ETV Bharat / city

ಹೆಂಡತಿ ಚುಡಾಯಿಸಿದ ಆರೋಪ.. ಬೆಂಗಳೂರಲ್ಲಿ ವ್ಯಕ್ತಿ ಮೇಲೆ ಮಾರಣಾಂತಿಕ ಹಲ್ಲೆ, ದೂರು ಪ್ರತಿದೂರು

ಹೆಂಡತಿಯನ್ನು ಚುಡಾಯಿಸಿದ ಆರೋಪ ಕೇಳಿ ಬಂದಿದ್ದು, ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ನಡೆದಿದೆ. ವಾಸು ಎಂಬುವವರು ಸೆಕ್ಯೂರಿಟಿ ಗಾರ್ಡ್ ಯತೀಶ್ ಮೇಲೆ ಹಲ್ಲೆ ಮಾಡಿದ್ದಾರೆ. ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ಯತೀಶ್ ಮತ್ತು ವಾಸು ಇಬ್ಬರು ದೂರು-ಪ್ರತಿದೂರು ನೀಡಿದ್ದಾರೆ.

husband has attack on a man for raging his wife
ಹೆಂಡತಿ ಚುಡಾಯಿಸಿದ ಆರೋಪ..ವ್ಯಕ್ತಿ ಮೇಲೆ ಹಲ್ಲೆ
author img

By

Published : Dec 11, 2021, 12:01 PM IST

Updated : Dec 11, 2021, 12:16 PM IST

ಬೆಂಗಳೂರು: ನಗರದಲ್ಲಿ ಕಳೆದ ನ.15ರಂದು ಹೆಂಡತಿ ಚುಡಾಯಿಸಿದ ಆರೋಪ ವಿಚಾರಕ್ಕೆ ಸಂಬಂಧಿಸಿದಂತೆ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ನಡೆದಿದೆ. ಯತೀಶ್ ಹಲ್ಲೆಗೊಳಗಾದವರು. ವಾಸು ಹಲ್ಲೆ ಮಾಡಿದ ಆರೋಪಿ.

ಹೆಂಡತಿ ಚುಡಾಯಿಸಿದ ಆರೋಪ.. ಬೆಂಗಳೂರಲ್ಲಿ ವ್ಯಕ್ತಿ ಮೇಲೆ ಮಾರಣಾಂತಿಕ ಹಲ್ಲೆ

ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ಯತೀಶ್ ಮತ್ತು ವಾಸು ಇಬ್ಬರು ದೂರು- ಪ್ರತಿದೂರು ನೀಡಿದ್ದಾರೆ. ಈ ಸಂಬಂಧ ಕೆಂಪೇಗೌಡ ನಗರ ಪೊಲೀಸ್ ಠಾಣೆಯಲ್ಲಿ 2 ಎಫ್.ಐ.ಆರ್ ದಾಖಲಾಗಿವೆ.

ಒಂದೇ ಕಂಪನಿಯಲ್ಲಿ ಕೆಲಸ:

ಯತೀಶ್ ಕಂಪನಿಯೊಂದರ ಸೆಕ್ಯೂರಿಟಿ ಗಾರ್ಡ್ ಆಗಿದ್ದ. ಅದೇ ಕಂಪನಿಯಲ್ಲಿ ವಾಸು ಪತ್ನಿ ಕೆಲಸ ಮಾಡುತ್ತಿದ್ದಳು. ವಾಸು ಪತ್ನಿಗೆ ಚುಡಾಯಿಸಿದ್ದ ಎನ್ನುವ ವಿಚಾರಕ್ಕೆ ಯತೀಶ್ ಜೊತೆ ಜಗಳ ತೆಗೆದು ಮನಸೋಇಚ್ಛೆ ಹಲ್ಲೆ ನಡೆಸಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ದೂರು ಪ್ರತಿ
ದೂರು ಪ್ರತಿ

ಎರಡೆರಡು ಎಫ್​​ಐಆರ್:

ಈ ವಿಚಾರವಾಗಿ ಹಲ್ಲೆಗೊಳಗಾದವನಿಂದ ಮೊದಲು ಪೊಲೀಸ್ ಠಾಣೆಗೆ ದೂರು ಬಂದಿತ್ತು. ವಾಸು ಮಾರಣಾಂತಿಕ ಹಲ್ಲೆ ನಡೆಸಿದ ಸಂಬಂಧ ಯತೀಶ್ ದೂರು ನೀಡಿದ್ದ. ನಂತರ ತನ್ನ ಪತ್ನಿ ಚುಡಾಯಿಸಿದ ವಿಚಾರವಾಗಿ ಯತೀಶ್ ವಿರುದ್ಧ ವಾಸು ದೂರು ನೀಡಿದ್ದ. ದೂರು ಪ್ರತಿ ದೂರುಗಳ ಸಂಬಂಧ ಎರಡು ಎಫ್​​ಐಆರ್ ದಾಖಲಾಗಿವೆ ಎಂದು ತಿಳಿದು ಬಂದಿದೆ.

ದೂರು ಪ್ರತಿ
ದೂರು ಪ್ರತಿ

ಇದನ್ನೂ ಓದಿ: ಕೌಂಟುಬಿಕ ಕಲಹ: ರಾಮನಗರದಲ್ಲಿ ಚಾಕುವಿನಿಂದ ಇರಿದು ಪತ್ನಿಯನ್ನೇ ಕೊಂದ ಪತಿ

Last Updated : Dec 11, 2021, 12:16 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.