತರಿಕೆರೆಯ ಶಿವಕುಮಾರ್ ಎಂಬಾತ ಇವರ ಬಾಳಲ್ಲಿ ಎಂಟ್ರಿ ಕೊಟ್ಟಿದ್ದ.
ವಿನಿತಾ ಹಾಗೂ ಭರತ್ ಕುಮಾರ್ ಇದ್ದ ಮನೆಯಲ್ಲೇ ಊಟ ತಿಂಡಿ ಮಾಡಿಕೊಂಡಿದ್ದ ಶಿವಕುಮಾರ್ ವಿನಿತಾಳ ಮೇಲಿದ್ದ ಕ್ರಶ್ ಹೊರಹಾಕಿದ್ದ. ಇದಕ್ಕೆ ಆಕೆಯೂ ಕೂಡ ತಲೆ ಆಡಿಸಿದ್ದಳು. ದಿನ ಕಳೆದಂತೆ ಇಬ್ಬರ ಮಧ್ಯೆ ಸಲುಗೆ ಬೆಳೆದಿತ್ತು. ಇದೇ ವಿಚಾರವಾಗಿ ಭರತ್ ಹಾಗೂ ವಿನಿತಾ ಮಧ್ಯೆ ಗಲಾಟೆಯಾಗಿ ಮೂರು ವರ್ಷದ ಹಿಂದೆ ಗಲಾಟೆ ಆಗಿ ಗಂಡ-ಹೆಂಡತಿ ಬೇರೆ ಬೇರೆ ಆಗಿದ್ದರು.
ಓದಿ-'ಗಾಂಜಾ' ಮಾರಾಟಕ್ಕೆ 'ಮ್ಯಾಂಗೋ' ಕೋಡ್ ವರ್ಡ್: ಇಬ್ಬರು ಆರೋಪಿಗಳು ಅಂದರ್
ಅಷ್ಟಕ್ಕೆ ಸುಮ್ಮನಾಗದ ವಿನಿತಾ ಹಾಗೂ ಶಿವಕುಮಾರ್ ಬ್ಯಾಡರಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಆಂಧ್ರಳ್ಳಿ ಬಳಿ ಚಿಕ್ಕದಾದ ಬಾಡಿಗೆ ಮನೆ ಮಾಡಿಕೊಂಡು ಸಂಸಾರ ಶುರುಮಾಡಿದ್ದರು. ತಾಯಿ ಇಲ್ಲದ ಮಕ್ಕಳನ್ನ ಆಕೆಯ ಪತಿ ಭರತ್ ತುಮಕೂರಿನಲ್ಲಿರುವ ಆತನ ದೊಡ್ಡಪ್ಪನ ಮನೆಯಲ್ಲೇ ಬಿಟ್ಟು ಒಂಟಿಯಾಗಿ ಬದುಕು ನಡೆಸೋಕೆ ಶುರುಮಾಡಿದ್ದ. ಆದ್ರೆ ನಂಬಿಸಿ, ಪ್ರೀತಿಸಿ, ವಂಚಿಸಿದ ಹೆಂಡತಿಯನ್ನು ಮಾತ್ರ ಭರತ್ಗೆ ಮರೆಯಲಾಗಲಿಲ್ಲ.
ಅದರಂತೆ ಬುಧವಾರ ರಾತ್ರಿ 8 ಗಂಟೆಗೆ ಪ್ರಿಯಕರನಿಗೆ ಚಿಕನ್ ತರೋಣ ಅಂತ ಮನೆ ಬಾಗಿಲನ್ನ ಮುಚ್ಚದೆ ವಿನಿತಾ ಹೊರಹೋಗಿದ್ದಳು. ಇದೇ ಸಮಯದಲ್ಲಿ ಭರತ್ ಮನೆಯೊಳಗೆ ಹೊಕ್ಕು ಮಂಚದ ಕೆಳಗೆ ಹೋಗಿ ಅಡಗಿ ಕುಳಿತಿದ್ದ. ಇದ್ಯಾವುದನ್ನೂ ತಿಳಿಯದ ವಿನಿತಾ ಹಾಗೂ ಶಿವಕುಮಾರ್ ಸಲ್ಲಾಪದಲ್ಲಿ ಮೈಮರೆತಿದ್ದರು. ನಡುರಾತ್ರಿ ವಿನಿತಾ ಬಚ್ಚಲಮನೆಗೆ ತೆರಳಿದ್ದಳು. ಇದೇ ಸರಿಯಾದ ಸಮಯ ಅಂದುಕೊಂಡ ಭರತ್ ಬಚ್ಚಲಮನೆಯ ಚಿಲಕವನ್ನ ಹಾಕಿ ಮಂಚದ ಮೇಲೆ ಮಲಗಿದ್ದ ಶಿವಕುಮಾರನನ್ನ ಚಾಕುವಿನಿಂದ ಇರಿದು ಕೊಲೆಗೈದಿದ್ದಾನೆ. ಕೊಲೆಯ ನಂತರ ಹೆಂಡತಿ ವಿನಿತಾ ಜೊತೆಗೆ ಬ್ಯಾಡ್ರಳ್ಳಿ ಪೊಲೀಸ್ ಠಾಣೆಗೆ ಬಂದು ಶರಣಾಗಿದ್ದಾನೆ.
ಗೋಡೆ ಮೇಲೊಂದು ಲವ್ ಸ್ಟೋರಿ : ಶಿವಕುಮಾರ್ನೊಂದಿಗೆ ಕಳೆದಿದ್ದ ಕಾಲವನ್ನು ಸ್ಮರಣೀಯವಾಗಿಸಲು ವಿನಿತಾ ಗೋಡೆ ಮೇಲೆ ಶಿವಕುಮಾರ್ ಜೊತೆ ಕಳೆದ ಕ್ಷಣಗಳು ಹಾಗೂ ಹೋದ ಜಾಗವನ್ನು ಗೋಡೆ ಮೇಲೆ ನಮೂದಿಸುತ್ತಿದ್ದಳು. ಇಂತಹ ದಿನ ಪೊಗರು ಸಿನಿಮಾಗೆ ಹೋಗಿದ್ದೀವಿ. ರಾಬರ್ಟ್ ಸಿನಿಮಾಗೆ ಹೋಗಿದ್ವಿ, 143 ಐ ಲವ್ ಯೂ ಶಿವಕುಮಾರ್ ಅಂತ ಬರೆದಿದ್ದಳು.